ಕರ್ನಾಟಕ ಚುನಾವಣೆ :ಅತಿ ದೊಡ್ಡ ಅಸ್ತ್ರ ಪ್ರಯೋಗಿಸಲು ಮುಂದಾದ ಬಿಜೆಪಿ ಚಾಣಕ್ಯ ಅಮಿತ್ ಶಾ.!! ಏನದು ಗೊತ್ತಾ..??

ಕರ್ನಾಟಕ ಚುನಾವಣೆ :ಅತಿ ದೊಡ್ಡ ಅಸ್ತ್ರ ಪ್ರಯೋಗಿಸಲು ಮುಂದಾದ ಬಿಜೆಪಿ ಚಾಣಕ್ಯ ಅಮಿತ್ ಶಾ.!! ಏನದು ಗೊತ್ತಾ..??

0

ಕರ್ನಾಟಕದ ಚುನಾವಣೆ ದಿನಾಂಕ ಪ್ರಕಟವಾಗುತ್ತಿದಂತೆ ಈಗಾಗಲೇ ಕರ್ನಾಟಕಕ್ಕೆ ಹಲವಾರು ಬಾರಿ ಭೇಟಿ ಕೊಟ್ಟು ಚುನಾವಣೆಗೆ ತಂತ್ರ ಹೆಣೆದಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಚುನಾವಣೆ ಕಣ ರಂಗೆರುತ್ತಿಂದತೆ ಗೆಲ್ಲಲು ಮತೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಅಸ್ತ್ರ ಪ್ರಯೋಗಿಸಲು ಮುಂದಾದ ಬಿಜೆಪಿ ಚಾಣಕ್ಯ ಅಮಿತ್ ಶಾ..!!

ಹೌದು!! ಏಪ್ರಿಲ್ ಮಧ್ಯಭಾಗದಿಂದ ಬಹಿರಂಗ ಪ್ರಚಾರ ಅಂತ್ಯದ ದಿನದವರೆಗೆ ಕರ್ನಾಟಕದಾದ್ಯಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಕರೆತರಲು ತಯಾರಿ ನಡೆಸಿದ್ದಾರೆ ಸರಿಸುಮಾರು 10- 15 ಬಾರಿ ಪ್ರಧಾನಿ ಅವರನ್ನ ಕರೆಸಿ ಬೃಹತ್‌ ಸಮಾವೇಶಗಳನ್ನು ಆಯೋಜಿಸಲು ಅಮಿತ್‌ ಶಾ ಮತ್ತು ಅವರ ತಂಡ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಎಲ್ಲಾ ವಿಭಾಗಳಲ್ಲಿ ಅಂದರೆ ಬೆಂಗಳೂರು ವಿಭಾಗ, ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ ಪ್ರದೇಶದಲ್ಲಿ ತಲಾ ಎರಡು ಸಮಾವೇಶಗಳು, ಮಧ್ಯ ಕರ್ನಾಟಕ ಮತ್ತು ಕರಾವಳಿಯಲ್ಲಿ ತಲಾ ಒಂದು ಮೋದಿ ಸಮಾವೇಶ ಏರ್ಪಡಿಸುತ್ತಿರುವುದು ಖಚಿತವಾಗಿದೆ, ಒಂದು ವೇಳೆ ಅಗತ್ಯ ಬಿದ್ದರೆ ಕರಾವಳಿಯಲ್ಲಿ ಇನ್ನೊಂದು ಸಮಾವೇಶ ಆಯೋಜಿಸುವ ಆಯ್ಕೆಯನ್ನು ಬಿಜೆಪಿ ಹೊಂದಿದೆ. ಇದನ್ನ ಹೊರತುಪಡಿಸಿ, ಇನ್ನೂ 4-5 ಸಾರ್ವಜನಿಕ ಸಭೆಗಳನ್ನು ಏರ್ಪಡಿಸಲು ಚಿಂತಿಸಲಾಗಿದ್ದು, ಸ್ಥಳದ ಆಯ್ಕೆ ಬಗ್ಗೆ ಚರ್ಚೆ ಹಂತದಲ್ಲಿ ಇದೆ ಎಂದು ಹೇಳಲಾಗುತ್ತಿದೆ.

ಅಮಿತ್‌ ಶಾ ಟೀಮ್‌ ತೀರ್ಮಾನ.‌!!

ಮೋದಿ ಸಮಾವೇಶ ಎಲ್ಲಿ ಆಯೋಜಿಸಿಬೇಕು ಎಂಬುವುದನ್ನು ರಾಜ್ಯದಲ್ಲಿ ಈಗಾಗಲೇ ಚುನಾವಣೆ ಪ್ರಚಾರದಲ್ಲಿರುವ ಅಮಿತ್‌ ಶಾ ಅವರ ತಂಡವೇ ತೀರ್ಮಾನಿಸಲಿದೆ. ಇಲ್ಲಿರುವ ಸ್ಥಳೀಯ ನಾಯಕರ ಬೇಡಿಕೆಯ ಆಧಾರ ಮೇಲೆ ಸಮಾವೇಶ ಏರ್ಪಡಿಸುವ ಬದಲು, ಎಲ್ಲಿ ಆಯೋಜಿಸಿದರೆ ಪಕ್ಷಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂದು ಕಂಡುಬರುತ್ತದೋ ಅಂತಹ ಸ್ಥಳಗಳಲ್ಲಿ ‘ಮೋದಿ ಶೋ’ ನಡೆಸಲು ಕೇಂದ್ರ ಬಿಜೆಪಿ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿ ರಾಜ್ಯದಲ್ಲಿ ಯಾರಿಗೆ ಮತ ನೀಡಬೇಕು ಎಂಬ ಗಲಬಿಲಿಯಲ್ಲಿರುವ ಮತದಾರರ ಪ್ರಮಾಣ ಹೆಚ್ಚಿದೆ ಮತ್ತು ಚಂಚಲತೆ ಮತದಾರರು ದೊಡ್ಡ ಪ್ರಮಾಣದಲ್ಲಿರುವ ಕಾರಣ ಆ ಪ್ರದೇಶಗಳಿಗೆ ನರೇಂದ್ರ ಮೋದಿ ಅವರು ಭೇಟಿ ಕೊಟ್ಟರೆ ಬಿಜೆಪಿ ಅಭ್ಯರ್ಥಿಯತ್ತ ಜನರನ್ನು ಸೆಳೆಯಬಹುದು ಎಂದು ಶಾ ತಂಡಕ್ಕೆ ಅನಿಸಿದರೆ, ಅಂತಹ ಕ್ಷೇತ್ರದಲ್ಲಿ ಮೋದಿ ರ್ಯಾಲಿಗಳನ್ನು ನಡೆಸುವ ಯೋಜನೆ ಹಾಕಿಕೊಳ್ಳುಲು ಚಿಂತನೆ ನಡೆದಿದೆ‌.

ಮೋದಿ ಕರ್ನಾಟಕ ಚುನಾವಣೆ ಪ್ರಚಾರ..!!

ಮೋದಿ ಅವರ ಮುಂದಿನ ಕರ್ನಾಟಕ ಭೇಟಿ ಇನ್ನೂ ನಿರ್ಧರಿಸಿಲ್ಲ. ಟಿಕೆಟ್‌ ಪಟ್ಟಿಸಿದ್ಧಗೊಂಡ ಬಳಿಕವೇ ಮೋದಿ ಪ್ರವಾಸ ತಿರ್ಮಾನವಾಗಲಿದೆ ಎಂದು ಹೇಳಲಾಗುತ್ತಿದೆ

ಕೆಲವು ದಿನಗಳ ಹಿಂದಷ್ಟೇ ಗುಜರಾತ್‌ ಚುನಾವಣೆಯಲ್ಲಿ ಮೋದಿ ಪ್ರಚಾರದಿಂದ ಅಲ್ಲಿ ಬಹುಮತವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಹಾಗೆಯೇ ಮೊನ್ನೆಷ್ಟೆ ನಡೆದ ಈಶಾನ್ಯ ಭಾರತದ ಚುನಾವಣೆಯಲ್ಲಿಯೂ ಕೂಡ ಮೋದಿ ಪ್ರಚಾರ ನಡೆಸಿ ಆ ರಾಜ್ಯಗಳಲ್ಲಿಯೂ ಬಿಜೆಪಿ ವಿಜಯ ಸಾಧಿಸಿತು.

ಅದೆ ತರಹವೇ ಕರ್ನಾಟಕದಲ್ಲಿ ಕೊಡ ಮೋದಿಯವರ ಮೋಡಿ ಇದೇ ರೀತಿ ಮುಂದು ಬರೆಯಬಹುದು ಎಂಬುವುದು ಬಿಜೆಪಿ ಲೆಕ್ಕಾಚಾರ. ಹೆಚ್ಚಿನ ಸ್ಥಾನಗಳು ಗೆಲುವು ಆಗುವ ನಿರೀಕ್ಷೆಗಳಿರುವ ಕ್ಷೇತ್ರಗಳಿಗೆ ಮೋದಿ ಅವರನ್ನು ಕರೆತರುವ ಪ್ಲಾನ್ ಅಮಿತ್ ಶಾ ತಂಡ ಹೆಣೆದಿದೆ ಎಂದು ಹೇಳಲಾಗುತ್ತಿದೆ.

Source: Suvarna News