ಮತ್ತೊಂದು ಬೃಹತ್ ಸಮೀಕ್ಷೆ ಬಯಲು: ಕಾಂಗ್ರೆಸ್ ಮುಕ್ತವಾಗುತ್ತ ಕರ್ನಾಟಕ?

ಮತ್ತೊಂದು ಬೃಹತ್ ಸಮೀಕ್ಷೆ ಬಯಲು: ಕಾಂಗ್ರೆಸ್ ಮುಕ್ತವಾಗುತ್ತ ಕರ್ನಾಟಕ?

0

ಹಲವು ದಿನಗಳಿಂದ ಕರ್ನಾಟಕದ ಜನತೆಯಲ್ಲಿ ಒಂದು ಪ್ರಶ್ನೆ ಕಾಡುತ್ತಿದೆ. ಅದುವೇ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿರುವ ಮೋದಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವರೆ ಎಂದು ?

ಇದಕ್ಕೆ ತಕ್ಕಂತೆ ಮೋದಿ ಅಲೆಯು ಅಲ್ಲ ಕ್ಷಮಿಸಿ ಮೋದಿ ಸುನಾಮಿಯು ಚುನಾವಣಾ ಸಮಯದಲ್ಲಿ ಮತದಾರರು ಬಿಜೆಪಿ ಪಕ್ಷದ ಬೆಂಬಲಿಸುವಂತೆ ಮಾಡಿದೆ ಎಂದು ಕೆಲವು ಸಮೀಕ್ಷೆಗಳು ಉತ್ತರಿಸಿವೆ. ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ ಆದರೆ ಇದು ದುಡ್ಡಿನಿಂದ ಬಂದಿರುವ ಸಮೀಕ್ಷೆ ಎಂಬುದು ಪ್ರತಿಯೊಬ್ಬರ ವಾದ.

ಕೆಲವು ಮೀಡಿಯಾಗಳು ಹಣದ ಆಸೆಗೆ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿವೆ ಎಂದು ಮೋದಿ ರವರ ಅಭಿಮಾನಿಗಳು ಹೇಳುತ್ತಿದ್ದಾರೆ (ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ).

ಆದರೆ ಈ ಬಾರಿ ಕರ್ನಾಟಕ ಜನತೆಯ ಒಂದು ನಂಬಿಕಸ್ಥ ವಾಹಿನಿಯು ಸಮೀಕ್ಷೆ ನಡೆಸಿ ಅದರ ಫಲಿತಾಂಶವನ್ನು ಬಹಿರಂಗ ಪಡಿಸಿದೆ. ಅಷ್ಟಕ್ಕೂ ಯಾವುದು ಆ ವಾಹಿನಿ?

ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ವಾಹಿನಿ ದಿಗ್ವಿಜಯ ನ್ಯೂಸ್ ಚಾನೆಲ್.

ಇಷ್ಟಕ್ಕೂ ಆ ಸಮೀಕ್ಷೆಯ ಫಲಿತಾಂಶವೇನು?

ಕರ್ನಾಟಕದಲ್ಲಿ ಬಿ ಜೆ ಪಿ ಬರೋಬ್ಬರಿ 115 ಸೀಟ್ಗಳ ಮೂಲಕ ಜಯ ಸಾಧಿಸಲಿದ್ದು, ಕಾಂಗ್ರೆಸ್ 70, ಜೆಡಿಎಸ್ ಕೇವಲ 25 ಮತ್ತು ಇತರರು 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

ಈತ್ತೀಚೆಗೆ ಜೆಡಿಎಸ್ ಮತ್ತು ಬಿ ಜೆ ಪಿ ಪಕ್ಷಗಳು ಸಮ್ಮಿಶ್ರ ಸರ್ಕಾರ ರಚಿಸಲಿವೆ ಎಂದು ಕೊಂಡಿದ್ದವರ ಲೆಕ್ಕಾಚಾರವೆಲ್ಲ ಸುಳ್ಳಾಗಲಿದೆ. ಇನ್ನೊಂದು ಕಡೆ ಕಾಂಗ್ರೆಸ್ ಇರುವ ಕೇವಲ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕವನ್ನು ಕಳೆದುಕೊಂಡು ಪ್ರತಿಪಕ್ಷವಾಗಿ ಹೊರಹೊಮ್ಮಲಿದೆ.

ಈ ಸಮೀಕ್ಷೆಗಳೆಲ್ಲ ನೋಡಿದರೆ ಮತ್ತೊಮ್ಮೆ ಮೋದಿ ಅಲೆ ಇದೆ ಎಂಬುಸು ರುಜುವಾತು ಆದಂತಿದೆ. ಎಷ್ಟೇ ಸಮೀಕ್ಷೆ ಹೇಗೆ ಬಂದರು ಮೋದಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುತ್ತಾರೆ ಎಂಬುದು ಅಭಿಮಾನಿಗಳ ವಾದ. ಆದರೆ ಅಭಿಮಾನಿಗಳು ಮತಗಟ್ಟೆ ಯಲ್ಲಿ ಬಿ ಜೆ ಪಿ ಯನ್ನು ಬೆಂಬಲಿಸುವವರೇ ? ಕಾದು ನೋಡಬೇಕಿದೆ..

ನೀವು ಯಾವ ಪಕ್ಷವನ್ನು ಬೆಂಬಲಿಸುತ್ತೀರಾ ಎಂದು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಮತ್ತು ನಿಮಗೆ ಈ ಸಮೀಕ್ಷೆ ನಿಜವಾಗಬಹುದು ಎಂದು ಅನಿಸಿದರೆ ಶೇರ್ ಮಾಡಿ