ಸ್ಪೋಟಕ ಮಾಹಿತಿ:ಮೋದಿಯಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಬೇನಾಮಿ ಆಸ್ತಿ ಸಂಪಾದಿಸಿದವರಿಗೆ ಕಾದಿದೆ ಶಾಸ್ತಿ..!

ಸ್ಪೋಟಕ ಮಾಹಿತಿ:ಮೋದಿಯಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಬೇನಾಮಿ ಆಸ್ತಿ ಸಂಪಾದಿಸಿದವರಿಗೆ ಕಾದಿದೆ ಶಾಸ್ತಿ..!

0

ಹೌದು!! ನೋಟು ಅಪಮೌಲ್ಯ ದಂತಹ ಕ್ರಾಂತಿಕಾರಿ ನಿರ್ಣಯದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಮಂದಿಗೆ ಶಾಕ್‌ ನೀಡಲು ಸಿದ್ಧವಾಗಿದ್ದಾರೆ..!!

ಕಾಳಧನಿಕರನ್ನು ಹೆಡೆಮುರಿ ಕಟ್ಟುವ ಉದ್ದೇಶದಿಂದ ಮೋದಿ ಸರಕಾರ ಜಾರಿಗೆ ತಂದಿರುವ ಮತ್ತೊಂದು ಮಹತ್ವದ ಹೆಜ್ಜೆಯಿಡುತ್ತಿದೆ. ಬೇನಾಮಿ ಆಸ್ತಿಯನ್ನು ವಶಕ್ಕೆ ಪಡೆಯಬೇಕು ಮತ್ತು ಮುಂದೆ ಆಗದಂತೆ ನೋಡಿಕೊಳ್ಳುವುದು ಇದರ ಹಿಂದಿನ ಉದ್ದೇಶ.

ಅಷ್ಟಕು ಬೇನಾಮಿ ಆಸ್ತಿಯೆಂದರೇನು?

ಬೇನಾಮಿ ಆಸ್ತಿಯೆಂದರೆ ಮತ್ತೊಬ್ಬರ ಹೆಸರಿನಲ್ಲಿ ಕೊಳ್ಳಲಾದ ಆಸ್ತಿ. ಅಂದರೆ, ಆಸ್ತಿಯನ್ನು ಕೊಂಡಿರುವುದು ಒಬ್ಬ, ಆದರೆ ಹೆಸರು ನಮೂದಾಗಿರುವುದು ಮತ್ತೊಬ್ಬರದು. ಆ ಆಸ್ತಿ ಸ್ಥಿರಾಸ್ತಿಯಾಗಿರಬಹುದು, ಬ್ಯಾಂಕ್ ನಲ್ಲಿ ಇಟ್ಟಿರುವ ಫಿಕ್ಸಡ್ ಠೇವಣಿಯೂ ಆಗಿರಬಹುದು. ತಮ್ಮ ಹೆಸರು ಬೆಳಕಿಗೆ ಬರಬಾರದೆಂದು ಇಚ್ಛಿಸುವವರು ಬೇರೆಯವರ ಹೆಸರಿನಲ್ಲಿ ಆಸ್ತಿ ಕೊಂಡಿರುತ್ತಾರೆ.

ಇದು ಇಂದಿನ ವಿದ್ಯಮಾನವಲ್ಲ, ಕಳೆದ 200ಕ್ಕೂ ಹೆಚ್ಚು ವರ್ಷಗಳಿಂದ ಬೇನಾಮಿ ಆಸ್ತಿ ಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹಿಂದೆ ಜಮೀನ್ದಾರಿ ಪದ್ಧತಿಯನ್ನು ರದ್ದು ಮಾಡುವ ಸಂದರ್ಭದಲ್ಲಿ ಇವೆಲ್ಲ ಬೆಳಕಿಗೆ ಬಂದಿದ್ದವು. ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು, ವೈಯಕ್ತಿಯ ಮಣಭಾರವನ್ನು ತಗ್ಗಿಸಿಕೊಳ್ಳಲು ಇಂಥ ದಾರಿ ಹಿಡಿಯುತ್ತಾರೆ.

ಕಾಯ್ದೆಯ ಅನ್ವಯ ಬೇನಾಮಿ ಆಸ್ತಿಗೆ ಏನಾಗುತ್ತದೆ..!!

ಈಗಾಗಲೇ ಇರುವ ಕಾಯ್ದೆಯ ಪ್ರಕಾರ, ಬೇನಾಮಿ ಆಸ್ತಿಯ ಮರುನೋಂದಣಿ ಸಾಧ್ಯವಿಲ್ಲ. ಆದಾಯ ಘೋಷಣಾ ಸ್ಕೀಂ ಅಡಿಯಲ್ಲಿ ಬೇನಾಮಿ ಆಸ್ತಿಯನ್ನು ಘೋಷಿಸಿಕೊಳ್ಳುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ. ಆದರೆ, ಕೇಂದ್ರ ಸರಕಾರ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು

ಬೇನಾಮಿ ಆಸ್ತಿ ಕೊಂಡು ಸಿಕ್ಕಿಬಿದ್ದವರನ್ನು 1 ವರ್ಷದಿಂದ 7 ವರ್ಷಗಳ ವರೆಗೆ ಜೈಲಿಗಟ್ಟಬಹುದು. ಆಸ್ತಿಯ ಈಗಿನ ಬೆಲೆಯ ಶೇ.25ರಷ್ಟು ದಂಡವನ್ನೂ ಕಟ್ಟಿಸಿಕೊಳ್ಳಬಹುದು. ನಕಲಿ ಮಾಹಿತಿ ಅಥವಾ ದಾಖಲೆ ನೀಡುವವರನ್ನು 6 ತಿಂಗಳಿನಿಂದ 5 ವರ್ಷದವರೆಗೆ ಜೈಲಿಗೆ ಕಳಿಸುವ ಅವಕಾಶ ಈ ಕಾಯ್ದೆಯಲ್ಲಿದೆ. ಅವರಿಗೆ ಆಸ್ತಿಯ ಮೌಲ್ಯದ ಶೇ.10ರಷ್ಟು ದಂಡವನ್ನೂ ವಿಧಿಸುವ ಸಾಧ್ಯತೆ ಇರುತ್ತದೆ.

ಮೋದಿಯಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್…!!

ಕೇಂದ್ರ ಸರ್ಕಾರ ಬ್ಯಾಂಕ್ ಖಾತೆ, ಮೊಬೈಲ್, ಸರ್ಕಾರಿ ಯೋಜನೆಗಳಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡುವ ಕ್ರಮ ಈಗಾಗಲೇ ಜಾರಿಯಲ್ಲಿದೆ.

ದೇಶದಲ್ಲಿನ ಹೆಚ್ಚಿನ ರಾಜಕಾರಣಿಗಳು, ಅಧಿಕಾರಿಗಳು ಅಥವಾ ಬಿಲ್ಡರ್ ಗಳು ಹೀಗೆ ಹಲವರು ಬೇನಾಮಿ ಆಸ್ತಿಯನ್ನು ಸಂಪಾದಿಸಿದ್ದಾರೆ. ರಿಯಲ್ ಎಸ್ಟೇಟ್ ವಲಯದಲ್ಲಿ ಕಪ್ಪುಹಣದ ಪ್ರಭಾವ ಹೆಚ್ಚಿದ್ದು, ಆಧಾರ್ ಸಂಪರ್ಕದಿಂದ ಕಡಿವಾಣ ಬೀಳಲಿದೆ. ಅಲ್ಲದೇ ಬೇನಾಮಿ ಆಸ್ತಿಗಳ ಪತ್ತೆಗೆ ಆಧಾರ್ ಜೋಡಣೆ ಅಸ್ತ್ರವಾಗಲಿದೆ.

ಆಸ್ತಿ ವರ್ಗಾವಣೆ ಸಂದರ್ಭದಲ್ಲಿ ಆಧಾರ್ ಕಡ್ಡಾಯ ಮಾಡುವುದರಿಂದ ಕಪ್ಪುಹಣ ಹೂಡಿಕೆ ತಡೆಯಲು ಮತ್ತು ಬೇನಾಮಿ ಆಸ್ತಿ ಪತ್ತೆ ಮಾಡುವುದು ಸುಲಭವಾಗಲಿದೆ. ಕಪ್ಪುಹಣ ನಗದು ರೂಪಕ್ಕಿಂತ ಹೆಚ್ಚಾಗಿ ಬೇನಾಮಿ ಆಸ್ತಿಗಳ ಮೇಲೆ ಹೂಡಿಕೆಯಾಗುತ್ತದೆ. ಇದರಿಂದಾಗಿ ಆಧಾರ್ ಕಡ್ಡಾಯ ಮಾಡಲು ಮೋದಿ ಯೋಜಿಸಿದ್ದಾರೆ.

ಕೇಂದ್ರ ಗೃಹ ನಿರ್ಮಾಣ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹಾಗೂ ಭೂ ಸಂಪನ್ಮೂಲ ಇಲಾಖೆ ಬೇನಾಮಿ ಆಸ್ತಿ (ರಿಯಲ್ ಎಸ್ಟೇಟ್) ಸಂಬಂಧಿತ ಪ್ರಸ್ತಾವದ ಬಗ್ಗೆ ಸಿದ್ದತೆ ನಡೆಸುತ್ತಿವೆ. ಜತೆಗೆ ರಾಜ್ಯ ಸರ್ಕಾರಗಳ ಮೂಲಕ ಇದನ್ನು ಅನುಷ್ಠಾನಕ್ಕೆ ತರಲು ಅನುಸರಿಸಬೇಕಾದ ಕ್ರಮಗಳ ರೂಪುರೇಷೆ ಸಿದ್ಧಪಡಿಸುತ್ತಿದೆ.

ಅಷ್ಟಕು ಆಧಾರ್ ಲಿಂಕ್ ಪ್ರಯೋಜನ ಏನು..!!

1. ಆಧಾರ್‌ ಸಂಪರ್ಕದಿಂದ ಭೂ ಮತ್ತು ಆಸ್ತಿ ವಹಿವಾಟುಗಳ ಅಕ್ರಮಕ್ಕೆ ತೆರೆ ಬೀಳಲಿದೆ.

2. ಆಸ್ತಿ ವ್ಯವಹಾರದ ಮೇಲೆ ನಿಗಾ ಇಡಬಹುದು.

3. ಇನ್ನೊಬ್ಬರ ಹೆಸರಿನಲ್ಲಿ ಆಸ್ತಿ ನೋಂದಣಿ ತಪ್ಪಿಸಬಹುದು.

4. ರಿಯಲ್ ಎಸ್ಟೇಟ್ ನಲ್ಲಿ ಕಪ್ಪುಹಣ ಹೂಡಿಕೆ ತಡೆಯಲು ಮತ್ತು ಬೇನಾಮಿ ಆಸ್ತಿ ಪತ್ತೆ ಮಾಡಲು ಸಹಕಾರಿ.