ಇದೆಲ್ಲ ಎಷ್ಟು ವಿಚಿತ್ರ ಅಲ್ಲವೇ? ಪ್ರಜೆಗಳಿಗೊಂದು ನ್ಯಾಯ ! ಮತ್ತೊಬ್ಬರಿಗೊಂದು ನ್ಯಾಯ !

ಇದು “ಕರುನಾಡ ವಾಣಿಯ” ಅಭಿಪ್ರಾಯ, ಪ್ರಜಾಪ್ರಭುತ್ವ ಬರಿ ಹೆಸರಿಗೆ ಮಾತ್ರ. ಶೇರ್ ಮಾಡಿ ನ್ಯಾಯ ಸಿಗುವವರೆಗೂ.

0

ಒಬ್ಬ ವ್ಯಕ್ತಿಯು ೧ ಚುನಾವಣೆಗೆ ೨ ಕ್ಷೇತ್ರದಲ್ಲಿ ನಿಲ್ಲಬಹುದು, ಆದರೆ ಒಬ್ಬ ಪ್ರಜೆ ೧ ಚುನಾವಣೆಗೆ ೨ ಕ್ಷೇತ್ರದಲ್ಲಿ ಮತ ಹಾಕುವಂತಿಲ್ಲ.

ನೀವು ಜೈಲಿನಲ್ಲಿದರೆ ಮತ ಹಾಕುವಂತಿಲ್ಲ, ಆದರೆ ಅಭ್ಯರ್ಥಿ ಜೈಲಿನಲ್ಲಿದ್ದು ಚುನಾವಣೆ ಎದುರಿಸಬಹುದು.

ಯಾರಾದರೂ ಒಂದು ಸಲ ಜೈಲಿಗೆ ಹೋದರೆ ಮತ್ತೆ ಜೀವನ ಪರ್ಯಂತ ಸರಕಾರ ನೌಕರಿ ಸಿಗುವುದಿಲ್ಲ. ಆದರೆ ರಾಜಕಾರಣಿಗಳು ಎಷ್ಟೇ ಸಲ ಜೈಲಿಗೆ ಹೋದರೂ  ಸಹ ಅವರು ಬಯಸಿದ ಹಾಗೆ ಶಾಸಕ, ಸಂಸದ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿ, ರಾಷ್ಟ್ರಪತಿ… ಏನು ಬೇಕಾದರೂ ಆಗಬಹುದು.

ಬ್ಯಾಂಕಲ್ಲಿ ನೌಕರಿ ಬೇಕಾದಲ್ಲಿ ನಾವು ಡಿಗ್ರಿ ಪಡೆದಿರಬೇಕು. ಆದರೆ ರಾಜಕಾರಣಿಗಳು ಹಣಕಾಸು ಸಚಿವರಾಗಲು ಯಾವ ಡಿಗ್ರಿಯ ಅವಶ್ಯಕತೆ ಇರುವುದಿಲ್ಲ.

ನಮಗೆ ಸೇನೆಯಲ್ಲಿ ಕೆಲಸ ಸಿಗಲು ಡಿಗ್ರಿ ಜೊತೆ ೧೦ ಕಿಲೋ ಮೀಟರ್ ದೂರ ಓಡಿ ತೋರಿಸಬೇಕು. ಆದರೆ ರಾಜಕಾರಣಿಗಳು ಅವಿದ್ಯಾವಂತರು, ದಪ್ಪಗಿನ ದೇಹವಿದ್ದರೂ ಸೇನಾ ಸಚಿವರಾಗಬಹುದು.

ಅಲ್ಲದೆ ಯಾರ ಇಡೀ ವಂಶವು ಅನಕ್ಷರಸ್ಥ ಕುಟುಂಬ ಆಗಿರುವುದೋ ಆ ವಂಶದ ವ್ಯಕ್ತಿ ಶಿಕ್ಷಣ ಸಚಿವರಾಗಬಹುದು.

ಒಬ್ಬ ರಾಜಕಾರಣಿಯ ಮೇಲೆ ಸಾವಿರಾರು ಕೇಸುಗಳಿದ್ದರು ಆ ವ್ಯಕ್ತಿಯು ಪೊಲೀಸರಿಗೆ ಚೀಫ್ ಅಂದರೆ ಗೃಹಮಂತ್ರಿ ಆಗಬಹುದು.

ಇದೆಲ್ಲ ಎಷ್ಟು ವಿಚಿತ್ರ ಅಲ್ಲವೇ? ಪ್ರಜೆಗಳಿಗೊಂದು ನ್ಯಾಯ ! ಮತ್ತೊಬ್ಬರಿಗೊಂದು ನ್ಯಾಯ  ! ಇದು “ಕರುನಾಡ ವಾಣಿಯ” ಅಭಿಪ್ರಾಯ, ಪ್ರಜಾಪ್ರಭುತ್ವ ಬರಿ ಹೆಸರಿಗೆ ಮಾತ್ರ. ಶೇರ್ ಮಾಡಿ ನ್ಯಾಯ ಸಿಗುವವರೆಗೂ.