ಛತ್ತೀಸ್‍ಗಢ:ನಕ್ಸಲ್ ದಾಳಿಯಲ್ಲಿ ಹಾಸನ ಮೂಲದ ಸಿಆರ್’ಪಿಎಫ್ ಯೋಧ ಹುತಾತ್ಮ..!!

ಛತ್ತೀಸ್‍ಗಢ:ನಕ್ಸಲ್ ದಾಳಿಯಲ್ಲಿ ಹಾಸನ ಮೂಲದ ಸಿಆರ್’ಪಿಎಫ್ ಯೋಧ ಹುತಾತ್ಮ..!!

0

ಅರಕಲಗೂಡು ತಾಲೂಕಿನ ಹರದೂರು ಗ್ರಾಮದ ಚಂದ್ರು (29) ಮೃತ ಯೋಧ. ಸುಕ್ಮಾ ಎಂಬ‌ಲ್ಲಿ ನಡೆದ ಕೆಂಪು ಉಗ್ರರ ದಾಳಿಯಲ್ಲಿ ಸಿಡಿಮದ್ದು‌ ಸ್ಫೋಟಿಸಿದ ಪರಿಣಾಮ ಹುತಾತ್ಮರಾಗಿದ್ದಾರೆ. ಕುಟುಂಬದಲ್ಲಿ ಮಡುಗಟ್ಟಿದ ಮೌನ.

ನಕ್ಸಲರು CRPF ನ ಬೆಟಲಿಯನ್ ಮುಖ್ಯ ವಾಹನದ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸುಮಾರು 9 ಯೋಧರು ಮೃತಪಟ್ಟು, 6 ಯೋಧರು ತೀವ್ರವಾಗಿ ಗಾಯಗೊಂಡಿದ್ದರು.
ಕೆಲ ತಿಂಗಳಿಂದ CRPF ಯೋಧರು ನಡೆಸುತ್ತಿರುವ ನಕ್ಸಲ್ ವಿರುದ್ಧ ಕಾರ್ಯಾಚರಣೆಯನ್ನು ಗುರಿಯಾಗಿಸಿಕೊಂಡು ಸುಧಾರಿತ ತಂತ್ರಜ್ಞಾನದ ಸ್ಫೋಟಕ (ಐಇಡಿ) ಬಳಸಿ ದಾಳಿ ನಡೆಸಿದ್ದರು. ನಕ್ಸಲರು ಅಧಿಕ ಪ್ರಮಾಣದ ಸ್ಫೋಟಕವನ್ನು ಬಳಕೆ ಮಾಡಿ ಸ್ಫೋಟ ನಡೆಸಿದ್ದು, ಘಟನೆಯಲ್ಲಿ ಗಾಯಗೊಂಡಿರುವ 6 ಯೋಧರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತದೆ.


ಕಳೆದ 11 ದಿನಗಳ ಹಿಂದೆ ಯೋಧರು ನಕ್ಸಲರು ವಿರುದ್ಧ ಕಾರ್ಯಾಚರಣೆ ನಡೆಸಿ 11 ಮಂದಿಯನ್ನು ಹತ್ಯೆ ಮಾಡಿದ್ದರು. ಇದಾದ ಬಳಿಕ ಯೋಧರ ಮೇಲೆ ದಾಳಿ ನಡೆಸಲಾಗಿದೆ. ಛತ್ತೀಸ್‍ಗಢದಲ್ಲಿ ಆರು ತಿಂಗಳಿನಿಂದ  ಸರಿಸುಮಾರು 25 ಕ್ಕೂ ಹೆಚ್ಚು CRPF ಯೋಧರು ಮೃತಪಟ್ಟಿದ್ದಾರೆ. ಅದರೂ ಪಟ್ಟು ಬಿಡದೆ ಯೋಧರು ನಕ್ಸಲರ್ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಯಶ್ವಸಿಯಾಗಿದ್ದು, ಸುಮಾರು 300 ಕ್ಕೂ ಹೆಚ್ಚು ನಕ್ಸಲರನ್ನು ಎನ್‍ಕೌಂಟರ್ ಮಾಡಲಾಗಿದೆ ಎಂದು ಛತ್ತೀಸ್‍ಗಢ ಗೃಹ ಸಚಿವರು ಮಾಹಿತಿ ನೀಡಿದ್ದಾರೆ.

ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸಲ್ಲಿಸಿದ್ದು, ಕೆಚ್ಚೆದೆಯ ಯೋಧರಿಗೆ ದೇಶ ಸೆಲ್ಯೂಟ್ ಹೊಡೆಯುತ್ತಿದೆ. ಹುತಾತ್ಮ ಯೋಧರ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ದೇಶ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ ಎಂದು ಸಾಂತ್ವನ ಹೇಳಿ ಟ್ವೀಟ್ ಮಾಡಿದ್ದಾರೆ.