ಪ್ರಪಂಚದ ಅತೀದೊಡ್ಡ ಹಾಗೂ ಅದ್ಭುತವಾದ ಪವಿತ್ರ ಹಿಂದೂ ದೇವಾಲಯವೊಂದು ಅಳಿವಿನಂಚಿನಲ್ಲಿ..??

ಪ್ರಪಂಚದ ಅತೀದೊಡ್ಡ ಹಾಗೂ ಅದ್ಭುತವಾದ ಪವಿತ್ರ ಹಿಂದೂ ದೇವಾಲಯವೊಂದು ಅಳಿವಿನಂಚಿನಲ್ಲಿ..??

0

ಸಣ್ಣ ಸಣ್ಣ ದೇವಾಲಯವೂ ಜಿರ್ಣೋದ್ದಾರವಾಗುತ್ತಿರುವ ಈ ಕಾಲದಲ್ಲಿ ಪ್ರಪಂಚದ ಬೃಹತ್ ದೇವಾಲಯವೊಂದು ಅಳಿವಿಂಚಿನಲ್ಲಿದೆಯೇ? ಯಾವುದು ಆ ದೇವಾಲಯ ಎಂದು ಯೋಚನೆ ಮಾಡ್ತಿದ್ದೀರಾ? ಅದು ಭಾರತದಲ್ಲಿ ಇರುವ ದೇವಾಲಯ ಅಂತೂ ಅಲ್ಲ. ಅದು ಕಾಂಬೋಡಿಯಾದಲ್ಲಿರುವ ಒಂದು ಸುಂದರ ದೇವಾಲಯ.

ಹೌದು ವಿಶ್ವದ ಆ ಪ್ರಸಿದ್ಧ ದೇವಾಲಯ ಇರುವಂತಹದ್ದು ಕಾಂಬೋಡಿಯಾದಲ್ಲಿ. ಇದು ಪ್ರಪಂಚದ ಅತೀ ದೊಡ್ಡ ಹಿಂದುಗಳ ಧಾರ್ಮಿಕ ಸ್ಮಾರಕ. ಯಶೋಧರಪುರ ಇದರ ಐತಿಹಾಸಿಕ ಹೆಸರು.

ಕಾಂಬೋಡಿಯಾ ದೇಶವನ್ನು ಮೊದಲಿಗೆ ಹಿಂದುಗಳು ನಂತರ ಬೌದ್ಧಧರ್ಮಕ್ಕೆ ಸಂಬಂಧಿಸಿದ 27ಕ್ಕೂ ಹೆಚ್ಚು ರಾಜರು ಈ ಆಳಿದರು. ಈ ಕಾರಣದಿಂದಾಗಿ ಆ ದೇಶದಲ್ಲಿ ಹಿಂದೂ ಹಾಗೂ ಬುದ್ಧರಿಗೆ ಸಂಬಂಧಿಸಿದ ಅನೇಕ ಮಂದಿರ, ದೇವಾಲಯಗಳನ್ನು ಕಾಣಬಹುದು. ವಿಷ್ಟು,ಶಿವ,ಭ್ರಮ್ಮ ಹಾಗೂ ವಿವಿಧ ದೇವತೆಗಳಿಗೆ ಸಂಭಂದಿಸಿದ ಅನೇಕ ಸಣ್ಣ ಹಾಗೂ ಬೃಹತ್ ಮೂರ್ತಿಗಳನ್ನು ಅಲ್ಲಿ ಕಾಣಬಹುದು. ಅದರಲ್ಲಿ ಪ್ರಮುಖವಾದದ್ದು ಅಂಗಕೋರ್ ಎನ್ನುವ ದೇವಸ್ಥಾನ.

ಅಂಗಕೋರ್ ದೇವಸ್ಥಾನದಲ್ಲಿ ಪರಮಾತ್ಮ ವಿಷ್ಟುವನ್ನು ಪೂಜೆ ಮಾಡಲಾಗುತ್ತದೆ. ಈ ಮಂದಿರವನ್ನು ಅಂಗಕೋರ ವಂಶದ ಎರಡನೇ ಸೂರ್ಯವರ್ಮನ್(1112-52) ನಿರ್ಮಿಸಿದ. ಈ ರಾಜನ ನಂತರದಲ್ಲಿ ಅಲ್ಲಿ ಹಿಂದೂಧರ್ಮದ ಪ್ರಭಾವ ಕಡಿಮೆಯಾಗಿ ಬೌದ್ಧ ಧರ್ಮಪ್ರಸಿದ್ದಿಗೆ ಬಂತು. ಆ ಕಾಲದಲ್ಲಿ ಈ ದೇವಾಲಯ ಅಳಿವಿನತ್ತ ಸಾಗಿತ್ತು. ನಾಶವಾಗಿದ್ದ ಇದನ್ನು ಫ್ರಾನ್ಸ್ ದೇಶದ ಒಂದು ಪುರಾತತ್ವ ಸಂಸ್ಥೆ ಉತ್ಖನನ ಮಾಡಿತ್ತು. ಇದರಲ್ಲಿ ಭಾರತೀಯ ಪುರಾತತ್ವ ಸಂಸ್ಥೆಯ ಪಾಲುಕೂಡಾ ತುಂಬಾ ಇದೆ. 1986ರಿಂದ 1993 ರಲ್ಲಿ ASI ಸಂಸ್ಥೆ ಇಲ್ಲಿ ಕಾರ್ಯನಿರ್ವಹಿಸಿತ್ತು. ಈ ದೇವಾಲಯದ ಗೋಡೆಯಮೇಲೆ ಮಹಾಭಾರತ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ಕಥೆಗಳಿವೆ. ಹಾಗೂ ಅನೇಕ ಬೃಹತ್ ಗೋಪುರಗಳನ್ನೂ ಇದು ಒಳಗೊಂಡಿದೆ. ಇಲ್ಲಿನ ಕೆತ್ತನೆಗಳು ಕೂಡಾ ಮನೋಹರವಾಗಿದೆ. ಸುಮಾರು ಮೂರು ಎಕರೆ ಜಾಗದಲ್ಲಿರುವ ಈ ದೇವಾಲಯ ಪ್ರಪಂಚದ ಅತಿದೊಡ್ಡ ಹಿಂದೂ ಸ್ಮಾರಕ ಎಂಬುದು ತಜ್ಞರ ಅಭಿಪ್ರಾಯ.

ಹನುಮಾನ್,ಸೀತಾರಾಮ, ಅಂಗದಪ್ರಸಾದ, ರಾಮ ಹಾಗೂ ರಾವಣರ ನಡುವಿನ ಯುದ್ಧ, ಮಹಾಭಾರತ ಮುಂತಾದ ಕಥೆಗಳಿಗೆ ಸಂಬಂಧಿಸಿದಂತೆ ಅನೇಕ ಶಿಲ್ಪಗಳನ್ನು ಇಲ್ಲಿ ಕೆತ್ತಲಾಗಿದೆ.

ಈ ದೇವಸ್ಥಾನದ ಸುತ್ತಲೂ ಇನ್ನೂ ಅನೇಕ ಶಿವ,ವಿಷ್ಟು ಅಲ್ಲದೆ ಭ್ರಹ್ಮನಿಗೆ ಸಂಬಂಧಿಸಿದ 350ಕ್ಕೂ ಹೆಚ್ಚು ಹಿಂದೂ ದೇವಾಲಯಗಳಿವೆ. ಧರ್ಮ ಬದಲಾವಣೆ ಆದಂತೆ ಈ ದೇವಸ್ಥಾನಗಳನ್ನು ಒಡೆದುರುಳಿಸಲಾಗುತ್ತಿತ್ತು. ರಾಜರು ಬೌದ್ಧ ಧರ್ಮವನ್ನು ಸ್ವೀಕರಿಸಿದ ತಕ್ಷಣ ಹಿಂದುಮೂರ್ತಿಯನ್ನು ಕೆಡವಿ ಬುದ್ಧನ ಪ್ರತಿಮೆ ಸ್ಥಾಪಿಸಲಾಗುತ್ತಿತ್ತು. ಈ ಕಾರಣದಿಂದಾಗಿ ಅನೇಕ ದೇವಾಲಯಗಳು ಶಿಥಿಲಗೊಂಡವು.

ಈ ದೇವಾಲಯವನ್ನು ಇಂದು ಪ್ರಸಿದ್ಧ ಪ್ರವಾಸಿ ಸ್ಥಳವಾಗಿ ಪರಿವರ್ತಿಸಲಾಗಿದೆ. ಈಗ ಇದನ್ನು ಅಂಗಕೋರ್ ಪಾರ್ಕ್ ಎಂದು ಕರೆಯಲಾಗುತ್ತದೆ. ದಿನವೊನಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಈ ದೇವಸ್ಥಾನದ ಸೌಂದರ್ಯಯವನ್ನು ಕಣ್ಣು ತುಂಬಿಕೊಳ್ಳಲು ಬರುತ್ತಾರೆ. ಇದು ಕಾಂಬೋಡಿಯಾ ಸರ್ಕಾರಕ್ಕೆ ಒಂದು ಮುಖ್ಯ ಆದಾಯದ ಮೂಲವು ಹೌದು.

ಈ ಅಂಗಕೋರ್ ಪಾರ್ಕಿನ ಸಲಹೆಗಾರರ ಸಮಿತಿಯಲ್ಲಿ ಒಬ್ಬ ಭಾರತೀಯನನ್ನು ನೇಮಿಸಲಾಗುತ್ತದೆ. ಪ್ರೊ.ಸಚ್ಚಿದಾನಂದ ಸಹಯ್ ಎನ್ನುವವರು ಆ ಸ್ಥಾನವನ್ನು ಇಂದು ಅಲಂಕರಿಸಿದ್ದಾರೆ. ಅವರು ಮಗಧ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಹಯ್ ಅವರ ಪ್ರಕಾರ ಅಂಗಕೋರ್ ಎನ್ನುವಂತದ್ದು ವಿಶ್ವವಿಖ್ಯಾತ ಶಿಲ್ಪಕಲೆಯನ್ನು ಒಳಗೊಂಡ ಅದ್ವಿತೀಯ ದೇವಸ್ಥಾನ.

ಆದರೆ ಪ್ರಸ್ತುತ ಕಾಂಬೋಡಿಯಾದಲ್ಲಿ ಹಿಂದುಗಳ ಸಂಖ್ಯೆ ಕ್ಷೀಣಿಸಿದ ಕಾರಣದಿಂದಾಗಿ ಅಲ್ಲಿನ ದೇವಸ್ಥಾನಗಳಿಗೆ ರಕ್ಷರೇ ಇಲ್ಲದಂತಾಗಿದೆ. ಹಲವಾರು ಐತಿಹಾಸಿಕ ಮಂದಿರಗಳು ಧರೆಗುರುಳಿದರೆ ಇನ್ನು ಹಲವು ಅಳಿವಿಂಚಿನಲ್ಲಿದೆ. ಹಿಂದೂ ಪರಂಪರೆಯ ರಾಮಾಯಣ ಹಾಗೂ ಮಹಾಭಾರತಕ್ಕೆ ಸಂಬಂಧಿಸಿದ ಶ್ರೇಷ್ಠವಾದ
ಶಿಲ್ಪಕಲೆಯನ್ನು ಹೊಂದಿರುವ ಈ ದೇವಸ್ಥಾನದ ರಕ್ಷಣೆ ಮಾಡುವಂತ ಜವಾಬ್ದಾರಿ ಹಿಂದುಗಳಾದ ನಮ್ಮೆಲ್ಲರ ಜವಾಬ್ದಾರಿ ಅಲ್ಲವೇ. ಭಾರತ ಸರ್ಕಾರವೂ ಇತ್ತ ಗಮನಹರಿಸಲಿ.

ಈ ಕುರಿತಂತೆ ಕಾಂಬೋಡಿಯಾ ದೇಶಕ್ಕೆ ನಮ್ಮ ಸರ್ಕಾರ ಮನವರಿಕೆ ಮಾಡಲಿ. ಹೇಗಾದ್ರು ಮಾಡಿ ಈ ಅದ್ವಿತೀಯ ಐತಿಹಾಸಿಕಸ್ಮಾರಕ ಉಳಿಸುವುದು ನಿಜವಾದ ಮಾನವ ಧರ್ಮ ಅಲ್ಲವೇ?

ಅವಕಾಶ ಸಿಕ್ಕರೆ ಭೇಟಿಕೊಟ್ಟು ಈ ವಿಶ್ವವಿಖ್ಯಾತ ದೇವಸ್ಥಾನ ನೋಡುವಾ ಎನ್ನುತ್ತಾ.

✍ ಸಚಿನ್ ಜೈನ್ ಹಳೆಯೂರ್