​ಡಾ.ಪ್ರಭಾಕರ್ ಭಟ್ರ ಶ್ರೀರಾಮ ವಿದ್ಯಾ ಸಂಸ್ಥೆ ಅವಳ ಜೀವನದ ದಿಕ್ಕುದೆಸೆ ಯನ್ನೇ ಬದಲಿಸಿತು..!!ಸಮಯ ಇದ್ರೆ 2 ನಿಮಿಷ ಓದಿಬಿಡಿ.

​ಡಾ.ಪ್ರಭಾಕರ್ ಭಟ್ರ ಶ್ರೀರಾಮ ವಿದ್ಯಾ ಸಂಸ್ಥೆ ಅವಳ ಜೀವನದ ದಿಕ್ಕುದೆಸೆ ಯನ್ನೇ ಬದಲಿಸಿತು..!!ಸಮಯ ಇದ್ರೆ 2 ನಿಮಿಷ ಓದಿಬಿಡಿ.

0

ಅದು ಬೆಂಗಳೂರು… ದೇಶದ 4ನೇ ಅತೀ ದೊಡ್ಡ ನಗರ.. ಇಲ್ಲಿರುವರು ಹೆಚ್ಚಿನವರು ವಿದ್ಯಾವಂತರು ಶ್ರೀಮಂತರು.. ‘ಅದರಲ್ಲಿ ಒಬ್ರು  ವಿನಾಯಕ್ (ಕೆಳಗೆ ಬರುವ ಎಲ್ಲಾ ಹೆಸರುಗಳನ್ನು ಬದಲಿಸಲಾಗಿದೆ) ಅವರದ್ದು ಸಣ್ಣ ಕುಟುಂಬ,ಹೆಂಡತಿ ಮತ್ತು  ಮಕ್ಕಳಿಬ್ಬರು… ! ಶ್ರೀಮಂತ ವ್ಯಕ್ತಿ ಅವ್ರು…  ಕೋಟ್ಯಾಧಿಪತಿ… ! ದಿನನಿತ್ಯದ ಖರ್ಚು ಅಂದಾಜು ಸುಮಾರು  25ಸಾವಿರ ಇರಬಹುದೇನೋ…! ಸಿದ್ದ ವಸ್ತುಗಳನ್ನು ರಫ್ತು ಮಾಡುವ ಕಂಪನಿಯ ಒಂದರ ಮಾಲೀಕ..ಅವ್ರು!

ಮಕ್ಕಳಿಬ್ಬರು ಸಂಜನಾ ಮತ್ತು ಸಮಂತ್ ಕುಮಾರ್.ಚೆನ್ನಾಗಿಯೇ ಶಾಲೆಗೆ ಹೋಗಿ ಬರುತ್ತಿದ್ದರು.. ಮಕ್ಕಳನ್ನು ದಿನಾಲೂ ವಿಚಾರಿಸುವಷ್ಟು ಸಮಯ ವಿನಾಯಕ್ ಗೆ ಆಗ್ಲಿ ಅವರ ಧರ್ಮಪತ್ನಿಗೆ ಆಗ್ಲಿ ಇರ್ಲಿಲ್ಲ..!ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರಲ್ಲಿ ಕಲಿಯುತ್ತಿದ್ದ ಸಂಜನಾಗೆ ಅದಾಗಲೇ ಒಂದು ಹುಚ್ಚು ಚಟ ಶುರುವಾಗಿ ಬಿಟ್ಟಿತ್ತು… ಡ್ರಗ್ಸ್ ತೆಗೆದುಕೊಳ್ಳುದು… ಅಪ್ಪ ಅಮ್ಮನಿಗೆ ಗೊತ್ತಿಲ್ಲದೆ ಗೆಳೆಯ ಗೆಳತಿಯರ ಜತೆ ಡ್ರಗ್ಸ್ ಸೇವಿಸಿ ಮಜಾ ಮಾಡೋದು ಅವಳ ದಿನನಿತ್ಯದ ಕೆಲ್ಸ ಆಗಿತ್ತು.. ಊಟ ಇಲ್ಲದೆ ಆದ್ರೂ ಇರ್ತೀದ್ಲು ಡ್ರಗ್ಸ್ ಇಲ್ಲದೆ ಜೀವನವೆ ಇಲ್ಲ ಅನ್ನುವಷ್ಟು ಆ ಚಟ ಅವಳಿಗೆ ಮತ್ತು ಹಚ್ಚಿಸಿತ್ತು…


ಒಂದು ದಿನ ಇದ್ದಕ್ಕಿದಂತೆ ತಂದೆಗೆ ಮಗಳ ನಡವಳಿಕೆಯಲ್ಲಿ ಆದ ಬದಲಾವಣೆ ಗೊತ್ತಾಗಿದೆ.. ಕೈ ಮೈ ಪೂರ್ತಿ ಸಿರಿಂಜನ್ನು ಚುಚ್ಚು ಕೊಂಡ ಗಾಯಗಳಿವೆ.. ಏನದು ಅಂತ ಎರಡು ಏಟು ಕೊಟ್ಟು ತಂದೆ ಕೇಳಿದಾಗ ಎಲ್ಲವನ್ನು ಸರಿಯಾಗಿ ವಿವರಿಸಿದ್ದಾಳೆ ಸಂಜನಾ… ಬುದ್ಧಿಮಾತು ಹೇಳಿ ಮಗಳನ್ನು ಸರಿ ಮಾಡಲು ಪ್ರಯತ್ನಿಸಿದರು… ಪ್ರಯೋಜನ ಆಗಲಿಲ್ಲ. ಮಗಳ ಚಟ ಮತ್ತೆ ಉಲ್ಬಣಗೊ0ಡಿತ್ತು..

ಸಮಸ್ಯೆಗೆ ಪರಿಹಾರವೇ ಇಲ್ಲವೇ ಅಂತ ಚಿಂತೆಯಲ್ಲಿ ತೊಡಗಿದ್ದರು ಸಂಜನಾಳ ತಂದೆ ತಾಯಿ… ಒಂದು ಶ್ರೀಮಂತ ಕುಟುಂಬ ಹಣ ಇದ್ರು ನೆಮ್ಮದಿಂದ ಇಲ್ಲದ ಸಮಯ…ಅದು ನೋಡಿ…ಎಷ್ಟು ಕರ್ಚಾದ್ರು ಪರ್ವಾಗಿಲ್ಲ ಮಗಳ ಈ ಹುಚ್ಚು ಬಿಡಿಸಬೇಕು ಎನ್ನುವುದು ತಂದೆಯ ಆಸೆ.. ಅದಿಕ್ಕಾಗಿ ಅವ್ರು ಎನ್ಬೆಕಾದ್ರು ಮಾಡೋಕೆ ರೆಡಿ ಇದ್ರು.. 4 ವಾರ ಕೇರಳದ ಯೋಗಾಸನ ಶಿಭಿರವೊಂದಕ್ಕೆ ಮಗಳನ್ನು ಹಾಕಿದ್ರು ಏನೂ ಪ್ರಯೋಜನ ಆಗಲಿಲ್ಲ…ಬೆಂಗಳೂರಿಗೆ ವಾಪಸ್ ಬಂದ ಕೂಡಲೇ ಮತ್ತದೇ ಚುಚ್ಚು ಡ್ರಗ್ಸ್ ಹಾಕಿಕೊಳ್ಳುವ ಚಟ ಅವಳಿಗೆ…ತಂದೆಗೆ ಜೀವ ಇದ್ದು ಸತ್ತ ಅನುಭವ.. ಕಣ್ಣೀರಲ್ಲಿ ಕೈ ತೊಳೆಯುವ ಸಮಯ ಅದು!


ಹೀಗೆಲ್ಲ ಆಗ್ತಿರುವಗ ಯಾರೋ ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯ ಬಗ್ಗೆ ,ಡಾ ಕಲ್ಲಡ್ಕ ಪ್ರಭಾಕರ್ ಭಟ್ರ ಸಾಮಾಜಿಕ ಚಟುವಟಿಕೆಯ ಬಗ್ಗೆ ಅದಾಗಲೇ ತಿಳಿಸಿದ್ದಾರೆ . ಪ್ರೀತಿಯ ಮಗಳನ್ನು ನೋಡಲಾಗದ ತಂದೆ ಅದೋ ಬಂದೆ ಬಿಟ್ರು ಕಲ್ಲಡ್ಕಕ್ಕೆ..ವಿಷಯ ತಿಳಿದ ಮರುದಿನವೇ.! ಬಂದು ಡಾಕ್ಟ್ರು ಜಿ ಯನ್ನು ಬೇಟಿಯಾಗಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾರೆ.. ಡಾಕ್ಟ್ರು ಮಗಳನ್ನು ಕಲ್ಲಡ್ಕ ಶ್ರೀರಾಮ ಸಂಸ್ಥೆಗೆ ಸೇರಿಸುವಂತೆ..ಹೇಳಿದ್ದಾರೆ..! ನಿಮ್ಮ ಮಗಳು ನನ್ನ ಮಗಳಿದ್ದಂತೆ ಅವಳ ಜವಾಬ್ದಾರಿ ನಮ್ಮದು ಅಂತ ಮಾತು ಕೋಟ್ಟು ಧೈರ್ಯ ಹೇಳಿದ್ದಾರೆ!


ವಿನಾಯಕ್ ತಮ್ಮ ಮಗಳನ್ನು ಕಲ್ಲಡ್ಕಕ್ಕೆ ಕರೆತಂದು.. ವಿದ್ಯಾಭ್ಯಾಸ ಪಡೆಯಲು ಸೇರಿಸಿದ್ದಾರೆ.. ಜೊತೆಗೆ ವಿದ್ಯಾರ್ಥಿನಿಯರ ವಸತಿನಿಲಯಕ್ಕೂ ಸೇರಿಸಿದ್ದಾರೆ..!

ಇಲ್ಲಿನ ಸಂಸೃತಿಯುತ ಶಿಕ್ಷಣ,ಶಿಸ್ತುಬದ್ಧ ಚಟುವಟಿಕೆ, ರಾಷ್ಟ್ರೀಯಸೇವಿಕಾ ಸಮಿತಿಯ ನಿತ್ಯ ಶಾಕೆ, ಸರಸ್ವತಿವಂದನೆ,ಯೋಗ,ಧ್ಯಾನ ಮುಂತಾದರಲ್ಲಿ ತೊಡಗಿಸಿಕೊಂಡ ಅವಳು ಕೆಲವೇ ದಿನದಲ್ಲಿ ಬದಲಾದಳು… ಕಲ್ಲಡ್ಕಕ್ಕೆ ಬಂದಾಗ ಮೈ ಕೈ ಪೂರ್ತಿ ಸಿರಿಂಜಿ ಚುಚ್ಚುಕೊಂಡ ಗಾಯಗಳಿಂದ ತುಂಬಿ ಹೋಗಿತ್ತು.ನಡಿಯೋಕೆನೆ ಸರಿ ಆಗದ ಸ್ಥಿತಿಯಲ್ಲಿ ಇದ್ದವಳು..ಸಂಜನಾ.


ಇಲ್ಲಿಂದ ಹೋಗುವಾಗ 72ಶೇಕಾದ ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಅದದ್ದಲ್ಲದೆ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಳು ಅದೇ ಸಂಜನಾ ಅಂದ್ರೆ ನೀವು ನಂಬುತ್ತೀರಾ? ಮಗಳ ಆಸೆಯನ್ನೇ ಬಿಟ್ಟು ಕೊನೆಯ ಒಂದು ಪ್ರಯತ್ನ ಅಂತ ಕಲ್ಲಡ್ಕದಲ್ಲಿ ಬಿಟ್ಟು ಹೋದ ತಂದೆಗೆ ಮಗಳನ್ನು ಕಂಡು.. ಅವಳ ಸಂಸ್ಕಾರ ನಡತೆ ನಡವಳಿಕೆ ಕಂಡು ಅಚ್ಚರಿ. ಆನಂದ! ಇದು ನನ್ನ ಮಗಳು ಸಂಜನಾ ನಾ ?? ಅಂತ ಅವರಿಗೂ ಒಂದುಸಲ ಅನಿಸಿದ್ದು ಸುಳ್ಳಲ್ಲ.!!

ಮತ್ತೆ ಮೊದಲಿನ ಸಂಜನಾನನ್ನು ತಂದೆಗೆ ಒಪ್ಪಿಸಿ ಡಾಕ್ಟ್ರು ಕೊಟ್ಟ ಮಾತು ಉಳಿಸಿಕೊಂಡರು. ಈಗಲೂ ಸಂಜನಾ ಸಮಾಜದಲ್ಲಿ ಒಂದು ಮಾದರಿ ಹೆಣ್ಣಾಗಿದ್ದಾಳೆ… ಅವಳ ವ್ಯಕ್ತಿತ್ವ ನೀರ್ಮಾಣ ಮಾಡಿದ್ದು ಶ್ರೀರಾಮ ವಿದ್ಯಾಸಂಸ್ಥೆ…!
ಹಣ ಇದ್ರೇನು,ಹಣ ಎಷ್ಟು ಕೊಟ್ರೆನು ಸಂಸ್ಕೃತಿ ಸಂಸ್ಕಾರಭರಿತ ಶಿಕ್ಷಣ ಕೊಡುವ ಶಿಕ್ಷಣ ಸಂಸ್ಥೆಗಳು ಬೇಕಲ್ಲ..ಈಗ!!

ಅಂತಹ ಒಳ್ಳೆಯ ಶಿಕ್ಷಣ ಕೊಡುವ ಶಿಕ್ಷಣ ಸಂಸ್ಥೆ ನಮ್ಮದು.. ಇಂತಹ ಶಿಕ್ಷಣ ಸಂಸ್ಥೆಗೆ ಪ್ರಸಾದದ ರೂಪದಲ್ಲಿ ಕೊಲ್ಲೂರು ದೇವಾಲಯದಿಂದ ಬರುತ್ತಿದ್ದ ಅನ್ನವನ್ನು ನಿಲ್ಲಿಸಿದ ಕೀರ್ತಿ ನಮ್ಮ ಹೆಮ್ಮೆಯ ಮಾನ್ಯ ಮುಖ್ಯ ಮಂತ್ರಿಗಳದ್ದು…

ನಿಮ್ಮ ಮಗನನ್ನು ಶ್ರೀರಾಮ ಸಂಸ್ಥೆಯಲ್ಲಿ ಏನಾದ್ರು ಸೇರಿಸುತಿದ್ರೆ ಈಗ ನಿಮ್ಮ ಮಗ ನಿಮ್ಮ ಜೋತೆಯಲ್ಲಿ ಸಂತೋಷದಿಂದ ಇರ್ತೀದ್ರೆನೋ ಸಿದ್ದಣ್ಣ..
ನಿಮಿಗೂ ಅನಿಸಬಹುದು ಅಂತದ್ದು ಎನ್ ಮಾಡ್ತಾರಪ್ಪ ಈ ಕಲ್ಲಡ್ಕದವ್ರು ಅಂತಾ ಅಲ್ವಾ???


ಏನೇನ್ ಮಾಡ್ತಾರೆ ಅಲ್ಲಿ, ಶಿಕ್ಷಣ ಹೇಗಿದೆ  ಅಂತ ನೀವೇ ಒಂದು ಸಲ ಯಾಕೆ ಬಂದು ನೋಡಬಾರ್ದು???ಬನ್ನಿ…………

ಸರಿ ಅನಿಸಿದ್ರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಬಿಡಿ..ರಾಮ್ ರಾಮ್ ಧನ್ಯವಾದಗಳು…!!!
-ಸಚಿನ್ ಜೈನ್ ಹಳೆಯೂರು