ಈ ಹಿಂದೂ ದೇಗುಲದಲ್ಲಿ ಭದ್ರತೆಗಾಗಿ ಇನ್ನು ಪೊಲೀಸರಿಗೆ ಭಾರತದ ಸಂಸ್ಕೃತಿಯಂತೆ ಧೋತಿ-ಕುರ್ತಾ ಸಮವಸ್ತ್ರ..!!ಯಾವುದು ಆ ದೇಗುಲ ಗೊತ್ತಾ..??

ಈ ಹಿಂದೂ ದೇಗುಲದಲ್ಲಿ ಭದ್ರತೆಗಾಗಿ ಇನ್ನು ಪೊಲೀಸರಿಗೆ ಭಾರತದ ಸಂಸ್ಕೃತಿಯಂತೆ
ಧೋತಿ-ಕುರ್ತಾ ಸಮವಸ್ತ್ರ..!!ಯಾವುದು ಆ ದೇಗುಲ ಗೊತ್ತಾ..??

0

3500 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ವಾರಣಾಸಿ ಪ್ರಸಿದ್ಧ, ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕಾಶಿ ವಿಶ್ವನಾಥ ದೇಗುಲ.

ಕಾಶಿಯಲ್ಲಿಯ ಪ್ರಸಿದ್ಧ ವಿಶ್ವನಾಥ ದೇವಾಲಯವನ್ನು ಮುಘಲ್ ದೊರೆ ಔರಂಗಜೇಬನು ಧ್ವಂಸ ಮಾಡಿಸಿದನು. ನಂತರದ ವರ್ಷಗಳಲ್ಲಿ ಮರಾಠ ರಾಣಿ ಅಹಲ್ಯಾಬಾಯಿ ಹೋಳ್ಕರ ಸಮೀಪದಲ್ಲಿ ಇದನ್ನು ಪುನಃ ನಿರ್ಮಿಸಿದರು. ಮೂಲ ದೇವಸ್ಥಾನದ ಅವಶೇಷಗಳ ಮೇಲೆ ’ ಗ್ಯಾನವಾಪಿ ಮಸೀದಿಯನ್ನು’ ಔರಂಗಜೇಬನು ಕಟ್ಟಿಸಿದನು.

ಕೆಲವು ವರ್ಷಗಳ ಹಿಂದೆ ದಾಳಿ ಭೀತಿ ಎದುರಿಸುತ್ತಿದ್ದ ಕಾಶಿ ವಿಶ್ವನಾಥ ದೇಗುಲಕ್ಕೆ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ದಿನದ 24 ಗಂಟೆಯೂ ಮೂರು ಸರದಿಯಲ್ಲಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.ಈಗ ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯ ಸಮೀಪ ಕಾರ್ಯ ನಿರ್ವಹಿಸುವ ಪೊಲೀಸರು ಕಡ್ಡಾಯವಾಗಿ ಧೋತಿ-ಕುರ್ತಾ ಧರಿಸಬೇಕಾಗಿದೆ.

ಈ ಕುರಿತು ಪೊಲೀಸ್‌ ವರಿಷ್ಠಾಧಿಕಾರಿ ಆದೇಶವನ್ನು ಹೊರಡಿಸಿದ್ದಾರೆ. ಅದರಂತೆ 18 ಪೊಲೀಸರಿಗೆ ಧೋತಿ-ಕುರ್ತಾ ಸಮವಸ್ತ್ರವನ್ನು ಇಲಾಖೆಯಿಂದ ಪೂರೈಸಲಾಗಿದೆ ಎಂದು ತಿಳಿದು ಬಂದಿದೆ.

ದೇಗುಲದಲ್ಲಿ ಹೊಸ ಸಮವಸ್ತ್ರದಲ್ಲಿ ಪೊಲೀಸರನ್ನು ಕಂಡು ಕೆಲವು ಭಕ್ತಾಧಿಗಳು ಆಶ್ಚರ್ಯಚಕಿತರಾಗಿದ್ದಾರೆ.ಈ ಹಿಂದೆ ಕೆಲವು ಭಕ್ತಾಧಿಗಳು ಪೊಲೀಸರು ಬೆಲ್ಟ್‌ ಧರಿಸಿ, ಇಲಾಖೆ ಸಮವಸ್ತ್ರದಲ್ಲಿಯೇ ಗರ್ಭಗುಡಿ ಬಳಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು.ಈ ಹಿನ್ನೆಲೆಯಲ್ಲಿ ಈಗ ಪೊಲೀಸರು ಕಡ್ಡಾಯವಾಗಿ ಧೋತಿ-ಕುರ್ತಾ ಸಮವಸ್ತ್ರ ಧರಿಸಲು ಸೂಚಿಸಲಾಗಿದೆ.

ಮೂಲ:https://timesofindia.indiatimes.com/city/varanasi/cops-in-dhoti-kurta-surprise-pilgrims-at-iconic-kashi-temple/articleshow/63485835.cms