ಮಹತ್ವದ ಕಾನೂನು ಜಾರಿಗೆ ಮುಂದಾದ ಮೋದಿ ಸರ್ಕಾರ – ಅತ್ಯಾಚಾರವೆಸಗಿದರೆ ಗಲ್ಲು

ಮಹತ್ವದ ಕಾನೂನು ಜಾರಿಗೆ ಮುಂದಾದ ಮೋದಿ ಸರ್ಕಾರ – ಅತ್ಯಾಚಾರವೆಸಗಿದರೆ ಗಲ್ಲು

0

ಹೌದು, ಮಕ್ಕಳ ಮೇಲೆ ಅತ್ಯಾಚಾರವೆಸಗುವವರಿಗಿನ್ನು ಗಲ್ಲು ಶಿಕ್ಷೆ – ಕಾನೂನು ಜಾರಿಗೆ ಮುಂದಾದ ಮೋದಿ ಸರ್ಕಾರ.

ಭಾರತದಲ್ಲಿ ನಡೆಯುತ್ತಿರುವ ಮಕ್ಕಳ ಮೇಲೆ ಅತ್ಯಾಚಾರವೆಸಗುವಂತಹ ಪೈಶಾಚಿಕ ಕೃತ್ಯಗಳಿಗೆ ಬ್ರೇಕ್​ ಹಾಕುವುದಕ್ಕೆ ಮುಂದಾಗಿರು ಸರ್ಕಾರ 12 ವರ್ಷಕ್ಕಿಂತ ಚಿಕ್ಕ ಮಕ್ಕಳ ಮೇಲೆ ನಡೆಸುವ ಅತ್ಯಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಗಲ್ಲುಶಿಕ್ಷೆ ನೀಡಲು ಕಾನೂನಿಗೆ ತಿದ್ದುಪಡಿ ತರುವುದಕ್ಕೆ ಕೆಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಇತ್ತೀಚೆಗೆ ನಡೆದಿರುವ ಕತುವಾ ಮತ್ತು ಉನ್ನೂವೋ ದಲ್ಲಿ ನಡೆದಿರುವ ಅತ್ಯಚಾರ ಮತ್ತು ಕೊಲೆ ಘಟನೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದೆ ಮೇನಕ ಗಾಂಧಿ ಅವರು ಇಂತಹ ಕೃತ್ಯವೆಸಗುವವರಿಗೆ ಗಲ್ಲುಶಿಕ್ಷೇ ವಿಧಿಸಬೇಕು ಎಂದು ಆಗ್ರಹಿಸಿದ್ದು ಈ ಬಗ್ಗೆ ಸಂಸತ್ತಿನಲ್ಲಿ ಟಿಪ್ಪಣಿ ಒಂದನ್ನು ಹೊರಡಿಸಿ 12 ವರ್ಷದಿಂದ ಕೆಳಗಿನ ಮಕ್ಕಳ ಮೇಲೆ ನಡೆಯುವ ಮೃಗೀಯ ಘಟನಗಳಿಗೆ ಅನ್ವಯಿಸುವಂತೆ ಪೊಕ್ಸೋ ಕಾಯ್ದೆಗೆ ತಿದ್ದುಪಡಿ ತಂದು ಕಾನೂನು ರಚನೆಗೆ ಮುನ್ನುಡಿ ಬರೆಯುವುದಾಗಿ ಹೇಳಿದ್ದಾರೆ.

ಕುತುವಾ ಮತ್ತು ಉನ್ನಾವೋ ಪ್ರಕರಣದ ಬಗ್ಗೆ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿಕೆ ಸಿಂಗ್​ ‘‘ನಾವೆಲ್ಲರೂ ಮನುಷ್ಯರಾಗಿ ವಿಫಲರಾಗಿದ್ದೇವೆ, ಅವರಿಗೆ ನ್ಯಾಯ ಕೊಡಿಸೋಣ ಎಂದು ಹೇಳಿದ್ದಾರೆ.

ಈಗಾಗಲೇ ದೇಶಾಧ್ಯಂತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾಂಗ್ರೆಸ್​ ದೇಶಾಧ್ಯಂತ ಪ್ರತಿಭಟನೆ ನಡೆಸುವಂತೆ ರಾಹುಲ್​ಗಾಂಧಿ ಕರೆ ನೀಡಿದ್ದಾರೆ.

ಪೋಕ್ಸ್​ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಕಾಮಿ ಕ್ರಿಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದರೆ ಇದರಿಂದ ಸಮಾಜದಲ್ಲಿ ಸ್ವಲ್ಪ ಭಯ ಬರುತ್ತದೆ. ಈ ಕಾನೂನು ಈಗಾಗಲೇ ಮಧ್ಯಪ್ರದೇಶ ಸೇರಿದಂತೆ ಇನ್ನು ಕೆಲವು ರಾಜ್ಯಗಳಲ್ಲಿ ಇದ್ದು ಇದೇ ಕಾನೂನನ್ನು ಲೋಕಸಭೆಯಲ್ಲಿ ಚರ್ಚಿಸಿ ತಿದ್ದುಪಡಿ ಮಾಡಲು ಸರ್ಕಾರ ಚಿಂತಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಪ್ರಕರಣಗಳಿಂದಾಗಿ ದೇಶದ ನಾಗರೀಕ ಸಮಾಜ ತಲೆ ತಗ್ಗಿಸುವಂತಹ ವಿಚಾರ ಇದಕ್ಕೆ ಏನಾದರೂ ಒಂದು ಗತಿ ಕಾಣಿಸಲೇ ಬೇಕು. ನಾಗರೀಕರಾಗುತ್ತಿರುವ ಈ ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕಾಗುತ್ತದೆ.

ಕೃಪೆ: ಕನ್ನಡದಲ್ಲಿ.com