ಈ ವಿಚಾರದಲ್ಲಿ ಒಂದೇ ತಕ್ಕಡಿಯಲ್ಲಿ ತೂಗುತ್ತಿದ್ದಾರೆ ಕೊಹ್ಲಿ-ಯಡಿಯೂರಪ್ಪ

ಈ ವಿಚಾರದಲ್ಲಿ ಒಂದೇ ತಕ್ಕಡಿಯಲ್ಲಿ ತೂಗುತ್ತಿದ್ದಾರೆ ಕೊಹ್ಲಿ-ಯಡಿಯೂರಪ್ಪ

0

ಶನಿವಾರ ಕರ್ನಾಟಕಕ್ಕೆ ಬಹುಮುಖ್ಯ ದಿನ. ಕರ್ನಾಟಕದಲ್ಲಿ ಶನಿವಾರ ಎರಡು ಪ್ರಮುಖ ಘಟನೆಗಳು ನಡೆಯಲಿದ್ದು, ಜನತೆ ಕುತೂಹಲದಿಂದ ಕಾಯ್ತಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಎಲ್ಲರೂ ಟಿವಿ ಮುಂದೆ ತುದಿಗಾಲಿನಲ್ಲಿ ಕುಳಿತುಕೊಳ್ಳಲಿದ್ದಾರೆ. ಒಂದು ಕಡೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯುತ್ತಿದ್ದರೆ ಮತ್ತೊಂದು ಕಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ತಾನದ ವಿರುದ್ಧ ಫ್ಲೇ ಆಪ್ ಭರವಸೆಯೊಂದಿಗೆ ಮೈದಾನಕ್ಕಿಳಿಯಲಿದೆ.

ಸಿಎಂ ಯಡಿಯೂರಪ್ಪ ಹಾಗೂ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸ್ಥಿತಿ ಒಂದೇ ರೀತಿಯಲ್ಲಿದೆ. ಯಡಿಯೂರಪ್ಪ ಬಹುಮತಕ್ಕೆ ಸಮೀಪವಿದ್ದರೂ ಬಹುಮತ ಸಿಕ್ಕಿಲ್ಲ. ಇನ್ನು ಕೊಹ್ಲಿ ಕೂಡ 12 ಅಂಕ ಪಡೆದಿದ್ದು ಫ್ಲೇಆಪ್ ನಿಂದ ದೂರವಿದ್ದಾರೆ. ಯಡಿಯೂರಪ್ಪ ವಿರೋಧಿಗಳ ಬಲ ಹೆಚ್ಚಿದೆ. ಹಾಗೆ ಕೊಹ್ಲಿ ವಿರೋಧಿ ತಂಡದ ಬಲ ಕೂಡ ಹೆಚ್ಚಿದೆ.

ಆರ್ ಸಿ ಬಿ ಗುರುವಾರ ಹೈದ್ರಾಬಾದ್ ವಿರುದ್ಧ 14 ರನ್ ಗಳ ಜಯ ಗಳಿಸಿದೆ. ಈವರೆಗೆ ಬೆಂಗಳೂರು ಮೂರು ಪಂದ್ಯಗಳಲ್ಲಿ ಜಯಗಳಿಸಿದ್ದು ರಾಜಸ್ತಾನ್ ವಿರುದ್ಧ ಆತ್ಮವಿಶ್ವಾಸದಿಂದ ಮೈದಾನಕ್ಕಿಳಿಯಲಿದೆ. ರಾಜಸ್ತಾನದ ವಿರುದ್ಧ ಆರ್ ಸಿ ಬಿ ಸೋಲುಂಡಲ್ಲಿ ಫ್ಲೇಆಪ್ ಅವಕಾಶ ಕಳೆದುಕೊಳ್ಳಲಿದೆ. ಆರ್ ಸಿ ಬಿ ಹಾಗೂ ರಾಜಸ್ತಾನ್ ರಾಯಲ್ಸ್ ಎರಡೂ ತಂಡದ ಬಳಿ 12-12 ಪಾಯಿಂಟ್ ಗಳಿದ್ದು ಗೆಲುವಿನ ಜೊತೆ ಉತ್ತಮ ರನ್ ರೇಟ್ ಕಾಯ್ದುಕೊಳ್ಳುವ ಅವಶ್ಯಕತೆಯಿದೆ.

Complete Credits: Kannada Duniya.