ಸಿದ್ದರಾಮಯ್ಯರವರಿಗೆ ಬಾದಾಮಿಯಲ್ಲಿ ಮತ್ತೊಂದು ಹೊಡೆತ

ಹೌದು,ಸಿದ್ದರಾಮಯ್ಯರವರಿಗೆ ಬಾದಾಮಿಯಲ್ಲಿ ಮತ್ತೊಂದು ಹೊಡೆತ. ಏನು ಅಂತ ಯೋಚನೆ ಮಾಡುತ್ತಿರುವಿರಾ? ಮುಂದೆ ಓದಿ.

ಸಿದ್ದರಾಮಯ್ಯರವರಿಗೆ ಬಾದಾಮಿ ಯಲ್ಲಿ ಗೆಲುವು ಕಷ್ಟ ಸಾಧ್ಯ. ಯಾಕೆ ಎಂದರೆ ಅಲ್ಲಿನ ಎದುರಾಳಿ ಶ್ರೀ ರಾಮುಲು . ಅದಕ್ಕೆ ತಕ್ಕಂತೆ ಹೊಡೆತದ ಮೇಲೆ ಹೊಡೆತ ಸಿದ್ದರಾಮಯ್ಯರವರ ನಿದ್ದೆ ಗೆಡಿಸಿದೆ.

ಇತ್ತೀಚೆಗಷ್ಟೇ ಸಿದ್ದರಾಮಯ್ಯನವರ ಪರವಾಗಿ ಚಾಮುಂಡೇಶ್ವರಿಯಲ್ಲಿ ಸ್ಟಾರ್ ನಟ ಸುದೀಪ್ ರವರು ಪ್ರಚಾರ ಮಾಡಿದ್ದರು. ಇದರಿಂದ ಕೆಲವು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ತಾವು ಬಾದಾಮಿ ಯಲ್ಲಿ ಪ್ರಚಾರ ಮಾಡುವೆವು ಎಂದು ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ.

ಆದರೆ ಸಿದ್ದರಾಮಯ್ಯನವರು ಸುದೀಪ್ ರವರು ಬಾದಾಮಿಯಲ್ಲಿಯೂ ಪ್ರಚಾರ ಮಾಡಬಹುದೆಂಬ ಹಂಬಲ ಇಟ್ಟಿಕೊಂಡಿದ್ದರು,ಅಭಿಮಾನಿಗಳ ಊಹೆ ಕೂಡ ಅದೇ ಹಾಗಿತ್ತು. ಕೆಲವು ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡಬೇಡಿ ವಿನಂತಿ ಕೂಡ ಮಾಡಿದ್ದರು.

ಆದರೆ ಈ ಊಹಾ ಪೋಹಗಳಿಗೆ ಕಿಚ್ಚ ಸುದೀಪ್ರವರು ತೆರೆ ಎಳೆದಿದ್ದಾರೆ.

ಟ್ವಿಟ್ಟರ್ ನಲ್ಲಿ ಪ್ರತಿಕ್ರಯಿಸಿದ ಸುದೀಪ್ ರವರು ತಾವು ಚಾಮುಂಡೇಶ್ವರಿಯಲ್ಲ್ಲಿ ಪ್ರಚಾರ ಮಾಡಿದ್ದು ಸಿದ್ದರಾಮಯ್ಯ ತಮ್ಮ ಆಪ್ತರು ಎಂದು,ಪ್ರಚಾರ ಮಾಡಿದ ಮಾತ್ರಕ್ಕೆ ನಾನು ಬಾದಾಮಿಯಲ್ಲಿಯೂ ಸಿದ್ದರಾಮಯ್ಯರವರ ಪರವಾಗಿ ಮಾಡುವುದಿಲ್ಲ ಯಾಕೆಂದರೆ ಶ್ರೀ ರಾಮುಲು ಸಹ ನನ್ನ ಆಪ್ತರು.

ನಾನು ಬಾದಾಮಿಯಲ್ಲಿ ಪ್ರಚಾರ ಮಾಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಶ್ರೀ ರಾಮುಲು ವಿರುದ್ಧವಾಗಿ ನಾನು ಪ್ರಚಾರ ಮಾಡುವುದಿಲ್ಲ.ದಯವಿಟ್ಟು ಮಾದ್ಯಮದವರು ಸ್ವಲ್ಪ ತನಿಖೆಯ ನಂತರ ಸುದ್ದಿ ಪ್ರಕಟಿಸಿದರೆ ಒಳಿತು ಎಂದು ಟ್ವೀಟ್ ಮಾಡಿದ್ದಾರೆ.

ಇದರಿಂದ ಬಾದಾಮಿಯಲ್ಲಿಯೂ ಸುದೀಪ್ ಸ್ಟಾರ್ ನನಗೆ ಸಹಾಯ ಮಾಡುತ್ತದೆ ಎಂದುಕೊಂಡಿದ್ದ ಸಿದ್ದರಾಮಯ್ಯರವರಿಗೆ ಬಾರಿ ಹೊಡೆತ ಬಿದ್ದಿರುವುದು ಅಂತೂ ಸತ್ಯ.

ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಮತ್ತು ಶೇರ್ ಮಾಡಿ ಸತ್ಯದ ಅರಿವಾಗಲಿ.

Post Author: Ravi Yadav