ಉತ್ತರಪ್ರದೇಶ: ಬರೋಬ್ಬರಿ 12 ನಾಯಕರು ಬಿಜೆಪಿ ಗೆ ಸೇರ್ಪಡೆ ಕಾರಣ ಗೊತ್ತಾ?

ಉತ್ತರಪ್ರದೇಶ: ಬರೋಬ್ಬರಿ 12 ನಾಯಕರು ಬಿಜೆಪಿ ಗೆ ಸೇರ್ಪಡೆ ಕಾರಣ ಗೊತ್ತಾ?

0

ಉತ್ತರಪ್ರದೇಶದಲ್ಲಿ ಮತ್ತೊಂದು ರಾಜಕೀಯ ಬೆಳವಣಿಗೆ ನಡೆದಿದೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷದ ಇಬ್ಬರು ಮಾಜಿ ಸಂಸದರು ಸೇರಿ ಒಟ್ಟು 12 ಕ್ಕೂ ಅಧಿಕ ಮಂದಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಅಷ್ಟಕ್ಕೂ ಬಿಜೆಪಿ ಗೆ ಸೇರ್ಪಡೆಯಾದವರು ಯಾರು?

ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ನೇತೃತ್ವದಲ್ಲಿ ಪಕ್ಷವನ್ನು ಸೇರಿದ್ದಾರೆ. ಮಾಜಿ ಸಂಸದರಾದ ಅಶೋಕ್ ರಾವತ್ ಹಾಗೂ ಎಸ್’ಪಿಯ  ಜೈ ಪ್ರಕಾಶ್ ರಾವತ್ ತಮ್ಮ ಬೆಂಬಲಿಗರೊಂದಿಗೆ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ಸೇರ್ಪಡೆಗೊಂಡ ಕಾರಣ ಗೊತ್ತಾ?

ಮತ್ತ್ಯಾರು ಪ್ರಧಾನಿ ನರೇಂದ್ರ ಮೋದಿ, ಅವರ ಅಭಿವೃದ್ಧಿ ಯೋಜನೆಗಳು ಹಾಗೂ ಅವರ ನೀತಿಗಳಿಂದ ಪ್ರಭಾವಿತರಾಗಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಿಜೆಪಿಗೆ ಸೇರಿದ ಇಬ್ಬರು ಡಜನ್ ನಾಯಕರ ಪೈಕಿ ಇದೇ ರೀತಿಯ ಕಾರಣಗಳನ್ನು ನೀಡಿದರು. ಮಾಜಿ ಶಾಸಕ ಹೀರಾ ಠಾಕೂರ್, ಮಾಜಿ ಶಾಸಕ ಪ್ರೇಮ್ ಪ್ರಕಾಶ್, ಸಮಾಜವಾದಿ ಪಕ್ಷದ ವಕ್ತಾರ ಸಂಜೀವ್ ಮಿಶ್ರಾ,
ದಾದ್ರಿ (ಘಜಿಯಾಬಾದ್) ಮಾಜಿ ಮುಖ್ಯಸ್ಥ ಬ್ರಿಜೇಂದ್ರ ಸಿಂಗ್ ಮತ್ತು ಕೆಲವು ಸ್ಥಳೀಯ ಮುಖ್ಯಸ್ಥರು ಮತ್ತು ಮುಂತಾದವರು ನರೇಂದ್ರ ಮೋದಿರವರನ್ನು ಆದರ್ಶ ವ್ಯಕ್ತಿಯಾಗಿ ತೆಗೆದುಕೊಂಡು ಈ ಕೆಲಸ ಮಾಡಿದ್ದೇವೆ ಎಂದು ಹೇಳಿದರು.