ಮತ್ತೊಂದು ಹಗರಣ, ಚಿದಂಬರಂಗೆ ಮತ್ತೊಂದು ಶಾಕ್ !!

ಹೌದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮೊದಲು ಪಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂರನ್ನು ವಿಚಾರಣೆಗೆ ಒಳಪಡಿಸಿದ ಜಾರಿ ನಿರ್ದೇಶನಾಲಯ ಈಗ ಮತ್ತೊಮ್ಮೆ ಮತ್ತೊಂದು ಕುಟುಂಬ ಸದಸ್ಯರಿಗೆ ಸಮನ್ಸ್ ಜಾರಿ ಮಾಡಿ ಬಿಗ್ ಶಾಕ್ ನೀಡಿದೆ.

ಈ ಹಿಂದೆ ಏರ್ಸೆಲ್ -ಮ್ಯಾಕ್ಸಿಸ್ ಮತ್ತು ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತು ಕಾರ್ತಿ ಚಿದಂಬರಂ ಪ್ರತ್ಯೇಕವಾಗಿ ವಿಚಾರಣೆಗೆ ಒಳಗಾಗಿದ್ದರು. ಅದರಲ್ಲೂ ಕಾರ್ತಿ ಚಿದಂಬರಂರನ್ನು ಬಂಧನಕ್ಕೂ ಒಳಪಡಿಸಲಾಗಿತ್ತು.

ಅಷ್ಟಕ್ಕೂ ಈಗ ಸಮನ್ಸ್ ನೀಡಿದ್ದು ಯಾರಿಗೆ ಮತ್ತು ಯಾವ ಪ್ರಕರಣದಲ್ಲಿ?

ಶಾರದಾ ಪೋನ್ಜಿ ಹಗರಣದಲ್ಲಿ ಲೇವಾದೇವಿ ಕಾಯ್ದೆ ಉಲ್ಲಂಘನೆ ಗೆ ಪಿ ಚಿದಂಬರಮ್ ರವರ ಧರ್ಮಪತ್ನಿ ನಳಿನೀ ರವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.

ಒಂದಲ್ಲ ಒಂದು ಪ್ರಕರಣದಲ್ಲಿ ಇತ್ತೀಚೆಗೆ ಪಿ ಚಿದಂಬರಂ ಮತ್ತು ಅವರ ಕುಟುಂಬದವರಿಗೆ ಸಮನ್ಸ್ ಜಾರಿಯಾಗುತ್ತಿದ್ದು ಶಾಕ್ ಮೇಲೆ ಶಾಕ್ ಕೊಟ್ಟಂತೆ ಆಗುತ್ತಿದೆ.

Post Author: Ravi Yadav