ಮಹದಾಯಿ ವಿಚಾರ: ಕೊನೆಗೂ ಮೌನ ಮುರಿದ ಮೋದಿ

ಮಹದಾಯಿ ವಿಚಾರ: ಕೊನೆಗೂ ಮೌನ ಮುರಿದ ಮೋದಿ

0

ಮಹದಾಯಿ ವಿಚಾರದಲ್ಲಿ ಸೋನಿಯಾ ಗಾಂಧಿ 2007ರ ಗೋವಾ ಚುನಾವಣೆಯಲ್ಲಿ ಏನು ಹೇಳಿದ್ದರು ಎಂದು ಸಿದ್ದರಾಮಯ್ಯರವರಿಗೆ ತಿಳಿದಿಲ್ಲ. ಇದಕ್ಕೆ ಕಾರಣ ನಿಮಗೆ ತಿಳಿದಿದೆ ಆಗ ಸಿದ್ದರಾಮಯ್ಯರವರು ಜೆ ಡಿ ಸ್ ಪಕ್ಷದಲ್ಲಿ ಇದ್ದರು.ಸಿದ್ದರಾಯರಾರು ರೈತರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಇದನ್ನು ನಿಲ್ಲಿಸಿ ಸೋನಿಯಾ ಗಾಂಧಿರವರೊಡನೆ ಮಾತನಾಡಿ ಒಂದು ಸ್ಪಷ್ಟ ನಿಲುವಿಗೆ ಬನ್ನಿ ಎಂದು ವ್ಯಂಗ್ಯ ವಾಡಿದರು.

ಮಹದಾಯಿ ಎಂಬುದು ಉತ್ತರ ಕಾರಂತಕದ ಜನರ ತಾಯಿ ಇದ್ದಂತೆ ಅದರ ಹೋರಾಟಕ್ಕೆ ರಾಜಕೀಯ ತರುವುದು ಬೇಡ,ಈ ಮಹದಾಯಿ ವಿಚಾರವನ್ನು ನಾವು ಮಾಹತುಕಥೆ ಮೂಲಕ ಬಗ್ಗೆ ಹರಿಸುತ್ತೇವೆ ಎಂದು ಜನರಲ್ಲಿ ಆಶ್ವಾಸನೆ ಮೂಡಿಸಿದರು.

ಮಹದಾಯಿ ವಿಚಾರದಲ್ಲ್ ಕಾಂಗ್ರೆಸ್ ಯಾವ ರೀತಿಯ ರಾಜಕೀಯ ಮಾಡಿದೆ ಎಂಬುದನ್ನು ಆದಷ್ಟು ಬೇಗ ತೆರೆದಿಡುತ್ತೇನೆ.ಅಂದು ೨೦೦೭ರ ಗೋವಾ ಚುನಾವಣೆಯಲ್ಲಿ ಕರ್ನಾಟಕಕ್ಕೆ ಒಂದು ಹನಿ ನೀರು ಬಿಡುವುದಿಲ್ಲ ಎಂದು ಹೇಳಿದ್ದ ಸೋನಿಯಾ ಗಾಂಧಿರವರು ನಿಮ್ಮ ಪಕ್ಷದವರೇ ನೆನಪಿರಲಿ ಎಂದು ವಾಗ್ದಾಳಿ ನಡೆಸಿದರು.ಇಂದು ನೀವು ಅದನ್ನು ಮರೆಮಾಚಿ ಕರ್ನಾಟಕದ ಜನತೆಯ ಹಾದಿ ತಪ್ಪಿಸಬೇಡಿ ಎಂದರು

ಅಟಕಾನ, ಲಟಕಾನ, ಬಟಕಾನ ಮಾಡುವುದೇ ಕಾಂಗ್ರೆಸ್‌ನ ಕೆಲಸ. ನೀರಿನ ಹಕ್ಕು ಎಲ್ಲರಿಗೂ ಇದೆ. ಮಹದಾಯಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸಿದ್ಧರಿದ್ದೇವೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್ ಮುಕ್ತ ಭಾರತ ಮಾಡಲು ಕರ್ನಾಟಕದ ಜನತೆಯು ತುದಿಗಾಲಲ್ಲಿ ನಿಂತಿದ್ದರೆ ಎಂದರು. ಕರ್ನಾಟಕ ಜನತೆಯ ಶಕ್ತಿಯ ಬಗ್ಗೆ ನಿಮಗೆ ತಿಳಿದಿಲ್ಲ,ಅತಿ ಬುದ್ಧಿವಂತಿಕೆ ಪ್ರಧರ್ಶಿಸಬೇಡಿ ಎಂದರು