ಶ್ರೀ ರಾಮನವಮಿ ಬಗ್ಗೆ ನಿಮಗೆಷ್ಟು ಗೊತ್ತು..?!! ಆಚರಿಸುವ ಮುನ್ನ ಇದನ್ನೊಮ್ಮೆ ಓದಿ.

ಶ್ರೀ ರಾಮನವಮಿ ಬಗ್ಗೆ ನಿಮಗೆಷ್ಟು ಗೊತ್ತು..?!! ಆಚರಿಸುವ ಮುನ್ನ ಇದನ್ನೊಮ್ಮೆ ಓದಿ.

0

ಶ್ರೀವಿಷ್ಣುವಿನ 7ನೇ ಅವತಾರ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ಶ್ರೀರಾಮ ನವಮಿಯನ್ನು ಆಚರಿಸುತ್ತಾರೆ. ಈ ದಿನ ಪುಷ್ಯ ನಕ್ಷತ್ರದಲ್ಲಿ, ಮಧ್ಯಾಹ್ನದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಐದು ಗ್ರಹಗಳಿದ್ದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಜನ್ಮವಾಯಿತು.

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಹುಟ್ಟುಹಬ್ಬವೇ ರಾಮನವಮಿ. ಈ ದಿನವನ್ನು ಮಜ್ಜಿಗೆ, ಪಾನಕ ವಿತರಣೆ, ಭಜನೆ, ಹರಿಕಥೆಗಳ ಮೂಲಕ ಸಾರ್ವಜನಿಕರೆಲ್ಲ ಒಂದೂಗೂಡಿ ಆಚರಿಸಲಾಗುತ್ತದೆ.

ಚೈತ್ರ ಹಾಗೂ ವೈಶಾಖ ಮಾಸಗಳು ಸೇರಿ ವಸಂತ ಋತುವಾಗುತ್ತದೆ. ಮಾಘಶುದ್ಧ ಸಪ್ತಮಿ ಅಂದರೆ ರಥ ಸಪ್ತಮಿ ಆರಂಭವಾದಾಗಿನಿಂದ ಬಿಸಿಲು ಕ್ರಮವಾಗಿ ಹೆಚ್ಚಾಗುತ್ತದೆ. ಬಿಸಿಲು ಬೇಗೆಯನ್ನು ತಡೆದುಕೊಳ್ಳಲು ಶ್ರೀರಾಮನವಮಿಯಂದು ಕೋಸಂಬರಿ, ಪಾನಕವನ್ನು ನೀಡಲಾಗುತ್ತದೆ. ಈ ಪ್ರಸಾದವನ್ನು ಅಂದು ಮಾತ್ರ ಸೇವಿಸದೆ ಆ ಎರಡು ತಿಂಗಳೂ ತಿಂದರೆ ಆರೋಗ್ಯ ಉತ್ತಮವಾಗಿರುತ್ತದೆ. ಸ್ವಲ್ಪ ಮೆಣಸು, ಪಚ್ಛಕರ್ಪೂರ, ಏಲಕ್ಕಿ ಸೇರಿದ ಪಾನಕ ಮಧುರ ದಾಂಪತ್ಯ ಜೀವನದ ಪ್ರತೀಕ.

ಕೋಸಂಬರಿಯಲ್ಲಿ ದೊರಕುವ ಕೊಬ್ಬರಿ ಚೂರುಗಳು ದಾಂಪತ್ಯ ಜೀವನದಲ್ಲಿ ಎದುರಾಗುವ ಕಷ್ಟಗಳ ಬಗ್ಗೆ ಎಚ್ಚರವಾಗಿರಬೇಕೆಂದು ತಿಳಿಸುತ್ತದೆ. ಶ್ರೀರಾಮನವಮಿ ಹಬ್ಬದ ದಿನ ಸೀತಾರಾಮರನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸಿ ಅವರಿಗೆ ಕಲ್ಯಾಣೋತ್ಸವ ಮಾಡಿದ ಬಳಿಕ ಪ್ರಸಾದವನ್ನು ಸ್ವೀಕರಿಸುವುದು ಹಿಂದಿನಿಂದ ಬಂದ ವಾಡಿಕೆ.

ಉತ್ಸವವನ್ನು ಆಚರಿಸುವ ಪದ್ಧತಿ….!!

ಅನೇಕ ರಾಮ ಮಂದಿರಗಳಲ್ಲಿ ಚೈತ್ರ ಶುಕ್ಲ ಪ್ರತಿಪದೆಯಿಂದ ಒಂಭತ್ತು ದಿನಗಳ ಕಾಲ ಈ ಉತ್ಸವವು ನಡೆಯುತ್ತದೆ. ರಾಮಾಯಣದ ಪಾರಾಯಣ, ಹರಿಕಥೆ ಮತ್ತು ರಾಮನ ಮೂರ್ತಿಗೆ ವಿವಿಧ ಶೃಂಗಾರ ಮುಂತಾದವುಗಳೊಂದಿಗೆ ಈ ಉತ್ಸವವನ್ನು ಆಚರಿಸುತ್ತಾರೆ. ನವಮಿಯಂದು ಮಧ್ಯಾಹ್ನ ರಾಮಜನ್ಮದ ಕೀರ್ತನೆ (ಹರಿಕಥೆ) ಯಾಗುತ್ತದೆ. ಮಧ್ಯಾಹ್ನ ಕುಂಚಿಗೆ (ಮಗುವಿನ ತಲೆಗೆ ಕಟ್ಟುವ ಒಂದು ವಸ್ತ್ರ. ಈ ವಸ್ತ್ರವು ಬೆನ್ನಿನವರೆಗೆ ಇರುತ್ತದೆ.)ಹಾಕಿದ ತೆಂಗಿನಕಾಯಿಯನ್ನು ತೊಟ್ಟಿಲಿನಲ್ಲಿಟ್ಟು ತೂಗುತ್ತಾರೆ.

ಭಕ್ತರು ಅದರ ಮೇಲೆ, ಗುಲಾಲು ಮತ್ತು ಹೂವುಗಳನ್ನು ಅರ್ಪಿಸುತ್ತಾರೆ.’ (ಕೆಲವು ಕಡೆಗಳಲ್ಲಿ ತೆಂಗಿನ ಕಾಯಿಯ ಬದಲು ಶ್ರೀರಾಮನ ಮೂರ್ತಿಯನ್ನು ತೊಟ್ಟಿಲಿನಲ್ಲಿ ಇಡುತ್ತಾರೆ. – ಸಂಕಲನಕಾರರು) ಈ ಸಂದರ್ಭದಲ್ಲಿ ಶ್ರೀರಾಮನ ಜನ್ಮದ ಗೀತೆಯನ್ನು ಹೇಳಲಾಗುತ್ತದೆ. ಅದರ ನಂತರ ಶ್ರೀರಾಮನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಪ್ರಸಾದವೆಂದು ಶುಂಠಿಚೂರ್ಣವನ್ನು ಕೊಡುತ್ತಾರೆ. ಕೆಲವು ಕಡೆಗಳಲ್ಲಿ ಶುಂಠಿಚೂರ್ಣದೊಂದಿಗೆ ಮಹಾಪ್ರಸಾದವನ್ನೂ ನೀಡುತ್ತಾರೆ