ಭಾರತೀಯ ರೈಲ್ವೆ ಇಲಾಖೆಯಿಂದ 10 ಲಕ್ಷ ಬಹುಮಾನ ಗೆಲ್ಲುವ ಸುವರ್ಣಾವಕಾಶ..!ಹೇಗೆ ಗೊತ್ತಾ??.!!

ಭಾರತೀಯ ರೈಲ್ವೆ ಇಲಾಖೆಯಿಂದ 10 ಲಕ್ಷ ಬಹುಮಾನ ಗೆಲ್ಲುವ ಸುವರ್ಣಾವಕಾಶ..!ಹೇಗೆ ಗೊತ್ತಾ??.!!

0

ನಮ್ಮ ಭಾರತೀಯ ರೈಲ್ವೆ ಬಗ್ಗೆ ನಿಮಗೆ ಉತ್ತಮ ಗುಣಮಟ್ಟದ ಸೇವೆಗೆ ಸಲಹೆ ಸೂಚಿದರೆ ರೈಲ್ವೆ ಇಲಾಖೆಗೆ ನಿಮ್ಮ ಸಲಹೆ ಎಲ್ಲರಿಗಿಂತ ಚೆನ್ನಾಗಿದರೆ ನಿಮಗೆ ಲಕ್ಷಾಂತರ ರುಪಾಯಿ ಬಹುಮಾನ ನೀಡಬಹುದು.

ರೈಲ್ವೆ ಇಲಾಖೆ ‘How to Raise Money For Railways To Provide Better Services’ ಎಂಬ ಸ್ಪರ್ಧೆ ಏರ್ಪಡಿಸಿದೆ. ಭಾರತೀಯ ರೈಲ್ವೆ ಇಲಾಖೆಯ ವಾರ್ಷಿಕ ಆದಾಯ ಹೆಚ್ಚಿಸಲು ಜನರಿಂದ ಸಲಹೆ ಪಡೆಯಲು ಮುಂದಾಗಿದೆ. ನಿಮ್ಮ ಸಲಹೆ ಚೆನ್ನಾಗಿದ್ದರೆ ನೀವು 1 ಲಕ್ಷದಿಂದ 10 ಸಾವಿರದವರೆಗೆ ಬಹುಮಾನದ ಗೆಲ್ಲಬಹುದಾಗಿದೆ.

indian-railway

ಸೇವೆಗಳನ್ನು ಉತ್ತಮಗೊಳಿಸಲು ಮತ್ತು ಆದಾಯ ಗಳಿಸುವ ಬಗ್ಗೆ ಎಲ್ಲಾ ಜನಸಾಮಾನ್ಯರು ತಮ್ಮ ಸಲಹೆಗಳನ್ನು ರೈಲ್ವೆ ಇಲಾಖೆಗೆ ನೀಡಬಹುದು. ನಿಮ್ಮ ಸಲಹೆಯಿಂದ ರೈಲ್ವೆ ಇಲಾಖೆಗೆ ಲಾಭವಾಗುತ್ತೆ ಎಂದು ಪರಿಗಣಿಸಿದರೆ, ಮೊದಲ ವಿಜೇತರಿಗೆ 10 ಲಕ್ಷ ರೂಪಾಯಿ, ಎರಡನೇ ವಿಜೇತರಿಗೆ 5 ಲಕ್ಷ ರೂಪಾಯಿ, ಮೂರನೇ ವಿಜೇತರಿಗೆ 3 ಲಕ್ಷ ರೂಪಾಯಿ ಕೊನೆಯ ಹಾಗೂ ನಾಲ್ಕನೇ ವಿಜೇತರಿಗೆ 1 ಲಕ್ಷ ರೂಪಾಯಿ ಬಹುಮಾನ ಲಭಿಸುತ್ತದೆ.

ನೀವು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸಿದರೆ https://innovate.mygov.in ಗೆ ಹೋಗಿ participate ಬಟನ್ ಕ್ಲಿಕ್ ಮಾಡಿ. ಅಲ್ಲಿ ಹೆಸರು ನೋಂದಣಿ ಮಾಡಿ ನಂತರ 1000 ಶಬ್ಧಗಳು ಮೀರದಂತೆ ನಿಮ್ಮ ಸಲಹೆ ನೀಡಬೇಕು. ಪಿಡಿಎಫ್ ಅಟ್ಯಾಚ್ ಕೂಡ ಮಾಡಬಹುದು. ಆದರೆ ಅದು 8MB ಗಿಂತ ಮೀರಿರಬಾರದು. ಮೇ 19 ರ ವರೆಗೆ ನಿಮ್ಮ ಸಲಹೆ ಕಳುಹಿಸಲು ಅವಕಾಶವಿದೆ. ಸಲಹೆಗಳು ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಕಳಿಸಲು ಅವಕಾಶವಿದೆ.