ತೃತೀಯ ರಂಗದ ಮೂರನೇ ವಿಕೆಟ್ ಪತನ !!

ತೃತೀಯ ರಂಗದ ಮೂರನೇ ವಿಕೆಟ್ ಪತನ !!

0

ತೃತೀಯ ರಂಗ, ಮೋದಿ ಅಲೆಯು ಸುನಾಮಿಯಾಗಿ ಬದಲಾದ ನಂತರ, ಸುನಾಮಿ ತಡೆಯಲು ತಡೆಗೋಡೆ ನಿರ್ಮಿಸಲು ವಿರೋಧ ಪಕ್ಷಗಳೆಲ್ಲವೂ ಒಂದಾಗಿ ಲೋಖಾಸಭಾ ಚುನಾವಣೆಯನ್ನು ಎದುರಿಸಲು ನಿರ್ಮಾಣ ಮಾಡಿಕೊಂಡ ತಂಡ.

ಆದರೆ ಸಮ್ಮಿಶ್ರ ಸರ್ಕಾರದ ಕನಸು ಕಂಡಿದ್ದ ಕಾಂಗ್ರೆಸ್ ನವರಿಗೆ ಮಾತ್ರ ಏಟಿನ ಮೇಲೆ ಏಟು, ಮೊನ್ನೆಯಷ್ಟೇ ಮಾನ್ಯ ಪ್ರಣಬ್ ಮುಖರ್ಜಿ ರವರು ಅರ ಸ್ ಸ್ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಓ ವೈ ಸಿ ಕಾಂಗ್ರೆಸ್ ಪಕ್ಷ ನಾಶವಾಗುತ್ತಿದೆ ಎಂದು ಹೇಳಿ ತೃತೀಯ ರಂಗದಿಂದ ಹೊರ ನಡೆದಿರುವುದು ತಿಳಿದಿರುವ ವಿಷಯ ಮತ್ತು ಕೇಜ್ರಿವಾಲ್ ಕಾಂಗ್ರೆಸ್ ಬಳಿ ಕೈಜೋಡಿಸಲು ಇಷ್ಟವಿಲ್ಲದೆ ದೆಹಲಿಯನ್ನು ಪ್ರತ್ಯೇಕ ರಾಜ್ಯ ಮಾಡಿ ಬಿಜೆಪಿ ಗೆ ಬೆಂಬಲ ನೀಡುತ್ತೇವೆ ಮತ್ತು ಬಿಜೆಪಿ ಪರ ಪ್ರಚಾರ ಮಾಡುತ್ತೇವೆ ಎಂದು ಷಾಕಿಂಗ್ ಹೇಳಿಕೆ ನೀಡಿದ್ದರು.

ಆದರೆ ಈಗ ಮತ್ತೊಂದು ವಿಕೆಟ್ ಪತನವಾಗಿದೆ. ಕಾಂಗ್ರೆಸ್ ಜೊತೆ ನಮ್ಮ ಮೈತ್ರಿ ಇಲ್ಲ ಎಂದು ಒಂದು ದೊಡ್ಡ ಪಕ್ಷ ಹೇಳಿಕೆ ನೀಡಿದೆ.ಈ ಪಕ್ಷ ಕಾಂಗ್ರೆಸ್ ಜೊತೆ ಕೈ ಜೋಡಿಸದೆ ಮಧ್ಯಪ್ರದೇಶ ಮತ್ತು ಮುಂದಿನ ಲೋಖಾಸಭಾ ಚುನಾವಣೆಯಲ್ಲಿ ಸ್ಪರ್ದಿಸುವುದಾಗಿ ತಿಳಿಸಿದೆ.

ಅಷ್ಟಕ್ಕೂ ಅದು ಯಾವ ವಿಕೆಟ್?  ಸಂಪೂರ್ಣ ಮಾಹಿತಿ ಕೆಳಗಡೆ ಇದೆ ಓದಿ

ನಮ್ಮ ಪಕ್ಷ ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿಯಾ ಪ್ರಸ್ತಾಪ ಮಾಡಿಲ್ಲ ಮುಂದೆ ಬರುವ ಮಧ್ಯ ಪ್ರದೇಶದ ಚುನಾವಣೆ ಮತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ದಿಸುವುದಾಗಿ ಬಿ ಸ್ ಪಿ ಪಕ್ಷದ ರಾಜ್ಯಾಧ್ಯಕ್ಷ ನರ್ಮದಾ ಪ್ರಸಾದ್ ತಿಳಿಸಿದ್ದಾರೆ,

ಇನ್ನು ಕೆಲವೇ ತಿಂಗಳಲ್ಲಿ ನಡೆಯುವ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಜೊತೆಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್ಪಿ ಸ್ಪಷ್ಟಪಡಿಸಿದೆ.ನಮ್ಮ ಪಕ್ಷವು ಎಲ್ಲ 230 ಸ್ಥಾನಗಳಿಗೂ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಜೊತೆಗಿನ ಮೈತ್ರಿಯ ಬಗ್ಗೆ ರಾಜ್ಯ ಹಾಗೂ ಕೇಂದ್ರ ಹಂತದಲ್ಲಿ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನರ್ಮದಾ ಪ್ರಸಾದ್ ಅಹಿರ್ವಾರ್ ತಿಳಿಸಿದ್ದಾರೆ.

ಮೈತ್ರಿಯ ಬಗ್ಗೆ ನನಗೆ ಪಕ್ಷದ ಅಧ್ಯಕ್ಷರಿಂದ ಯಾವುದೇ ನಿರ್ದೇಶನ ಬಂದಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರೊಂದಿನ ಮಾತುಕತೆಯ ಪ್ರಸ್ತಾವನೆಯ ಬಗ್ಗೆ ಕೂಡ ನರ್ಮದಾ ಅವರು ನಿರಾಕರಿಸಿದರು. ಮಧ್ಯಪ್ರದೇಶ ವಿದಾನಸಭೆ ಚುನಾವಣೆ ಈ ವರ್ಷದ ನವೆಂಬರ್ ಅಥವಾ ಡಿಸೆಂಬರ್’ನಲ್ಲಿ ನಡೆಯುವ ಸಾಧ್ಯತೆಯಿದೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 165, ಕಾಂಗ್ರೆಸ್ 58 ಹಾಗೂ ಬಿಎಸ್ಪಿ 4 ಹಾಗೂ ಇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದರು.

ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿ 44, ಕಾಂಗ್ರೆಸ್ 36 ಹಾಗೂ ಬಿಎಸ್ಪಿ 6 ರಷ್ಟು ಮತಗಳಿಸಿದ್ದರು. 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಹಾಗೂ ಎಸ್ಪಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದಾಗಿ ನಿರ್ಧರಿಸಿವೆ.

ಈ ವಿಷಯ ಹೊರಬೀಳುತ್ತಿದಂತೆ ಮೋದಿ ರವರ ಅಭಿಮಾನಿಗಳಿಗೆ ಮತ್ತಷ್ಟು ಸಂತಸವಾಗಿದೆ, ಮಧ್ಯ ಪ್ರದೇಶ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿ ಜೆ ಪಿ , ಕಾಂಗ್ರೆಸ್ ಮೈತ್ರಿ ಕೂಟ ಮತ್ತು ಬಿಸ್ಪ್ ಮೈತ್ರಿ ಕೂಟ (ಬಿ ಸ್ ಪಿ ಮತ್ತು ಆ ಸ್ ಪಿ) ಗಳ ನಡುವೆ ಕಾಳಗ ನಡೆಯಲಿದೆ.