ಗುಪ್ತಗಾಮಿನಿಯಾದ ಸರಸ್ವತಿ ಕಣ್ಣಿಗೆ ಮನೋಹರವಾದ ಜಲಪಾತದ ರೂಪದಲ್ಲಿ ಕಾಣುವ ನಮ್ಮ ದೇಶದ ಕೊನೆಯ ಹಳ್ಳಿಯದು..!!

ಗುಪ್ತಗಾಮಿನಿಯಾದ ಸರಸ್ವತಿ ಕಣ್ಣಿಗೆ ಮನೋಹರವಾದ ಜಲಪಾತದ ರೂಪದಲ್ಲಿ ಕಾಣುವ ನಮ್ಮ ದೇಶದ ಕೊನೆಯ ಹಳ್ಳಿಯದು..!!

0

ಹೌದು! ಅವಳು ಗುಪ್ತಗಾಮಿನಿ, ಕಣ್ಣಿಗೆ ಕಾಣದ ಹಾಗೆ ಭೂಮಿಯೊಳಗಿನಿಂದ ಪಾತಾಳಮುಖಿಯಾಗಿ ಹರಿಯುವ ಪವಿತ್ರ ನದಿ ಸರಸ್ವತಿ. ಅವಳು ಕಣ್ಣಿಗೆ ನೋಡಳು ಸಿಗುತ್ತಾಳಾ ಎಂಬ ಪ್ರಶ್ನೆಯೊಂದು ನಿಮ್ಮನ್ನು ಕಾಡುತ್ತಾ ಇರಬೇಕಲ್ವಾ?


ಅದೂ ರೌದ್ರರಮಣಿಯವಾದ ಜಲಪಾತದ ರೂಪದಲ್ಲಿ ಕಾಣಸಿಗುತ್ತಾಳ?
ಹಾಗಿದ್ರೆ ಐತಿಹಾಸಿಕ ಮಹತ್ವವನ್ನು ಒಳಗೊಂಡ ಈ ಅಚ್ಚರಿಯ ಹಳ್ಳಿಯಬಗ್ಗೆ ಸ್ವಲ್ಪ ತಿಳಿದುಕೊಳ್ಳಿ.

ಅದು ಉತ್ತರಖಾಂಡ ರಾಜ್ಯದ ಬದರಿನಾಥದಿಂದ ಸರಿಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಅತ್ಯಕರ್ಷಣೀಯವಾದ ಮಾನ ಗ್ರಾಮ. ಇದರ ಇತಿಹಾಸವು ಮಹಾಭಾರತದೊಂದಿಗೆ ಜೋಡಿಕೊಂಡಿದೆ ಅಲ್ಲದೆ ಇದು ಭಾರತದ ಉತ್ತರಪೂರ್ವದ ಅತ್ಯಂತ ಕಟ್ಟಕಡೆಯ ಗ್ರಾಮವೂ ಹೌದು. ಉತ್ತರಖಾಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿರುವ ಈ ಗ್ರಾಮ ಟಿಬೆಟಿಗೆ ಹೊಂದಿಕೊಂಡಿದೆ.

ವರ್ಷಾನುವರ್ಷದಿಂದ ಟಿಬೆಟಿನ ಹಾಗೂ ಭಾರತದ ನಡುವೆ ವ್ಯಾಪಾರ ವ್ಯವಹಾರಗಳು ಇದೆ ಮಾನ ಹಳ್ಳಿಯ ಮೂಲಕ ನಡೆಯುತ್ತಿತ್ತು. ಇದರ ನಾಲ್ಕು ಸುತ್ತಲೂ ಹಚ್ಚ ಹಸಿರಾದ ಬೃಹತ್ ಬೆಟ್ಟಗುಡ್ಡಗಳಿದ್ದು, ಭಾರತದ ಅತ್ಯಂತ ಆಕರ್ಷಿಣಿಯವಾದ ಗ್ರಾಮ ಎಂಬ ಹೆಗ್ಗಳಿಕೆಯೂ ಇದೆ. ತನ್ನದೇ ಆದ ವಿಶಿಷ್ಟವಾದ ಸಾಂಸ್ಕೃತಿಕ ಗತವೈಭವದ ವಿರಾಸತನ್ನು ಇದು ಒಳಗೊಂಡಿದೆ.

ತನ್ನದೇ ಆದ ಹಲವಾರು ವಿಶೇಷತೆಗಳನ್ನು ಒಳಗೊಂಡ ಈ ಹಳ್ಳಿ ಬದರಿನಾಥದಿಂದ ಸ್ವಲ್ಪ ದೂರದಲ್ಲೇ ಇರುವ ಅಲಕಾನಂದ ಮತ್ತು ಸರಸ್ವತಿಯ ಸಂಗಮ ಸ್ಥಳವನ್ನು ಒಳಗೊಂಡಿದೆ. ಮಹಾಭಾರತಕ್ಕೆ ಸಂಬಂದಿಸಿದ ಪುರಾವೆಗಳು ಇಡೀ ದೇಶದಲ್ಲಿ ಸಿಗುವುದಕ್ಕಿಂತ ಹೆಚ್ಚುಈ ಮಾಡ ಹಳ್ಳಿಯಲ್ಲಿ ಸಿಗುತ್ತದೆ. ಗುಪ್ತಗಾಮಿನಿ ಸರಸ್ವತಿಯ ಉಗಮಸ್ಥಾನವೂ ಇದೆ ಹಳ್ಳಿಯಲ್ಲಿದೆ.

ಹುಟ್ಟುವ ಜಾಗದಲ್ಲಿ ಉಕ್ಕುವ ಸರಸ್ವತಿ ಜಲಪಾತವಾಗಿ ಹರಿದು ಸ್ವಲ್ಪ ದೂರದಲ್ಲೇ ಅಲಕಾನಂದ ನದಿಗೆ ಸೇರುವ ಮೊದಲೇ ಮಾಯವಾಗುತ್ತಾಳೆ. ಮತ್ತೆಲ್ಲಿಯೂ ಕಣ್ಣಿಗೆ ಕಾಣಸಿಗುವುದಿಲ್ಲ. ಸರಸ್ವತಿ ಈ ರೀತಿಯಾಗಿ ಗುಪ್ತವಾಗಿ ಹರಿಯಲು ಎರಡು ಕಾರಣಗಗಳನ್ನು ಹಳ್ಳಿಗರು ಅಥವಾ ಸ್ಥಳೀಯರು ನೀಡುತ್ತಾರೆ. ಒಂದು, ಮಹಾಬಲಾಢ್ಯ ಭೀಮ ಕೋಪಗೊಂಡು ತನ್ನ ಗದೆಯಲ್ಲಿ ಭೂಮಿಗೆ ಪ್ರಹಾರ ಮಾಡಿದ, ಆ ಕಾರಣದಿಂದಾಗಿ ನದಿ ಮಾಯವಾಗಿ ಭೂಮಿಯ ಪಾತಾಳಕ್ಕೆ ಜಾರಿಹೋಯಿತು.

ಎರಡನೆಯದು ಇದೆ ಹಳ್ಳಿಯಲ್ಲಿ ಭಗವಾನ್ ಗಣೇಶ ಹಾಗೂ ಮಹರ್ಷಿ ವ್ಯಾಸರು ವ್ಯಾಸಗುಹೆಯಲ್ಲಿ ಕುಳಿತು ವೇದವನ್ನು ಬರೆಯುತ್ತಿದ್ದರು. ಆ ಸಂದರ್ಭದಲ್ಲಿ ಸರಸ್ವತಿಯು ಹರಿಯುವ ಜಳಜಳ ಸಪ್ಪಳ ಗಣೇಶನ ಏಕಾಗೃತೆಯನ್ನು ಭಂಗಮಾಡಿತು. ಸಿಟ್ಟುಗೊಂಡ ಗಣೇಶ “ನೀನು ಕಾಣದಂತೆ ಶಬ್ದಮಾಡದೆ ಹರಿಯುವಂತಾಗು” ಎಂದು ಸರಸ್ವತಿ ಶಾಪ ಕೊಟ್ಟನು ಆ ಶಾಪದ ಪರಿಣಾಮವೇ, ಸರಸ್ವತಿ ಗುಪ್ತಗಾಮಿನಿಯಾಗಲು ಪ್ರಮುಖ ಕಾರಣ. ಅಲ್ಲದೆ ಇಲ್ಲಿ ಬೀಮ್ ಪೂಲ್ “(ಭೀಮ ಸೇತುವೆ)ಎಂಬ ಸೇತುವೆಯಿದೆ”.

ಮಹಾಭಾರತ ಕಾಲದಲ್ಲಿ ಒಂದುಬಾರಿ ಇಲ್ಲೇ ಪಾಂಡವರು ಬೋರ್ಗರೆಯುವ ಸರಸ್ವತಿ ನದಿ ದಾಟಲು ಕಷ್ಟಪಡಬೇಕಾಯಿತು. “ನದಿ ದಾಟಲು ಕಷ್ಟವಾಗುತ್ತಿದೆ ಸಹಾಯ ಮಾಡು” ಎಂದು ಭೀಮ ಸರಸ್ವತಿಯನ್ನು ಕೇಳಿಕೊಂಡಾಗ, ಸರಸ್ವತಿ ಸಹಾಯ ಮಾಡುವ ಬದಲು ಮತ್ತಷ್ಟು ಭೋರ್ಗರೆದು ಹರಿಯಲು ಆರಂಭಿಸಿದಳು. ಕೋಪಗೊಂಡ ಭೀಮ ಎರಡು ಬೃಹತ್ ಬಂಡೆಗಳನ್ನು ಎತ್ತಿ ನದಿಗೆ ಅಡ್ಡಲಾಗಿ ಸೇತುವೆಯ ರೂಪದಲ್ಲಿ ಇಟ್ಟು ಪಾಂಡವರಲ್ಲಿ ಉಳಿದವರನ್ನು ನದಿದಾಟಿಸಿದನು. ಇಂದಿಗೂ ಈ ಭೀಮ್ ಪೂಲ್ ಸೇತುವೆಯನ್ನು ನೋಡಬಹುದು. ಇಂದಿಗೂ ಅಲ್ಲಿ ಸರಸ್ವತಿ ಬೋರ್ಗರೆಯುತ್ತಾ ಹರಿಯುತ್ತಾಳೆ.

ಈ ಮಾನ ಹಳ್ಳಿಯ ಮೂಲಕ ಭಾರತ-ಟಿಬೆಟಿನ ನಡುವೆ ವ್ಯಾಪಾರ ನಡೆಯುತ್ತಿತ್ತು. ಈ ರೀತಿ ವ್ಯಾಪಾರ ನಡೆಯುತ್ತಿರುವಾಗ
ಮಾನಿಕ್ ಷಾ ಎಂಬ ಶಿವಭಕ್ತ ವ್ಯಾಪರಿಯೊಬ್ಬನನ್ನು ಕಳ್ಳರು ದೋಚಿ ರಸ್ತೆಯಮದ್ಯೆಯೇ ಆತನ ತಲೆ ಕಡಿದುಹಾಕುತ್ತಾರೆ. ತನ್ನ ತಲೆ ತುಂಡಾಗಿಬಿದ್ದಿದ್ದರೂ ಮಾನಿಕ್ ಷಾ ಶಿವನ ನಾಮ ಸ್ಮರಣೆ ಮಾಡುತಿದ್ದ.

ತಕ್ಷಣವೇ ಅವನ ಭಕ್ತಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ಆತನಿಗೆ ವರಾಹದ ಮುಖವನ್ನು ಜೋಡಿಸಿದನು. ಮನಿಕ್ ಷಾ ಶಿವನ ಕೃಪೆಯಿಂದ ಮರುಜೀವ ಪಡೆದನು. ಇದಕ್ಕೆ ಸಂಬಂಧಿಸಿದ ವೀರಭದ್ರ ದೇವಸ್ಥಾನ ಇಂದಿಗೂ ಆ ಹಳ್ಳಿಯಲ್ಲಿದೆ. ಅದರಿಂದ ಈ ಹಳ್ಳಿಗೆ ಭೇಟಿ ಕೊಟ್ಟರೆ ನಮ್ಮ ಪಾಪಗಳು ಪರಿಹಾರವಾಗುತ್ತದೆ, ಕಷ್ಟಗಳು ದೂರವಾಗುತ್ತದೆ ಎಂಬ ಮಾತಿದೆ. ಈ ಹಳ್ಳಿ ಭಾರತದ ಏಕೈಕ ಶಾಪ ಮುಕ್ತ ಹಳ್ಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ಇಲ್ಲಿ ವಸುಧಾರ ಎಂಬ ಜಲಪಾತವೂ ಇದೆ.

ನೀವು ಪವಿತ್ರವಾದ ಸಪ್ತ ನದಿಗಳಲ್ಲಿ ಒಂದಾದ ಗುಪ್ತಗಾಮಿನಿ ಸರಸ್ವತಿಯನ್ನು ನೋಡಬೇಕೆಂದರೆ ಈ ನಯನಮನೋಹರವಾದ ಸಮುದ್ರಮಟ್ಟದಿಂದ 3450ಮೀಟರ್ ಎತ್ತರದಲ್ಲಿರುವ ಈ ಐತಿಹಾಸಿಕ ಭಾರತದ ಕೊನೆಯ ಮಾನ ಹಳ್ಳಿಗೊಮ್ಮೆ ಭೇಟಿಕೊಟ್ಟು ಅಲ್ಲಿರುವ ಕೊನೆಯ ಚಾಹಾ ಅಂಗಡಿಯಲ್ಲಿ ಚಹಾ ಸವಿದುಬನ್ನಿ ಎನ್ನುತ್ತಾ…….

✍ಸಚಿನ್ ಜೈನ್ ಹಳೆಯೂರ್