ಹಿಂದೂ ಧರ್ಮದ ತೀರ್ಥಯಾತ್ರೆಯಾದ ‘ಮಹಾಕುಂಭ ಮೇಳ ‘ಎಷ್ಟು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ ಗೊತ್ತಾ…!??

ಹಿಂದೂ ಧರ್ಮದ ತೀರ್ಥಯಾತ್ರೆಯಾದ ‘ಮಹಾಕುಂಭ ಮೇಳ ‘ಎಷ್ಟು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ ಗೊತ್ತಾ…!??

0

ಕುಂಭ ಮೇಳ ಹಿಂದೂಧರ್ಮದ ಒಂದು ಸಾಮೂಹಿಕ ತೀರ್ಥಯಾತ್ರೆ. ಕುಂಭ ಮೇಳವನ್ನು ನಾಲ್ಕು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಅರ್ಧ ಕುಂಭ ಮೇಳವನ್ನು ಆರು ವರ್ಷಗಳಿಗೊಮ್ಮೆ ಹರಿದ್ವಾರ ಹಾಗು ಪ್ರಯಾಗದಲ್ಲಿ ಆಚರಿಸಲಾಗುತ್ತದೆ , ಪೂರ್ಣ ಕುಂಭ ಹನ್ನೆರಡು ವರ್ಷಗಳಿಗೊಮ್ಮೆ , ಪ್ರಯಾಗ (ಅಲ್ಲಹಾಬಾದ್), ಹರಿದ್ವಾರ, ಉಜ್ಜೈನಿ, ಹಾಗು ನಾಸಿಕ)ಈ ನಾಲ್ಕು ಸ್ಥಳಗಳಲ್ಲಿ ಆಚರಿಸಲಾಗುತ್ತದೆ. ಮಹಾ ಕುಂಭ ಮೇಳ 12 ‘ಪೂರ್ಣ ಕುಂಭ ಮೇಳಗಳ’ ನಂತರ, ಅಂದರೆ 144 ವರ್ಷಗಳಿಗೊಮ್ಮೆ ಅಲಹಾಬಾದ್ ನಲ್ಲಿ ಆಚರಿಸಲಾಗುತ್ತದೆ.

ಈ ಇಂದಿನ ಅರ್ಧ ಕುಂಭಮೇಳ ಜನವರಿ 2008 ರಲ್ಲಿ 45 ದಿನಗಳಕಾಲ ನಡೆಯಿತು. ಇದರಲ್ಲಿ 18 ದಶಲಕ್ಷ ಹಿಂದೂ ಯಾತ್ರಿಕರು ಪಾಲ್ಗೊಂಡರು, ಈ ಅರ್ಧ ಕುಂಭ ಮೇಳ ಪ್ರಯಾಗದಲ್ಲಿ ನಡಯಿತು, ಹಾಗೂ ಜನವರಿ 15 ಮಕರ ಸಂಕ್ರಾಂತಿಯಾ, ಅತಿ ಮಂಗಳಕರ ದಿನದಂದು, 5 ದಶಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡರು.

ಈ ಹಿಂದಿನ ಮಹಾ ಕುಂಭ ಮೇಳ , 2001 ರಲ್ಲಿ ನಡೆಯಿತು. ಇದರಲ್ಲಿ 60 ದಶಲಕ್ಷ ಜನ ಪಾಲ್ಗೊಂಡಿದ್ದರು, ಇದನ್ನು ಜಗತ್ತಿನಲ್ಲೇ ಅತ್ಯಂತ ದೊಡ ಜನ ಸಮೂಹವನಗಿಸಿದರು.

ಅಷ್ಟಕು ಏನಿದು ಕುಂಭಮೇಳ..!!

ಕುಂಭ ಎಂದರೆ ಮಡಕೆ ಎಂದು ಅರ್ಥ. ಸಮುದ್ರ ಮಥನದ ಸಮಯದಲ್ಲಿ ವಿಷ್ಣುವಿನ ವಾಹನವಾದ ಗರುಡನು ಅಮೃತ ತುಂಬಿರುವ ಕುಂಭವನ್ನು (ಮಡಕೆ) ತೆಗೆದುಕೊಂಡು ಹೋಗುವಾಗ ನಾಲ್ಕು ಹನಿ ಅಮೃತವು ನಾಲ್ಕು ಪವಿತ್ರ ತೀರ್ಥ ಕ್ಷೇತ್ರದಲ್ಲಿ ಬಿತ್ತು. ಅವು ಯಾವುವು ಎಂದರೆ ಹರಿದ್ವಾರದಲ್ಲಿ ಹರಿಯುವ ಗಂಗಾ ನದಿ, ಗಂಗಾ, ಯಮುನಾ ಮತ್ತು ಸರಸ್ವತಿ ಸೇರುವ ಪ್ರಯಾಗ, ಮಧ್ಯಪ್ರದೇಶದ ಉಜ್ಜೈನಿಯ ಕ್ಷಿಪ್ರ ನದಿ ಮತ್ತು ನಾಸಿಕದಲ್ಲಿರುವ ಗೋದಾವರಿ ನದಿಯಲ್ಲಿ ಒಂದೊಂದು ಹನಿ ಬಿತ್ತು ಎಂಬ ನಂಬಿಕೆ ಇದೆ. ಈ ನಾಲ್ಕು ತೀರ್ಥ ಕ್ಷೇತ್ರದಲ್ಲಿ ಕುಂಭ ಮೇಳ ಮತ್ತು ಅರ್ಧ ಕುಂಭಮೇಳ ನಡೆಯುವ ಸಂಪ್ರದಾಯ ಆರಂಭವಾಯಿತು.

ಕುಂಭ ಮೇಳ ಯಾವಾಗ ನಡೆಯುವುದು..!!

ಗುರು ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಿದಾಗ ಅಥವಾ ರವಿ ಗ್ರಹವು ಮೇಷ ರಾಶಿ ಪ್ರವೇಶಿಸಿದಾಗ ಕುಂಭ ಮೇಳ ಆರಂಭವಾಗುವುದು.

ಗುರು ಗ್ರಹವು ಒಂದು ರಾಶಿಯಲ್ಲಿ ಒಂದು ವರ್ಷ ಅಲ್ಲಿಯೇ ಇರುವನು. ಗುರುವು 12 ರಾಶಿಯನ್ನು ಪೂರ್ತಿ ಪರಿಕ್ರಮಣ ಮಾಡಲು 12 ವರ್ಷಗಳ ಕಾಲ ಬೇಕಾಗುವುದು. ಆಗ ಮಹಾ ಕುಂಭ ಮೇಳ ನಡೆಯುವುದು. 6 ರಾಶಿಗಳನ್ನು ಪ್ರವೇಶಿಸಿದಾಗ ಅರ್ಧ ಕುಂಭ ಮೇಳ ನಡೆಯುವುದು. ಈ ಕುಂಭ ಮೇಳದಲ್ಲಿ ಸ್ನಾನವೇ ಅತಿ ಮುಖ್ಯ.

ಸ್ನಾನ ಧರ್ಮಶಾಸ್ತ್ರದಲ್ಲಿ ಸ್ನಾನಕ್ಕೆ ಮಹತ್ತರವಾದ ಫಲವನ್ನು ಹೇಳಿರುವರು. ‘ಸ್ನಾತ್ಯನೇನ ಸ್ನಾನಂ’ ಎಂದರೆ ಶುಚಿಯಾಗುವುದು ಎಂದು. ದೃಷ್ಟ ಮತ್ತು ಅದೃಷ್ಟ ಎಂಬ ಎರಡು ಸ್ನಾನದ ಫಲಗಳಿವೆ. ಮಂತ್ರ ಸಹಿತವಾಗಿ, ಭಕ್ತಿಯುತವಾಗಿ ಮಾಡಿದ ಸ್ನಾನವು ಅದೃಷ್ಟ ಸ್ನಾನ. ನಮ್ಮ ಶರೀರ ಶುದ್ಧಿಗಾಗಿ ಮತ್ತು ಸಂತೋಷಕ್ಕಾಗಿ ಮಾಡುವ ಸ್ನಾನ ದೃಷ್ಟ ಸ್ನಾನ. ಸ್ನಾನಗಳಲ್ಲಿ 6 ವಿಧವಿದೆ.

1. ನಿತ್ಯ ಸ್ನಾನ ಪ್ರತಿನಿತ್ಯವೂ ಕರ್ಮಾನುಷ್ಠಾನಕ್ಕೆ ಮಾಡುವ ಸ್ನಾನ. ಕಾಮ್ಯ ಸ್ನಾನತುಲಾ ಮಾಸದಲ್ಲಿ, ಮಾಘ ಮಾಸದಲ್ಲಿ ಸಂಕ್ರಮಣ ಮತ್ತು ವಿಶೇಷ ತಿಥಿ, ನಕ್ಷತ್ರ ಮತ್ತು ವಾರಗಳಲ್ಲಿ ಮಾಡುವ ಸ್ನಾನ.

2. ಮಲಾವಕರ್ಷಣ ಸ್ನಾನ ಬರಿ ಶರೀರದ ಕೊಳೆಯನ್ನೂ ತೆಗೆಯುವುದಕ್ಕೆ ಮಲಾವಕರ್ಷಣ ಸ್ನಾನ ಎನ್ನುವರು.

3. ನೈಮಿತ್ತಿಕ ಸ್ನಾನ ಶವ ಸ್ಪರ್ಶವಾದಾಗ ಮತ್ತು ರಜಸ್ವಲೆಯಾದ ಸ್ತ್ರೀ ಸ್ಪರ್ಶಿಸಿದಾಗ ಮಾಡುವ ಸ್ನಾನ. ಕ್ರಿಯಾಂಗ ಸ್ನಾನ ಅಥವಾ ಕುಂಭ

4. ಮೇಳದ ಸ್ನಾನ ಪುಣ್ಯ ತೀರ್ಥ, ಪುಣ್ಯ ನದಿಯಲ್ಲಿ, ಪುಷ್ಕರಿಣಿಗಳಲ್ಲಿ ಮತ್ತು ಕುಂಭ ಮೇಳದಲ್ಲಿ ಮಾಡುವ ಸ್ನಾನಕ್ಕೆ ಕ್ರಿಯಾ ಸ್ನಾನ ಎನ್ನುವರು.

ಈ ಕುಂಭ ಮೇಳದ ಸ್ನಾನವನ್ನು ಶಹಿ ಸ್ನಾನ ಅಥವಾ ರಾಜ ದರ್ಬಾರಿನ ಸ್ನಾನ ಎನ್ನುತ್ತಾರೆ. ಕುಂಭ ಮೇಳವು ಸಾಮಾನ್ಯವಾಗಿ 1, 2 ಅಥವಾ 3 ತಿಂಗಳ ಕಾಲ ನಡೆಯುವುದು. ಈಗ ನಡೆಯುತ್ತಿರುವ ಪ್ರಯಾಗದ ಮಹಾ ಕುಂಭ ಮೇಳವು ಶಿವರಾತ್ರಿವರೆಗೆ ನಡೆಯುವುದು. ಈ ಸಮಯದಲ್ಲಿ ಹಿಮಾಲಯದಲ್ಲಿ ವಾಸಿಸುವ ಸಾಧು ಸಂತರು ತಪಸ್ವಿಗಳು, ನಾಗ ಸಾಧುಗಳು, ಯೋಗಿಗಳು, ದಿಗಂಬರರು ಮತ್ತು ಸನ್ಯಾಸಿಗಳು ಅಲ್ಲಿಯೇ ಇರುವವರು. ಕುಂಭ ಮೇಳದ ಸಮಯದಲ್ಲಿ ಬರುವ ಅಮಾವಾಸ್ಯೆ, ಹುಣ್ಣಿಮೆ, ಸಂಕ್ರಮಣ, ಪುಣ್ಯ ದಿನಗಳಲ್ಲಿ ಈ ಸಾಧು ಸಂತರು, ಮೊದಲು ಗುಂಪು ಗುಂಪಾಗಿ ನದಿಗೆ ಇಳಿದು ಸ್ನಾನ ಮಾಡುವರು. ಈ ಪ್ರಯಾಗ ಪ್ರದೇಶವನ್ನು ಪರ್ಶಿನ್ ಭಾಷೆಯಲ್ಲಿ ದೇವರ ನಗರ ಎನ್ನುವರು ಹಾಗೂ ಬ್ರಹ್ಮ ದೇವ ವಿಶ್ವನ್ನು ಸೃಷ್ಟಿ ಮಾಡಿದ ಮೊದಲ ನಗರ ಎಂಬ ಪ್ರತೀತಿ ಇದೆ.

ಈ ಮಾಹಿತಿ ಪ್ರತಿಯೊಬ್ಬ ಹಿಂದೂ ಸ್ನೇಹಿತರಿಗೆ ತಲುಪುವ ವರೆಗೂ ಶೇರ್ ಮಾಡಿ.