ಕಾಂಗ್ರೆಸ್ ನಮ್ಮ ಮತ್ತು ಮೋದಿ ರವರ ಅದೃಷ್ಟ : ಅಮಿತ್ ಶಾ ಷಾಕಿಂಗ್ ಹೇಳಿಕೆ

ಕಾಂಗ್ರೆಸ್ ನಮ್ಮ ಅದೃಷ್ಟ : ಅಮಿತ್ ಶಾ ಷಾಕಿಂಗ್ ಹೇಳಿಕೆ

0

ಹೌದು ಕಾಂಗ್ರೆಸ್ ಪಕ್ಷವು ಮೋದಿ ರವರ ಮತ್ತು ಬಿಜೆಪಿ ಪಕ್ಷದ ಅದೃಷ್ಟ ಎಂದು ಅಮಿತ್ ಶಾ ಹೇಳಿದ್ದಾರೆ. ಕಾರಣ ತಿಳಿಯಲು ಸಂಪೂರ್ಣ ಓದಿ.

ಅಷ್ಟಕ್ಕೂ ವಿಷಯದ ಮೂಲವೇನು?

ಎಂದಿದಂತೆ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಗೆಲ್ಲಿಸಲು ಚಾಣಕ್ಯ ಜೈಪುರದಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸಿದರು.  ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಹಾರ ನಡೆಸಿದ ಅಮಿಚ್ ಶಾಹ್ ಎಂದಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಕಾಲು ಎಳೆಯುವಲ್ಲಿ ಸಫಲರಾದರು.ಹೇಗೆಲ್ಲ ವ್ಯಂಗ ವಾಡಿದರು ಒಮ್ಮೆ ಸಂಪೂರ್ಣ ಓದಿ.

1. ಬಿಜೆಪಿ ಯಾವುದೇ ಜನಪರ ಕೆಲಸ ಮಾಡಿಲ್ಲ ಬಿಜೆಪಿ ಆ ಕೆಲಸ ಮಾಡಿಲ್ಲ, ಈ ಕೆಲಸ ಮಾಡಿಲ್ಲ ಎಂದು ಸುಳ್ಳು ಪ್ರಚಾರ ನಡೆಸುವುದೇ ಕಾಂಗ್ರೆಸ್ ಪಕ್ಷದ ಕೆಲಸವಾಗಿದ್ದು, ಭಾರತವನ್ನು ದಶಕಗಳ ಕಾಲ ಆಳಿದ ಅವರ ಮೂರು ತಲೆಮಾರುಗಳ ಲೆಕ್ಕವನ್ನು ಮಾತ್ರ ನೀಡುತ್ತಿಲ್ಲ ಎಂದು ಶಾ ಹರಿಹಾಯ್ದರು.

2.ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಕೇವಲ ಕೆಲ ಉಪ ಚುನಾವಣೆಗಳನ್ನು ಗೆದ್ದ ಮಾತ್ರಕ್ಕೆ ಬಿಗುತ್ತಿರುವುದನ್ನು ನೋಡಿದರೆ ನಗು ಬರುತ್ತದೆ ಎಂದು ಶಾ ವ್ಯಂಗ್ಯವಾಡಿದರು.

3.ನಾವು 8 ಉಪಚುನಾವಣೆಗಳಲ್ಲಿ ಸೋಲು ಕಂಡಿರಬಹುದು. ಆದರೆ, 14 ರಾಜ್ಯಗಳಲ್ಲಿ ಕಾಂಗ್ರೆಸ್ ನಿಂದ ಅಧಿಕಾರವನ್ನು ಕಿತ್ತುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಅಷ್ಟಕ್ಕೂ ಅದೃಷ್ಟ ಎನ್ನಲು ಕಾರಣಗಳೇನು?

1. ನೀವು ಹೋದ ಕಡೆಯೆಲ್ಲ ಬಿಜೆಪಿ ಬಿಜೆಪಿ ಎಂದು ಕರೆದು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದೀರಿ ಎಂದು ವ್ಯಂಗ್ಯವನ್ನು ಪ್ರಾರಂಭಿಸಿದರು.

2. ನೀವು ಒಳ್ಳೆ ಕೆಲಸ ಮಾಡಿಲ್ಲ, 70 ವರ್ಷಗಳಲ್ಲಿ ಆಡಳಿತದಲ್ಲಿ ಏನನ್ನೂ ಸಾಧಿಸಿಲ್ಲ, ಆದ ಕಾರಣ ಇಡೀ ಭಾರತದ ಜನರ ಸೇವೆಯನ್ನು ಮಾಡಲು ಅವಕಾಶ ನೀಡಿದ್ದೀರಾ ,ಇಂದು ಶೌಚಾಲಯಗಳನ್ನು ಕಟ್ಟಿಸುವಂತಹ ಹಾಗೂ ಬಡ ತಾಯಂದಿರಿಗೆ ಸಿಲಿಂಡರ್ ಒದಗಿಸುವ ಅದೃಷ್ಟ ನಮ್ಮದಾಗುತ್ತಿರಲಿಲ್ಲ ಎಂದಿದ್ದಾರೆ.

ಈ ಎಲ್ಲ ಕಾರಣಗಳನ್ನು ನೀಡಿದ ಅಮಿತ್ ಶಾ ಇಂತಹ ಪ್ರತಿಪಕ್ಷ ದೊರೆತಿರುವುದು ನಮ್ಮ ಅದೃಷ್ಟ ಎಂದು ಕಾಂಗ್ರೆಸ್ ಪಕ್ಷವನ್ನು ಕೊಂಡಾಡಿದ್ದಾರೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೊಂಡಾಡಿದ ಶಾ, ವಿಶ್ವದಾದ್ಯಂತ ಜನಪ್ರಿಯ ನಾಯಕರಾಗಿರುವ ನರೇಂದ್ರ ಮೋದಿಯವರು ನಮ್ಮ ದೇಶವನ್ನು ಮುನ್ನಡೆಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ಭಾರತ ಮತ್ತೊಮ್ಮೆ ವಿಶ್ವ ಗುರುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.