ಕನ್ನಡಿಗರಿಗೆ ಶುಭ ಸುದ್ದಿ: ಪಕ್ಷ ಮುಖ್ಯವಲ್ಲ ಅಭಿವೃದ್ಧಿ ಮುಖ್ಯ !! ಮತ್ತೊಮ್ಮೆ ಸಾಬೀತುಪಡಿಸಿದ ಮೋದಿ

ಕನ್ನಡಿಗರಿಗೆ ಶುಭ ಸುದ್ದಿ: ಪಕ್ಷ ಮುಖ್ಯವಲ್ಲ ಅಭಿವೃದ್ಧಿ ಮುಖ್ಯ ಮತ್ತೊಮ್ಮೆ ಸಾಬೀತುಪಡಿಸಿದ ಮೋದಿ

0

ಹೌದು ಪಕ್ಷಕ್ಕಿಂತ ಮತ್ತು ಬಿಜೆಪಿ ಆಡಳಿತ ಇರುವ ರಾಜ್ಯಗಳಿಗಿಂತ ಅಭಿವೃದ್ಧಿ ಮುಖ್ಯ ಎಂಬ ಮಾತನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಮೋದಿ. ಯಾವುದೇ ತಾರತಮ್ಯ ಮಾಡದೆ ವಿಚಾರ ನಡೆಸಿ ಕನ್ನಡಿಗರಿಗೊಂದು ಶುಭ ಸುದ್ದಿ ನೀಡಿದ್ದಾರೆ.ಹಿಂದಿನ ಕಾಲದಿಂದಲೂ ಕೇಂದ್ರದಲ್ಲಿ ಒಂದು ಪಕ್ಷ ಅಧಿಕಾರದಲ್ಲಿದ್ದರೆ  ಕರ್ನಾಟಕದಲ್ಲಿ ಒಂದು ಪಕ್ಷ ಅಧಿಕಾರದಲ್ಲಿ ಇರುತ್ತಿತ್ತು.

ಆದ ಕಾರಣ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂಬಂತೆ ರಾಜಕಾರಣಿಗಳು ತಮ್ಮ ಪಕ್ಷ ಆಡಳಿತವಿರುವ ರಾಜ್ಯಗಳಿಗೆ ಹೆಚ್ಚು ಸಹಕಾರವನ್ನು ನೀಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಮೋದಿ ರವರ ಗದ್ದುಗೆ ಏರಿದ ಮೇಲೆ ಯಾವುದೇ ರಾಜ್ಯ ವನ್ನಾಗಲಿ ಸಮಾನವಾಗಿ ಕಂಡು ಪ್ರತಿ ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಿ ಪ್ರತಿ ರಾಜ್ಯವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ದಿದ್ದಾರೆ.

ಈಗ ಮತ್ತೊಮ್ಮೆ ಈ ಮಾತನ್ನು ಮೋದಿ ಅವರು ಸಾಬೀತುಪಡಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಿಗಿಂತ ಕರ್ನಾಟಕಕ್ಕೆ ಒಂದು ಪಟ್ಟು ಸೌಲಭ್ಯಗಳನ್ನು ನೀಡುತ್ತಿದ್ದಾರೆ.ಅಷ್ಟಕ್ಕೂ ವಿಷಯದ ಮೂಲವೇನು ಮತ್ತು ಅದರ ಸಂಪೂರ್ಣ ಮಾಹಿತಿಗಾಗಿ ಎಂಬುದನ್ನು ತಿಳಿಯಲು ಸಂಪೂರ್ಣ ಓದಿ .

ಇನ್ಮುಂದೆ ಕರ್ನಾಟಕದ ಜನರು ಅದರಲ್ಲಿಯೂ ಉತ್ತರ ಕರ್ನಾಟಕದ ಜನರು ಬರದಿಂದ ಆಗುವ ನಷ್ಟಗಳಿಂದ ಸ್ವಲ್ಪ ದೂರ ಉಳಿಯಲಿದ್ದಾರೆ.  ಭಾರತ ಸರ್ಕಾರದ ಅಟಲ್ ಭೂಜಲ ಎಂಬ ಯೋಜನೆಯ ಹೆಸರಿನಿಂದ ಕರೆಯಲ್ಪಡುವ ಅಂತರ್ಜಲ ಸಂರಕ್ಷಣೆ ಮಾಡುವುದಕ್ಕಾಗಿ ಕೇಂದ್ರ ಸರ್ಕಾರವು ಒಂದು ಆಯೋಗವನ್ನು ಸಿದ್ಧಪಡಿಸಿತ್ತು. ಆ ಆಯೋಗದಿಂದ ಹೊರಬಿದ್ದ ಮಾಹಿತಿ ಏನೆಂದರೆ ಕೆಲವು ರಾಜ್ಯಗಳು ಅದರಲ್ಲಿಯೂ ಬಿಜೆಪಿ ಪಕ್ಷದ ಆಡಳಿತವಿಲ್ಲ ದಿರುವ ಕೆಲವು ರಾಜ್ಯಗಳು ಬರಗಾಲದಿಂದ ಕಂಗೆಟ್ಟಿವೆ.ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ.

ಆಯೋಗ ನೀಡಿದ ಪಟ್ಟಿ ಯನ್ನು ಯಥಾಸ್ಥಿತಿಯಲ್ಲಿ ಯಾವುದೇ ತಾರತಮ್ಯ ಮಾಡದೆ ಕೇಂದ್ರ ಸರ್ಕಾರವು 7 ರಾಜ್ಯಗಳನ್ನು ಆಯ್ಕೆ ಮಾಡಿ, ಅನುದಾನವನ್ನು ಬಿಡುಗಡೆ ಮಾಡಿದೆ.ಈ ಯೋಜನೆಗೆ ವಿಶ್ವಬ್ಯಾಂಕ್ ನಿಂದ ಸಹಕಾರ ವಿದ್ದು ಬರೋಬ್ಬರಿ ಐದು ವರ್ಷಗಳ ಕಾಲ ಬರಗಾಲಪೀಡಿತ ರಾಜ್ಯಗಳ  ಜನರ ಬಾಳನ್ನು ಬೆಳಗುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಇದರ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ಅಷ್ಟಕ್ಕೂ ಅನುದಾನವೆಷ್ಟು ಯಾವ ರಾಜ್ಯಗಳಿಗೆ ಎಷ್ಟು ಅನುದಾನ ಸಿಗಲಿದೆ ಎಂಬ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಕೇಂದ್ರ ಸರ್ಕಾರವು ಗುಜರಾತ್ ಮಹಾರಾಷ್ಟ್ರ ಉತ್ತರ ಪ್ರದೇಶ ಮಧ್ಯ ಪ್ರದೇಶ ಹರಿಯಾಣ ರಾಜಸ್ಥಾನ ಮತ್ತು ಕರ್ನಾಟಕವನ್ನು ಈ ಯೋಜನೆಯ ಅನುಷ್ಠಾನದ ಅಡಿಯಲ್ಲಿ ಆಯ್ಕೆ ಮಾಡಿ ಅನುದಾನ ನೀಡಲಿದೆ. ಕರ್ನಾಟಕದ 18 ಜಿಲ್ಲೆಗಳು ಅದರಲ್ಲಿನ ಕರ್ನಾಟಕದ ಅದಿನೆಂಟು ಜಿಲ್ಲೆಗಳು ಅದರಲ್ಲಿನ ಈ ಅನುದಾನಗಳು ಬಿಡುಗಡೆಯಾಗಲಿದ್ದು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅಂತರ್ಜಾಲವನ್ನು ವೃದ್ಧಿಸಿ ಬರದಲ್ಲಿಯೂ ಕೂಡ ರೈತರಿಗೆ ಕುಡಿಯೋ ನೀರು ಮತ್ತು ಬದುಕಿಗೆ ಸಾಕಾಗುವಷ್ಟು ಬೆಳೆಯುವಷ್ಟು ನೀರನ್ನು ಒದಗಿಸಲು ಈ ಯೋಜನೆ ಬಹಳ ಸಹಕಾರಿಯಾಗಲಿದೆ.

ಬರೋಬ್ಬರಿ ಆರು ಸಾವಿರ ಕೋಟಿ ಅನುದಾನ ವನ್ನು ಬಿಡುಗಡೆ ಮಾಡಲಿದ್ದು ನೇರವಾಗಿ ಕೇಂದ್ರವು ಕರ್ನಾಟಕದಲ್ಲಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದೆ. ನೇರ ಮತ್ತು ತ್ವರಿತಗತಿ ಯಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಅನುದಾನವನ್ನು ನೀಡದೆ ಕೇಂದ್ರ ಸರ್ಕಾರ ಮತ್ತು ವಿಶ್ವ ಬ್ಯಾಂಕ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿವೆ.