ಬ್ರೇಕಿಂಗ್ ನ್ಯೂಸ್: ಮೋದಿ ಸರ್ಕಾರದಿಂದ ಯೋಧರಿಗೆ ಭರ್ಜರಿ ಉಡುಗೊರೆ: ಶೇ.30 ರಷ್ಟಿದ್ದ ಪಿಂಚಣಿ ಶೇ.100 ಕ್ಕೆ ಏರಿಕೆ…!!

ಬ್ರೇಕಿಂಗ್ ನ್ಯೂಸ್: ಮೋದಿ ಸರ್ಕಾರದಿಂದ ಯೋಧರಿಗೆ ಭರ್ಜರಿ ಉಡುಗೊರೆ: ಶೇ.30 ರಷ್ಟಿದ್ದ ಪಿಂಚಣಿ ಶೇ.100 ಕ್ಕೆ ಏರಿಕೆ…!!

0

ನಾವು ಭಾರತೀಯರು ಬೆಳಗಾದರೆ ದೇವರನ್ನ ಪೂಜಿಸುತ್ತೇವೆ, ಮಲಗಬೇಕಿದ್ದರೂ ದೇವರನ್ನ ನೆನೆದು ಮಲುಗುತ್ತೇವೆ. ಆದರೆ ಆ ದೇವರು ಎಲ್ಲಿದ್ದಾನೆ ಅನ್ನೋದು ಮಾತ್ರ ನಮ್ಮ ಕಣ್ಣಿಗೆ ಕಾಣಲ್ಲ.

ದೇವರೆಂದರೆ ಆತ ಕಣ್ಣಿಗೆ ಕಾಣದ ಶಕ್ತಿ ಅಂತಲೇ ನಾವು ಭಾವಿಸಿದ್ದೇವೆ ಆದರೆ ನಮ್ಮನ್ನ ಸದಾ 24/7 ಕಾಪಾಡುತ್ತಿರೋ ದೇವರ ಬಗ್ಗೆ ನಮಗೆಷ್ಟು ಗೊತ್ತು? ದೇಶದ 125 ಕೋಟಿ ಜನರು ಆರಾಮಾಗಿ ಬದುಕುತ್ತಿದ್ದಾರೆ, ಶಾಂತಿಯುತವಾಗಿ ತಮ್ಮತಮ್ಮ ಬಾಳ್ವೆ ನಡೆಸುತ್ತಿರೋದಕ್ಕೆ ತನ್ನ ಜೀವವನ್ನ ಪಣಕ್ಕಿಟ್ಟು ನಮ್ಮನ್ನ ಕಾಪಾಡುತ್ತಿರೋ ಆ ದೇವರು ಮತ್ಯಾರೂ ಅಲ್ಲ ಅದೇ ನನ್ನ ದೇಶದ ಸೈನಿಕ!!

ತಾಯಿ ಭಾರತಾಂಬೆಗಾಗಿ ಗಡಿಯಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲೂ ಹಗಲಿರುಳು ದುಡಿಯುತ್ತಿರುವ ಆ ಸೈನಿಕರಿಗೆ ಮೋದಿ ಸರ್ಕಾರದಿಂದ ಭರ್ಜರಿ ಉಡುಗೊರೆ ನೀಡಲಾಗಿದೆ.

ಅಷ್ಟಕು ಮೋದಿ ಸರ್ಕಾರದಿಂದ ಯೋಧರಿಗೆ ಭರ್ಜರಿ ಉಡುಗೊರೆ ಏನು..!!

ಭಾರತ-ಚೀನಾ ಗಡಿ ಕಾಯುತ್ತಿರುವ ಸೈನಿಕರ ಕುಟುಂಬಗಳಿಗೆ ಶೇ. 100ರಷ್ಟು ಪಿಂಚಣಿ ಸೌಲಭ್ಯ ನೀಡುವುದಾಗಿ ಶನಿವಾರ ಘೋಷಿಸಿದ ಕೇಂದ್ರ ಸರ್ಕಾರ ಸೈನಿಕರಿಗೆ ಭರ್ಜರಿ ಉಡುಗೊರೆಯನ್ನು ನೀಡಿದೆ.

ಒಂದು ವೇಳೆ ಸೈನಿಕರು ಹುತಾತ್ಮರಾದರೆ ಅಥವಾ ಗಾಯಗೊಂಡರೆ ಅವರ ಕುಟುಂಬಗಳಿಗೆ ಶೇ.100ರಷ್ಟು ಪಿಂಚಣಿ ಸೌಲಭ್ಯ ನೀಡಲಾಗುತ್ತದೆ. ಈ ಮೂಲಕ ಭಾರತ-ಚೀನಾ ಗಡಿಯಲ್ಲಿ ಭದ್ರತೆ ಹೆಚ್ಚಳದ ಜತೆಗೆ, ಸೈನಿಕರಿಗೆ ಮಾನಸಿಕ ಸ್ಥೈರ್ಯ ತುಂಬುವುದು ಈ ಯೋಜನೆಯ ಉದ್ದೇಶವಾಗಿದೆ.

ಡೋಕ್ಲಾಮ್ ಬಿಕ್ಕಟ್ಟಿಗೆ ಬ್ರೇಕ್ ಬಿದ್ದು 8 ತಿಂಗಳ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಹಿಂದೆ ಸೈನಿಕರ ಕುಟುಂಬಗಳಿಗೆ ಶೇ. 30ರಷ್ಟು ಪಿಂಚಣಿ ಸೌಲಭ್ಯ ಮಾತ್ರ ನೀಡಲಾಗುತ್ತಿತ್ತು.

ರಕ್ಷಣಾ ಇಲಾಖೆಯ ಅಧಿಸೂಚನೆಯಂತೆ ಈ ನೂತನ ಭಾರತ-ಚೀನಾ ಗಡಿ ಕಾಯುತ್ತಿರುವ ಸೈನಿಕರ ಕುಟುಂಬದ ಪಿಂಚಣಿ ಯೋಜನೆ ಮಾರ್ಚ್ 7ರಿಂದ ಜಾರಿಗೆ ಬರಲಿದೆ. ಈ ಹಿಂದೆ ಭಾರತ-ಪಾಕಿಸ್ತಾನ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಎಷ್ಟೆ ಕಷ್ಟ ಇದ್ರೂ, ದೇಶಕ್ಕಾಗಿ, ನಮಗಾಗಿ, ಛಲಬಿಡದೆ ನಮ್ಮನ್ನ ಕಾಯುತ್ತಿರೋರು ನಮ್ಮ ಹೆಮ್ಮೆಯ, ಕೆಚ್ಚೆದೆಯ ಭಾರತೀಯ ಸೈನಿಕರು.

ನಾವು ಪ್ರತಿರಾತ್ರಿ ನೆಮ್ಮದಿಯಿಂದ ರಗ್ ಹೊದ್ದುಕೊಂಡು ಮಲಗ್ತಿದೀವಿ ಅಂದ್ರೆ ಅದಕ್ಕೆ ಕಾರಣನೇ ನಮ್ಮ ಭಾರತೀಯ ಸೇನೆ ಹಾಗೂ ನಮ್ಮ ಸೈನಿಕರು.

ಭಾರತೀಯ ಸೈನಿಕ ಧೀರರಿಗೆ ನಮ್ಮದೊಂದು ಸೆಲ್ಯೂಟ್!!!