5 ವರ್ಷದವರೆಗೆ ಉಚಿತ ಚಾನೆಲ್ ನೀಡಲಿದೆ ಈ ಕಂಪನಿ

5 ವರ್ಷದವರೆಗೆ ಉಚಿತ ಚಾನೆಲ್ ನೀಡಲಿದೆ ಈ ಕಂಪನಿ

0

ರಿಲಾಯನ್ಸ್ ಬಿಗ್ ಟಿವಿ ಭರ್ಜರಿ ಆಫರ್ ನೀಡ್ತಿದೆ. ಕಂಪನಿ ಭಾರತೀಯರಿಗಾಗಿ ದೊಡ್ಡ ಕೊಡುಗೆ ನೀಡ್ತಿದೆ. ಕಂಪನಿ ಒಂದು ವರ್ಷದವರೆಗೆ ಎಲ್ಲ ಚಾನೆಲ್ ಗಳನ್ನು ಗ್ರಾಹಕರಿಗೆ ಉಚಿತವಾಗಿ ನೀಡ್ತಿದೆ. ರಿಲಾಯನ್ಸ್ ಡೈರೆಕ್ಟ್ ಟು ಹೋಂ ಸರ್ವಿಸ್ ಅಡಿಯಲ್ಲಿ ದೇಶದಾದ್ಯಂತ 50000 ಅಂಚೆ ಕಚೇರಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಗ್ರಾಹಕರು ಪೋಸ್ಟ್ ಆಫೀಸ್ ಮೂಲಕ ಕೂಡ ರಿಲಾಯನ್ಸ್ ಡಿಟಿಹೆಚ್ ಬಿಗ್ ಟಿವಿ ಬುಕ್ಕಿಂಗ್ ಮಾಡಬಹುದಾಗಿದೆ. ಈ ಯೋಜನೆಯಡಿ 500 ಫ್ರೀ ಟು ಏರ್ ಚಾನೆಲ್ ಗಳನ್ನು ಐದು ವರ್ಷ ಉಚಿತವಾಗಿ ನೀಡಲಿದೆ. ಪಾವತಿ ಚಾನೆಲ್ ಗಳನ್ನು ರಿಲಾಯನ್ಸ್ ಒಂದು ವರ್ಷ ಉಚಿತವಾಗಿ ನೀಡಲಿದೆ.

ರಿಲಾಯನ್ಸ್ ಬಿಗ್ ಟಿವಿ ಸೆಟ್ ಆಪ್ ಬಾಕ್ಸನ್ನು ಗ್ರಾಹಕರು ಮುಂಗಡ ಬುಕ್ಕಿಂಗ್ ಮಾಡಬೇಕಾಗುತ್ತದೆ. ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಹೆಚ್ ಡಿ HEVC ಸೆಟ್ ಆಫ್ ಬಾಕ್ಸ್ ಸಿಗಲಿದೆ. ರೆಕಾರ್ಡಿಂಗ್, ಯುಎಸ್ಬಿ ಪೋರ್ಟ್, ಹೆಚ್ಡಿಎಂಐ ಪೋರ್ಟ್ ಸೇರಿದಂತೆ ಇತ್ತೀಚಿನ ವೈಶಿಷ್ಟ್ಯತೆಗಳು ಇದ್ರಲ್ಲಿರಲಿವೆ.

ಕಂಪನಿ ಜೂನ್ 20ರಿಂದ ಇದ್ರ ಫ್ರೀ ಬುಕ್ಕಿಂಗ್ ಶುರು ಮಾಡಲಿದೆ. ರಾಜಸ್ತಾನ್, ಪಂಜಾಬ್, ಉತ್ತರಾಖಂಡ್, ಆಂಧ್ರ ಪ್ರದೇಶ, ಕರ್ನಾಟಕ, ಅರುಣಾಚಲಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಗ್ರಾಹಕರಿಗೆ ಪೂರ್ವ ಬುಕ್ಕಿಂಗ್ ಸೌಲಭ್ಯ ಸಿಗಲಿದೆ.