ಉಗ್ರರಿಗೆ ಮತ್ತೊಂದು ಶಾಕ್: ಕೇಂದ್ರ ಸರ್ಕಾರದ ದಿಟ್ಟ ನಡೆ

ಕೇವಲ ಉಗ್ರರ ದಮನಕ್ಕಾಗಿ ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗಾಗಿ ಅಧಿಕಾರಕ್ಕಾಗಿ ಯಾವುದೇ ಮೋಹವಿಲ್ಲದೆ ಮೈತ್ರಿ ಮುರಿದು ಕೊಂಡು ಬಿಜೆಪಿ ಸರ್ಕಾರ ಕಾಶ್ಮೀರದಲ್ಲಿ ಸರ್ಕಾರ ಪತನವಾಗಿಸಿದ್ದು  ತಿಳಿದಿರುವ ವಿಷಯ. ಮತ್ತು ಹಾಗೊಂದು ಹೀಗೊಂದು ಎನ್ಕೌಂಟರ್ ಗಳು ಉಗ್ರರ ದಮನ ಇದೆಲ್ಲಾ ಸರ್ವೇ ಸಾಮಾನ್ಯ ಆದರೆ ಈಗ ಉಗ್ರರಿಗೆ ಬಿಗ್ ಶಾಕ್ ಎದುರಾಗಿದೆ. ಅಷ್ಟಕ್ಕೂ ಏನದು ಸರ್ಕಾರದ ದಿಟ್ಟ ನಡೆ ಮತ್ತು ಉಗ್ರರಿಗೆ ಬಿಗ್ ಶಾಕ್ ತಿಳಿಯಲು ಸಂಪೂರ್ಣ ಓದಿ.

ಇನ್ನು ಕೆಲವೇ ಕೆಲವು ದಿನಗಳಲ್ಲಿ ಅಮರನಾಥ ಯಾತ್ರೆ ಪ್ರಾರಂಭವಾಗಲಿದೆ. ಉಗ್ರರಿಗೆ ಹಣ ಬರುವ ಒಂದು ಮುಖ್ಯವಾದ ಮೂಲ ಈ ಅಮರನಾಥ ಯಾತ್ರೆ ಎಂದರೆ ತಪ್ಪಾಗಲಾರದು ಯಾಕೆಂದರೆ ಅಮರನಾಥ ಯಾತ್ರಿಗಳು ಬರುವ ದಾರಿಯನ್ನು ಕಾದಿರುವ ಉಗ್ರರು ಅಮಾಯಕ ಜನರನ್ನು ಹೆದರಿಸಿ ಬೆದರಿಸಿ ಕೊಂದು ತಮಗೆ ಬೇಕಾದ ಹಣ ಒಡವೆ ಏನು ದೋಚಿ ಅಟ್ಟಹಾಸ ನಡೆಸುತ್ತಾರೆ.

ಇದನ್ನು ತಡೆಯಲು ಕೇಂದ್ರ ಸರ್ಕಾರದ ಮಾಸ್ಟರ್ ಪ್ಲಾನ್ ಮಾಡಿದೆ. ಕಂಡುಕೇಳರಿಯದ ರೀತಿಯಲ್ಲಿ ಸೇನೆಯನ್ನು ಸಜ್ಜುಗೊಳಿಸಿದೆ. ಈ ಯಾತ್ರೆ ಪ್ರಾರಂಭವಾಗುವುದಕ್ಕೂ ಮುನ್ನ ಭಯೋತ್ಪಾದನೆ ಪ್ರಕರಣಗಳನ್ನು ನಿಭಾಯಿಸುವುದಕ್ಕಾಗಿ ಗಡಿ ಕಾಯುವ ಸೈನಿಕ ರಲ್ಲಿಯೇ ಅತ್ಯುತ್ತಮ ತರಬೇತಿಯನ್ನು ಪಡೆದಿರುವ ಎನ್‌ಎಸ್ಜಿ ಕಮಾಂಡೋ ತಂಡವೊಂದನ್ನು ಕಾಶ್ಮೀರದ ಶ್ರೀನಗರಕ್ಕೆ ರವಾನಿಸಿದೆ.

ಅಂತರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಯಾವುದೇ ಉಗ್ರರು ಗಡಿ ನುಸುಳುವ ಚಿಂತೆಯನ್ನು ಸಹ ಮಾಡಬಾರದು ಎಂಬಂತೆ ಭದ್ರತೆಯನ್ನು ಶ್ರೀನಗರಕ್ಕೆ ನೀಡಿದೆ. ಯಾವುದೇ ರೀತಿಯ ಕಿಡ್ನಾಪ್, ವಿಮಾನ ಹೈಜಾಕ್ ಅಥವಾ ಇನ್ಯಾವುದೇ ಪ್ರಕರಣವಿರಲಿ ಎಲ್ಲವನ್ನು ನಿಭಾಯಿಸಲು ತಯಾರ್ ಆಗಿರಬೇಕೆಂದು ಕೇಂದ್ರ ಸರ್ಕಾರವು ಕಮಾಂಡೋಗಳಿಗೆ ಸೂಚನೆ ನೀಡಿದೆ.

ಕಮಾಂಡೋ ತಂಡವನ್ನು ಇಡಿ ಶ್ರೀನಗರದಲ್ಲಿ ಆಯೋಜಿಸಲಾಗಿದ್ದು, ಉಗ್ರರ ದಮನಕ್ಕೆ ಕಮಾಂಡೋಗಳು ಕಾಯ್ದು ಕುಳಿತಿದ್ದಾರೆ.ರಮ್ಜಾನ್ ಮಾಸದಲ್ಲಿ ತಡೆಹಿಡಿಲಾಗಿದ್ದ ಉಗ್ರ ನಿಗ್ರಹ ಸೇನಾ ಕಾರ್ಯಾಚರಣೆಯನ್ನು ರಮ್ಜಾನ್ ಮುಗಿದ ಬೆನ್ನಿಗೇ ಕೇಂದ್ರ ಸರಕಾರ ಪುನರಾರಂಭಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ಕಂಡು ಬಂದಿವೆ.

ಜಮ್ಮು ಕಾಶ್ಮೀರ ರಾಜ್ಯಪಾಲ ಎನ್ ಎನ್ ವೋರಾ ಅವರು ಭದ್ರತಾ ಪಡೆಗಳಿಗೆ ಅತ್ಯುನ್ನತ ಮಟ್ಟದ ಕಟ್ಟೆಚ್ಚರ ವಹಿಸುವಂತೆ ಆದೇಶಿಸಿದ್ದಾರೆ.

Post Author: Ravi Yadav