ಲೋಕಸಭಾ ಚುನಾವಣೆ ಗೆಲುವಿಗೆ ಮೋದಿ ರವರಿಂದ ತಯಾರಾಗಿದೆ 8 ಸೂತ್ರಗಳು

ಲೋಕಸಭಾ ಚುನಾವಣೆಗೆ ಮೋದಿ ರವರಿಂದ ತಯಾರಾಗಿದೆ 8 ಮಾಸ್ಟರ್ ಪ್ಲಾನ್ ಗಳು

0

ಲೋಕಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಅಮಿತ್ ಶಾ ಒಂದೆಡೆ ತಂತ್ರ ರೂಪಿಸುತ್ತಿದ್ದರೆ ಇತ್ತ ಮೋದಿಯೂ ಕೂಡಾ ಸುಮ್ಮನೆ ಕುಳಿತಿಲ್ಲ. ತಮ್ಮ ಅಧಿಕಾರವನ್ನು ಉಳಿಸಿಕೊಂಡು ಮತ್ತೊಮ್ಮೆ ಗದ್ದುಗೆಗೆ ಏರಿ ಪ್ರಧಾನ ಮಂತ್ರಿಯಾಗಿ ಅಲ್ಲದೆ ಭಾರತದ ಪ್ರಧಾನ ಸೇವಕರಾಗಿ ಸೇವೆ ಮಾಡಲು ಬಹಳ ಉತ್ಸುಕರಾಗಿದ್ದಾರೆ. ಅಮಿತ್ ಶಾ ತಂತ್ರಗಳನ್ನು ಹೊರತುಪಡಿಸಿ ತಮ್ಮದೇ ಆದ ತಂತ್ರಗಳ ಮೂಲಕ ಪ್ರತಿ ರಾಜ್ಯದ ಬಿಜೆಪಿ ನಾಯಕರಿಗೆ ಮೋದಿ ರವರು ಒಂದು ಆದೇಶ ನೀಡಿದ್ದಾರೆ.

ಅಷ್ಟಕ್ಕೂ ಆದೇಶ ವಾದರೂ ಏನು?

ಮೋದಿ ಸರ್ಕಾರ ಹಿಂದೆಂದೂ ಯಾವ ಸರ್ಕಾರ ಮಾಡದ ಸಾಧನೆಗಳನ್ನು ಮಾಡಿದೆ ಎಂಬುದನ್ನು ಹೇಳಬೇಕಿಲ್ಲ, ಆದರೆ ಪ್ರತಿಪಕ್ಷಗಳು ಮೋದಿ ರವರ ಸಾಧನೆಗಳಲ್ಲಿ ಹುಳುಕುಗಳನ್ನು ಹುಡುಕಲು ಯತ್ನಿಸಿ ವಿಫಲವಾಗಿ ಅಷ್ಟಕ್ಕೆ ಸುಮ್ಮನಾಗದೆ ಯೋಜನೆಯ ಉದ್ದೇಶವನ್ನೇ ತಿರುಚಿಸಿ ಜನಸಮಾನ್ಯರ ತಲೆ ಕೆಡಿಸುವ ಕಾರ್ಯ ಇದ್ದಾರೆ ಎಂಬುದು ಮೋದಿ ರವರಿಗೆ ಅರಿವಾದಂತಿದೆ. ಆದಕಾರಣ ದಿಡೀರ್ ಸಭೆಯನ್ನು ಆಯೋಜಿಸಿದ ಮೋದಿ ರವರು ಜಾಹೀರಾತು ಕಂಪನಿಗಳು ಸಂಶೋಧಕರು ಆರ್ಥಿಕ ತಜ್ಞರು ಚಿತ್ರ ನಿರ್ದೇಶಕರೊಂದಿಗೆ ತಾವು ಮಾಡಿದ ಯೋಜನೆಗಳಾದ g.s.t. ನೋಟು ಅಮಾನ್ಯ ಕ್ರಮದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಜನಸಾಮಾನ್ಯರ ತಲೆಯಿಂದ ತೆಗೆದು ಹಾಕಲು ಮತ್ತು ಅದರ ಪ್ರಯೋಜನಗಳನ್ನು ಜನರಿಗೆ ಮನದಟ್ಟು ಮಾಡಿಕೊಡಲು ವಿಶೇಷವಾಗಿ ಯುವಕರ ಬಳಿ ತಲುಪಿ ದೇಶದಲ್ಲಿ ನಡೆಯುತ್ತಿರುವ ಮಹತ್ವದ ಬೆಳವಣಿಗೆಗಳ ಬಗ್ಗೆ ವಿವರಿಸಿ ಅಭಿವೃದ್ಧಿ ಆರ್ಥಿಕ ಮತ್ತು ಸಾಮಾಜಿಕ ಅಜೆಂಡಾಗಳ ಬಗ್ಗೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರ ಮುಂದೆ ಬಿಚ್ಚಿಡುವ ಕಾರ್ಯ ಮಾಡಲು ನಿರ್ಧರಿಸಿದೆ.

ಸರ್ಕಾರ ಇವರಿಗೆ ಏನಿಲ್ಲ ಮಾಡಿದೆಯೋ ಅದೆಲ್ಲಾ ಬಡಜನರ ಜೀವನ ಗುಣಮಟ್ಟವನ್ನು ಸುಧಾರಿಸಲು ಮಾಡಿದ ಪ್ರಯತ್ನವಾಗಿದೆ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಳ್ಳಲು ಅವರು ಪ್ರತಿಯೊಬ್ಬ ಬಿಜೆಪಿ ನಾಯಕರಿಗೂ ಆದೇಶವನ್ನು ಹೊರಡಿಸಿದ್ದಾರೆ. ಈ ಕೆಲಸವನ್ನು ಮಾಡಲು ಎಂಟು ಸೂತ್ರಗಳನ್ನು ಅನುಸರಿಸುವಂತೆ ಪ್ರತಿಯೊಬ್ಬ ಬಿಜೆಪಿ ನಾಯಕರಿಗೂ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಅಷ್ಟಕ್ಕೂ ಜನರನ್ನು ತಲುಪಲು ಮೋದಿ ಮಾಡಿದ 8 ಸೂತ್ರಗಳು ಯಾವುವು?

1.ಸಂಪರ್ಕ ಅಭಿಯಾನ

ಈ ಅಭಿಯಾನದ ಮೂಲಕ ಯುವಕರನ್ನು ತಲುಪುವ ಕೆಲಸ ಬಿಜೆಪಿ ಮಾಡಲಿದೆ. ದೇಶದಲ್ಲಿ ಪ್ರತಿಯೊಬ್ಬ ಯುವಕರು ಮೊಬೈಲ್ ಅಥವಾ ಲ್ಯಾಪ್ಟಾಪ್ಗಳನ್ನು ಹೊಂದಿರುತ್ತಾರೆ. ಇವರನ್ನು ಸಂಪರ್ಕಿಸಲು ಬಹಳ ಸುಲಭವಾಗುತ್ತದೆ ಕಾರಣ ಟೆಕ್ನಾಲಜಿ. ಪ್ರತಿ ರಾಜ್ಯದ ಬಿಜೆಪಿ ನಾಯಕರು ಟೆಕ್ನಾಲಜಿಯನ್ನು ಬಳಸಿಕೊಂಡು ಯುವಕರನ್ನು ತಲುಪುವ ಕೆಲಸ ಮಾಡಬೇಕು ಮತ್ತು ಅವರಿಗೆ ಕೇಂದ್ರ ಸರ್ಕಾರದ ಉದ್ದೇಶಗಳನ್ನು ವಿವರಿಸಬೇಕು ಎಂಬುದು ಮೋದಿ ರವರ ಆದೇಶ.

2. ಬೈಕ್ ರಾಲಿ

ತಮ್ಮ ತಮ್ಮ ಕ್ಷೇತ್ರದಲ್ಲಿನ ಯುವಕರನ್ನು ಒಗ್ಗೂಡಿಸಿಕೊಂಡು ಕ್ಷೇತ್ರದೆಲ್ಲೆಡೆ ಬೈಕುಗಳಲ್ಲಿ ತೆರಳಿ ಜನಸಾಮಾನ್ಯರನ್ನು ತಲುಪಿ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ವಿವರಿಸುವುದು ಈ ರಾಲಿಯ ಮುಖ್ಯ ಉದ್ದೇಶ.

3. ಹಿರಿಯ ನಾಗರಿಕರ ಸಮಾವೇಶ

ಹೌದು ದೇಶದ ಶಕ್ತಿ ಯುವಕರ ಆದರೆ ದೇಶದ ಬೆನ್ನೆಲುಬು ಈ ಹಿರಿಯ ನಾಗರಿಕರು ಇವರನ್ನು ತಲುಪುವುದು ಕೂಡ ಮುಖ್ಯವಾಗಿರುತ್ತದೆ. ಹಲವು ಹಿರಿಯ ನಾಗರಿಕರು ಟೆಕ್ನಾಲಜಿಯನ್ನು ಬಳಸುವುದಿಲ್ಲ. ಆದ ಕಾರಣ ಇವರನ್ನು ತಲುಪಲು ಕಷ್ಟವಾದರೂ ತಲುಪಬೇಕು ಎಂಬುದು ಮೋದಿರವರ ಆದೇಶ.

4. ಕೇಂದ್ರ ಸರ್ಕಾರದ ಯೋಜನೆಗಳ ಪಲಾನುಭವಿಗಳ ಸಮಾವೇಶ

ಮೋದಿ ಸರಕಾರದ ಯೋಜನೆಗಳಿಂದ ಬಹಳ ಜನರ ಬಾಳು ಬೆಳಗಿದೆ. ಇವರನ್ನೆಲ್ಲ ರನ್ನು ಒಟ್ಟುಗೂಡಿಸಿ ಸಮಾವೇಶಗಳನ್ನು ನಡೆಸಿ ಇನ್ನಷ್ಟು ಯೋಜನೆಗಳನ್ನು ಜಾರಿಗೊಳಿಸಲು ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂಬ ಸಂದೇಶವನ್ನು ಜನರಿಗೆ ತಲುಪಿಸಲು ಆದೇಶ ನೀಡಲಾಗಿದೆ.

5. ಗ್ರಾಮ ಮಟ್ಟದ ಅಭಿಯಾನ

ಪ್ರತಿಯೊಂದು ಗ್ರಾಮದಲ್ಲೂ ಮೋದಿ ರವರ ಯೋಜನೆಗಳನ್ನು ಬಳಸಿಕೊಂಡು ಜನರನ್ನು ಒಟ್ಟುಗೂಡಿಸಿ ಉಳಿದ ಜನರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಜನರ ಅಭಿಪ್ರಾಯವನ್ನು ತಿಳಿದುಕೊಂಡು ಜನರಿಗೆ ಸತ್ಯದ ಅರಿವು ಮೂಡಿಸಲು ಗ್ರಾಮ ಮಟ್ಟದಲ್ಲಿ ಸಭೆಗಳನ್ನು ನಡೆಸಲು ಸೂಚಿಸಲಾಗಿದೆ.

6. ಮನೆ ಮನೆಗೆ ಭೇಟಿ

ಇದು ಅಸಾಧ್ಯವಾದ ಕೆಲಸವಿರಬಹುದು ಆದರೆ ಮೋದಿ ರವರು ಯುವಕರನ್ನು ನಂಬಿಕೊಂಡು ಯುವಕರ ಮೇಲೆ ಜವಾಬ್ದಾರಿ ಹೊರಿಸಿ ತಮ್ಮ ಗ್ರಾಮದ ಪ್ರತಿಯೊಂದು ಮನೆಗೆ ಯುವಕರನ್ನು ಕಳುಹಿಸಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ವಿವರಿಸಲು ನಾಯಕರಿಗೆ ಸೂಚಿಸಿದ್ದಾರೆ.

7. ಕಾರ್ಯಕರ್ತರ ಸಭೆ

ಕಾರ್ಯಕರ್ತರ ನಡುವೆ ಇರುವ ಅಸಮಾಧಾನವನ್ನು ಬಗೆಹರಿಸಿ ಕಾರ್ಯಕರ್ತರನ್ನು ಸಭೆಯಲ್ಲಿ ಸೇರಿಸಿ ಅವರ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬ ನಾಗರಿಕರಿಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಲು ಸೂಚಿಸಿದ್ದಾರೆ.

8. ಬೂತ್ ಮಟ್ಟದಲ್ಲಿ ಪ್ರಚಾರ

ಈಗಾಗಲೇ ಹೇಳಿದ ಹಾಗೆ ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ ಪ್ರತಿಯೊಂದು ಬೂತ್ ಕೂಡ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ಆದ ಕಾರಣ ಬೂತ್ ಮಟ್ಟದಲ್ಲಿ ಸಮಾವೇಶಗಳನ್ನು ನಡೆಸಿ ಜನಸಾಮಾನ್ಯರಿಗೆ ಸತ್ಯದ ಅರಿವು ಮೂಡಿಸಲು ನಿರ್ಧರಿಸಿದ್ದಾರೆ.

ನೋಡಿದಿರಲ್ಲ ಮೋದಿ ರವರ ಸೂತ್ರಗಳು. ಯೋಜನೆಗಳು ನಿಮ್ಮ ಊರಿಗೆ ಸಹ ಬರುತ್ತವೆ. ಈ ಯೋಜನೆಗಳಿಗೆ ಪಾಲ್ಗೊಳ್ಳಲು ದಯವಿಟ್ಟು ಶೇರ್ ಮಾಡಿ ಬೆಂಬಲಿಸಿ