ಬಿಜೆಪಿ ಮಾಸ್ಟರ್ ಪ್ಲಾನ್: ಹೀಗೆ ನಡೆದರೆ ಸರ್ಕಾರ ಶತಸಿದ್ಧ

ಬಿಜೆಪಿ ಮಾಸ್ಟರ್ ಪ್ಲಾನ್: ಹೀಗೆ ನಡೆದರೆ ಸರ್ಕಾರ ಶತಸಿದ್ಧ

0

ದಕ್ಷಿಣ ಭಾರತದ ಅತಿ ದೊಡ್ಡ ರಾಜ್ಯ ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಅರಳುವಂತೆ ಮಾಡುವಲ್ಲಿ ಯಶಸ್ವಿಯಾದ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಈಗ ಅಗ್ನಿಪರೀಕ್ಷೆ ಎದುರಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮತ್ತೊಮ್ಮೆ ವಿಶ್ವಾಸಮತ ಯಾಚನೆಗೆ ಸಜ್ಜಾಗುತ್ತಿದ್ದಾರೆ.

ಬಹುಮತ ಪಡೆಯಲು ರಾಜ್ಯಪಾಲರಿಂದ 15 ದಿನಗಳ ಕಾಲಾವಕಾಶ ಪಡೆದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್ ನಿರ್ದೇಶ ನದ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸುವ ಸನ್ನಿವೇಶ  ಎದುರಾಗಿದ್ದರೂ ಬಿಜೆಪಿ ಪಾಳೆಯದಲ್ಲಿ ಮಾತ್ರ ಗೆಲುವಿನ ವಿಶ್ವಾಸ ಕಡಿಮೆಯಾಗಿಲ್ಲ.

 ಬಿ ಸ್ ವೈ ಏನು ಹೇಳಿದ್ದಾರೆ?

ಇಂದು ನಡೆಯುವ ವಿಶೇಷ ಕಲಾಪದಲ್ಲಿ ಶೇಕಡ 101 ಪ್ರತಿಶತ ಬಹುಮತ ಸಾಬೀತು ಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಶಾಸಕರು ಬೆಂಬಲ ನೀಡದಿದ್ದರೆ ನಾವು ಹೇಗೆ ವಿಶ್ವಾಸ ಮತ ಜಯಿಸಲು ಸಾಧ್ಯ ಹೇಳಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನ ಶಾಸಕರು ನಮ್ಮೊಂದಿಗಿದ್ದಾರೆ. ಅವರು ನಮಗೆ ಬೆಂಬಲ ಕೊಟ್ಟೆ ಕೊಡುತ್ತಾರೆ ಯಾವುದೇ ಸಮಸ್ಯೆ ಇಲ್ಲದೇ ಅಗತ್ಯವಿರುವ ಸಂಖ್ಯಾಬಲ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದು ತೀವ್ರ ಕುತೂಹಲವನ್ನು ಹುಟ್ಟಿಸಿದೆ.

ವಿಧಾನಸಭೆಯಲ್ಲಿ ನೂರಕ್ಕೆ ನೂರರಷ್ಟು ನಾನು ವಿಶ್ವಾಸಮತ ಗೆಲ್ಲುತ್ತೇನೆ. ಇದರಲ್ಲಿ ಯಾವುದೇ ಅನುಮಾನಗಳು ಬೇಡ. ಯಾರೂ ನಿರೀಕ್ಷಿಸದ ಮಟ್ಟದಲ್ಲಿ ಫಲಿತಾಂಶ ಸಿಗಲಿದೆ ಸಂಜೆ 5 ಗಂಟೆಗೆ ರಾಜ್ಯ ವಾಪ್ತಿ ವಿಜಯೋತ್ಸವ ಆಚರಣೆಗೆ ಬಿಜೆಪಿ ಕಾರ್ಯಕರ್ತರು ಸಿದ್ಧಕೆ ಮಾಡಿಕೊಳ್ಳಿ. ನಾವು ಚುನಾವಣೆ ವೇಳೆ ಮತದಾರರಿಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ.

ಆದರೆ, ಮೇಲ್ನೋಟಕ್ಕೆ ಸಂಖ್ಯಾಬಲ ಇಲ್ಲದಿರುವ ಬಿಜೆಪಿ ಬಹುಮತ ಗಳಿಸಲು ಏನೇನು ಮಾಡಬಹುದು ಎಂಬುದರ ಲೆಕ್ಕಾಚಾರ ಇಂತಿದೆ.

1 ಬಿಜೆಪಿಯ ಬಲ 104 . ಕಾಂಗ್ರೆಸ್ಸಿನ 78, ಜೆಡಿಎಸ್ ನ 37ಮತ್ತು ಇಬ್ಬರು ಪಕ್ಷೇತರರು ಸೇರಿ ಆಗುವ ಬಲ 117. ಅಂದರೆ, ಸರಳ  ಬಹುಮತಕ್ಕೆ112  ಬೇಕಾಗುತ್ತದೆ. ಬಿಜೆಪಿ ಸರಳ ಬಹುಮತ ಗೆಲ್ಲಲು ಎಂಟು ಮಂದಿ ಶಾಸಕರ ಬೆಂಬಲ ಪಡೆಯ ಬೇಕಾಗುತ್ತದೆ.

2 ಇಬ್ಬರು ಪಕ್ಷೇತರರು ಮತ್ತು ಕಾಂಗ್ರೆಸ್-ಜೆಡಿಎಸ್ ನ 6 ಶಾಸಕರು ವಿಶ್ವಾಸಮತ ಯಾಚನೆ ಪ್ರಸ್ತಾವನೆ ಮಂಡಿಸಿದ ವೇಳೆ ಬೆಂಬಲಿಸುವಂತೆ ನೋಡಿಕೊಳ್ಳು ವುದು. ಇದರಿಂದ ಪ್ರತಿಪಕ್ಷಗಳ ಬಲ 109 ಕ್ಕೆ ಕುಗ್ಗಲಿದೆ. ಬಿಜೆಪಿ ಮ್ಯಾಜಿಕ್ ನಂಬರ್ 112 ಗಳಿಸಲಿದೆ. ಗೆಲುವು ಸುಲಭವಾಗುತ್ತದೆ.

3 ಪಕ್ಷೇತರ ಶಾಸಕರಿಗೆ ವಿಪ್ ಉಲ್ಲಂಘನೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ, ಕಾಂಗ್ರೆಸ್-ಜೆಡಿಎಸ್‌ನ ಆರು ಮಂದಿ ಶಾಸಕರಿಗೆ ವಿಪ್ ಉಲ್ಲಂಘನೆಯ ಶಿಸ್ತುಕ್ರಮದ ಭೀತಿ ಎದುರಾಗ ಬಹುದು. ಆದರೆ, ಸರ್ಕಾರ ರಚನೆಯಾದ ನಂತರ ಸ್ಪೀಕರ್ ಆಡಳಿತಾರೂಢ ಬಿಜೆಪಿಯವರೇ ಆಗುವುದರಿಂದ ವಿಪ್ ಉಲ್ಲಂಘನೆಯಾದ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಸುಮ್ಮನಾಗಬಹುದು.

4 ವಿಪ್ ಉಲ್ಲಂಘನೆ ಗೊಂದಲವೇ ಬೇಡ ಎಂದಾದಲ್ಲಿ ಶನಿವಾರ ಸದನದಲ್ಲಿ ಶಾಸಕರ ಹಾಜರಾತಿಯನ್ನೇ ಕುಗ್ಗಿ ಸುವುದು. ಅಂದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕೆಲವು ಶಾಸಕರು ಸದನಕ್ಕೇ  ಬರದಂತೆ ನೋಡಿ ಕೊಳ್ಳುವುದು.

5 ಈಗಿರುವ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರ ಒಟ್ಟು  ಬಲ 221 ಆಗುತ್ತದೆ. ಆ ಪ್ರಕಾರ ಸರಳ ಬಹುಮತಕ್ಕೆ 112 ಬೇಕಾಗುತ್ತದೆ. ಒಂದು ವೇಳೆ ಆ ಬಣದ ಸುಮಾರು 15 ಚುನಾಯಿತರು ಸದನದ ಕಲಾಪದಿಂದಲೇ ದೂರ ಉಳಿದಲ್ಲಿ ಆಗ ಸದನದ ಒಟ್ಟು ಬಲ 206 ಕ್ಕೆ ತಗ್ಗಲಿದೆ. ಆಗ ಬಹುಮತಕ್ಕೆ ಬೇಕಾಗುವ ಮ್ಯಾಜಿಕ್ ನಂಬರ್ 104 ಆಗುತ್ತದೆ. ಆ ಸಂಖ್ಯೆ ಈಗ ಬಿಜೆಪಿ ಬಳಿಯಿದೆ.

ಬಿಜೆಪಿ ಗೆಲ್ಲಲು ಏನು ಮಾಡಬೇಕು? 

*ಕೈ ಶಾಸಕರು ಗೈರು ಹಾಜಾರಾಗಬೇಕು

* ಕಾಂಗ್ರೆಸ್ ಶಾಸಕರನ್ನು ಗೈರು ಹಾಜಾರಾಗುವಂತೆ ಮಾಡಲು ವೀರಶೈವ ಮಠ ಮಾನ್ಯಗಳ ಸಹಾಯವನ್ನು ಬಿಜೆಪಿ ಪಡೆದುಕೊಂಡಿದೆ.
* ಆದರೆ, ಸರ್ಕಾರ ರಚನೆ ಮಾಡುವ ಪಕ್ಷಕ್ಕೆ ಶಾಸಕರು ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂಬುದು ನಿರೀಕ್ಷಿತ.
* ಇದೆಲ್ಲದರ ಜತೆಗೆ ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷದಿಂದ ಮೂರನೇ ಎರಡರಷ್ಟು ಮಂದಿಯನ್ನು ತಮ್ಮತ್ತ ಸೆಳೆದುಕೊಳ್ಳಬೇಕು. ಅಂದರೆ ಜೆಡಿಎಸ್ ನ 26 (37) ಅಥವಾ ಕಾಂಗ್ರೆಸ್ಸಿನ 52(78) ಮಂದಿ ಬಿಜೆಪಿಗೆ ಬೆಂಬಲಿಸಬೇಕು.

ವಿಶ್ವಾಸಮತ ಯಾಚನೆ ಯಾವ ರೀತಿ ನಡೆಯಬೇಕು?

* ಬಿಜೆಪಿ ಕಡೆಯಿಂದ ಜೇಷ್ಠತೆಯ ಆಧಾರದ ಮೇಲೆ ನೇಮಕವಾಗಿರುವ ಸ್ಪೀಕರ್ (ಕೆ.ಜಿ ಬೋಪಯ್ಯ) ಅವರು ಪ್ರಮಾಣ ವಚನ ಬೋಧನೆ ಮಾಡಲಿದ್ದಾರೆ. ಸಂಜೆ ವಿಶ್ವಾಸಮತ ಯಾಚನೆ ಯಾವ ರೀತಿ ನಡೆಯಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ.
* ಸದನದ ವಿಧಿ ವಿಧಾನ, ಪ್ರಕ್ರಿಯೆ ಬಗ್ಗೆ ಸೂಚನೆ ನೀಡಲಿದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್ ನಿರ್ದೇಶನದಂತೆ ಗುಪ್ತ ಮತದಾನ ಆಯ್ಕೆ ಮಾಡುವಂತಿಲ್ಲ. ಹೀಗಾಗಿ, ಸದನಕ್ಕೆ ಹಾಜರಾಗುವ ಎಲ್ಲಾ ಶಾಸಕರ ತಲೆಗಳನ್ನು ಎಣಿಕೆ ಮಾಡಿ, ಹಾಜರಾತಿ ಸಂಖ್ಯೆ ಘೋಷಿಸಲಾಗುತ್ತದೆ.
* ಧ್ವನಿ ಮತದಾನಕ್ಕೆ ಕರೆ ನೀಡಲಿದ್ದಾರೆ. ಮತ ಹಾಕುವ ಆಯ್ಕೆಯನ್ನು ಸೂಚಿಸುವುದಿಲ್ಲ ಎನ್ನಲಾಗಿದೆ.