ಡಾ.ಪ್ರಭಾಕರ್ ಭಟ್ ಜಿ ಯ ಶ್ರೀರಾಮ ವಿದ್ಯಾ ಸಂಸ್ಥೆಯ ಸಣ್ಣ ಸಣ್ಣ ಮುಗ್ದ ಮಕ್ಕಳು ಚೀನಾದ ವಸ್ತುಗಳನ್ನು ಹೇಗೆ ವಿರೋಧಿಸಿದರು ನಿಮಿಗೆ ಗೊತ್ತೇ???

ಡಾ.ಪ್ರಭಾಕರ್ ಭಟ್ ಜಿ ಯ ಶ್ರೀರಾಮ ವಿದ್ಯಾ ಸಂಸ್ಥೆಯ ಸಣ್ಣ ಸಣ್ಣ ಮುಗ್ದ ಮಕ್ಕಳು ಚೀನಾದ ವಸ್ತುಗಳನ್ನು ಹೇಗೆ ವಿರೋಧಿಸಿದರು ನಿಮಿಗೆ ಗೊತ್ತೇ???

0

ಅಂದು ದೇಶದ ಸಾವಿರಾರು ಸೈನಿಕರು ದೇಶಕ್ಕಾಗಿ ಹೋರಾಡಿದ ದಿನ! ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ರಾಷ್ಟ್ರ ಧ್ವಜದಲ್ಲಿ ಮಲಗಿದ ದಿನ… ತಾಯಂದಿರು ತನ್ನ ಗಂಡನನ್ನು ಕಳ್ಕೊಂಡು ವಿಧವೆಯರಾದ ದಿನ,ಎಷ್ಟೋ ಸಣ್ಣ ಸಣ್ಣ ಮುಗ್ದ ಕಂಧಮ್ಮಗಳು ತನ್ನ ಪ್ರೀತಿಯ ತಂದೆಯನ್ನು ಕಳ್ಕೊಂಡ ದಿನ..! ಮನೆಗೆ ಆಧಾರವಾಗಿದ್ದ ಮಗನನ್ನು ಕಳ್ಕೊಂಡ ದಿನ !!!ಅನಾಥರಾದ ದಿನ!

ಯಾವ ದಿನ ಅಂತ ಯೋಚನೆ ಮಾಡ್ತಿದ್ದೀರಾ? ಅದೇ ಜುಲೈ 26 1999 ! “ಕಾರ್ಗಿಲ್ ವಿಜಯ ದಿವಸ” ಪಾಕಿಸ್ತಾನವನ್ನು ನಮ್ಮ ವೀರ ಯೋಧರು ಹಿಮ್ಮೆಟ್ಟಿಸಿದ ದಿನ!!! ಹೆತ್ತ ತಾಯಿಗೆ ಮಗುವನ್ನು ಹೇರುವಾಗ ಜೀವ ಹೋಗುವಷ್ಟು ನೋವಾಗುತ್ತದಂತೆ! ಆ ನೋವನ್ನು ಅವ್ಳು ಆಗ ತಾನೇ ಹುಟ್ಟಿದ ತನ್ನ ಮಗುವಿನ ಮುಖ ನೋಡಿ ಸಹಿಸಿಕೊಳ್ಳುತ್ತಾಳೆ ಅಂತೆ,ಮರೆಯುತ್ತಾಳಂತೆ! ಅದೇ ರೀತಿ ಸೈನಿಕರ ಮನಸ್ಸು ಕೂಡ..!.ಸಾವಿರಾರು ಧೀರ ಯೋಧರು ಪ್ರಾಣಾರ್ಪಣೆ ಮಾಡಿ ಭಾರತ ಮಾತೆಯ ಪಾದವನ್ನು ರಕ್ತದಿಂದ ತೊಳೆದ ದಿನ…! ಹೇರುವಾಗ ಮಗುವನ್ನು ತಾಯಿ ನೋಡಿದಂತೆ, ಸೈನಿಕರು ಭಾರತ ಮಾತೆಯ ಮುಗುಲುನಗೆಯನ್ನು ಮತ್ತೆ ಕಂಡ ದಿನ!!

ಈ ಪವಿತ್ರವಾದ ದಿನ ಜುಲೈ 26 ರನ್ನು “ಕಾರ್ಗಿಲ್ ವಿಜಯ್ ದಿವಸ್” ಅಂತ ಆಚರಿಸಿ ಆ ಧೀರ ಹುತಾತ್ಮ ಯೋಧರನ್ನು ನೆನೆಸಿಕೊಳ್ಳುವುದು ನಮ್ಮ ಕರ್ತವ್ಯ…!

ಪ್ರತಿವರ್ಷದಂತೆ ಜುಲೈ 26ರಂದು ಕಲ್ಲಡ್ಕ ಶ್ರೀರಾಮದಲ್ಲಿ ವಿಜಯ್ ದಿವಸ್ ನಡೆದಿದೆ…ಸಣ್ಣ ಸಣ್ಣ ಮಕ್ಕಳಿಗೆ ಈ ಧೀರ ಯೋಧರ ಸಾಹಸ ಪರಾಕ್ರಮ, ನಿಷ್ಠೆ,ದೇಶಪ್ರೇಮ,ತ್ಯಾಗ ಮುಂತಾದ ವಿಚಾರದ ಕುರಿತು ಡಾ. ಪ್ರಭಾಕರ್ ಭಟ್ ಜಿ ಮನಮುಟ್ಟುವಂತೆ ಹೇಳಿದ್ದಾರೆ.. ಮಕ್ಕಳು ಕಿವಿಯಲ್ಲಿ ಕಿವಿ ಇಟ್ಟು ಕೇಳಿದ್ದಾರೆ… ಇದೆ ವಿಷಯ ಮಾತಾಡುತ್ತ ಡಾ. ಜಿ ಚೀನಾದ ಬಗ್ಗೆಯೂ ಮಕ್ಕಳಿಗೆ ಬಿಡಿಸಿ ಬಿಡಿಸಿ ಹೇಳಿದ್ದಾರೆ.. ನಮ್ಮ no1 ವಿರೋಧಿ ಅದು ಪಾಕಿಸ್ತಾನ ಅಲ್ಲ ಬದಲಾಗಿ ಚೀನಾ.. ನಾವು ಚೀನಾವನ್ನು ಕಟ್ಟಿಹಾಕಬೇಕಾದ್ರೆ ಚೀನಾದ ವಸ್ತುಗಳನ್ನು ವಿರೋಧಿಸಬೇಕು… ಮತ್ತು ಸ್ವತಃ ಚೀನಾ ವಸ್ತುಗಳನ್ನು ಬಳಕೆ ಮಾಡುದನ್ನು ಬಿಡಬೇಕು. ಕಲ್ಲಡ್ಕದ ಪ್ರತಿಯೊಂದು ಮಗುವೂ ಕೂಡ ಚೀನಾದ ವಸ್ತುಗಳನ್ನು ವಿರೋಧಿಸುವ ಸೈನಿಕರಾಗಬೇಕು…ಅಂತಾ ಹೇಳಿದ್ದಾರಷ್ಟೇ ಪರಿಣಾಮ ಎಂತದ್ದು ಗೊತ್ತಾ??

ಅದು BCroad ನ ಹತ್ತಿರದಲ್ಲೇ ವಾಸವಿರುವ ಸಣ್ಣ ಕುಟುಂಬ… ಆ ಸಣ್ಣ ಕುಟುಂಬದಲ್ಲಿ ತಂದೆ ತಾಯಿ 2 ಮಕ್ಕಳು.. ತಂದೆ ತಾಯಿ ವೃತ್ತಿಯಲ್ಲಿ ಇಬ್ಬರೂ ಕೂಡ ನ್ಯಾಯವಾದಿಗಳು.. ಅವ್ರು ಪ್ರಸಾದ್ ಮತ್ತು ಆಶಾ ಪ್ರಸಾದ್… ಅವ್ರ ಮುದ್ದಾದ ಮಗಳೇ ಅಧಿಶ್ರೀ.. ಕಲ್ಲಡ್ಕ ಶ್ರೀರಾಮ ದಲ್ಲಿ ಪ್ರಸ್ತುತ 4ನೇ ತರಗತಿ ವಿದ್ಯಾರ್ಥಿ…

ಆಕೆಗೆ ಆಟದ ಸಾಮಾನು ಅಂದ್ರೆ ತುಂಬಾ ಇಷ್ಟ.. ಯಾರಿಗೆ ಇಷ್ಟ ಇಲ್ಲ ಹೇಳಿ…ನಾವು ಸಣ್ಣವರಿದ್ದಾಗಿನ ಪರಿಸ್ಥಿತಿ ನೇನಿಸ್ಕೊಂಡರೆ ನಾವೆಷ್ಟು ಇಷ್ಟ ಪಡ್ತಿದ್ದೆವು ಅಂತ ಗೊತ್ತಾಗತ್ತೆ ಅಲ್ವಾ? ಆಕೆಗೆ ಗೊಂಬೆಗಳು ಅಂದ್ರೆ ಪಂಚ ಪ್ರಾಣ..!! ಅದ್ರಲ್ಲೂ ಸಣ್ಣ ಸಣ್ಣ ಹೆಣ್ಣು ಗೊಂಬೆಗಳಂದ್ರೆ ತುಂಬಾ ಇಷ್ಟ ,ಅಮ್ಮ ಅಪ್ಪನಿಗಿಂತಲೂ ಆ ಗೊಂಬೆ ಇಷ್ಟ… ಅವ್ರ ಹತ್ರ ಮಾತಾಡದಿದ್ದರೂ ಪರವಾಗಿಲ್ಲ ಆ ಗೊಂಬೆಯ ಜತೆ ಅವಳಷ್ಟಕ್ಕೆ ಮಾತಾಡ್ತಿದ್ಲು.. ಗೊಂಬೆಗೆ ಸೀರೆ ಉಡಿಸುವುದು ಮಲಗಿಸುವುದು.. ಒಟ್ಟಾರೆ ಆಗಿ ಹೇಳುದಿದ್ರೆ ಗೊಂಬೆಯನ್ನು ತನ್ನ ಮಗಳಂತೆ ಇಷ್ಟ ಪಡುತ್ತಿದ್ದಳು..!

ಯಾವಾಗ ಡಾ. ಜಿ ಚೀನಾದ ವಸ್ತುಗಳನ್ನು ಉಪಯೋಗಿಸಬಾರದು ಅಂತ ಹೇಳಿದ್ರೋ… ತಾನು ಇಷ್ಟ ಪಟ್ಟಿದ್ದ ತನ್ನ ಪಂಚಪ್ರಾಣವಾಗಿದ್ದ ಆ ಗೊಂಬೆಯೂ ಕೂಡ ಚೀನಾದ್ದು ಅಂತ ಗೊತ್ತಾದ ಕೂಡಲೇ ಅದನ್ನು ಕೋಪದಲ್ಲಿ ಬಿಸಾಡಿದಳು.. ಮತ್ತೆ ಆ ಗೊಂಬೆಯ ಕಡೆ ತಿರುಗಿ ನೋಡಲೇ ಇಲ್ಲ ಅಂತಹ ಗೊಂಬೆ ಖರೀದಿ ಮಾಡಲೂ ಇಲ್ಲ.ಸಣ್ಣ ಮಗುವಿದ್ದು ಎಂತ ಮನಸ್ಸು!! ಇವಳೇ ಅಲ್ವಾ ರಾಷ್ಟ್ರೀಯತೆಯ ದೇವತೆ.!!! ನಿವೇನ್ ಹೇಳ್ತೀರ್ರಿ??

ಅದು ತುಮಕೂರಿನ ಒಂದು ಸಣ್ಣ ಕುಟುಂಬ..ತಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರು… ಮಾ.ವೆಂಕಟೇಶ್.. ಚೀನಾದ ವಸ್ತುಗಳನ್ನು ಉಪಯೋಗಿಸಬಾರದು ಅಂತ ತನ್ನ ಧರ್ಮಪತ್ನಿಗೆ ಎಷ್ಟು ಹೇಳಿದರರೂ ಕೂಡ ಯಾವುದೇ ಉಪಯೋಗಲಿಲ್ಲ… ಬದಲಾಗಿ ಅವ್ರು ಉಪಯೋಗವನ್ನು ಇಮ್ಮಡಿಗೊಳಿಸಿದ್ರು…ಅವರ ಮಕ್ಕಳಿಬ್ಬರು ಪ್ರಸ್ತುತ ಕಲ್ಲಡ್ಕ ಶ್ರೀರಾಮ ದಲ್ಲಿ 7ನೇ ತರಗತಿ ವಿದ್ಯಾರ್ಥಿಗಳು.. ಲವ-ಕುಶ ಅವಳಿಜವಳಿ ಮಕ್ಕಳು..ಜುಲೈ 26 ಡಾ.ಜಿ ಯ ಮಾತು ಕೇಳಿ ಲವ ಸೀದಾ ಮನೆಗೆ ಫೋನ್ ಮಾಡಿ ಚೀನಾದ ವಸ್ತುಗಳ ಪ್ರೇಯೇ ಆಗಿದ್ದ ಅಮ್ಮನಿಗೆ ಚೀನಾದ ವಸ್ತುಗಳನ್ನು ಉಪಯೋಗಿಸಬಾರ್ದು ಅಂತ ಸಿಕ್ಕಾಪಟ್ಟೆ ಬೈದಿದ್ದಾನೆ… ಅಪ್ಪನ ಮಾತು ಎಳ್ಳಷ್ಟೂ ಕೇಳದ ಅಮ್ಮ … ಮಗನ ಒಂದು ಮಾತು ಕೇಳಿ ಚೀನಾದ ವಸ್ತುಗಳ ಉಪಯೋಗ ಬಿಟ್ಟುಬಿಟ್ರು ಅಂದ್ರೆ ನೀವು ನಂಬುತ್ತಿರಾ??

ತದನಂತರದಲ್ಲಿ ನಡೆದ ಪೋಷಕರ ಸಭೆಯಲ್ಲೂ ಹೆತ್ತವರು ಮನೆಯಲ್ಲಿ ತಮ್ಮ ಮಕ್ಕಳ ಚೀನಾವಸ್ತುಗಳ ವಿರೋಧವನ್ನು ತಿಳಿಸಿದ್ದಾರೆ. ಅವ್ರು ಬಿಡಿ ಮನೆಯೊಳಗೆ ಚೀನಾ ವಸ್ತು ತರೋಕೆನೆ ಬಿಡಲ್ಲ!!.. ಚೋಟುದ್ದ ಮಕ್ಳು ದೊಡ್ಡವರಿಗೆ ಚೀನಾ ವಸ್ತು ಉಪಯೋಗಿಸಬಾರ್ದು ಅಂತ ಪಾಠ ಹೇಳೋ ಮಟ್ಟಕ್ಕಿದ್ದಾರೆ ಅಷ್ಟು ಬೆಳೆದು ಬಿಟ್ಟಿದ್ದಾರೆ.!!

ಕಲ್ಲಡ್ಕ ಶ್ರೀರಾಮದ ಮಕ್ಕಳೇ ಹೀಗೆ..!! ಅವ್ರು ಮಾತ್ರ ಬದಲಾಗಾದೆ , ಸಮಾಜವನ್ನು ಬದಲು ಮಾಡೋ ತಾಕತ್ತು ಇರೋರು..ತನಿಗೆ ಮಾತ್ರ ಬೆಳಕು ಕೊಡೋ ಮಿಂಚು ಹುಳ ಆಗಿರದೆ ಲೋಕಕ್ಕೆ ಬೆಳಕು ಕೊಡೋ ಸಾಕ್ಷಾತ್ ಸೂರ್ಯನೇ ಅವ್ರು….!!

ಇದೇ ಅಲ್ವಾ ನಿಜವಾದ ದೇಶಪ್ರೇಮ!! ಈಗ ಗೊಂಬೆ ದೇಶಕೋಸ್ಕರ ಬಿಟ್ಟವರು.. ಮುಂದೊಂದು ದಿನ ಜೀವವನ್ನೇ ದೇಶಕೋಸ್ಕರ ತ್ಯಾಗ ಮಾಡುವಷ್ಟು ದೇಶಪ್ರೇಮಿಗಳಾಗಲಿ. ಅನ್ನೋದೇ ನನ್ನ ಆಶಯ..!

ಮಕ್ಕಳೇ ಹೀಗಿರುವಾಗ…..ನನ್ನ, ನಿಮ್ಮಂತಹ ದೊಡ್ಡವರ ಪಾತ್ರ ಏನು ಬಂಧುಗಳೇ?????? ಯೋಚನೆ ಮಾಡಬೇಕಾಗಿದೆ!!!ಅಲ್ವಾ?

ಸರಿ ಅನಿಸಿದ್ರೆ ಶೇರ್ ಮಾಡಿ ಧನ್ಯವಾದಗಳು..

-ಸಚಿನ್ ಜೈನ್ ಹಳೆಯೂರ್