ಮತ್ತೊಮ್ಮೆ ದಿಟ್ಟ ಉತ್ತರ ನೀಡಿದ ಸೈನಿಕರು: ನಮ್ಮ ಸೈನಿಕರು ನಮ್ಮ ಹೆಮ್ಮೆ

ಶ್ರೀನಗರ: ಗಡಿಯಲ್ಲಿ ಉಗ್ರರ ಉಪಟಳ ಮತ್ತೆ ಹೆಚ್ಚಾಗಿದ್ದು, ಭಾರತೀಯ ಯೋಧರು ದಿಟ್ಟ ಉತ್ತರ ಕೊಟ್ಟಿದ್ದಾರೆ. ಕುಪ್ವಾರ್‌ ಜಿಲ್ಲೆ ಸಮೀಪ ಐವರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದಾರೆ.

ಕುಪ್ವಾರ್‌ ಬಳಿ ಒಳನುಸುಳಲು ಯತ್ನಿಸಿದ ಐವರು ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ. ಭಾರತೀಯಾ ಸೇನಾ ಪಡೆಯನ್ನು ಮುತ್ತಿಗೆ ಹಾಕಲು ಸಂಚು ಹೂಡಿದ್ದ ಉಗ್ರರಿಗೆ ಯೋಧರು ತಕ್ಕ ಉತ್ತರ ನೀಡಿದ್ದಾರೆ. ಐವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

Post Author: Ravi Yadav