ದೇಶದಲ್ಲಿ ಬಿಜೆಪಿ ಮತ್ತು ಆರ್​ಎಸ್​ಎಸ್​ನ ಸಂಘಟನಾ ಶಕ್ತಿಯ ಎದುರು ಕಾಂಗ್ರೆಸ್​ನ ಸಂಘಟನಾ ಶಕ್ತಿ ಲೆಕ್ಕಕ್ಕಿಲ್ಲ..!

ಆರೆಸ್ಸೆಸ್‌ ಶಾಖೆಗಳ ಸಂಖ್ಯೆ ಹೆಚ್ಚಳ..!! ಭಾರತದ ಹಾಗು ವಿಶ್ವದ ಅತಿ ದೊಡ್ದ ಸ್ವಯಂಸೇವಿ ಸಂಘಟನೆ. ಸೆಪ್ಟೆಂಬರ್ ೨೭, ೧೯೨೫ರ ವಿಜಯದಶಮಿಯ ದಿನ ಮಹಾರಾಷ್ಟ್ರ ರಾಜ್ಯದ ನಾಗಪುರದಲ್ಲಿ ಡಾ.ಕೇಶವ ಬಲಿರಾಂ ಹೆಡಗೆವಾರ್ ಈ ಸಂಘಟನೆಯನ್ನು ಹುಟ್ಟುಹಾಕಿದರು.

ಹಿಂದೂ ರಾಷ್ಟ್ರೀಯವಾದ ಬಲಪಂಥೀಯ ಸಂಘಟನೆಯೆಂದು ಸಾಮಾನ್ಯವಾಗಿ ಪರಿಗಣಿಸಲ್ಪಡುವ ಈ ಸಂಸ್ಥೆ ಭಾರತದ ನಾಗಪುರದಲ್ಲಿ ತನ್ನ ಮುಖ್ಯ ಕಾರ್ಯಾಲಯ ಹೊಂದಿದೆ. ಹಿಂದೂ ಸಂಘಟನೆ ಮತ್ತು ಐಕ್ಯತೆಯನ್ನು ತನ್ನ ಗುರಿಯನ್ನಾಗಿ ಹೊಂದಿರುವ ಈ ಸಂಸ್ಥೆಗೆ ಹೊಂದಿಕೊಂಡಿರುವ ಇತರ ಸಂಸ್ಥೆಗಳನ್ನು ಒಟ್ಟಾಗಿ ಸೇರಿಸಿ ಸಾಮಾನ್ಯವಾಗಿ “ಸಂಘ ಪರಿವಾರ” ಎಂದು ಕರೆಯಲಾಗುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಇಡೀ ಭಾರತಾದಾದ್ಯಂತ ಅಸ್ತಿತ್ವವನ್ನು ಹೊಂದಿದೆ. ಅಧಿಕಾರದ ನಿಮ್ಮ ವ್ಯಾಖ್ಯಾನವು ಎಷ್ಟು ಪ್ರಬಲವಾಗಿದೆ ಎಂಬುವುದರ ಮೇಲೆ ವ್ಯಾಖ್ಯಾನವಾಗಿದೆ. ಎಲ್ಲಾ ಸದಸ್ಯರು ಕುಟುಂಬದ ಒಂದು ಭಾಗವೆಂದು ಬದುಕುತ್ತಾರೆ ಎಲ್ಲರನ್ನೂ ಸಮಾನ ಭಾವದಿಂದ ಕಂಡುಕೊಳ್ಳುತ್ತಾರೆ.

ಎಲ್ಲಾ ಹಿಂದೂಗಳನ್ನು ತಮ್ಮ ಸಹೋದರ ಸಹೋದರಿಯನ್ನಾಗಿ ಕಾಣುವ ಸಂಸ್ಕಾರ ಪಡೆದ ಸ್ವಯಂ ಸೇವಕರಿಗೆ ದೇಶದ ಯಾವುದೇ ಮೂಲೆಯಲ್ಲಿನ ನಮ್ಮ ಬಾಂಧವರಿಗೆ ಯಾವ ರೀತಿಯ ವಿಪತ್ತು ಬಂದರೂ ಒಡನೆಯೇ ಅವರ ಆಸರೆಗೆ ಧಾವಿಸುವುದು ಸಹಜ ಸ್ವಭಾವವಾಗಿದೆ.

ಮಾದ್ಯಮಗಳು ಸ್ವಯಂ ಸೇವಕ ಸಂಘದ ಬಗ್ಗೆ ಅದೇನೇ ಹೇಳಲಿ ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚಳವಾಗಿದೆ. ಕಳೆದ ವರ್ಷ ಇದು 57,185 ಆಗಿತ್ತು. 2014ರಲ್ಲಿ 44,982, 2015ರಲ್ಲಿ 51332 ಹಾಗೂ 2016ರಲ್ಲಿ 5527 ಶಾಖೆಗಳು ಇದ್ದವು. 2014 ಹಾಗೂ 2017ರಲ್ಲಿ ಶಾಖೆಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದರೆ, 2016ರಲ್ಲಿ ಶಾಖೆಗಳ ಏರಿಕೆ ಪ್ರಮಾಣ ಕಡಿಮೆಯಾಗಿತ್ತು ಎಂಬುದಾಗಿ ವಿವರಿಸಲಾಗಿದೆ.

ಈ ಮಧ್ಯೆ ಆರೆಸ್ಸೆಸ್‌ಗೆ ನೇಮಕಗೊಳ್ಳುವ ಸ್ವಯಂಸೇವಕ ಪೂರ್ವ ಹಂತದ ಪ್ರಾಥಮಿಕ ಶಿಕ್ಷಾ ವರ್ಗವೂ ಕಡಿಮೆಯಾಗಿದೆ. 2016-17ರಲ್ಲಿ 8264 ಪ್ರಾಥಮಿಕ ಶಿಕ್ಷಾ ವರ್ಗ ಇಳಿಕೆಯಾಗಿ, 1,04,256ರಷ್ಟಿದೆ.

Post Author: Ravi Yadav