ಬಿಗ್ ಬ್ರೇಕಿಂಗ್: ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿಯಿಂದ ಭರ್ಜರಿ ಆಫರ್…!!ಏನು ಗೊತ್ತಾ..!?

ಬಿಗ್ ಬ್ರೇಕಿಂಗ್: ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿಯಿಂದ ಭರ್ಜರಿ ಆಫರ್…!!ಏನು ಗೊತ್ತಾ..!?

0

ತಮ್ಮ ತಮ್ನ ಕ್ಷೇತ್ರದ ಜನರ ಕುಂದುಕೊರತೆಗಳನ್ನು ಮತ್ತು ಕಾರ್ಯಕರ್ತರ ಸಮಸ್ಯೆಗಳನ್ನು ಕೇಳಲು ಸುಲಭದ ಉಪಾಯ ಸಾಮಾಜಿಕ ತಾಣಗಳನ್ನು ರಾಜಕೀಯ ಮುಖಂಡರು ಹೆಚ್ಚೆಚ್ಚು ಸಕ್ರಿಯವಾಗಿ ಬಳಸುವುದು.ಇತ್ತೀಚಿನ ದಿನಗಳಲ್ಲಿ ಫೆಸ್ ಬುಕ್ ಹಾಗೂ ಟ್ವೀಟರ್ ಖಾತೆಗಳಲ್ಲಿ ನಕಲಿ ಲೈಕ್ ಗಳು ಹೆಚ್ಚಾಗುತ್ತಿವೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ.

ಈಗ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸದರಿಗೆ ಹೊಸ ಕೆಲಸ ನೀಡಿದ್ದಾರೆ. ಪ್ರಧಾನಿ ನೀಡಿರುವ ಟಾರ್ಗೆಟ್ ಪಾಸ್ ಮಾಡಿದರೆ ಸಂಸದರಿಗೆ ಸ್ಪೆಷಲ್ ಅಫರ್ ನೀಡಿದ್ದಾರೆ ಎಂಬ ಮಾಹಿತಿ ಬಿಜೆಪಿ ನಾಯಕರಿಂದ ಕೇಳಿ ಬಂದಿದೆ.

ಇತ್ತೀಚೆಗೆ ದೆಹಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಭೋಜನಕೂಟದಲ್ಲಿ ಪ್ರಧಾನಿ ಮೋದಿ ಒಂದು ವಿಶೇಷ ಪ್ರಶ್ನೆ ಸಂಸದರಿಗೆ ಕೇಳಿದರು. ‘ಎಷ್ಟು ಮಂದಿ ಸಂಸದರು ಪೇಸ್ ಬುಕ್ ಪೇಜ್ ಹೊಂದಿದ್ದೀರಾ?’ ಎಂದು ಕೇಳಿದರು. ಬಹುತೇಕ ಎಲ್ಲಾ ಸಂಸದರು ಕೈ ಮೇಲೆತ್ತಿದ್ದರು.ಮುಂದೆ ಪ್ರಧಾನಿ ‘ಎಷ್ಟು ಜನರ ಪೇಜ್ ನಲ್ಲಿ 3 ಲಕ್ಷಕ್ಕಿಂದ ಅಧಿಕ ಅಸಲಿ ಲೈಕ್ ಇವೆ’? ಎಂಬ ಪ್ರಶ್ನೆಗೆ ಅಷ್ಟೊಂದು ಸಂಸದರು ಕೈ ಎತ್ತಲಿಲ್ಲ.

ಮುಂಬರುವ 2019ರ ಲೋಕಸಭಾ ಚುನಾವಣೆಯನ್ನು ಟಾರ್ಗೆಟ್ ಮಾಡಿರುವ ಮೋದಿಜಿ ಸಂಸದರಲ್ಲಿ ಆತ್ಮ ವಿಶ್ವಾಸ ತುಂಬಲು ಪ್ರಧಾನಿ ಪ್ರಯತ್ನಿಸಿದ್ದರು. 3 ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಹೊಂದಿರುವ ಸಂಸದರು ಪ್ರತಿನಿಧಿಸುವ ಕ್ಷೇತ್ರದ ಕಾರ್ಯಕರ್ತರೊಂದಿಗೆ ವಿಡಿಯೋ ಕಾಲ್ ಮೂಲಕ ಸಂವಾದ ನಡೆಸುವುದಾಗಿ ಭರ್ಜರಿ ಅಫರ್ ನೀಡಿದ್ದರು.

ಮೂಲ:https://www.freejobsnews.com/today-news/get-3-lakh-genuine-facebook-likes-each-modi-tells-bjp-mps/