ಕಾಂಗ್ರೆಸ್ ನ ಮತ್ತೊಂದು ದೊಡ್ಡ ವಿಕೆಟ್ ಪತನ: ರಾಜೀನಾಮೆ ಪತ್ರ ರವಾನೆ

ಕಾಂಗ್ರೆಸ್ ನ ಮತ್ತೊಂದು ದೊಡ್ಡ ವಿಕೆಟ್ ಪತನ: ರಾಜೀನಾಮೆ ಪತ್ರ ರವಾನೆ

0

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸಂಪುಟ ಸಚಿವ ರಚನೆಯಾದ ನಂತರ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟಗೊಂಡಿರುವುದು ತಿಳಿದಿರುವ ವಿಷಯ.  ಬಂಡಾಯದ ಬಿಸಿ ತಗುಲಿ ಒಬ್ಬೊರಾಗಿಯೇ ತಮ್ಮ ಸ್ನಾನಗಳಇಗೆ ರಾಜೀನಾಮೆ ನೀಡುತ್ತಿದ್ದಾರೆ

ಆದರೆ ಈಗ ರಾಜೀನಾಮೆ ನೀಡಿರುವುದು ಸಾಮಾನ್ಯ ನಾಯಕನಲ್ಲ ಮತ್ತು ಇದು ಇಷ್ಟಕ್ಕೇ ಮುಗಿಯದೆ ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಜಿಪಂ ಉಪಾದ್ಯಕ್ಷ ಸೇರಿ 15, ತಾಪಂ 28 , ಪಾಲಿಕೆ 2 ಸದಸ್ಯರು, ಎಪಿಎಂಸಿ ಅಧ್ಯಕ್ಷ ಸೇರಿ 3 , ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 50 ಅಧಿಕ ಜನರು ರಾಜೀನಾಮೆ ಸಲ್ಲಿಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ.

ಅಷ್ಟಕ್ಕೂ ರಾಜಿನಾಮೆ ನೀಡಿದ ನಾಯಕ ಯಾರು?

ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಶಾಸಕ ಸತೀಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ.

ಬೆಳಗಾವಿ ಯಮಕನಮರಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, , ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಸತೀಶ್ ಜಾರಕಿಹೊಳಿ ಇ-ಮೇಲ್ ಮೂಲಕ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರವಾನಿಸಿದ್ದಾರೆ.

ಇವೆಲ್ಲದರ ನಡುವೆ ಸತೀಶ್ ಜಾರಕಿಹೊಳಿಗೆ ಸ ಅಂತ ಸತೀಶ ಜಾರಕಿಹೊಳಿ ಬೆಂಬಲಿಗರು ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸತೀಶ ಜಾರಕಿಹೊಳಿ ಅವರಿಗೆ ಮಂತ್ರಿ ಸ್ಥಾನ ನೀಡಬೇಕು, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರಿಗೆ ಹಾಗೂ ಕಾನೂನಿನ ಪ್ರಕಾರವೂ ಇವತ್ತೆ ರಾಜೀನಾಮೆ ಸಲ್ಲಿಸುತ್ತೇವೆ. ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ತಪ್ಪಿರುವುದಕ್ಕೆ ಡಿಸಿಎಂ ಡಾ. ಪರಮೇಶ್ವರ, ರಾಜ್ಯ ಉಸ್ತುವಾರಿ ವೇಣುಗೋಪಾಲ, ಕೇಂದ್ರದ ಅಹಮದ್ ಪಟೇಲ್ ಅವರೇ ನೇರ ಕಾರಣ ಇದೇ ವೇಳೆ ಆರೋಪಿಸಿದ್ದಾರೆ.