ಪಾಕ್ ಗೆ ಮತ್ತೊಮ್ಮೆ ಮುಖಭಂಗ: ನೆನಪಿರಲಿ ಇದು ಮೋದಿ ಮುನ್ನಡೆಸುವ ಭಾರತ

0

ಪಾಕಿಸ್ತಾನ, ನಮ್ಮ ದೇಶದ ಶತ್ರು ರಾಷ್ತ್ರ, ಅಷ್ಟೇ ಅಲ್ಲ ತಾಕತ್ತು ಇಲ್ಲದಿದ್ದರೂ ಸದಾ ಭಾರತದ ಜೊತೆ ಕಾಲ್ಕೆರೆದು ಜಗಳಕ್ಕೆ ಬಂದು ಸೋತು ಇಲ್ಲವೇ ಬಾರಿ ಮುಖಭಂಗ, ಅನುಭವಿಸಿ ಪೇಚೆಗೆ ಸಿಲುಕಿ ಮತ್ತೊಂದು ವಿಷಯದ ಬಗ್ಗೆ ಚಿಂತಿಸುವುದು ಈ ದೇಶದ ಅವ್ಯಾಸ.

ಆದರೆ ಶಾಂತಿ ಶಾಂತಿ ಎಂದು ಭಾರತದ ಮಂತ್ರವನ್ನು ಅವಕಾಶವಾದಿಯಂತೆ ಬಳಸಿಕೊಂಡು ಭಾರತವನ್ನು ಎದುರಿಸುತ್ತೇವೆ ಎಂದು ಬೊಬ್ಬೆ ಒಡೆಯುತಿದ್ದ ಪಾಕಿಸ್ತಾನಕ್ಕೆ ಪಾಪ ೪ ವರ್ಷಗಳಿಂದ ಹಿಂದೇಟಿನ ಮೇಲೆ ಹಿಂದೇಟು, ಸೋಲಿನ ಮೇಲೆ ಸೋಲು, ಮುಖಭಂಗದ ಮೇಲೆ ಮುಖಭಂಗ ಇದಕೆಲ್ಲ ಕಾರಣ ಒಂದೇ, ಒಬ್ಬ ನಾಯಕ, ಒಬ್ಬ ಜನರ ಪ್ರಧಾನಿ ಅವರೇ ನಮ್ಮ ಹೆಮ್ಮೆಯ ಪ್ರಧಾನಿ ಮೋದಿ.

ಅಷ್ಟಕ್ಕೂ ಈಗ ಯಾಕೆ ಈ ವಿಷಯ ಅನ್ನುತ್ತಿದಿರಾ? ಸಂಪೂರ್ಣ ಓದಿ ತಿಳಿಯುತ್ತದೆ !

ಒಂದಲ್ಲ ಒಂದು ರೀತಿಯಲ್ಲಿ ಭಾರತ ಪಾಕಿಸ್ತಾನದ ಮಾನವನ್ನು ಹರಾಜು ಹಾಕುತ್ತಲೇ ಬಂದಿದೆ, ಈಗ ಮತ್ತೊಂದು ಬಾರಿ ಮೋದಿ ನಾಯಕತ್ವ ಪಾಕಿಸ್ತಾನದ ಮಾನವನ್ನು ಹರಾಜು ಹಾಕಿದೆ.

ವಿಷಯದ ಮೂಲವೇನು?

ಮೇ ತಿಂಗಳಲ್ಲಿ ಪ್ರಧಾನಿ ಮೋದಿ 330 ಮೆ.ವಾ.ಸಾಮಥ್ರ್ಯದ ಕಿಷನ್ ಗಂಗಾ ಡ್ಯಾಂ ಯೋಜನೆಗೆ ಉದ್ಘಾಟನೆ ನೆರವೇರಿಸಿದ್ದರು. ಈ ಯೋಜನೆಯಿಂದ ಪಾಕಿಸ್ತಾನ ಪ್ರಾಂತ್ಯಕ್ಕೆ ನೀರು ಪೂರೈಕೆಯಾಗು ವುದಿಲ್ಲ ಹಾಗೂ ಇದು ಸಿಂಧು ಜಲ ಒಪ್ಪಂದದ ಉಲ್ಲಂಘನೆ ಎಂದು ಪಾಕ್ ತಗಾದೆ ತೆಗೆದಿತ್ತು. ಅಲ್ಲದೇ, ಪಾಕಿಸ್ತಾನದ ಅಟಾರ್ನಿ ಜನರಲ್ ಆಶ್ತಾರ್ ಅಸಫ್ ಅಲಿ ನೇತೃತ್ವದ ಉನ್ನತ ನಿಯೋಗ ಅಮೆರಿಕಕ್ಕೆ ತೆರಳಿ ವಿಶ್ವ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ದಕ್ಷಿಣ ಏಷ್ಯಾ ಪ್ರಾದೇಶಿಕ ಆಡಳಿತ ಮಂಡಳಿ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಾರ್ಜೀವಾ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿತ್ತು.

ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಅವರಿಂದ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಘಾಟನೆಗೊಂಡಿದ್ದ ಮಹತ್ವಾಕಾಂಕ್ಷೆಯ ಕಿಷನ್‍ಗಂಗಾ ಅಣೆಕಟ್ಟು ಯೋಜನೆ ವಿರುದ್ಧ ಅಪಸ್ವರ ತೆಗೆದಿದ್ದ ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್(ಡಬ್ಲ್ಯುಬಿ) ಬುದ್ಧಿ ಹೇಳಿ ಭಾರತದ ಬೆಂಬಲಕ್ಕೆ ನಿಂತಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಮತ್ತೊ ಂದು ಭಾರೀ ಹಿನ್ನೆಡೆಯಾಗಿದೆ. ಈ ವಿಷಯವನ್ನು ಅಂತಾ ರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ (ಐಸಿಎ)ಕ್ಕೆ ಕೊಂಡೊ ಯ್ಯಬೇಕೆಂಬ ತನ್ನ ಬೇಡಿಕೆಯಿಂದ ಹಿಂದೆ ಸರಿಯಬೇಕು. ಸಿಂಧು ನದಿ ಒಪ್ಪಂದವನ್ನು ಭಾರತ ಉಲ್ಲಂಘಿಸಿದಂತೆ ಕಂಡು ಬರುತ್ತಿಲ್ಲ. ಈ ವಿವಾದವನ್ನು ಸೌಹಾರ್ದಯುತ ವಾಗಿ ಇತ್ಯರ್ಥಪಡಿಸಿಕೊಳ್ಳಬೇಕೆಂದು ಡಬ್ಲ್ಯುಬಿ ಸಲಹೆ ಮಾಡಿದೆ.

ಈ ವಿವಾದವನ್ನು ದೊಡ್ಡದು ಮಾಡದೆ ಸೌಹಾರ್ದಯುವಾಗಿ ಬಗೆಹರಿಸಿಕೊಳ್ಳುವಂತೆ ಅವರು ಪಾಕ್‍ಗೆ ಸಲಹೆ ಮಾಡಿದ್ದರು. ಈಗ ಮತ್ತೊಮ್ಮೆ ಈ ವಿವಾದದಲ್ಲಿ ಮಧ್ಯ ಪ್ರವೇಶಿಸಿರುವ ವಿಶ್ವಬಾಂಕ್, ಪಾಕಿಸ್ತಾನಕ್ಕೆ ಸಲಹೆ ಮಾಡಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದ ಮೆಟ್ಟಿಲೇರದಂತೆ ಸೂಚಿಸಿದೆ.

ನೀವು ಯಾವ ಪಕ್ಷದ ಬೆಂಬಲಿಗರೇ ಹಾಗಿರಿ, ಆದರೆ ಈ ತರಹ ಶತ್ರು ದೇಶವಾದ ಸೊಕ್ಕು ಮುರಿದು ಕೂರಿಸುವ ಪ್ರಧಾನಿ ಭಾರತಕ್ಕೆ ಪ್ರತಿ ಬಾರಿಯೂ ಸಿಗಬೇಕು