ಬಿಗ್ ಬ್ರೇಕಿಂಗ್: ಎನ್ ಡಿ ಎ ಸಂಸದರಿಂದ ದೇಶವೇ ಮೆಚ್ಚುವಂತಹ ಮಹತ್ವದ ನಿರ್ಧಾರ..!ಏನದು ಗೊತ್ತಾ..!?ಹ್ಯಾಟ್ಸ್ ಆಫ್ ಮೋದಿಜಿ..!

ಬಿಗ್ ಬ್ರೇಕಿಂಗ್: ಎನ್ ಡಿ ಎ ಸಂಸದರಿಂದ ದೇಶವೇ ಮೆಚ್ಚುವಂತಹ ಮಹತ್ವದ ನಿರ್ಧಾರ..!ಏನದು ಗೊತ್ತಾ..!?ಹ್ಯಾಟ್ಸ್ ಆಫ್ ಮೋದಿಜಿ..!

0

ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿ.ಭಾರತವನ್ನು ಸಮಸ್ಯೆಗಳನ್ನು ಬಗೆಹರಿಸಲು ಹಗಲಿರುಳು ದುಡಿಯುತ್ತಿದ್ದಾರೆ ಹಾಗೆಯೇ ಬಿಜೆಪಿ ಸಂಸದರು ಕೂಡ ಅದಕರ ಸಾಥ್ ಸಿಡುತ್ತಾ ಬಂದಿದ್ದಾರೆ, ಇಗ ಬಿಜೆಪಿ ಸಂಸದರು ದೇಶವೇ ಮೆಚ್ಚುವಂತಹಾ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಷ್ಟಕು ಏನದು ನಿರ್ಧಾರ ಗೊತ್ತಾ..!!

ಹೌದು!! ದೇಶದ ಜನರ ಮನ ಗೆಲ್ಲುವಲ್ಲಿ ಕೇಂದ್ರ ಸರ್ಕಾರವು ಮತ್ತೊಮ್ಮೆ ಯಶಸ್ವಿಯಾಗಿದೆ. ಸಂಸತ್ತಿನಲ್ಲಿ ಕುಳಿತು ಕಾಲಹರಣ ಅಥವಾ ಕಲಾಪಕ್ಕೆ ಅಡ್ಡಿ ಪಡಿಸಿದರೆ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗುತ್ತದೆ. ಹೆಚ್ಚಿನ ಭಾರಿಯೂ ವಿರೋಧ ಪಕ್ಷದ ನಾಯಕರಿಂದ ಅಧಿವೇಶನದಲ್ಲಿ ಸಂಸತ್ ಕಲಾಪವು ನಡೆಯದೇ ಅಥವಾ ಅದಕ್ಕೆ ಅಡ್ಡಿ ಪಡಿಸಿ ಯಾವುದೇ ಬಿಲ್ ಪಾಸ್ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಈ ಬಾರಿಯೂ ಹಾಗೆಯೇ ನಡೆದ ಕಾರಣ ಎನ್ ಡಿ ಎ ಯ ದ ಎಲ್ಲಾ ಸಂಸತ್ ಸದಸ್ಯರು ಇಡೀ ದೇಶವೇ ಮೆಚ್ಚುವಂತಹಾ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ದೇಶದ ಇತಿಹಾಸದಲ್ಲೇ ಆಡಳಿತ ಪಕ್ಷದ ಸದಸ್ಯರ ಮಹತ್ವದ ನಿರ್ಧಾರ ಏನೆಂದರೆ ಒಂದಲ್ಲ ಎರಡಲ್ಲ ಬರೊಬ್ಬರಿ 23 ದಿನಗಳ ವೇತನವನ್ನು ಪಡೆಯದಿರಲು ಎನ್ ಡಿ ಎ ಸಂಸದರು ನಿರ್ಧರಿಸಿದ್ದಾರೆ.

23 ದಿನದ ವೇತನ ನಮಗೆ ಬೇಡ– ಸಚಿವ ಅನಂತ ಕುಮಾರ್…!!

ದೇಶದ ಜನರ ಸೇವೆಯನ್ನು ಮಾಡಲು ಈ ವೇತನವನ್ನು ನಮಗೆ ನೀಡುತ್ತಾರೆ. ಆದರೆ ಸಂಸತ್ ಕಲಾಪವೇ ನಡೆಯದಿದ್ದರೆ ನಾವು ಆ ವೇತನಕ್ಕೆ ಅರ್ಹರಲ್ಲ. ಈ 23 ದಿನಗಳಲ್ಲಿ ಸಂಸತ್‌ನಲ್ಲಿ ಕಲಾಪಗಳು ನಡೆಯದೇ ಇರುವುದರಿಂದ ಸಂಸದರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.

ಅನಂತ ಕುಮಾರ್ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದು ಕಾಂಗ್ರೆಸ್ ಸಂಸತ್ತಿನ ಹೊರಗೆ ಮಾತ್ರ ಪ್ರಜಾಪ್ರಭುತ್ವದ ಪಾಲನೆ ಬಗ್ಗೆ ಮಾತನಾಡುತ್ತದೆ ಆದರೆ ಅದನ್ನೆ ಸಂಸತ್ತಿನ ಒಳಗಡೆ ಪಾಲನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಈ ಬಾರಿ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಬಾಕಿ ಉಳಿದಿರುವ ಮುಖ್ಯ ಮಸೂದೆಗಳಲ್ಲಿ ತ್ರಿವಳಿ ತಲಾಖ್ ಮಸೂದೆ, ನಾಗರಿಕತ್ವ ತಿದ್ದುಪಡಿ ಮಸೂದೆ 2016 ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆ, 2017.

ಸಂಸತ್ ಕಲಾಪವು ನಡೆಯದೇ ಇದ್ದ ಕಾರಣಕ್ಕಾಗಿ ಈ ಯಾವುದೇ ಬಿಲ್ ಪಾಸ್ ಮಾಡಲು ಸಾಧ್ಯವಾಗಿಲ್ಲ.

ಅಷ್ಟಕು ಸಂಸದರ ಸಂಬಳ ಎಷ್ಟಿದೆ ಗೊತ್ತಾ‌.!!

ಸಂಸತ್ ಸದಸ್ಯರ ಸಂಬಳ ಒಂದು ತಿಂಗಳಿಗೆ ಬರೊಬ್ಬರಿ 1.4 ಲಕ್ಷ ರೂಪಾಯಿಗಳು ಮತ್ತು ಒಂದು ದಿನದ ಸಂಸತ್ ಕಲಾಪಕ್ಕೆ 2000 ರುಪಾಯಿ ಕೊಡುತ್ತಾರೆ , ಒಟ್ಟು ಎಲ್ಲಾ ಸೇರಿಸಿ ಹೆಚ್ಚೂಕಮ್ಮಿ 1.53 ಲಕ್ಷ ಸಂಬಳ ಪ್ರತಿ ಸಂಸತ್ ಸದಸ್ಯರಿಗೆ ಬರುತ್ತದೆ.ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಅಂದಾಜು 400 ಎನ್ ಡಿ ಎ ಸಂಸದರಿದ್ದಾರೆ‌.

ಸದಾ ಪಾರದರ್ಶಕ ಆಡಳಿತಕ್ಕೆ ಒತ್ತು ಕೊಡುವ ಪ್ರಧಾನಿ ಮೋದಿಜಿ ಅವರ ಕಾರ್ಯಕ್ಕೆ ಮತ್ತೊಂದು ಗರಿ ಇದಾಗಿದೆ. ದೇಶದ ಇತಿಹಾಸದಲ್ಲೇ ಆಡಳಿತ ಪಕ್ಷದ ಸದಸ್ಯರ ಇಂತಹ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಇದೇ ಮೊದಲು.ಇಡೀ ದೇಶವೇ ಮೆಚ್ಚುವಂತಹ ಈ ಕಾರ್ಯಕ್ಕೆ ಪ್ರತಿಯೊಬ್ಬರು ಎನ್ ಡಿ ಎ ಸಂಸದರಿಗೆ ಅಭಿನಂದನೆಗಳು ಸಲ್ಲಿಸಲೇಬೇಕು‌.

ಈ ಕಾರ್ಯ ಪ್ರತಿಯೊಬ್ಬರಿಗೂ ತಲುಪುವ ವರೆಗೂ ಶೇರ್ ಮಾಡಿ.