​ಬಿಗ್ ಬ್ರೇಕಿಂಗ್: ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಭಗ್ನ.??!!ಕಾರಣ ಏನು ಗೊತ್ತಾ..??

​ಬಿಗ್ ಬ್ರೇಕಿಂಗ್: ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಭಗ್ನ.??!!ಕಾರಣ ಏನು ಗೊತ್ತಾ..??

0

ರಾಹುಲ್ ಗಾಂಧಿ ಪ್ರಧಾನಿಯಾಗಲು ಯಾವಾಗಲೂ ಸಿದ್ಧವಾಗಿದ್ದಾರೆ. ಆದರೆ ಭಾರತದ ಪ್ರಜ್ಞಾವಂತ ಮತದಾರ ಅವರನ್ನು ಬರಮಾಡಿಕೊಳ್ಳಲು ಸಿದ್ಧವಾಗಿದ್ದಾನೆಯೇ..?? ಖಂಡಿತವಾಗಿ ಇಲ್ಲ..!!

ಅಷ್ಟಕು ರಾಹುಲ್ ಗಾಂಧಿ ಪ್ರಧಾನಿಯಾಗಲು ಸದ್ಯದ ಮಟ್ಟಿಗೆ ಏಕೆ ಸಾದ್ಯವಿಲ್ಲ…!!

2024ರ ನಂತರದಲ್ಲೂ ಮೋದಿಯೇ ಪ್ರಧಾನಿ..!!
ಹೌದು!! ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿ 2024ರ ನಂತರದಲ್ಲೂ  ಪ್ರಧಾನಿಯಾಗಿಯೇ ಮುಂದುವರೆಯಲಿದ್ದಾರೆ.


ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಮತ್ತು ಬಿಹಾರದ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು, ಜನಪ್ರಿಯತೆಗೆ ಒಂದಿಷ್ಟೂ ಧಕ್ಕೆಯಾಗಿಲ್ಲ.
ಅವರು 2019ರಲ್ಲಿ ಮತ್ತೊಮ್ಮೆ ಪ್ರಧಾನಿ ಹುದ್ದೆಗೇರುವ ಜತೆಗೆ, 2024ರ ನಂತರದಲ್ಲೂ ಪ್ರಧಾನಿಯಾಗಿ ಆಡಳಿತ ನಡೆಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಬ್ಲೂಮ್​ಗ್ ಸಂಸ್ಥೆಯ ಸಮೀಕ್ಷಾ ವರದಿ ತಿಳಿಸಿದೆ.
ಹೌದು!! ಪ್ರತಿಪಕ್ಷ ಕಾಂಗ್ರೆಸ್ ಸೇರಿ ಹಲವು ಪಕ್ಷಗಳಲ್ಲಿನ ಪ್ರಭಾವಿ ಮತ್ತು ವರ್ಚಸ್ವಿ ನಾಯಕರ ಕೊರತೆ ಇದಕ್ಕೆ ಕಾರಣ ಎಂದು ಸಮೀಕ್ಷಾ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಅದಲ್ಲದೆ ಈ ಮೊದಲು ಹಲವಾರು ಸಮೀಕ್ಷೆಗಳ ಪ್ರಕಾರ ಒಂದಲ್ಲ ಒಂದು ಸಮೀಕ್ಷೆಗಳು ಮೋದಿ ರಾಜತಾಂತ್ರಿಕತೆಯ ಬಗ್ಗೆ ಹೊಗಳಿದ್ದಲ್ಲದೆ ಯಾವ ಸಮೀಕ್ಷೆಯೂ ಇಲ್ಲಿಯವರೆಗೆ ತೆಗಳಿದ್ದಿಲ್ಲ!!
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಇತ್ತೀಚೆಗಷ್ಟೇ ಜೀವಿತಾವಧಿ ಅಧ್ಯಕ್ಷರಾಗಿ ಮುಂದುವರಿಯಲು ಅವಕಾಶ ಗಿಟ್ಟಿಸಿಕೊಂಡಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್​ನ ಸವೋಚ್ಚ ನಾಯಕ ಆಯತುಲ್ಲಾ ಖೋಮೇನಿ, ಫ್ರಾನ್ಸ್​ನ ಇಮ್ಯಾನುಯಲ್ ಮಾಕ್ರಾನ್, ಇಸ್ರೇಲ್​ನ ಬೆಂಜಮಿನ್ ನೆತನ್ಯಾಹು ಸೇರಿ ವಿಶ್ವದ 16 ನಾಯಕರ ಕುರಿತು ವರದಿಯಲ್ಲಿ ವಿಶ್ಲೇಷಿಸಲಾಗಿದೆ.


ಜನಪ್ರಿಯತೆಯಲ್ಲಿ ಮೋದಿ ಮುಂದು..!!
ಪಿಯು ರಿಸರ್ಚ್ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಶೇ. 88 ಇದ್ದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಪ್ರಿಯತೆ ಶೇ. 58 ಇದೆ. ಶೇ.39 ಜನಪ್ರಿಯತೆಯೊಂದಿಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೊನೆಯ ಸ್ಥಾನದಲ್ಲಿದ್ದಾರೆ.
ಇಡೀ ಜಗತ್ತಿನಲ್ಲಿ ಮೋದಿ ವರ್ಚಸ್ಸು ಹರಿಡಿದು ಮೋದಿ ಅವರ ಹಲವು ನಿರ್ಧಾರಗಳು ಜಗತ್ತಿಗೆ  ಹಲವು ಸಂದೇಶಗಳು ರವಾನೆಯಾಗಿವೆ.


ಬೆಂಜಮಿನ್ ನೆತನ್ಯಾಹು..!!
ಇಸ್ರೇಲ್​ನ ಪ್ರಧಾನಿಯಾಗಿರುವ ಬೆಂಜಮಿನ್ ನೆತನ್ಯಾಹು ಸಾಕಷ್ಟು ವಿವಾದಗಳ ಸುಳಿಗೆ ಸಿಲುಕಿದ್ದಾರೆ. ಇದರಿಂದಾಗಿ ಪೊಲೀಸರ ವಿಚಾರಣೆಗೆ ಒಳಪಡುವ ಅಪಾಯವಿದೆ. ಒಂದು ವೇಳೆ ಇದರಿಂದ ಪಾರಾಗಲು ಸಾಧ್ಯವಾದರೆ, 2019ರ ನಂತರದಲ್ಲಿ ನಾಲ್ಕು ವರ್ಷಗಳ ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಮುಂದುವರಿಯಬಹುದು.

ಕ್ಸಿ ಜಿನ್​ಪಿಂಗ್..!!
ಚೀನಾದ ಜೀವಿತಾವಧಿ ಅಧ್ಯಕ್ಷರಾಗಿರುವ ಕ್ಸಿ ಜಿನ್​ಪಿಂಗ್ ಇನ್ನೊಂದು ದಶಕ ಕಾಲ ಅಧ್ಯಕ್ಷರಾಗಿ ಆಡಳಿತ ನಡೆಸುವ ಸಾಧ್ಯತೆ. ಆರೋಗ್ಯ ಉತ್ತಮವಾಗಿದ್ದರೆ, 2030ರವರೆಗೂ ಅಧಿಕಾರ ನಡೆಸಬಹುದು.


ಕಿಮ್ ಜಾಂಗ್ ಉನ್..!!
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರನ್ನು ಬಲವಂತವಾಗಿ ಅಧಿಕಾರದಿಂದ ಕೆಳಗಿಳಿಸುವವರೆಗೂ ಅವರ ಆಡಳಿತ ಅಬಾಧಿತವಾಗಿರುತ್ತದೆ. ಇದಕ್ಕಾಗಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಒಟ್ಟಾಗಿ ವಿಶೇಷ ಮಿಲಿಟರಿ ಕಾರ್ಯಾಚರಣೆ ಮಾಡಬೇಕಾಗುತ್ತದೆ.

ಶಿಂಜೊ ಅಬೆ..!!
ಜಪಾನ್​ನ ಪ್ರಧಾನಿಯಾಗಿ ಈಗಾಗಲೆ 6 ವರ್ಷ ಆಡಳಿತ ನಡೆಸಿರುವ ಶಿಂಜೊ ಅಬೆ ಕೂಡ ಭೂವಿವಾದದಲ್ಲಿ ಸಿಲುಕಿದ್ದಾರೆ. ಹೀಗಾಗಿ ಅವರು ತಮ್ಮ ಆಡಳಿತಾವಧಿ ಮುಗಿವ ಮುನ್ನವೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.


ಡೊನಾಲ್ಡ್ ಟ್ರಂಪ್..!!
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಬಳಿಕ ಅಮೆರಿಕದ ಮಾರುಕಟ್ಟೆಯಲ್ಲಿ ಏರಿಕೆ ಕಂಡುಬಂದಿದೆ. ನಿರುದ್ಯೋಗ ಸಮಸ್ಯೆ ಕಳೆದ 17 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಆದರೂ, ಅವರ ಜನಪ್ರಿಯತೆ ಕುಸಿಯುತ್ತಿರುವುದರಿಂದ, ಪ್ರಸಕ್ತ ಅವಧಿ ನಂತರದಲ್ಲಿ ಅವರು ಅಧ್ಯಕ್ಷರಾಗಿ ಮುಂದುವರಿವ ಸಾಧ್ಯತೆ ಕಡಿಮೆ.


ವ್ಲಾದಿಮಿರ್ ಪುತಿನ್..!!
ಕಳೆದ 18 ವರ್ಷಗಳಿಂದ ರಷ್ಯಾದ ಅಧ್ಯಕ್ಷರಾಗಿರುವ ವ್ಲಾದಿಮಿರ್ ಪುತಿನ್ 6 ವರ್ಷಗಳ ಮತ್ತೊಂದು ಅವಧಿಗೆ ಮರುಆಯ್ಕೆಯಾಗುವುದು ಬಹುತೇಕ ನಿಶ್ಚಿತ. ಆದರೆ, ರಷ್ಯಾದ ಸಂವಿಧಾನದ ಪ್ರಕಾರ 2024ಕ್ಕೆ ಈ ಹುದ್ದೆಯಿಂದ ಕೆಳಗಿಳಿದರೂ, ತಮಗೆ ಬೇಕಾದ ವ್ಯಕ್ತಿಯನ್ನು ಆ ಸ್ಥಾನದಲ್ಲಿ ಕೂರಿಸಿ, ಪರೋಕ್ಷವಾಗಿ ಆಡಳಿತ ನಡೆಸುವ ಸಾಧ್ಯತೆ.


ಬ್ಲೂಮ್​ಗ್ ಸಂಸ್ಥೆಯ ಸಮೀಕ್ಷಾ ವರದಿ ಆಧಾರಿಸಿ ಹೇಳುವುದಾದರೆ ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು, ಕನಸಾಗಿಯೆ ಉಳಿಯಲಿದೆ ಎಂದು ಹೇಳಿದರೆ ತಪ್ಪಾಗಲಾರದು.
ಮೋದಿ ಭಾರತಕ್ಕೆ ಸಿಕ್ಕ ಪುಣ್ಯಾತ್ಮ,ಭಾರತದಲ್ಲಿರುವ ಪ್ರತಿಯೊಂದು ಸಮಸ್ಯೆಗಳನ್ನು ಒಂದಾದ ಮೇಲೆ ಒಂದು ಎಲ್ಲವೂ ಪರಿಹರಿಸುವ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಮೋದಿ ಭಾರತವನ್ನು ವಿಶ್ವಗುರು ಮಾಡಲು ಹೊರಟಿದ್ದು ಅದರಲ್ಲಿ ಅಕ್ಷರಶಃ ಯಶಸ್ಸು ಗಳಿಸಿದ್ದಾರೆ.ಹಾಗೆಯೇ ಜಗತ್ತಿಗೆ ಭಾರತ ಏನು ಎಂಬುವುದು ಅರ್ಥ ಮಾಡಿಸಿದ್ದಾರೆ.ಈಗಾಗಲೇ 22 ರಾಜ್ಯಗಳಲ್ಲಿ ವಿಜಯದ ಪತಾಕೆ ಹಾರಿಸಿದ್ದು ಮುಂದಿನ ದಿನಗಳಲ್ಲಿ ಉಳಿದ ರಾಜ್ಯದಲ್ಲಿ ಕೂಡ ಬಿಜೆಪಿ ಅಧಿಕಾರಕ್ಕೆ ತರುವ ಕಾಲ ಸನಿಹ ಬಂದಿದೆ ಎನ್ನಬಹುದು.

Source:Vijayvani