​ಸರಿ ದಾರಿಯಲ್ಲಿ ಮುನ್ನಡೆಸುವ ದಾರಿದೀಪ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ…!!

​ಸರಿ ದಾರಿಯಲ್ಲಿ ಮುನ್ನಡೆಸುವ ದಾರಿದೀಪ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ…!!

0

ಅದೊಂದು ಸಣ್ಣ ಕುಟುಂಬ ತಂದೆ ತಾಯಿ ಮಗ….ಮೂರು ಜನರಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡ ಕುಟುಂಬ,
ಆದ್ರೆ  ಅಲ್ಲಿ ಪ್ರೀತಿ, ಸಂತೋಷಕ್ಕೆನೂ ಕೊರತೆ ಇರಲಿಲ್ಲ…ಮಗನನ್ನು ಮುದ್ದು ಮಾಡೋದು..ಮಗನ ಜೊತೆ ಆಟ ಅಡೋದು,ಹಬ್ಬ ಬಂದಾಗ ಪಾಯಸ ಮಾಡಿ ತಿನ್ನೋದು.ಇದೆಲ್ಲಾ ಮಮೂಲಿ ಆಗಿತ್ತು..
ಅದಾಗಲೇ ಸಂಜೆ..ಮುಂಗಾರಿನ ಸಮಯ…ಸಿಕ್ಕಾಪಟ್ಟೆ ಸಿಡಿಲು, ಮಿಂಚು,ಗಾಳಿ ಸಹಿತ ಭಾರಿ ಮಳೆ…. ಮನೆಯಿಂದ ಹೊರಗೆ ಹೋಗಲಾಗದಷ್ಟು ಮಳೆ…!!

ಮನೆಯ ಯಜಮಾನ ಶಿವಪ್ಪಾ ಕಷ್ಟಪಟ್ಟು ದುಡಿಯುವ ನಿಷ್ಠಾವಂತ ಕೃಷಿಕಾರ್ಮಿಕ.. ಕೃಷಿಯ ಕೆಲ್ಸ ಮುಗಿಸಿ ಮನೆಗೆ ಮಳೆಗೆ ನೆನೆದುಕೊಂಡು..ಬಂದರು.

ಸಣ್ಣ ಗುಡಿಸಲು ಅದು, ಕೋಣೆ ಒಂದೇ..ಅಡುಗೆ ಮನೆಯು ಅದೇ ಮಲಗುವ ಕೋಣೆಯೂ ಅದೇ..ಎಲ್ಲವೂ ಅಲ್ಲೇ…ಸಿಕ್ಕಾಪಟ್ಟೆ..ಮಳೆಗೆ ಮನೆ ಸೂರುತಿದೇ,ಮನೆಯೊಳಗೆ ನೀರು… ಸಾಲ ಮಾಡಿ ತಂದಿದ್ದ ಅಕ್ಕಿ ಸಾಮಾನುಗಳು ನೀರಲ್ಲಿ ಒದ್ದೆಯಾಗಿದೆ… ಮಗನ ಶಾಲೆಯ ಬ್ಯಾಗ್ ನೀರಲ್ಲಿದೆ… ಮನೆ ರಿಪೇರಿ ಮಾಡಲು ಹಣ ಇಲ್ಲ ಅಷ್ಟು ಬಡತನ ಅವರದ್ದು..

ಹೆಂಡತಿಯ ಕಟ್ಟಿದ ಬೀಡಿಯೂ ಒದ್ದೆಯಾಗಿ ಹೋಗಿ ಬಿಟ್ಟಿದೆ….. ಹೀಗೂ ಒಂದು ಕುಟುಂಬ ಈ 21 ಶತಮಾನದಲ್ಲಿ ಇದೇಯಾ? ಅಂತ ನಿಮಿಗೆ ಅನಿಸಬಹುದು ಅಲ್ವಾ? ಈ ಬಡ ಕುಟುಂಬ …ಇರುವುದು ನಿಜ…ಅದು ನಮ್ಮ ಕಲ್ಲಡ್ಕದ ಸಮೀಪ !
ತನ್ನ ಮುದ್ದಿನ ಮಗನನ್ನು ಶಾಲೆಗೆ ಕಳುಹಿಸಿ ದೇಶ ರಕ್ಷಣೆಯ ಸೈನಿಕನಾಗಿ ಮಾಡಬೇಕೆನ್ನುವುದು ಶಿವಪ್ಪನ ಉದ್ದೇಶ.

ತನ್ನ ಗುಡಿಸಲಿನ ಪಕ್ಕದ ಸರಕಾರಿ ಪ್ರಾಥಮಿಕ ಶಾಲೆಗೆ ತನ್ನ ಮಗನನ್ನು ಸೇರಿಸಿದರು.. ಮಗ ಚೆನ್ನಾಗಿಗೆ ಓದುತ್ತಿದ್ದ… ಮಗನ ತರಗತಿಯಲ್ಲಿದದ್ದು ಅಧಿಕ ಮುಸ್ಲಿಂ ಹುಡುಗರು…5ನೇ ತರಗತಿಯಲ್ಲಿ ಆ ಹುಡುಗನ ನಡತೆಯೇ ಬದಲಾಯ್ತು.. ಪಕ್ಕದ ಗೂಡಂಗಡಿಯಿಂದ ತಿಂಡಿ ಕದ್ದು ಸಿಕ್ಕಿಬಿದ್ದು ಪೆಟ್ಟು ಕೂಡ ತಿಂದ… ಮೊಬೈಲ್ ಕದಿಯೋದು.. ಅಪ್ಪನ ಕಿಸೆಯಿಂದ ಹಣ ಕದಿಯೋದು.. ಅಪ್ಪನಿಗೆ ಬೇಡದ ಪದದಿಂದ ಬಯ್ಯೊದು…

ಮುಂತಾದವುಗಳು ಅವನ ದಿನ ನಿತ್ಯದ ಕೆಲ್ಸ ಆಗಿತ್ತು…ಅದಾಗಲೇ ಶಿವಪ್ಪ ಕೂಡ ಕೆಟ್ಟ ಅಭ್ಯಾಸವನ್ನೊಂದನ್ನು ಮೈಗೂಡಿಸಿಕೊಂಡಿದ್ದ.. ಬೆಳಗಿನಿಂದ ಸಂಜೆ ವರೆಗೆ ಕಷ್ಟಪಟ್ಟು ದುಡಿದು ಆ ಹಣದಲ್ಲಿ ಕಂಠಪೂರ್ತಿ ಕುಡಿದು ಮನೆಗೆ ಬಂದು ಹೆಂಡತಿ ಮಗನಿಗೆ ಹೊಡೆಯಲು ಪ್ರಾರಂಭಿಸಿದ…ಮಗನನ್ನು ತಿದ್ದುವ ಬದಲು ಶಿವಪ್ಪನೆ ತಪ್ಪು ದಾರಿ ಹಿಡಿದುಬಿಟ್ಟ..  ಗಂಡ ಮಗನ ಅವಸ್ಥೆ ನೋಡಿ ಕಣ್ಣಲ್ಲಿ ನೀರು ಬಾರದಂತೆ ಮನಸ್ಸಿನೊಳಗೆ ಅಳುವ ಹೆಂಡತಿ…

ಹೀಗೆ ಒಂದು ದಿನ ಮಗನ ಕಳ್ಳತನ ಲೂಟಿ ಅತಿಯಾಯಿತು..

ಮಗನ ಈ ಅವಸ್ಥೆ ನೋಡಿ ಶಿವಪ್ಪನಿಗೆ ಕೋಪ ಬಂದು ಎರಡು ಹೊಡೆದೆ ಬಿಟ್ಟ.. ಮುಸ್ಲಿಂ ಪೊಲೀ ಹುಡುಗರ ಸಂಗ ಬಿಡಲು ಹೇಳಿದರು.. ಆದ್ರೆ ಮಗನಲ್ಲಿ ಯಾವುದೇ ಬದಲಾವಣೆ ಕಾಣಲೇ ಇಲ್ಲ..ಕಳ್ಳತನ ಅತಿಯಾಯಿತು.ಎನ್ ಮಾಡೋದು ಅಂತ ಚಿಂತೆಯಲ್ಲಿದ್ದ ಶಿವಪ್ಪ…
ಶ್ರೀರಾಮ ವಿದ್ಯಾ ಕೇಂದ್ರದ ಬಗ್ಗೆ ತಿಳಿದ್ದಿದ್ದ ಶಿವಪ್ಪ ತನ್ನ ಮಗನನ್ನು 6ನೇ ತರಗತಿಗೆ ಶ್ರೀರಾಮ ಶಾಲೆಗೆ ಸೇರಿಸಿದರು…

ಶಾಲೆಗೆ ಸೇರಿಸಿದ ನಂತ್ರ ಅವ್ರ ಮಗನ ನಡತೆಯಲ್ಲಿ ಸಾಕಷ್ಟು ಬದಲಾವಣೆಗಳಾದವು ,ಕಳ್ಳತನ ಮಾಡುತಿದ್ದ ಹುಡುಗ ಸಹಾಯ ಮಾಡಲು ಕಲಿತಿದ್ದಾನೆ… ವೇದಿಕೆಯಲ್ಲಿ ನಿಂತು ಗಟ್ಟಿಯಾಗಿ ಮಾತಾಡಲು ಕಲಿತಿದ್ದಾನೆ…..ಎಲ್ಲಾ ವಿಷಯದಲ್ಲೂ ಹಿಂದೆ ಬಿದ್ದಿ ಬಿದ್ದಿದಾತ.. ಶ್ರೀರಾಮ ಸಂಸ್ಥೆಗೆ ಬಂದಮೇಲೆ 100 ಕ್ಕೆ 100 ಬದಲಾದ…

ಇಷ್ಟೆಲ್ಲ ನಡಿವಾಗ.. ವಿಪರೀತವಾಗಿ ಕುಡಿತಾ ಇದ್ದ ಶಿವಪ್ಪ ವಿಧಿವಶರಾಗುತ್ತಾರೆ.. ತನ್ನ ಮಗ ಸೈನಿಕನಾಗಬೇಕೆಂಬುದು ಆ ಬಡ ಜೀವದ ಶ್ರೀಮಂತ ಆಸೆ ಆಗಿತ್ತು…!
ಇದ್ದಕ್ಕಿದಂತೆ ಶಾಲೆಯಲ್ಲಿ ಮಕ್ಕಳ ಪೋಷಕರ ಸಭೆಯೊಂದನ್ನು ಅಲ್ಲಿನ ಮುಖ್ಯಗುರುಗಳಾದ ರವಿರಾಜ್ ಶ್ರೀಮಾನ್ ಅವರು ಕರೆದಿದ್ದಾರೆ..ಸುಮಾರು 900 ವಿದ್ಯಾರ್ಥಿಗಳ ಪೋಷಕರು ಸಭೆಯಲ್ಲಿದ್ದರು… ಶಾಲಾ ಆರ್ಥಿಕ ವಿಚಾರವನ್ನು ವಿವರಿಸುತ್ತಾ “ನಾವು ಒಬ್ಬ ವಿದ್ಯಾರ್ಥಿಗೆ ವಾರ್ಷಿಕವಾಗಿ 6ಸಾವಿರದಷ್ಟು ಹಣವನ್ನು ಖರ್ಚು ಮಾಡುತ್ತೇವೆ,ಪೋಷಕರು ತಮ್ಮ ಕೈಯಲ್ಲಿ ಆದಷ್ಟು ಆರ್ಥಿಕ ಸಹಾಯ ಮಾಡಬೇಕೆಂದು” ರವಿರಾಜ್ ಶ್ರೀಮಾನ್ ಕೇಳಿಕೊಂಡರು..ಆ ಸಭೆಯಲ್ಲಿ ಶಿವಪ್ಪ ಅವರ ಹೆಂಡತಿ ಕೂಡ ಬಾಗವಹಿಸಿದ್ದರು…!

2ದಿನ ಕಳೆದು ಮತ್ತೆ ಶಾಲೆಗೆ ಬಂದ ಆ ಹೆಂಗಸು ಕಷ್ಟಪಟ್ಟು ದುಡಿದ್ದಿದ್ದ 1000 ರೂಪಾಯಿ ಹಣವನ್ನು ಸಂಸ್ಥೆ ಗೆ ದಾನವಾಗಿ ನೀಡಿದರು..ಆಗ ಅವರು ಹೇಳಿದ ಮಾತು ” ಆರ್ ಈ ಭೂಮಿಡ್ ಇಜ್ಜೆರ್,ಸಯ್ಯಾರಾಣಗ ಶ್ರೀರಾಮನೆ ಆರೆಗ್ ಬುದ್ದಿ ಕೋರ್ನಿ ,ಮಗನ್ ಈ ಶಾಲೆಗ್ ಸೇರಿಸವರ” (ಅವ್ರು ಈ ಭೂಮಿ ಮೇಲೆ ಇಲ್ಲ,ಶ್ರೀರಾಮ ನೆ ಬುದ್ದಿ ಕೊಟ್ಟದು ಅವ್ರಿಗೆ ಮಗನನ್ನು ಈ ಶಾಲೆಗೆ ಸೇರಿಸಲು)ಅಂತ ತನ್ನ ಗಂಡನ ಕುರಿತು ಕಣ್ಣಿರು ಹಾಕುತ್ತ ತುಳುವಲ್ಲಿ ಹೇಳಿದ್ರು..!


ಈ ತಾಯಿ ಯ ಮಾತಿನಿಂದ ಅರ್ಥವಾಗುವ ಅಂಶ ಏನಂದ್ರೆ ಮಗ ಈಗ ಅದರ್ಶವಾಗಿ ಓದುತ್ತಿದ್ದಾನೆ.. ಮತ್ತು ಅವನ ತಂದೆ ಸಾಯುವ ಮೊದಲು ಅವನನ್ನು ಈ ಶಾಲೆಗೆ ಸೇರಿಸಿ ಒಳ್ಳೆಯ ಕೆಲ್ಸ ಮಾಡಿದ್ರು…ಇದ್ರಿಂದ ಶಾಲೆಗೆ ಬಂದ ಮೇಲೆ ಮಗನಲ್ಲಿ ಆದ ಬದಲಾವಣೆ ಎಷ್ಠಿರಬಹುದು ಎಂಬುದನ್ನು ನಾವು ತಿಳಿಯಬಹುದು…

ಆ ಹುಡುಗ ಈಗ ಕೂಡ ಶ್ರೀ ರಾಮ ವಿದ್ಯಾ ಸಂಸ್ಥೆ ಯ ವಿದ್ಯಾರ್ಥಿ…!

ಆತ ಒಳ್ಳೆ ರೀತಿಯಿಂದ ಓದಿ ಸೈನಿಕನಾಗಬೇಕೆಂಬುದು ನನ್ನ ಆಶಯ…ಕೂಡ!
ನಿಮ್ಮ ಆಶಯವೂ ಕೂಡ ಅದೇ ತಾನೇ? ಹಾಗಿದ್ರೆ ಶೇರ್ ಮಾಡಿ ಬಿಡಿ …

ಧನ್ಯವಾದಗಳು…….
-ಸಚಿನ್ ಜೈನ್ ಹಳೆಯೂರು