ನಮಗೆ ಸ್ವಾತಂತ್ರ್ಯ ಬಂದಿದ್ದ ಬಾಂಬ್, ಗುಂಡುಗಳಿಂದವೇ ಹೊರತು ಗಾಂಧಿ, ನೆಹರುವಿನಿಂದಲ್ಲ: ಮುತಾಲಿಕ್

ಯಾವಾಗಲೂ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇಗ ಮತ್ತೊಂದು ಹೇಳಿಕೆ ನೀಡಿದ್ದು, ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಾಂಬ್, ಗುಂಡುಗಳಿಂದವೇ ಹರತು ಮಹಾತ್ಮಾ ಗಾಂಧಿ ನೆಹರೂವಿನಿಂದಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಭಗತ್ ಸಿಂಗ್ ಬಲಿದಾನ ದಿನದಂದು ಜನರನ್ನುದ್ದೇಶಿಸಿ ಮಾತನಾಡುವ ವೇಳೆ ಹೀಗೆ ಹೇಳಿದರು.

ಭಾರತ ದೇಶಕ್ಕೆ ಬ್ರಿಟಿಷರಿಂದ ಮುಕ್ತಿ ನೀಡಿದ್ದು ಗಾಂಧಿ ನೆಹರುಗಳಲ್ಲ, ಬಂದೂಕು ಮತ್ತು ಗುಂಡಿನಿಂದ. ಈಗ ಭಗತ್ ಸಿಳಗ್, ಸುಖ್ದೇವ್, ಚಂದ್ರ ಶೇಖರ ಆಜಾದ್, ರಾಜಗುರು ಅವರಂತಹ ಮಹಾನ್ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲಾಗುತ್ತಿದೆ. ಇಂತಹ ಮಹಾನ್ ನಾಯಕರುಗಳಿಂದ ನಮಗೆ ಸ್ವಾತಂತ್ರ್ಯ ಬಂದಿದೆ. ದೇಶಭಕ್ತಿಯ ಕಾರ್ಯಕ್ರಮಗಳಿಗೆ ಹೋಗಲು ನನ್ನ ತಡೆಯುತ್ತಾರೆ. ಆದರೆ ನಾನು ನನ್ನ ಕೊನೆಯ ಉಸಿರಿನ ವರೆಗೂ ಹಿಂದೂತ್ವಕ್ಕಾಗಿ ಹೋರಾಡುತ್ತೇನೆ ಎಂದರು.

 

Post Author: Ravi Yadav