ಸಿದ್ದರಾಮಯ್ಯ ನಾಲ್ಕೂವರೆ ವರ್ಷದಲ್ಲಿ ಮಾಡಿದ್ದು ನಿದ್ದೆ ಮತ್ತು ಸಾಲ ಮಾತ್ರ.ರಾಜ್ಯದ ಪ್ರತಿಯೊಬ್ಬ ಕನ್ನಡಿಗನ ತಲೆಗೆ ₹44 ಸಾವಿರ ಸಾಲದ ಹೋರೆ..!!

ಸಿದ್ದರಾಮಯ್ಯ ನಾಲ್ಕೂವರೆ ವರ್ಷದಲ್ಲಿ ಮಾಡಿದ್ದು ನಿದ್ದೆ ಮತ್ತು ಸಾಲ ಮಾತ್ರ.ರಾಜ್ಯದ ಪ್ರತಿಯೊಬ್ಬ ಕನ್ನಡಿಗನ ತಲೆಗೆ ₹44 ಸಾವಿರ ಸಾಲದ ಹೋರೆ..!!

0

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕಳೆದ 4 ವರ್ಷಗಳಲ್ಲಿ ₹90 ಸಾವಿರ ಕೋಟಿಗೂ ಹೆಚ್ಚು ಸಾಲ ಮಾಡಿದೆ.

2012–13ರಲ್ಲಿ ರಾಜ್ಯ ಸರ್ಕಾರದ ಒಟ್ಟು ಹೊಣೆಗಾರಿಕೆ ಮೊತ್ತ ₹1,18,155 ಕೋಟಿಯಷ್ಟಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮಂಡಿಸಿದ 5 ನೇ ಬಜೆಟ್‌ನ ಹೊತ್ತಿಗೆ ಈ ಮೊತ್ತ ₹2,08,557 ಕೋಟಿ ದಾಟಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಅಂತರ್ಜಾಲ ತಾಣದಲ್ಲಿ 2016ರ ಡಿಸೆಂಬರ್‌ನಲ್ಲಿ ಪ್ರಕಟವಾಗಿರುವ ಅಂಕಿ ಅಂಶ ಈ ಮಾಹಿತಿ ಬಹಿರಂಗಪಡಿಸಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು, ಸಾಲದ ಮೊತ್ತ ಏರಿಕೆಯಾಗುತ್ತಿರುವ ಕುರಿತು ಅಂದಿನ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದುಂಟು. ಕರ್ನಾಟಕ ವಿತ್ತೀಯ ಹೊಣೆಗಾರಿಕೆಯ ಅಧಿನಿಯಮದ ಮಿತಿಯನ್ನೂ ಮೀರಿ ಸಾಲ ಮಾಡಲಾಗುತ್ತಿದೆ ಎಂದು ದೂಷಿಸಿದ್ದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಲದ ಮೊತ್ತ ಪ್ರತಿ ವರ್ಷ ಸರಿಸುಮಾರು ₹12 ಸಾವಿರ ಕೋಟಿಗಳಷ್ಟು ಏರಿಕೆಯಾಗುತ್ತಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಪ್ರತಿ ವರ್ಷ ಸಾಲ ಪಡೆಯುತ್ತಿರುವ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿರುವುದು ಅಂಕಿ ಅಂಶ ಬಹಿರಂಗ ಪಡಿಸಿದೆ.

ಮೊದಲ ವರ್ಷ ₹20 ಸಾವಿರ ಕೋಟಿ, ಎರಡನೇ ವರ್ಷ ₹21 ಸಾವಿರ ಕೋಟಿ, ಮೂರನೇ ವರ್ಷ ₹21 ಸಾವಿರ ಕೋಟಿ ಹಾಗೂ ನಾಲ್ಕನೇ ವರ್ಷ ₹28 ಸಾವಿರ ಕೋಟಿ, ಐದನೇವರ್ಷ 35ಸಾವಿರ ಕೋಟಿ ಮೊತ್ತವನ್ನು ವಿವಿಧ ಮೂಲಗಳಿಂದ ಸಾಲ ಪಡೆಯಲಾಗಿದೆ.

ಮುಖ್ಯಮಂತ್ರಿಯಾದ ಬಳಿಕ 2013ರ ಜುಲೈ 12ರಂದು ತಮ್ಮ ಮೊದಲ ಬಜೆಟ್‌ ಮಂಡಿಸಿದ್ದ ಸಿದ್ದರಾಮಯ್ಯ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಲ ಎತ್ತುವಳಿಯಲ್ಲಿ ತೋರಿದ ಉದಾರತೆಯನ್ನು ವ್ಯಂಗ್ಯವಾಡಿದ್ದರು.

‘ರಾಜಸ್ವ ಸಂಗ್ರಹಣೆಗೆ ಆದ್ಯತೆ ನೀಡಿದ್ದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಸಾಲ ಎತ್ತುವಳಿ ಅವಲಂಬನೆ ಕಡಿಮೆಯಾಗುತ್ತಿತ್ತು. ದುಬಾರಿಯಾಗಿರುವ ಸಾಲಗಳನ್ನು ತೆಗೆದುಕೊಂಡರೆ ಮುಂದಿನ ಪೀಳಿಗೆಯ ಮೇಲೆ ಬೃಹತ್‌ ಸಾಲದ ಹೊರೆಯನ್ನು ಹೊರಿಸಲಾಗುತ್ತದೆ. ಸಾಲದ ಎತ್ತುವಳಿ ಹೊಣಿಗಾರಿಕೆ ಮೊತ್ತ 2006ರಿಂದ 2012ರ ಅವಧಿಯಲ್ಲಿ ದುಪ್ಪಟ್ಟಾಗಿದೆ’ ಎಂದು ಬಜೆಟ್‌ನಲ್ಲಿ ಆಕ್ಷೇಪಿಸಿದ್ದರು.

ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿದ್ದ ಅವಧಿ (2005–06) ರಾಜ್ಯದ ಒಟ್ಟು ಹೊಣೆಗಾರಿಕೆ ಮೊತ್ತ ₹56,027 ಕೋಟಿಯಷ್ಟಿತ್ತು.

2007ರಲ್ಲಿ ರಾಜ್ಯದ ಸಾಲ ₹63,844 ಕೋಟಿಗೆ ತಲುಪಿತ್ತು. ಈಗ ₹2,08,557 ಕೋಟಿಗೆ ತಲುಪಿದ್ದರಿಂದಾಗಿ ಸಾಲದ ಮೊತ್ತ ಕಳೆದ 10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಳವಾದಂತಾಗಿದೆ.

ಮಿತಿಯ ಗಡಿ ತಲುಪಿದ ಸಾಲ: ರಾಜ್ಯ ವಿಧಾನಮಂಡಲಗಳಲ್ಲಿ ಅನುಮೋದನೆ ಪಡೆದ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಅನುಸಾರ ಸರ್ಕಾರದ ಸಾಲದ ಮಿತಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ)ದ ಶೇ25ರ ಮಿತಿಯಲ್ಲಿರಬೇಕು.

2012ರಲ್ಲಿ ಶೇ22.61ರಷ್ಟಿದ್ದ ಸಾಲದ ಮಿತಿ 2017ರ ಏಪ್ರಿಲ್‌ ಹೊತ್ತಿಗೆ ಶೇ 24.94ಕ್ಕೆ ತಲುಪಲಿದೆ.

ಇದೀಗ ಮತ್ತೆ ಸಾಲ ಮಾಡಹೊರಟಿದ್ದಾರೆ. 2017-18 ರಲ್ಲಿ 1,86,561 ಲಕ್ಷ ಕೋಟಿಯ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅದರ ಜಾರಿಗೆ 37,092 ಸಾವಿರಕೋಟಿ ಸಾಲ ಮಾಡಿದ್ದರು. ಆದರೆ ಇದೀಗ 2018-19 ವಿತ್ತವರ್ಷದಲ್ಲಿ ಸಿದ್ದರಾಮಯ್ಯ ಅವರ ಬಜೆಟ್ ಮೊತ್ತ 2.1ಲಕ್ಷಕೋಟಿ ದಾಟುವ ಸಾಧ್ಯತೆಯಿದೆ. ಆದರೆ 2017-18ರಲ್ಲಿ ನಿರೀಕ್ಷಿತ ಆದಾಯ ಬಾರದ ಕಾರಣದಿಂದ ಈ ವರ್ಷವೂ ಸಾಲ ಹೆಚ್ಚಿಸುವ ಅನಿವಾರ್ಯತೆ ಇದೆ .ಈ ಕಾರಣದಿಂದಾಗಿ ಸಾಲ 45ಸಾವಿರ ಕೋಟಿ ಮೀರುವ ಸಾಧ್ಯತೆ ಇದೆ. ಇದರಿಂದಾಗಿ ಕರ್ನಾಟಕದ ಒಟ್ಟುಸಾಲ 2.42.420 ಲಕ್ಷಕೋಟಿಯನ್ನೂ ದಾಟಲಿದೆ. ಪ್ರತಿಯೊಬ್ಬ ಕನ್ನಡಿಗನ ತಲೆಗೆ 38ಸಾವಿರ ಸಾಲದ ಹೊರೆ ಬೀಳಲಿದೆ.

ಸಿದ್ದರಾಮಯ್ಯರೆ ಆಡಳಿತದಲ್ಲಿ ಆದಾಯ ಕುಸಿಯಲು ಅನೇಕ ಕಾರಣಗಳಿವೆ.
ಬಿಜೆಪಿ ಆಡಳತ ನಡೆಸುತ್ತಿದ್ದಾಗ ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆ ದರ ಶೇ.18.5 ರಷ್ಟಿತ್ತು, ಇದು ಇಂದು 4.7 ಕ್ಕೆ ಇಳಿದಿದೆ, ಕೈಗಾರಿಕೆ ಬೆಳವಣಿಗೆಯ ಧರ 8.5 ರಷ್ಟುಇತ್ತು ಆದರೆ ಈಗ ಶೇ.2.2 ಕ್ಕೆ ಇಳಿದಿದೆ. ಅದೇರೀತಿ ಬಂಡವಾಳ ಹೂಡಿಕೆ ಯಲ್ಲಿ ಶೇ.4.15 ರಷ್ಟು ಆಗ, ಆದರೆ ಈಗ ಶೇ. 2.12ಕ್ಕೆ ಇಳಿದಿದೆ, ಯೋಜನಾ ವೆಚ್ಚವು ಶೇ.14 ರಿಂದ ಶೇ.9.5ಕ್ಕೆ ಇಳಿದಿದು ಇದೆಲ್ಲಾ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಅಲ್ಲದೆ ಆದಾಯ ಬಾರದ ಮೂಲಗಳಿಗೆ ಸಿದ್ದರಾಮಯ್ಯ ಅನಾವಶ್ಯಕವಾಗಿ ಖರ್ಚುಮಾಡಿದರು. ಟಿಪ್ಪುಜಯಂತಿ, ಶಾದಿಭಾಗ್ಯ, ಸರ್ಕಾರದ ಮಿತಿಮೀರಿದ ಜಾಹೀರಾತುಗಳಿಗೆ ಎಗ್ಗಿಲ್ಲದೆ ಖರ್ಚು ಮಾಡಿದರು. ರಾಜ್ಯದ ಕಾನೂನು ವ್ಯವಸ್ಥೆ ಹದಗೆಟ್ಟಿದ್ದು ಅದಕ್ಕೂ ಅನಿವಾರ್ಯ ಖರ್ಚು ಹೆಚ್ಚಾಗಿದೆ.

ಅಲ್ಲದೆ ಸಿದ್ದರಾಮಯ್ಯ ಹಾಗೂ ಅವರ ಮಂತ್ರಿಗಳ ವೈಯಕ್ತಿಕ ಶೋಕಿಯೂ ಹೆಚ್ಚಾಗಿದೆ. ಸಿದ್ದರಾಮಯ್ಯರ ಅವರ ಖರ್ಚಿನ ಕುರಿತು ಮಾಹಿತಿಹಕ್ಕು ಕಾಯ್ದೆಯಡಿಯಲ್ಲಿ ಪಡೆದ ಒಂದು ಮಾಹಿತಿ ಹೀಗಿದೆ.

ಒಟ್ಟು ಖರ್ಚಿನ ವಿವರಗಳು..

ಸಿದ್ದರಾಮಯ್ಯರ ಅಧಿಕೃತ ನಿವಾಸ ಕೃಷ್ಣ ಹಾಗೂ ಕಾವೇರಿಗೆ ಗೃಹೋಪಕರಣ ಹಾಗೂ ನಾಲ್ಕು ಬೃಹತ್ ಟಿವಿ ಖರಿಧಿ ಮಾಡಲು ಮಾಡಿದ ಖರ್ಚು 18,38,426 ರೂಪಾಯಿ.
ತನ್ನ ನಿವಾಸದ ಬೆಡ್ ಶೀಟ್, ದಿಂಬು, ರಬ್ಬರ್ ಮ್ಯಾಟ್, ಸೋಫಾ, ಬೆಡ್ ಕವರಿಗೆ ಬರೋಬ್ಬರಿ 15,97,898 ರೂಪಾಯಿ ಖರ್ಚು ಮಾಡಿದ್ದಾರೆ.
ಬಾತ್ರೂಮ್ ಹಾಗೂ ವಾಟರ್ಪ್ರೋಪಿಂಗ್ ವ್ಯವಸ್ಥೆಗೆ ಸುಮಾರು 24,87,234 ರೂಪಾಯಿ.
ಅಡುಗೆಮನೆ, ಪೂಜೆಕೋಣೆ, ಸ್ಟೋರ್ ರೂಮ್ ರಿಪೇರಿಗೆ ಸುಮಾರು 35,63,807 ರೂಪಾಯಿ.
ಇನ್ನು ಮರದಕೆಲಸ, ಷೋಕೇಸ್, ಗ್ಲಾಸ್ ಕೆಲಸಕ್ಕೆ ಸರಿಸುಮಾರು 43,00,900 ರೂಪಾಯಿ ಖರ್ಚು ಮಾಡಲಾಗಿದೆ.
ಮುಖ್ಯಮಂತ್ರಿಗಳು ತಾವು ಬಳಸುವ ಸೋಪು ಮತ್ತು ರೂಮ್ ಫ್ರೆಶ್ನರ್ ಗೆ ಸುಮಾರು 1,26,878 ರೂಪಾಯಿ ಖರ್ಚು ಮಾಡಿದ್ದಾರೆ.
ಪೇಪರ್ ಕಪ್ಪಿಗೆ 1,87,950 ರೂಪಾಯಿ. ಅಗರುಬತ್ತಿ, ವಾಷಿಂಗ್ ಪೌಡರ್, ಬ್ಯಾಟರಿ, ಹಾರ್ಪಿಕ್ ಕ್ಲಿನರಿಗೆ 50 ಸಾವಿರ ರೂಪಾಯಿ. ಮುಖ್ಯಮಂತ್ರಿಗಳು ನಿಂತು ಸ್ನಾನ ಮಾಡುವುದಲ್ಲ ಅವರು ಕುಳಿತು ಸ್ನಾನ ಮಾಡುವುದು.ಆ ಕುಳಿತುಕೊಳ್ಳುವ ಸ್ಟೂಲಿಗೆ ಮಾಡಿದ ಖರ್ಚು 22 ಸಾವಿರ. ನಮ್ಮ (ಎ)ಮ್ಮೆಯ ಮುಖ್ಯಮಂತ್ರಿಗಳು ಒಟ್ಟು ಮಾಡಿದ ಖರ್ಚು ಸರಿಸುಮಾರು 5 ಕೋಟಿ ರೂಪಾಯಿ. ಅಲ್ಲದೆ ಎರಡು ಕೋಟಿಯ ಬಿಸ್ಕಟ್ ತಿಂದದ್ದು, 80ಲಕ್ಷದ ವಾಚು ಕಟ್ಟಿಕೊಂಡದ್ದು ಇತ್ಯಾದಿ.

ಒಟ್ಟಾಗಿ ಕರ್ನಾಟಕದ ಆರ್ಥಿಕಸ್ಥಿತಿ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ರಾಷ್ಟ್ರಮಟ್ಟದಲ್ಲಿ ತನ್ನ ವರ್ಚಸ್ಸು ಕಳೆದುಕೊಂಡಿದೆ. ಹೀಗೆ ಮುಂದುವರೆದರೆ ಮುಂದೊಂದು ದಿನ ದೀವಾಳಿ ಆಗುದರಲ್ಲಿ ಸಂಶಯವೇ ಇಲ್ಲ.
ಸಾಲ ಸಿಗುತ್ತದೆ ಎಂದು ಸಾಲ ಮಾಡಬಾರದು. ಗೊತ್ತುಗುರಿಯಿಲ್ಲದ ಸಾಲ ಎತ್ತುವಳಿ ನಮ್ಮ ಆರ್ಥಿಕ ವ್ಯವಸ್ಥೆಗೆ ಮಾರಕ
–ಸಿದ್ದರಾಮಯ್ಯ, ಮುಖ್ಯಮಂತ್ರಿ, (2013ರ ಬಜೆಟ್‌ನಲ್ಲಿ ಹೇಳಿದ್ದು). ಆದರೆ ಈಗ ರಾಜ್ಯದ ಹಣ ದೋಚುವ ಯಂತ್ರ ಸ್ವತಃ ಸಿದ್ದರಾಮಯ್ಯರೆ ಆಗಿದ್ದಾರೆ.

ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಿದರೂ ಈ ಸಾಲದ ಹೊರೆಯಿಂದ ಹೊರಬರಲು ಕನಿಷ್ಠ 15ವರ್ಷಗಳು ಬೇಕೆನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯ. ಸಾಲ ಮಾಡಿ ತುಪ್ಪ ತಿನ್ನುವುದಕ್ಕಿಂತ ಹಾಸಿಗೆ ಇದ್ದಷ್ಟು ಕಾಲು ಚಾಚಿದ್ರೆ ಉತ್ತಮ ಅಲ್ಲವೇ.

✍ ಸಚಿನ್ ಜೈನ್ ಹಳೆಯೂರ್