ಮೋದಿ ಜಿ ಕರೆಗೆ ಸ್ಪಂದಿಸಿ ಹೆಗಲು ಕೊಟ್ಟ ಜನರೆಷ್ಟು ಗೊತ್ತಾ?

ಮೋದಿ ಜಿ ಕರೆಗೆ ಸ್ಪಂದಿಸಿದ ಜನರೆಷ್ಟು ಗೊತ್ತಾ?

0

ಹೌದು,ಆ ಒಂದು ಕರೆ ದೇಶದ ನಡೆಯನ್ನೇ ಬದಲಿಸಿದೆ, ಜನರು ಪ್ರಜಾಪ್ರಭುತ್ವದಲ್ಲಿ ಪ್ರಭುತ್ವ ಸಾದಿಸುವ ದಿನಗಲ್ಲು ಸನ್ನಿಹವಾಗಿವೆ. ಜನರು ಕಾಲ ಧನಿಕರ ವಿರುದ್ಧ ಸಮರ ಸಾರಿದ್ದಾರೆ, ಇಷ್ಟು ದಿನ ಹೋರಾಡುತ್ತಿದ್ದ ಮೋದಿ ರವರಿಗೆ ಹೆಗಲು ಕೊಟ್ಟಿದ್ದಾರೆ. ದಯವಿಟ್ಟು ಸಂಪೂರ್ಣ ಓದಿ, ಕೊನೆಯಲ್ಲಿ ದೇಶದ ಹೊಳಿತಿನ ಬಗ್ಗೆ ಬರೆಯಲಾಗಿದೆ.

ದೇಶದೆಲ್ಲೆಡೆ ಕಾಲಧನಿಕರು ತಾಂಡವ ವಾಡುತಿದ್ದಾರೆ, ಬೇನಾಮಿ ಆಸ್ತಿಯಾಕ್ ಲಕ್ಷ ಕೋಟಿಗಟ್ಟಲೆ ಇದೆ, ಇದನ್ನು ಮೋದಿ ರವರು ಒಬ್ಬರೇ ತಡೆಯಲು ಪ್ರಯತ್ನಿಸಿದರಾದರೂ, ಯಶಸ್ಸು ಅಷ್ಟು ಸುಲಭವಾಗಿಲ್ಲ ಎಂಬುದು ತಿಳಿದಿರುವ ವಿಷಯ. ಆದ ಕಾರಣ ಮೋದಿ ರವರು ಜನರಿಗೆ ಐ ಟಿ ಸಂಸ್ಥೆಯ ಮೂಲಕ ನೆರವನ್ನು ಕೋರಿ ಒಂದು ಕರೆ ನೀಡುತ್ತಾರೆ.

ಅಷ್ಟಕ್ಕೂ ಕರೆ ಯಾವುದು? ನಿಮಗೆ ತಿಳಿದಿರುತ್ತದೆ !

ಜೂನ್ 1 ರಂದು ಆದಾಯ ತೆರಿಗೆ ಇಲಾಖೆ ಮಹತ್ವದ ಘೋಷಣೆಯೊಂದನ್ನು ಮಾಡಿತ್ತು. ತೆರಿಗೆ ವಂಚಕರ ಸುಳಿವು ನೀಡಿದವರಿಗೆ ಕೋಟ್ಯಾಂತರ ರೂ. ನಗದು ಬಹುಮಾನ ನೀಡುವುದಾಗಿ ಪ್ರಕಟಿಸಿತ್ತು.

ತೆರಿಗೆ ವಂಚಿಸಿದ ನಿರ್ದಿಷ್ಟ ಪ್ರಕರಣಗಳನ್ನು ಪುರಾವೆ ಸಮೇತ ಒದಗಿಸಿದರೆ ಒಂದು ಕೋಟಿ ರೂಪಾಯಿ ಹಾಗೂ ವಿದೇಶದಲ್ಲಿ ಅನಧಿಕೃತವಾಗಿ ಹೂಡಿಕೆ ಮಾಡಿದ್ದರ ಕುರಿತು ಮಾಹಿತಿ ನೀಡಿದರೆ ಐದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಪ್ರಕಟಿಸಿತ್ತು.

ಅಷ್ಟಕ್ಕೂ ಅದಕ್ಕೆ ಸ್ಪಂದಿಸಿದ ಜನರೆಷ್ಟು ಗೊತ್ತಾ?

ಕೇವಲ ಇನ್ನು ವಾರ ಕಳೆದಿಲ್ಲ ಅದಾಗಲೇ ಐ ಟಿ ಇಲಾಖೆಗೆ ಪುರಾವೆ ಸಮೇತ ಬರೋಬ್ಬರಿ ಲಕ್ಷಕ್ಕೂ ಹೆಚ್ಚು ಪತ್ರಗಳು ಬಂದಿದ್ದು, ಆದಾಯ ತೆರಿಗೆ ಇಲಾಖೆ ಕಚೇರಿಗೆ 500 ಕ್ಕೂ ಅಧಿಕ ಕರೆಗಳು ಬಂದಿವೆ. ಅಷ್ಟೇ ಅಲ್ಲ, ಹಲವಾರು ದಾಖಲೆಗಳನ್ನೊಳಗೊಂಡ ಕೊರಿಯರ್ ನ ರಾಶಿ ಕಚೇರಿಗೆ ತಲುಪಿದೆ. ಜೊತೆಗೆ ನೂರಾರು ಇ-ಮೇಲ್ ಗಳು ಬಂದಿದೆ ಎನ್ನಲಾಗಿದೆ.

ಕೇವಲ ಒಂದೇ ವಾರದಲ್ಲಿ ತಮಗೆ ಬಂದಿರುವ ಮಾಹಿತಿಗಳೆಲ್ಲವನ್ನು ಸಂಬಂಧಪಟ್ಟ ಕಚೇರಿಯ ಅಧಿಕಾರಿಗಳಿಗೆ ರವಾನಿಸಲಾಗುತ್ತಿದ್ದು, ತನಿಖೆ ಬಳಿಕವಷ್ಟೇ ಈ ಮಾಹಿತಿಗಳ ಸತ್ಯಾಂಶ ತಿಳಿದುಬರಲಿದೆ.

ಇಷ್ಟು ದಿನ ಜನರು ದುಡ್ಡಿರುವವರಿಗೆ ಭಯಪಟ್ಟು ಯಾವುದೇ ಮಾಹಿತಿ ನೀಡಲು ಭಯಪಡುತ್ತಿದ್ದ ಜನ ಈಗ ದೈರ್ಯವಾಗಿ ಹೊರಬರುವಂತೆ ಮಾಡಿದ್ದು ಮಾತ್ರ ಮೋದಿ, ಏನೆ ಆಗಲಿ ಇದು ಪ್ರಜಾ ಪ್ರಭುತ್ವ ಇಲ್ಲಿ ಪ್ರಜೆಯದ್ದೇ ಕಾರುಬಾರು ಇರಬೇಕು ಇದು ಹೀಗೆ ಮುಂದು ವರಿದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ ಎನ್ನುವ ಬದಲು ಅಭಿವೃದ್ಧಿ ಹೊಂದಿದ ದೇಶ ಎನ್ನ ಬಹುದು.