ಗುಡುಗಿದ ಮೋದಿ: ನಮ್ಮ ಹೆಣ್ಣು ಮಗುವಿಗೆ ನ್ಯಾಯ ಸಿಗುತ್ತದೆ, ತಪ್ಪಿತಸ್ಥರು ಯಾರೇ ಆಗಲಿ ಬಿಡುವುದಿಲ್ಲ.

ಗುಡುಗಿದ ಮೋದಿ: ನಮ್ಮ ಹೆಣ್ಣು ಮಗುವಿಗೆ ನ್ಯಾಯ ಸಿಗುತ್ತದೆ, ತಪ್ಪಿತಸ್ಥರು ಯಾರೇ ಆಗಲಿ ಬಿಡುವುದಿಲ್ಲ.

0

ಉನ್ನಾವ್‌ ಮತ್ತು ಕಥುವಾ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ತುಟಿ ಬಿಚ್ಚಿರುವ ಪ್ರಧಾನಿ ಮೋದಿ, ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರು ಯಾರೇ ಆಗಲಿ ಬಿಡುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘರ್ಜಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಅಂಬೇಡ್ಕರ್‌ ರಾಷ್ಟ್ರೀಯ ಸ್ಮಾರಕ ಉದ್ಘಾಟನೆ ಮಾಡಿದ ನಂತರ ಭಾಷಣ ಮಾಡಿದರು.

ಕಳೆದ ಕೆಲವು ದಿನಗಳಿಂದ ನಡೆದ ಇಂಥ ಪ್ರಕರಣಗಳು ನಾಗರಿಕ ಸಮಾಜ ಒಪ್ಪುವಂಥದ್ದು ಅಲ್ಲ. ಇಂಥ ಪ್ರಕರಣಗಳು ನಿಜಕ್ಕೂ ಹೇಸಿಗೆ, ಅಸಹ್ಯ ಹುಟ್ಟಿಸುತ್ತದೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಇಡೀ ದೇಶಕ್ಕೆ ಈ ಮೂಲಕ ಭರವಸೆ ನೀಡುತ್ತೇನೆ ಎಂದು ಮೋದಿ ತಿಳಿಸಿದರು.

ಹೆಣ್ಣು  ಮಗಳೊಬ್ಬಳು ಮನೆಗೆ ತಡವಾಗಿ ಬಂದರೆ ಎಲ್ಲಿಗೆ ಹೋಗಿದೆ ಎಂದು ಕೇಳುತ್ತೇವೆ. ಮಗ ತಡರಾತ್ರಿ ಬಂದರೂ ಇದೇ ಪ್ರಶ್ನೆಯನ್ನು ಕೇಳಬೇಕು ಎಂದರು.

ನಮ್ಮ ಕೌಟುಂಬಿಕ ವ್ಯವಸ್ಥೆಯನ್ನು ನಾವು ಗಟ್ಟಿ ಮಾಡಿಕೊಳ್ಳಬೇಕು. ಸಾಮಾಜಿಕ ಮೌಲ್ಯಗಳು ಸದಾ ಉಳಿಯುವಂತಾಗಬೇಕು ಎಂದು ಮೋದಿ ಕರೆ ನೀಡಿದರು.

ಇದೆ ಸಮಯದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗದವರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ಇತ್ಯರ್ಥ ಮಾಡಲು ವಿಶೇಷ ಕೋರ್ಟ್‌ನಲ್ಲಿ ರಚಿಸಲಾಗಿದೆ ಎಂದು ಮೋದಿ ಹೇಳಿದರು.

ಈ ಹಿಂದೆ ಹಲವಾರು ಸರಕಾರಗಳು ಅಧಿಕಾರಕ್ಕೆ ಬಂದರೂ ಅಂಬೇಡ್ಕರ್‌ಗೆ ಏನೂ ಮಾಡಲಿಲ್ಲ. ಪ್ರತಿಪಕ್ಷಗಳು ಕೇವಲ ಅಂಬೇಡ್ಕರ್‌ ನಾಮವನ್ನು ಜಪ ಮಾಡಿದೆ. ಅಂಬೇಡ್ಕರ್ ಹಾಗೂ ದಲಿತರಿಗೆ ಏನನ್ನೂ ಮಾಡಿಲ್ಲ ಎಂದು ಹೇಳಿದರು.

ಆದರೆ ನಮ್ಮ ಸರಕಾರ ಬಂದ ಎರಡನೇ ವರ್ಷದಲ್ಲಿ ವಿಶ್ವಮಟ್ಟದ ರಾಷ್ಟ್ರೀಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದೇವೆ. ಇದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ನಾವು ನೀಡುತ್ತಿರುವ ವಿಶೇಷ ಗೌರವವಾಗಿದೆ ಎಂದು ಮೋದಿ ತಿಳಿಸಿದರು.