ವೀರ್ ಸಾವರ್ಕರ್ ಯಾರು?ಇದನ್ನು ಓದಿ ನಿಮ್ಮ ಎದೆ ಗರ್ವದಿಂದ ಹೇಳುತ್ತದೆ. ಸಾವರ್ಕರ್ ಎಂದರೆಆತ್ಮಾಭಿಮಾನ..!!ಈದನ್ನು ಓದದವರ ಭಾರತದ ಸ್ವಾತಂತ್ರ್ಯ ಜ್ಞಾನ ಅಪೂರ್ಣ?..!!

ವೀರ್ ಸಾವರ್ಕರ್ ಯಾರು?ಇದನ್ನು ಓದಿ ನಿಮ್ಮ ಎದೆ ಗರ್ವದಿಂದ ಹೇಳುತ್ತದೆ.ಸಾವರ್ಕರ್ ಎಂದರೆಆತ್ಮಾಭಿಮಾನ..!!ಈದನ್ನು ಓದದವರ ಭಾರತದ ಸ್ವಾತಂತ್ರ್ಯ ಜ್ಞಾನ ಅಪೂರ್ಣ?..!!

0

ಈ ಕೆಳಗಿನ 25 ಮಾತುಗಳನ್ನು ಓದಿ ನಿಮ್ಮ ಎದೆ ಗರ್ವದಿಂದ ವಿಶಾಲವಾಗಿ ಎದ್ದೇಲುತ್ತದೆ. ಈದನ್ನು ಓದದವರ ಭಾರತದ ಸ್ವಾತಂತ್ರ್ಯ ಜ್ಞಾನ ಅಪೂರ್ಣ. ಬನ್ನಿ ಅಂತಹ ಒಬ್ಬ ಕ್ರಾಂತಿಕಾರೀ ಮಹಾನ್ ವ್ಯಕ್ತಿಯ ಬಗ್ಗೆ ಓದಿ ತಿಳಿದುಕೊಳ್ಳೋಣ. ಆವರು ಹೆಸರು ಇತಿಹಾಸದ ಪುಟಗಳಿಂದ ಈ ಕಳೆದ 70 ವರ್ಷಗಳೀಂದ ಅಳಿಸಿಹಾಕಿದ್ದರು. ಈ ವ್ಯಕ್ತಿಯು ಬ್ರಿಟಿಶ್ ಸರಕಾರದ ಕೈ ಕೆಳಗೆ ಎಷ್ಟೊಂದು ಯಾತನೆಗಳನ್ನು ಅನುಭವಿಸಿದರು ಎಂದರೆ , ಅದರ ಬಗ್ಗೆ ಕಲ್ಪನೆ ಮಾಡುತ್ತಲೇ ಈ ಭಾರತ ಮಾತೆಯ ಕೋಟ್ಯಾಂತರ ಹೇಡಿ ಪುತ್ರರಲ್ಲಿ ಮೈನಡುಕವೇ ಉಂಟಾಗುತ್ತದೆ. ಈ ವ್ಯಕ್ತಿಯ ಹೆಸರು ಕೇಳುತ್ತಲೇ ನಮ್ಮ ದೇಶದ ರಾಜಕೀಯ ಮುಖಂಡರುಗಳು ಭಯಭೀತರಾಗುತ್ತಾರೆ, ಏಕೆಂದರೆ ಈ ವ್ಯಕ್ತಿಯು ಭಾರತಾಂಬೆಯ ನಿಸ್ಸ್ವಾರ್ಥ ಸೇವೆ ಗೈದಿದ್ದರು. ಆವರೆ ನಮ್ಮ ನಿಮ್ಮೆಲ್ಲರ ಪರಮ ಪೂಜ್ಯ ವೀರ್ ಸಾವರ್ಕರ್.

1.1901 ರಲ್ಲಿ ಬ್ರಿಟಿಷರ ರಾಣಿ ವಿಕ್ಟೋರಿಯಾ ನಿಧನರಾದಾಗ, ನಾಸಿಕ್ ನಲ್ಲಿ ಶೋಕಸಭೆ ಮಾಡುವ ಅವಶ್ಯಕಥೆಯಿಲ್ಲಾ ಎಂದು ವಿರೋಧ ಮಾಡಿದ ಮೊದಲನೇ ಕ್ರಾಂತಿಕಾರೀ ದೇಶಭಕ್ತ ಅವರು. ಏನು ನಮ್ಮ ಯಾವುದೇ ಭಾರತೀಯ ಮಹಾಪುರುಷ ನಿಧನರಾದರೆ ಬ್ರಿಟನ್ನಿನಲ್ಲಿ ಅವರು ಶೋಕಸಭೆ ಮಾಡುತ್ತಾರೇ ಎಂದು ಪ್ರಶ್ನಿಸಿದ ವ್ಯಕ್ತಿ ಅವರು. ನಮ್ಮ ಶತ್ರುದೇಶವಾದ ಬ್ರಿಟನ್ನಿನ ರಾಣಿ ಸತ್ತರೆ ನಮ್ಮ ದೇಶದಲ್ಲೇಕೆ ಶೋಕಸಭೆ ಎಂದು ಅದನ್ನು ವಿರೋಧಿಸಿದವರು ಅವರು.

2.ಎಡ್ವರ್ಡ್ ಏಳು ಇವರ ರಾಜ್ಯಾಭಿಶೇಕ ಸಮಾರೋಹ ಸಮಾರಂಭವನ್ನು ವಿರೋಧಿಸಿದ ಮೊದಲನೆ ದೇಶಭಕ್ತ ವೀರ ಸವರ್ಕರ್ . ತ್ರಯಂಬಕೇಶ್ವರ್ ಎನ್ನುವಲ್ಲಿ ಊರಿನ ಉದ್ದಗಲಕ್ಕೂ ದೊಡ್ಡ ದೊಡ್ಡ   ಪೋಸ್ಟರ್ಗಳನ್ನು ಅಂಟಿಸಿ ದೇಶದ ಪ್ರಜೆಗಳಿಗೆ ದೇಶದ ಗುಲಾಮಿಯ ಉತ್ಸವ ಆಚರಿಸಬೇಡಿ ಎಂದು ಹೇಳಿದವರು ಈ ವೀರ್ ಸವಾರ್ಕರ್.
3. ವಿದೇಶೀ ವಸ್ತ್ರಗಳನ್ನು ಸಾರ್ವಜನಿಕವಾಗಿ ಸುಟ್ಟು ಮೊದಲನೇ ಆಹುತಿ, ಪುಣೆಯಲ್ಲಿ 7 ಅಕ್ಟೋಬರ್ 1905ರಲ್ಲಿ ಆಚರಿಸಿದವರು ವೀರ ಸಾವರ್ಕರವರು.

4.ಬಾಲ್ ಗಂಗಾಧರ್ ತಿಲಕ್ ರವರು ತಮ್ಮ ದಿನಪತ್ರಿಕೆ ಕೇಸರಿಯಲ್ಲಿ ವೀರ್ ಸಾವರ್ಕರ್ . ವಿದೇಶೀ ವಸ್ತ್ರಗಳನ್ನು ಸಾರ್ವಜನಿಕವಾಗಿ ಸುಟ್ಟಾಗಾ ಅವನನ್ನು ಚತ್ರಪತಿ ಶಿವಾಜಿ ಸಮಾನ ಎಂದು ಹೋಲಿಕೆ ಮಾಡಿ ಬರೆದಿದ್ದರು. ಆದರೆ ಆಗ ದಕ್ಷಿಣ ಆಫ್ರಿಕಾದಲ್ಲಿದ್ದ ‘ಗಾಂಧೀ’ ಅಲ್ಲಿಯ ದಿನ ಪತ್ರಿಕೆ ‘ಇಂಡಿಯನ್ ಒಪಿನಿಯನ್’ ಅಲ್ಲಿ ವೀರ್ ಸಾವರ್ಕರವರನ್ನು ಈ ಘಟನೆಗೆ ನಿಂದಿಸಿ ತಮ್ಮ ಅಭಿಪ್ರಾಯ  ವ್ಯಕ್ತಪಡಿಸಿದ್ದರು.

5. ಸಾವರ್ಕರ್ ರವರಿಂದ ವಿದೇಶೀ ವಸ್ತ್ರಗಳನ್ನು ಸಾರ್ವಜನಿಕವಾಗಿ ಸುಡುವ ಪ್ರಥಮ ಘಟನೆ ಆಗಿ 16 ವರ್ಷಗಳು ಕಳೆದಮೇಲೆ 1921ರಲ್ಲಿ ಮುಂಬಯಿ ಪರೇಲ್ ಎನ್ನುವಲ್ಲಿ ಗಾಂಧೀ ಅವರದೇ ಮಾರ್ಗವನ್ನು ಅಳವಡಿಸಿಕೊಂಡು ವಿದೇಶೀ ವಸ್ತ್ರಗಳ ಬಹಿಷ್ಕಾರ ಮಾಡಿದರು.


6. 1905 ರಲ್ಲಿ ವಿದೇಶೀ ವಸ್ತ್ರಗಳ ಸುಡುವಿಕೆಯ ಕಾರಣಕ್ಕಾಗಿ ಫರ್ಗುಸನ್ ಕಾಲೇಜು ಸಾವರ್ಕರವರನ್ನು ಕಾಲೇಜಿನಿಂದ ವಜಾಗೊಳಿಸಿತು. ಮತ್ತು ಅವರಿಗೆ ಹತ್ತು ರೂಪಾಯಿ ದಂಡ ವಿಧಿಸಿತು. ಇದನ್ನು ವಿರೋಧಿಸಿ ಮುಷ್ಕರವಾಯಿತು. ತಿಲಕ್ ಜೀ ಯವರು ಸ್ವಯಂ ತಾವೇ ‘ಕೇಸರೀ’ ದಿನಪತ್ರಿಕೆಯಲ್ಲಿ ಸಾವರ್ಕರವರ ಪರ ವಾದಿಸುತ್ತಾ ಸಂಪಾದಕೀಯ ಬರೆದಿದ್ದರು.

7. ವೀರ್ ಸಾವರಕರವರು ಬ್ರಿಟನ್ನಿನ ಬ್ಯಾರಿಸ್ಟರ್ ಆಗುವ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇಲೆ ಬ್ರಿಟನ್ನಿನ ರಾಜನಿಗೆ ನಿಷ್ಟಾವಂತ ಪ್ರಜೆಯಾಗಿರುವ ಶಪಥವನ್ನು ಅಂಗೀಕರಿಸಲು ನಿರಾಕರಿಸಿದ ಮೊದಲ ಭಾರತೀಯ. ಇದರಿಂದಾಗಿ ಅವರು ಉತ್ತೀರ್ಣಗೊಂಡ ಬ್ಯಾರಿಸ್ಟರ್ ಪದವಿಯ ಪ್ರಮಾಣಪತ್ರ ಅವರಿಗೇ ಎಂದಿಗೂ ನೀಡಲಾಗಲಿಲ್ಲ.

8.ಆಂಗ್ಲರು 1857ರ ಮೊದಲ ಸ್ವಾತಂತ್ರ ಸಂಗ್ರಾಮವನ್ನು ದಂಗೆ ಎಂದು ವರ್ಣಿಸುತ್ತಿದ್ದರು. ವೀರ್ ಸಾವರ್ಕರ್ ಮೊದಲ ಭಾರತೀಯ ಲೇಖಕ ಇದನ್ನು ಸ್ವಾತಂತ್ರ್ಯ ಸಮರವವೆಂದು ವರ್ಣಿಸಿ ಅದರ ಬಗ್ಗೆ ಒಂದು ಪುಸ್ತಕವನ್ನೇ ಬರೆದು ಪ್ರಕಟಿಸಿ ತಮ್ಮ ವಾದವನ್ನು ಪ್ರತಿಪಾದಿಸಿದವನು.

9. ಸಾವರಕರ್ ಮೊದಲ ಇಂಥಹ ಕ್ರಾಂತಿಕಾರೀ ಬರಹಗಾರ, ಅವರಿಂದ ಬರೆಯಲ್ಪಟ್ಟ ‘1857 ರ ಸ್ವಾತಂತ್ರ್ಯ ಸಮರ’ವೆನ್ನುವ ಪುಸ್ತಕದ ಪ್ರಕಟಣೆಯ ವಿರೋಧ ಬ್ರಿಟಿಶ್ ಸಂಸತ್ತು ನಿಷೇದಾಜ್ಞೆ ಹೊರಡಿಸಿತ್ತು.
10. ‘1857 ರ ಸ್ವಾತಂತ್ರ್ಯ ಸಮರ’ವೆನ್ನುವ ಪುಸ್ತಕ ಭಾರತದ ಹೊರಗೆ ಪ್ರಕಟಿಸಲಾಗಿತ್ತು. ಭಗತ್ ಸಿಂಘ್ ಈ ಪುಸ್ತಕವನ್ನು ಭಾರತದಲ್ಲಿ ಪ್ರಕಟಿಸಿದ್ದನು. ಈ ಪುಸ್ತಕದ ಒಂದೊಂದು ಪ್ರತಿ ಮುನ್ನೂರು ರೂಪಾಯಿಗೆ ಮಾರಾಟವಾಗುತಿತ್ತು. ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಪುಸ್ಥಕ ಒಂದು ಪವಿತ್ರ ಗ್ರಂಥವಾಗಿತ್ತು. ಪೋಲೀಸರು ದೇಶಭಕ್ತರ ಮನೆ ಮನೆ ನುಗ್ಗಿ ಹುಡುಕಿದಾಗ ಇದೇ ಪುಸ್ತಕ ಸಿಗುತಿತ್ತು.

11.ವೀರ ಸಾವರ್ಕರ್ ಭಾರತದ ಮೊಟ್ಟಮೊದಲ ಕ್ರಾಂತಿಕಾರೀ, ಯಾವನು ಬ್ರಿಟನ್ನಿನಿಂದ ಭಾರತಕ್ಕೆ ಸಮುದ್ರಮಾರ್ಗವಾಗಿ  ತರಲ್ಪಡುತ್ತಿದ್ದಾಗ 8 ಜುಲೈ 1910ರಂದು, ಹಡಗಿನಿಂದ ಸಮುದ್ರಕ್ಕೆ ಹಾರಿ, ಫ್ರಾನ್ಸ್ ದೇಶಕ್ಕೆ ತಲುಪಿದ್ದರು.
12.ವೀರ ಸಾವರ್ಕರ್ ಭಾರತದ ಮೊಟ್ಟಮೊದಲ ಕ್ರಾಂತಿಕಾರೀ ಯಾರ ಬಗ್ಗೆ ‘ಹೇಗ್’ನಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊಕ್ಕದಮ್ಮೆ ಹೂಡಲಾಯಿತು. ಫ್ರಾನ್ಸ್ ಹಾಗೂ ಬ್ರಿಟಿಷರು ಒಂದಾಗಿದ್ದುದರಿಂದ ಅವರಿಗೆ ನ್ಯಾಯ ದೊರಕದೆ ಅವರನ್ನು ಬಂಧಿಸಿ ಭಾರತಕ್ಕೆ ತರಲಾದರು.
13.ಎರಡು ಜೀವಾವಧಿ ಶಿಕ್ಷೆ ವಿಧಿಸಲಾದ ಭಾರತದ ಹಾಗೂ ಇಡೀ ವಿಶ್ವದ ಒಬ್ಬ ಮೊದಲ ಕ್ರಾಂತಿಕಾರಿ,ವೀರ್ ಸಾವರಕರ್.
14.ಬ್ರಿಟಿಷರು ವೀರ್ ಸಾವರ್ಕರ್ ಗೆ ಎರಡು ಜೀವಾವಧಿ ಶಿಕ್ಶೆ ವಿಧಿಸಿದಾಗಲೇ ಅವರು ನಗುತ್ತಾ ಹೀಗೆ  ಹೇಳಿದರು, ‘ಸರಿ ಬಿಡಿ- ಏಸುವಿನ ನಂಬಿಗೆಯ ಆಡಳಿತಶಾಹಿಗಳು ಹಿಂಗಾದರೂ ಹಿಂದೂ ಧರ್ಮದ ಪುನರ್ಜನ್ಮದ ಸಿದ್ಧಾಂತವನ್ನು ಒಪ್ಪಿಕೊಂಡರಲ್ಲ. . .  ಅದೇ ನನ್ನ ಜಯ ಎಂದು.

15.ಹತ್ತು ವರ್ಷಗಳ ಕಾಲ ನಿರಂತರವಾಗಿ ಸ್ವಾತಂತ್ರ್ಯಕ್ಕಾಗಿ ರಾಠೆಯನ್ನು ಖುದ್ದು ದೈಹಿಕ ಶಕ್ತಿಯಿಂದ ಚಲಾಯಿಸಿ ಪ್ರತಿದಿನವೂ 30 ಪೌಂಡು ಎಣ್ಣೆ ತೆಗೆಯುತ್ತಿದ್ದ ಮೊದಲ ರಾಜಕೀಯ ಖೈದಿ ಶ್ರೀ ವೀರ್ ಸಾವರ್ಕರ್.

16.ವೀರ್ ಸಾವರ್ಕರ್ ಕಾಲಾಪಾನೀ ಎನ್ನುವ ಜೈಲಿನ ಮೊದಲ ಇಂಥಹ ಖೈದಿ, ಯಾರು ತನ್ನ ಜೈಲಿನ ಕೊಠಡಿಯ ಗೋಡೆಗಳ ಮೇಲೆ ಕಲ್ಲು ಮತ್ತು ಮಸಿಯಿಂದ ಕವಿತೆಗಳನ್ನು ಬರೆದು ಅವನ್ನು ಜ್ಞಾಪಕದಲ್ಲಿ ಉಳಿಸಿಕೊಂಡವರು. 6000 ಇಂಥಹ ಕವಿತೆಗಳನ್ನು ಬರೆದು ಜ್ಞಾಪಕದಲ್ಲಿ ಉಳಿಸಿಕೊಂಡವರವರು

17.ವೀರ್ ಸಾವರ್ಕರ್ ಮೊದಲ ಒಬ್ಬ ದೇಶಭಕ್ತ ಲೇಖಕ, ಯಾರ ಪುಸ್ಥಕಗಳ ಮೇಲೆ ಬ್ರಿಟಿಷರು ಹೇರಿದ್ದ ನಿಶೇದಾಜ್ಞೆಯು ಸ್ವಾತಂತ್ರ್ಯಾ ನಂತರವೂ ಎಷ್ಟೋ ವರ್ಷಗಳ ಕಾಲ  ಇನ್ನೂ ತೆಗೆಯಲ್ಪಡದೇ ಇದ್ದವು.

18. ಯಾರು ಹಿಂದು ಎನ್ನುವದನ್ನು ಸ್ಪಷ್ಟವಾಗಿ ವರ್ಣಿಸಿದ ಮೊದಲನೇಯ ವಿಧ್ವಾಂಸ ವೀರ್ ಸಾವರ್ಕರ್. ಆವರ ಪರಿಭಾಷೆ ಸಂಸ್ಕೃತದಲ್ಲಿ ಹೀಗಿದೆ :    “ಆಸಿಂಧು ಸಿಂಧುಪರ್ಯಂತಾ ಯಸ್ಯ ಭಾರತ್ ಭೂಮಿಕಾ, ಪಿತೃಭೂಃ ಪುಣ್ಯಭೂಶ್ಚೈವ ಸ ವೈ ಹಿಂದುರಿತೀಸ್ಮೃತಃ”  ಅರ್ಥ ಹೀಗಿದೆ “ ಸಮುದ್ರದಿಂದ ಹಿಮಾಲಯದವರೆಗೆ ಭಾರತಬೂಮಿ ಯಾರ ಪಿತೃಭೂಮಿಯೆಂದರೆ, ಯಾರ ಪೂರ್ವಜರು ಇಲ್ಲಿಯೇ ಹುಟ್ಟಿದಾರೆಯೋ, ಮತ್ತು ಅವರಿಗೆ ಇದು ಪುಣ್ಯಭೂಮಿಯಾಗಿದೆಯೋ.ಯಾರಿಗೆ ಪುಣ್ಯ ತೀರ್ಥವು ಇದೇ ಭಾರತ ಭೂಮಿಯಾಗಿದೆಯೋ, ಅವರೇ ಹಿಂದೂಗಳು.”

19 ವೀರ ಸಾವರ್ಕರ್ ಒಬ್ಬ ಪ್ರಪ್ರಥಮ ರಾಷ್ಟ್ರಭಕ್ತ ಯಾರನ್ನು ಆಂಗ್ಲರು 30 ವರ್ಷಕಾಲ ಜೈಲಿನಲ್ಲಿ ಬಂಧಿಸಿಟ್ಟಿದ್ದರು. ಮತ್ತೆ ಸ್ವಾತಂತ್ರ್ಯಾನಂತರವೂ ನೆಹರೂ ಸರಕಾರವು 1948ರವರೆಗೆ ಕೆಂಪು ಕೋಟೆಯೊಳಗೆ ದೆಹಲಿಯಲ್ಲಿ ಬಂಧಿಸಿ ಇಟ್ಟಿದ್ದರು.ಆದರೆ ನ್ಯಾಯಾಲಯವು ಅವರ ಮೇಲಿನ ಆರೋಪಗಳು ಸುಳ್ಳು ಎಂದು ಸಾಬೀತಾದ ನಂತರ ಅವರನ್ನು ಸರ್ವಸಮ್ಮಾನದೊಡನೆ ಬಿಡುಗಡೆ ಮಾಡಿದರು. ವಿದೇಶೀಯ ಮತ್ತು ನಮ್ಮದೇ ದೇಶೀಯರು ಸರಕಾರಗಳು ಅವರ ರಾಷ್ಟ್ರವಾದೀ ವಿಚಾರಗಳಿಗೆ ಹೆದರುತ್ತಿದ್ದರು.

20.26 ಫೆಬ್ರವರಿ 1966 ರಲ್ಲಿ ವೀರ್ ಸಾವರ್ಕರ್ ಸ್ವರ್ಗಸ್ತರಾದಾಗ ಕೆಲವು ಸಂಸದರು ಭಾರತೀಯ ಸಂಸತ್ತಿನಲ್ಲಿ ಅವರಿಗೆ ಶೋಕ ವ್ಯಕ್ತಪಡಿಸುವ ಪ್ರಸ್ತಾವನೆ ಮಾಡಿದಾಗ ಅವರು ಈ ಸಂಸತ್ತಿನ ಸಂಸದರಲ್ಲ ಎನ್ನುವ ಕಾರಣ ಮುಂದಕ್ಕೊಡ್ಡಿ ಆ ಪ್ರಸ್ತಾವನೆಯನ್ನು ತಡೆದುಹಾಕಿದರು. ಆದರೆ ಚರ್ಚಿಲ್ ಸ್ವರ್ಗಸ್ತರಾದಾಗ ಅವರ ಸಾವಿಗೆ ಭಾರತೀಯ ಸಂಸತ್ತು ಶೋಕ ವ್ಯಕ್ತಪಡಿಸಿತು. ಇದೂ ಒಂದು ವಿಧದಲ್ಲಿ ಅವರ ಮೊದಲನೇಯ ಸಾಧನೇಯೇ ಸರಿ.

21.ಯಾವ ಸಂಸತ್ತಿನಲ್ಲಿ ಅವರು ಸ್ವರ್ಗಾಸ್ಥರಾದಾಗ ಅವರ ಪರ ಶೋಕ ವ್ಯಕ್ತಪಡಿಸಲು ವಿರೋಧ ವ್ಯಕ್ತವಾಗಿತ್ತೋ ಅದೇ ಸಂಸತ್ತಿನಲ್ಲಿ 26 ಫೆಬ್ರವರಿ 2003 ರಲ್ಲಿ ಅವರ ಮೂರ್ತಿ ಅನಾವರಣ ಮಾಡಲಾಯಿತು. ವೀರ್ ಸಾವರ್ಕರರಿಗೆ ಇದೂ ಒಂದು ಮೊದಲನೇಯ ಸಾಧನೆ ಎಂಬ ಹೆಗ್ಗಳಿಕೆ ಸಲ್ಲುತ್ತದೆ.

22. ಸಂಸದ ಭವನದಲ್ಲಿ ವೀರ್ ಸಾವರ್ಕರವರ ಭಾವಚಿತ್ರ ಹಾಕಲು ಪ್ರಸ್ತಾವನೆ ಮಾಡಿದಾಗ ಕಾಂಗ್ರೆಸ್ಸ್ ಅಧ್ಯಕ್ಷ ಸೋನಿಯಾ ಗಾಂಧಿ ತಮ್ಮ ಆಕ್ಷೇಪಣೆ ವ್ಯಕ್ತಪಡಿಸಿ ರಾಷ್ಟ್ರಪತಿ ಅಬ್ದುಲ್ ಕಲಾಮಿಗೆ ಪತ್ರ ಬರೆದರು. ಆದರೆ ರಾಷ್ಟ್ರಪತಿಗಳು ಆ ಪತ್ರವನ್ನು ಲೆಕ್ಕಿಸದೆ ತಮ್ಮ ಸ್ವಂತ ಕೈಗಳಿಂದ ಅವರ ಭಾವ ಚಿತ್ರವನ್ನು ಅನಾವರಣ ಗೊಳಿಸಿದರು. ಇಂಥಹ ಒಂದು ಪ್ರಕರಣವೂ ಮೊದಲನೇಯದೆ.
23.ಅಂಡಮಾನ್ ದ್ವೀಪದ ಸೆಲ್ಯುಲರ್ ಜೈಲಿನ ಹೊರಾಂಗಣದಲ್ಲಿರುವ ಕೀರ್ತಿ ಸ್ಥಂಬದಲ್ಲಿ ವೀರ್ ಸಾವರಕರವರ ಹೆಸರಿತ್ತು. ಕಾಂಗ್ರೆಸ್ಸ್ ಪಕ್ಷದ ಮಂತ್ರಿ ‘ಮಣೀ ಶಂಕರ್ ಐಯ್ಯರ್ ಅವರ ಹೆಸರನ್ನು ಅಲ್ಲಿ ಅಳಿಸಿ ಅಲ್ಲಿ ಗಾಂಧೀಯವರ ಹೆಸರನ್ನು ಬರೆಸಿದನು. ಈ ರೀತಿ ಸ್ವರ್ಗಾಸ್ತರಾದ ಮೇಲೆಯೂ ಒಬ್ಬ ಮಂತ್ರಿ ಯಾರದಾದರೂ ಕೀರ್ತಿಗೆ ಹೆದರಿದ್ದರೇ ಆ ಹೆದರಿಸಿರುವ ಮೊದಲನೇಯ ಹೆಗ್ಗಳಿಕೆಯೂ ವೀರ್ ಸಾವರ್ಕರಿಗೆ ಸೇರುತ್ತದೆ.

24. ವೀರ್ ಸಾವರಕರ್ ರವರು ಕಾಲಾಪಾನಿ ಜೈಲಿನಲ್ಲಿ ಹತ್ತು ವರ್ಷಕಾಲ ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ರಾಠೆಯನ್ನು ಎಳೆದು ಎಣ್ಣೆ ಉತ್ಪಾದನೆ ಮಾಡಿದ್ದರು. ಆದರೆ ಅದೇ ಜೈಲಿನಲ್ಲಿ ಗಾಂಧೀ ಹತ್ತು ನಿಮಿಷವೂ ದೇಶಕ್ಕಾಗಿ ಚರಕ ಚಲಾಯಿಸಲಿಲ್ಲ.


25.ವೀರ್ ಸಾವರ್ಕರ್  ಭಾರತಾಂಬೆಯ ಒಬ್ಬ ಮೊದಲ ಸುಪುತ್ರ, ಯಾರನ್ನು ಜೀವದಲ್ಲಿದ್ದಾಗ ಹಾಗೂ ಸತ್ತಮೇಲೆ ಮುಂದೆ ಬರುವುದರಿಂದ ತಡೆಗಟ್ಟಲ್ಪಟ್ಟರು. ಆದರೆ ಆಶ್ಚರ್ಯದ ಮಾತೇನೆಂದರೆ ಈ ಎಲ್ಲಾ ವಿರೋಧಿಗಳ ಕಗ್ಗತ್ತಲೆಯನ್ನು ಸೀಳಿ ಇವತ್ತವರು ಎಲ್ಲರಲ್ಲಿಯೂ ಲೋಕಪ್ರಿಯ ಮತ್ತು ಯುವ ಜನತೆಯ ಆದರ್ಶ ವ್ಯಕ್ತಿಯಾಗಿ ಬೆಳಕಿಗೆ ಬಂದಿದ್ದಾರೆ.
ವಂದೇ ಮಾತರಂ. ವಂದೇ ಮಾತರಂ. ವಂದೇ ಮಾತರಂ

Via what’s up