2018 ನೇ ಸಾಲಿನ ಸೌತ್ ಇಂಡಿಯಾ ಫಿಲ್ಮ್ ಫೇರ್ ಪ್ರಶಸ್ತಿ ಪ್ರಕಟ : ಯಾರು ಅತ್ಯುತ್ತಮ ನಟ, ನಟಿ, ಇಲ್ಲಿದೆ ಮಾಹಿತಿ

2018 ನೇ ಸಾಲಿನ ಸೌತ್ ಇಂಡಿಯಾ ಫಿಲ್ಮ್ ಫೇರ್ ಪ್ರಶಸ್ತಿ ಪ್ರಕಟ : ಯಾರು ಅತ್ಯುತ್ತಮ ನಟ, ನಟಿ, ಇಲ್ಲಿದೆ ಮಾಹಿತಿ

0

2018 ನೇ ಸಾಲಿನ ಸೌತ್ ಫಿಲಂ ಫೇರ್ ಅವಾರ್ಡ್ ಪ್ರಕಟವಾಗಿದ್ದು, ರಾಜಕುಮಾರ ಚಿತ್ರಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಶನಿವಾರ 2018 ರ ಸಾಲಿನ ಸೌತ್ ಫಿಲಂ ಫೇರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹೈದರಾಬಾದ್ ನಲ್ಲಿ ನಡೆದಿದೆ. ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಬ್ಯೂಟಿಫುಲ್ ಮನಸುಗಳು ಚಿತ್ರಕ್ಕಾಗಿ ನಟಿ ಶೃತಿ ಹರಿಹರನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.ಒಂದು ಮೊಟ್ಟೆಯ ಕಥೆ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಾಚಿಕೊಂಡಿತು.

2018 ನೇ ಸಾಲಿನ ಫಿಲಂ ಫೇರ್ ಅವಾರ್ಡ್ ನ ಸಂಪೂರ್ಣ ಪಟ್ಟಿ ಇಲ್ಲಿದೆ.

ಅತ್ಯುತ್ತಮ ಚಲನಚಿತ್ರ : ಒಂದು ಮೊಟ್ಟೆಯ ಕತೆ
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ – ಶ್ರುತಿ ಹರಿಹರನ್ (ಬ್ಯೂಟಿಫುಲ್ ಮನಸುಗಳು)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ: ಪುನೀತ್ ರಾಜಕುಮಾರ್ ( ರಾಜಕುಮಾರ )
ವಿಮರ್ಶಕರ ಅತ್ಯುತ್ತಮ ನಟ: ಧನಂಜಯ (ಅಲ್ಲಮ ಚಿತ್ರ)
ವಿಮರ್ಶಕರ ಅತ್ಯುತ್ತಮ ನಟಿ: ಶ್ರದ್ಧಾ ಶ್ರೀನಾಥ್ (ಆಪರೇಷನ್ ಅಲಮೇಲಮ್ಮ )
ಅತ್ಯುತ್ತಮ ನಿರ್ದೇಶಕ: ತರುಣ್ ಸುಧೀರ್ ( ಚೌಕ)

ಅತ್ಯುತ್ತಮ ಪೋಷಕ ನಟ: ರವಿ ಶಂಕರ್ (ಕಾಲೇಜ್ ಕುಮಾರ)
ಅತ್ಯುತ್ತಮ ಪೋಷಕ ನಟಿ: ಭವಾನಿ ಪ್ರಕಾಶ್ (ಉರ್ವಿ)

ಅತ್ಯುತ್ತಮ ಹಿನ್ನೆಲೆ ಗಾಯಕ: ಅರ್ಮಾನ್ ಮಲಿಕ್ (ಚಕ್ರವರ್ತಿ- ಒಂದು ಮಳೆಬಿಲ್ಲು)

ಅತ್ಯುತ್ತಮ ಹಿನ್ನೆಲೆ ಗಾಯಕಿ : ಅನುರಾಧಾ ಭಟ್ (ಚೌಕ- ಅಪ್ಪ ಐ ಲವ್ ಯು)
ಅತ್ಯುತ್ತಮ ಸಾಹಿತ್ಯ: ನಾಗೇಂದ್ರ ಪ್ರಸಾದ್ (ಚೌಕ- ಅಪ್ಪ ಐ ಲವ್ ಯು)
ಅತ್ಯುತ್ತಮ ಸಂಗೀತ ನಿರ್ದೇಶಕ: ಭರತ್ ಬಿಜೆ (ಬ್ಯೂಟಿಫುಲ್ ಮನಸುಗಳು)