ಸೋಲೊಪ್ಪಿಕೊಂಡರೆ ರೇವಣ್ಣ? ಮೈತ್ರಿ ಸರ್ಕಾರ ಎಷ್ಟು ದಿನ ಉಳಿಯುವುದು?

ಸಮ್ಮಿಶ್ರ ಸರ್ಕಾರದಲ್ಲಿ ಒಂದಲ್ಲ ಒಂದು ವಿಷಯಗಳಿಗೆ ಮನಸ್ತಾಪ ಬರುತ್ತಿದೆ ಇದನ್ನು ನೋಡಿದ ಜನರು ಈ ಸರ್ಕಾರ ಆಯಸ್ಸು ಕಡಿಮೆ ಎಂದು ಮಾತನಾಡಿಕೊಳ್ಳುತ್ತಿರುವುದು ತಿಳಿದಿರುವ ವಿಷಯ, ಆದರೆ ಈಗ ಸ್ವತಹ ಮುಖ್ಯ ಮಂತ್ರಿರವರ ಅಣ್ಣ ರೇವಣ್ಣ ನವರಿಗೆ ಈ ಅನುಮಾನ ಬಂದಿದೆ.

ಬೇಲೂರು ಚನ್ನಕೇಶವ ದೇವರು ಜೆಡಿಎಸ್ ಗೆ ಅಧಿಕಾರ ನೀಡಿದ್ದಾನೆ. ಸಮ್ಮಿಶ್ರ ಸರ್ಕಾರ ಇಷ್ಟೇ ದಿನ ಇರುತ್ತೆ ಎಂದು ನಾನು ಹೇಳಲು ಆಗಲ್ಲ. ಎಂದು ಹೇಳುವ ಮೂಲಕ ಸಮ್ಮಿಶ್ರ ಸರ್ಕಾರ ಅವಧಿ ಪೂರ್ಣ ಅಧಿಕಾರ ನಡೆಸುವುದು ಅನುಮಾನ ಎಂಬಂತೆ ಮಾತನಾಡಿದ್ದಾರೆ.

ಇದನ್ನೆಲ್ಲ ನೋಡಿದರೆ ಸಚಿವರಿಗೆ ತಮ್ಮ ಸರ್ಕಾರದ ಮೇಲೆ ಅನುಮಾನವಿದ್ದಂತೆ ಕಾಣುತ್ತದೆ. ಇನ್ನು ಜನರು ಹೇಗೆ ನಂಬಬೇಕು? ಈ ಹೇಳಿಕೆ ನೋಡಿದರೆ ಸ್ಪಷ್ಟವಾಗಿ ತಿಳಿಯುತ್ತದೆ ರೇವಣ್ಣ ನವರು ಸರ್ಕಾರ ಉಳಿಸುಕೊಳ್ಳುವುದು ಕಷ್ಟ ಎಂಬಂತೆ ಕಾಣುತ್ತದೆ ಎಂದು ಹೇಳಿದ್ದಾರೆಯೇ ಎಂದು !!!

Post Author: Ravi Yadav