ಸಿದ್ದರಾಮಯ್ಯರವರ ರಕ್ತ ಕುಡಿಯುವೆ – ಮಾದೇಗೌಡರ ಎಚ್ಚರಿಕೆ

ಹೌದು, ಹೀಗೆ ಸಿದ್ದರಾಮಯ್ಯರವರಿಗೆ ಎಚ್ಚರಿಕೆ ನೀಡಿದ್ದು ಮಾದೇಗೌಡರು. ಅಷ್ಟಕ್ಕೂ ಯಾರು ಈ ಮಾದೇಗೌಡರು?

ಕರುನಾಡ ತಾಯಿ ಕಾವೇರಿ ನದಿಯ ಹಿತರಕ್ಷಣಾ ಸಮಿತಿಯ ಅಧ್ಯಕರು ಇವರು. ಇವರು ಯಾವ ಕಾರಣಕ್ಕೆ ಹೀಗೆ ಹೇಳಿದರೆಂದು ಯೋಚನೆ ಮಾಡುತ್ತಿರುವಿರಾ? ಕೆಳಗಡೆ ಓದಿ.

ಕಾವೇರಿ ನದಿಯಿಂದ ತಮಿಳುನಾಡಿಗೆ ಮತ್ತೆ 4 ಟಿಎಂಸಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮಾದೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಅಭಾವ ಇದೆ. ಇಂಥ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವುದು ಹೇಗೆ ಸಾಧ್ಯ?..ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯರವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಟ್ಟರೆ ಮುಖ್ಯಮಂತ್ರಿ ಸಿದ್ದರಾಮಯ್ಯರ ರಕ್ತ ಕುಡಿಯುವುದಾಗಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಾದೇಗೌಡರು ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಧ್ಯಪ್ರವೇಶಿಸಬೇಕು. ಉಭಯ ರಾಜ್ಯಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸುವಂತೆ ರಾಜ್ಯದ ಸಂಸದರು ಸದನದಲ್ಲಿ ಚರ್ಚಿಸಬೇಕು ಎಂದು ಮಾದೇಗೌಡರು ಒತ್ತಾಯಿಸಿದರು.

ಇದರ ಮೋದಿರವರು ಕೂಡ ಮೌನ ಮುರಿಯಲಿ ಎಂದು ಒತ್ತಾಯಿಸಿದ ಅವರು ನೀರು ಬಿಟ್ಟರೆ ಉಗ್ರ ಹೋರಾಟ ಮಾಡುವುದಾಗಿ ಸಂದೇಶ ರವಾನೆ ಮಾಡಿದರು. ಅದು ಏನೆ ಆಗಲಿ ಕಾವೇರಿ ತಾಯಿ ನಮ್ಮವಳು, ನಮಗೆ ಕುಡಿಯಲು ಸರಿಯಾಗಿ ನೀರಿಲ್ಲ ನಾವು ಹೇಗೆ ಬಿಡಿಯುವುದು ಎನ್ನುವುದನ್ನು ಸುಪ್ರೀಂ ಕೋರ್ಟ್ ಕೂಡ ಯೋಚನೆ ಮಾಡಿದರೆ ಒಳಿತು.

ಮಾನ್ಯ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಮತ್ರಿ ನರೇಂದ್ರ ಮೋದಿರವರು ದಯವಿಟ್ಟು ಮಹದಾಯಿ ಮತ್ತು ಕಾವೇರಿ ವಿವಾದವನ್ನು ಬಗೆ ಹರಿಸಿ ಕೊಡಬೇಕು ಎಂದು ಜನತೆಯ ಪರವಾಗಿ ನಾವು ಧ್ವನಿ ಎತ್ತುತ್ತಿದ್ದಿವೆ.

ಜೈ ಕರ್ನಾಟಕ ಮಾತೆ, ಜೈ ಕನ್ನಡ, ಕಾವೇರಿ ತಾಯಿ ನಮ್ಮವಳು

Post Author: Ravi Yadav