ಸುದೀಪ್ ಅಭಿನಯಕ್ಕೆ ಮನಸೋತ ತಮಿಳು ಅಭಿಮಾನಿ ಕನ್ನಡ ಕಲಿಯಲು ಪ್ರಾರಂಭ..!!

ಸುದೀಪ್ ಅಭಿನಯಕ್ಕೆ ಮನಸೋತ ತಮಿಳು ಅಭಿಮಾನಿ ಕನ್ನಡ ಕಲಿಯಲು ಪ್ರಾರಂಭ..!!

0

ಹೌದು!! ತಮಿಳು ಅಭಿಮಾನಿ ಒಬ್ಬರು ಸುದೀಪ್ ಸಿನಿಮಾಗಳನ್ನ ನೋಡಲು ಕನ್ನಡ ಕಲಿಯುತ್ತಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಕಾಮೆಂಟ್ ಮಾಡಿದ್ದರು. `ಸರ್ ನಾನು ತಮಿಳುನಾಡಿನವನು. ನನಗೆ ನೀವು ಅಂದ್ರೆ ತುಂಬಾ ಇಷ್ಟ. ನಾನು ಕನ್ನಡ ಕಲಿಯುತ್ತಿದ್ದೇನೆ. ನಾನು ನಿಮ್ಮ ಡಬ್ಬಿಂಗ್ ಸಿನಿಮಾಗಳಾದ ‘ಈಗ’, ‘ಬಾಹುಬಲಿ’, `ಪುಲಿ’, ‘ರಕ್ತಚರಿತ್ರ’ ನೋಡಿದ್ದೇನೆ. ನಾನು ನಿಮ್ಮ ಅಭಿನಯಕ್ಕೆ ಮತ್ತು ನಿಮ್ಮ ಕಿಲ್ಲಿಂಗ್ ಲುಕ್ ಗೆ ಮನಸೋತಿದ್ದೇನೆ. ನಾನು ನಿಮ್ಮ ಉಳಿದ ಚಿತ್ರಗಳನ್ನ ನೋಡಲು ನಿರ್ಧರಿಸಿದ್ದು, ಅದಕ್ಕಾಗಿ ಕನ್ನಡ ಕಲಿಯುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಸುದೀಪ್ ಕೂಡ ಪ್ರತಿಕ್ರಿಯಿಸಿದ್ದು, ನೀವು ಕನ್ನಡ ಕಲಿಯಲು ಶ್ರಮ ಪಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದಿದ್ದಾರೆ. ತಮಿಳು ಅಭಿಮಾನಿ `ಭಾರತೀಯ ಸಿನಿಮಾರಂಗದಲ್ಲಿ ಅಮಿತಾಬ್ ಬಚ್ಚನ್ ಅವರ ನಂತರ ಸುದೀಪ್ ಅವರಿಗೆ ಅತ್ಯುತ್ತಮ ಧ್ವನಿ ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.