ಆರು ವರ್ಷದ ಕಾಶ್ಮೀರಿ ಮೂಗಿ ಬಾಲಕಿಗೆ ಸ್ವರ ಬರುವಂತೆ ಮಾಡಿ ಕಾರ್ಗಿಲ್ ಯುದ್ಧಭೂಮಿಯಲ್ಲಿಯೇ ಪತ್ರಬರೆದಿಟ್ಟು ಹುತಾತ್ಮನಾದ ವೀರ ಸೈನಿಕನ ಯಶೋಗಾಥೆ!!

“ನಾನು ಹೋರಾಡಿದ 18ಸಾವಿರ ಅಡಿ ಎತ್ತರದ ಹಿಮಶಿಕರವನೊಮ್ಮೆ ನೋಡಿ ಅಪ್ಪ”ಎನ್ನುತ್ತಾ ಯುದ್ದಭೂಮಿಯಲ್ಲಿ ಪ್ರಾಣಬಿಟ್ಟ ಕಾರ್ಗಿಲ್ ಯೋಧನ ಕಣ್ಣೀರಿನ ಕಥೆ ಇದು..

1976 ಡಿಸೆಂಬರ್ 26ರಂದು ಈಗಾಗಲೇ ದೇಶಕ್ಕೆ ಮೂರು ಸೈನಿಕರನ್ನು ಕೊಟ್ಟ ಸೈನಿಕ ಕುಟುಂಬವೊಂದರಲ್ಲಿ ವಿಜಯಕಾಂತ್ ಥಾಪರ್ ಎಂಬ ಹೆಸರಿನ ಹುಡುಗನೊಬ್ಬ ಜನಿಸಿದ. ತನ್ನ ದೊಡ್ಡಪ್ಪ ಡಾ. ಕರ್ತಾರಾಮ್ ಥಾಪರ್, ಅಜ್ಜ
ಜೆ.ಯಸ್ ತಾಪರ್, ತಂದೆ ಕರ್ನಲ್ ವಿ.ಯನ್ ಎಲ್ಲರೂ ನಿವೃತ್ತ ಸೈನಿಕರು. ವಿಜಯಕಾಂತ್ ಹುಟ್ಟು ಸೈನಿಕ ಎಂದರೆ ತಪ್ಪಗಲಾರದು. ತನ್ನ ತಂದೆ ಸೇನೆಯಿಂದ ನಿವೃತ್ತಿ ಹೊಂದಿದ ಕೂಡಲೇ ಎರಡನೇ ರಜಪೂತ್ ರೈಫಲ್ಸಲ್ಲಿ ಸೈನಿಕನಾಗಿ 1998ರಲ್ಲಿ ಈತ ನೇಮಕನಾದ. ತಾನು ಸೇನೆಗೆ ಸೇರಿ ಆರು ತಿಂಗಳೊಳಗೆ ಭಾರತ ಹಿಂದೆದೂ ಕಂಡಿರದ ಬಹುದೊಡ್ಡ ಸವಾಲೊಂದನ್ನು ಎದುರಿಸಬೇಕಾಯಿತು. ಆದೇ ಅವಧಿಯಲ್ಲಿ ಲಾಹೋರ್ ಒಪ್ಪಂದವನ್ನು ಪಾಪಿ ಪಾಕಿಸ್ತಾನ ಉಲ್ಲಂಘಿಸಿ ಕಾರ್ಗಿಲ್ ಪ್ರದೇಶದ ಮೇಲೆ ಆಕ್ರಮಣ ಮಾಡಿತು. ಹಲವಾರು ಕಾರ್ಗಿಲ್ ಚೌಕಿಗಳನ್ನು ವಶಪಡಿಸಿಕೊಂಡರು.


1999ರಲ್ಲಿ ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧ ಘೋಷಣೆಯಾಯಿತು. ವಿಜಯಂತ್ ತಾಪರ್ ಹಾಗೂ ಅವರ ಬಟಾಲಿಯನಿಗೆ 15ಸಾವಿರ ಅಡಿ ಎತ್ತರದ ತೋಲೋಲಿಂಗ್ ಹಿಮ ಪರ್ವತದಿಂದ ವಿರೋಧಿಗಳನ್ನು ಓಡಿಸಿ ಅದನ್ನು ವಶಪಡಿಸಿಕೊಳ್ಳಲು ಕಳುಹಿಸಲಾಯಿತು. ಜೂನ್ 13 1999ರಂದು ವಿಜಯಂತ್ ಆ ಹಿಮಶಿಕರವನ್ನು ಏರಿ ವಶಪಡಿಸಿಕೊಂಡ. ಭಾರತ ಕಾರ್ಗಿಲ್ ಯುದ್ಧದಲ್ಲಿ ಗಳಿಸಿದ ಮೊದಲ ವಿಜಯವಾಗಿತ್ತು. ತದ ನಂತರದಲ್ಲಿ ಇದೆ ತಂಡಕ್ಕೆ ತ್ರೀ ಪಿಂಪಲ್ಸ್ ಪರ್ವತವನ್ನು ವಶಪಡಿಸಿಕೊಳ್ಳಲು ಆಜ್ಞೆ ನೀಡಲಾಯಿತು. ಪಾಕಿಸ್ತಾನದ ನಪುಂಸಕ ಸೈನಿಕರನ್ನು ಅಲ್ಲಿಂದ ಓಡಿಸುವ ಬಹುದೊಡ್ಡ ಜವಾಬ್ದಾರಿ ಇದಾಗಿತ್ತು. ವಿರೋಧಿಗಳ ತೀವ್ರವಾದ ಗುಂಡಿನ ದಾಳಿಯ ನಡುವೆಯೂ ವಿಜಯಂತ ಮುನ್ನಗಿದ್ದ. ತನ್ನ ಮೈ ಪೂರ್ತಿ ಆರು ಗುಂಡು ಬಿದ್ದಿದ್ದಿರರೂ ಎದೆಗೆ ಎದೆ ಕೊಟ್ಟು ಆ ಹದಿಮೂರು ಡಿಗ್ರಿ ಮೈ ಕೊರೆಯುವ ಹುಣ್ಣಿಮೆ ರಾತ್ರಿಯಂದು ತ್ರಿಪಿಂಪಲ್ಸ್ ಬೆಟ್ಟದ ತುತ್ತತುದಿಯಲ್ಲಿ ತ್ರಿವರ್ಣ ಧ್ವಜ ನೆಟ್ಟು ಉನ್ನತ ಅಧಿಕಾರಿಗೆ “ನಾವು ತ್ರಿ ಪಿಂಪಲ್ಸ್ ಗೆದ್ದೆವು” ಎಂದು ವಯರ್ ಲೆಸ್ಸಲ್ಲಿ ಮಾಹಿತಿ ರವಾನಿಸಿ ಪ್ರಾಣಾರ್ಪಣೆ ಮಾಡಿದ. ತಾಯಿ ಭಾರತಿಗೆ ತನ್ನ ಬಿಸಿ ರಕ್ತದಲ್ಲಿ ವಿಜಯತಿಲಕವನಿಟ್ಟು ಆತ ಶಾಶ್ವತ ಮೌನ ಮೂರ್ತಿಯಾದ.

ತಾನು ಹುತಾತ್ಮನಾಗುವ ಎರಡು ದಿನ ಮೊದಲು ಆತ ಬರೆದ ಪತ್ರವೊಂದು ಅದ್ಬುತ. ಆ ಬೆಟ್ಟದ ತುದಿಯಲ್ಲಿ ಕುಳಿತು ಮೈ ಕೊರೆಯುವ ಚಳಿಯಲ್ಲಿ ವಿರೋಧಿಗಳ ಗುಂಡಿನ ಮಳೆಯ ನಡುವೆ ಕಾರ್ಗಿಲ್ ಯೋಧರು ತಮ್ಮ ಹೆಪ್ಪುಗಟ್ಟಿದ ಕೈಯಲ್ಲಿ ಮನೆಯವರಿಗೆ ಪತ್ರ ಬರೆಯುತ್ತಿದ್ದರು. ಆದರೆ ಆ ಪತ್ರಗಳು ಮಾತ್ರ ತ್ರಿವರ್ಣ ಧ್ವಜದಲ್ಲಿ ಸುತ್ತಿದ ಅವರ ದೇಹದ ಜತೆ ಮನೆಯವರಿಗೆ ತಲುಪುತಿತ್ತು. ಹಾಗೆಯೇ ತಾನು ಜೀವಬಿಟ್ಟ ಎರಡು ದಿನಮೊದಲು ವಿಜಯಂತ್ ಕೂಡ ತನ್ನ ತಂದೆ ತಾಯಿಗೆ ಒಂದು ಪತ್ರ ಬರೆದಿದ್ದ ಅದು ಅವನ ಜೀವನದ ಕೊನೆಯ ಪತ್ರವಾಗಿತ್ತು. ಆ ಪತ್ರ ಹೀಗಿತ್ತು.

“ಪ್ರೀಯ ಪಾಪ,ಮಮ್ಮಿ,ಗ್ರೇನಿ ಮತ್ತು ನನ್ನ ಬಿರ್ದಿ,

ಯಾವಾಗ ನಿಮಿಗೆ ಈ ಪತ್ರ ತಲುಪುತ್ತದೆಯೋ ಅಷ್ಟೋತ್ತಿಗೆ ಆಕಾಶದಿಂದ ನಾನು ನಿಮ್ಮನ್ನು ನೋಡುತಿರಬಹುದೇನೋ ಅಥವಾ ಉನ್ನತ ಅಧಿಕಾರಿಗಳಿಂದ ಪ್ರಶಂಸೆಯ ಮಾತನ್ನು ಕೇಳುತ್ತಿರುತ್ತೇನೋ ಏನೋ. ನನಿಗೇನು ಪಶ್ಚಾತಾಪ ಇಲ್ಲ, ಒಂದು ವೇಳೆ ನಾನು ಮತ್ತೆ ಮನುಷ್ಯನಾಗಿ ಹುಟ್ಟಿ ಬಂದರೆ ಭಾರತೀಯ ಸೇನೆಗೆ ಮತ್ತೆ ಬರ್ತಿಹೊಂದಿ ದೇಶಸೇವೆ ಮಾಡುತ್ತೇನೆ. ನಿಮಿಗೆ ಸಾಧ್ಯವಾದರೆ ಇಲ್ಲಿಗೆ ಬನ್ನಿ! ನಿಮ್ಮ ನಾಳೆಗಾಗಿ ಭಾರತೀಯ ಸೇನೆ ಎಂತಹ ದುರ್ಘಮ ಪ್ರದೇಶದಲ್ಲಿ ಹೋರಾಡುತ್ತಿದೆ ನೋಡಿ!


ನಮ್ಮ ಈ ಸಾಧನೆಯನ್ನು ನನ್ನ ನಂತರ ಸೇನೆಗೆ ಸೇರುವ ಎಲ್ಲಾ ನೂತನ ಸೈನಿಕರಿಗೆ ಖಂಡಿತವಾಗಿಯೂ ಹೇಳಬೇಕು. ನನ್ನ ರಕ್ತಸಿಕ್ತ ಶರೀರದ ಯಾವುದಾದರೂ ಭಾಗವನ್ನು ತೆಗೆಯಲು ಆಗುತ್ತದೆ ಎಂದಾದ್ರೆ ಅದನ್ನು ದಾನ ಮಾಡಿ. ಅಮ್ಮ ಅನಾಥರಿಗೆ ಸದಾ ದಾನ ಮಾಡುತ್ತಾ ಇರಿ! ರೂಕ್ಸಾನಾನಿಗೆ ಪ್ರತಿ ತಿಂಗಳೂ 50ರೂಪಾಯಿ ತಪ್ಪದೆ,ಮರೆಯದೆ ಕಳುಹಿಸಿ ಕೊಡಿ. ಯೋಗಿ ಬಾಬಾನನ್ನು ಆಗಾಗ ಭೇಟಿಯಾಗುತ್ತಾ ಇರಿ.

Best of luck ಬಿರ್ದಿ ಈ ಜೀವ ಮಾಡಿದ ಜೀವದಾನವನ್ನು ಯಾವತ್ತೂ ಮರೆಯಬೇಡ. ಮಮ್ಮಿ ಪಾಪ ನೀವು ನಿಮ್ಮ ಮಗನ ಬಗ್ಗೆ ಹೆಮ್ಮೆ ಪಡಬೇಕು.

ಮಮ್ಮಾಜಿ ನಾನೇನಾದ್ರು ತಪ್ಪು ಮಾಡಿದ್ರೆ ಕ್ಷಮಿಸಿಬಿಡಿ. ಓಕೆ ನಾನು ಹೋಗುವ ಕಾಲ ಬಂತು.

Best of luck to you all
Live life king size…………..

-ವಿಜಯ್”

ಎಂತಹ ಅದ್ಬುತ ಮಾತುಗಳು ಅಲ್ವಾ? ಈ ಪತ್ರದಲ್ಲಿ ನಮೂದಿಸಿದ ರೂಕ್ಸಾನ ಯಾರುಗೊತ್ತಾ?

ರೂಕ್ಸಾನ ಆರು ವರ್ಷದ ಪುಟ್ಟ ಕಿವಿ ಕೇಳದ ಕಾಶ್ಮೀರಿ ಬಾಲಕಿ. ಆ ಮಗುವಿನ ತಂದೆಯನ್ನು 1999ರಲ್ಲಿ ಜಿಹಾದಿ ಬಯೋತ್ಪದಕರು ಕೊಂದುಹಾಕಿದ್ದರು. ಅಲ್ಲದೆ ರೂಕ್ಸಾನನ ಕಣ್ಣೆದುರೇ ಕಾಶ್ಮೀರದ ನಡುರಸ್ತೆಯಲ್ಲಿ ಆಕೆಯ ತಾಯಿಯನ್ನು ಬಯೋತ್ಪದಕರು ಕೊಚ್ಚಿ ಕೊಚ್ಚಿ ಕೊಂದಿದ್ದರು. ಈ ದೃಶ್ಯ ನೋಡಿ ಭಯ ಬೀತಳಾದ ರೂಕ್ಸಾನ ಮಾನಸಿಕವಾಗಿ ಆಘಾತಗೊಂಡು ತನ್ನ ಸ್ವರವನ್ನು ಕಳೆದುಕೊಂಡು ಮೂಗಿಯಾಗಿದ್ದಳು. ಈ ಅನಾಥ ಮುದ್ದಾದ ಮೂಗಿ ಬಾಲಕಿಯನ್ನು ತನ್ನ ಸೈನಿಕ ಕ್ಯಾಂಪಿನ ಪಕ್ಕ ಇರುವ ಶಾಲೆಯ ಆಟದ ಮೈದಾನದಲ್ಲಿ ಕಂಡ ವಿಜಯನ್ ಥಾಪರ್ ಕೈಗೆತ್ತಿಕೊಂಡು ಮುದ್ದುಮಾಡತೊಡಗಿದ. ಅವಳ ಕಷ್ಟಕ್ಕೆ ಸ್ಪಂದಿಸಿ ಅವಳ ಸಮಸ್ಯೆಗೆ ಚಿಕಿತ್ಸೆ ಕೊಡಿಸುತ್ತಾ ಬಂದ. ಅಲ್ಲದೆ ತನ್ನ ಸಂಭಳದಲ್ಲಿ 50ರೂಪಾಯಿಯನ್ನು ಅವಳಿಗೆ ಸಹಾಯವಾಗಿ ನೀಡುತ್ತಿದ್ದ. ತನ್ನ ಸಾವಿನ ನಂತರವೂ ಅವಳಿಗೆ ಸಹಾಯ ಮಾಡಬೇಕು ಎಂದು ತನ್ನ ಈ ಪತ್ರದಲ್ಲಿ ವಿಜಯನ್ ತಂದೆಯಲ್ಲಿ ಕೇಳುತ್ತಿರುವುದು.

ಆದರೆ ವಿಶೇಷವೇನೆಂದರೆ ರೂಕ್ಸನನಿಗೀಗ 21ವರ್ಷ ವಯಸ್ಸು. ವಿಜಯನ್ ಮಾಡಿದ ಸಹಾಯದಿಂದಾಗಿ ಮಾನಸಿಕವಾಗಿ ಆಘಾತಗೊಂಡಿದ ಆಕೆ ಈಗ ಪೂರ್ತಿ ಗುಣಮುಖಲಾಗಿದ್ದಾಳೆ ಅಲ್ಲದೆ ಮಾತು ಕೂಡಾ ಆಡುತ್ತಿದ್ದಾಳೆ. ಇಂದಿಗೂ ವಿಜಯಂತಿನ ತಂದೆ ತಾಯಿ ತಪ್ಪದೆ ಆಕೆಗೆ ಸಹಾಯವನ್ನೂ ಮಾಡುತ್ತಿದ್ದಾರೆ. ಇತ್ತೀಚಿಗೆ ಆಕೆಗೊಂದು ಸಂಪರ್ಕಕ್ಕಾಗಿ ಮೊಬೈಲ್ ಉಡುಗೊರೆಯಾಗಿ ನೀಡಿದ್ದಾರೆ. ಸತ್ತಮೇಲೂ ಒಂದು ಹುಡುಗಿಗೆ ಜೀವಕೊಟ್ಟು, ಸ್ವರ ಕೊಟ್ಟು ನಿರಂತರ ಸಹಾಯಕ್ಕೆ ಕಾರಣವಾದ ಆ ಸೈನಿಕ ಶ್ರೇಷ್ಠ ಅಲ್ವಾ ಬಂಧುಗಳೇ?

ಇದೆ ವಿಜಯಂತ್ ಥಾಪರ್ ಪತ್ರದಲ್ಲಿ ನಾವು ಹೋರಾಡುವ ತ್ರೀ ಪಿಂಪಲ್ಸ್ ಬೆಟ್ಟವನ್ನು ಒಮ್ಮೆ ನೋಡಬನ್ನಿ ಅಪ್ಪ ಎಂದು ಕೇಳಿಕೊಂಡಿದ್ದರು ಅಲ್ವಾ? ಹುತಾತ್ಮ ವಿಜಯಂತ್ ಅವರ ತಂದೆ
ಕೆ.ಯನ್ ಥಾಪರ್ ಇತ್ತೀಚೆಗೆ 2016ರಲ್ಲಿ ತನ್ನ 73ನೇ ವಯಸ್ಸಿನಲ್ಲಿ ಆ 18ಸಾವಿರ ಅಡಿ ಎತ್ತರದ 30ಡಿಗ್ರಿ ಚಳಿಯ ಕಾರ್ಗಿಲ್ ಹಿಮಶಿಕರವನ್ನು ಏರಿ ತನ್ನ ಮಗ ಜೀವಬಿಟ್ಟ ಸ್ಥಳದಲ್ಲಿ ತ್ರಿವರ್ಣಧ್ವಜ ಹಾರಿಸಿ ಬಂದಿದ್ದಾರೆ. ತನ್ನ ಹಿರಿ ವಯಸ್ಸಿನಲ್ಲಿಯೂ ಮಗನ ಕೊನೆಯ ಇಚ್ಛೆಯನ್ನು ಪೂರೈಸಿಯೇ ಸಾಯುತ್ತೇನೆ ಎಂಬುದು ಆ ಮುದಿ ಜೀವದ ಕೊನೆಯ ಆಸೆ….

ಸೇನೆಗೆ ಸೇರಿ ಬರೀ ಆರು ತಿಂಗಳಲ್ಲಿ ತನ್ನ 22ನೇ ವಯಸ್ಸಿನಲ್ಲಿ ಹುತಾತ್ಮನಾದ
ಈ ಸೈನಿಕನ ಯೋಶೋಗಾಥೆಗೆ ಅದ್ಹೇಗೆ ವಿಧಾಯ ಹೇಳಬೇಕು ಗೊತ್ತಾಗ್ತಿಲ್ಲ ಬಂಧುಗಳೇ!

ಈ ಪುಣ್ಯ ಭೂಮಿಯಲ್ಲಿ ಅಲೆಮಾರಿಯಂತೆ ದೇಹವಿಲ್ಲದೆ ಅಲೆದಾಡುತ್ತಿರುವ ರಾಷ್ಟ್ರೀಯತೆ ದೇಶಪ್ರೇಮವನ್ನು ಬಿತ್ತುವ ಆತನ ಆತ್ಮಕ್ಕೆ ನಾವೇನಾದ್ರು ಜೀವ ತುಂಬಬಹುದಾ????

✍ಸಚಿನ್ ಜೈನ್ ಹಳೆಯೂರ್

Post Author: Ravi Yadav