ನೇತಾಜಿ ಕಾರು ಚಾಲಕ, 117 ವರ್ಷದ ಹಿರಿಯ ಜೀವ ಇನ್ನಿಲ್ಲ: ಪ್ರಧಾನಿ ಸಂತಾಪ

ನೇತಾಜಿ ಕಾರು ಚಾಲಕ, 117 ವರ್ಷದ ಹಿರಿಯ ಜೀವ ಇನ್ನಿಲ್ಲ: ಪ್ರಧಾನಿ ಸಂತಾಪ

0

ನವದೆಹಲಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಕಾರು ಚಾಲಕರಾಗಿದ್ದ ಕರ್ನಲ್ ನಿಜಾಮುದ್ದೀನ್ ಇನ್ನಿಲ್ಲ. 117 ವರ್ಷದ ನಿಜಾಮುದ್ದೀನ್ ಸೋಮವಾರ ವೃದ್ಧಾಪ್ಯ ಅಸ್ವಸ್ಥತೆಯಿಂದ ಕೊನೆಯುಸಿರೆಳೆದಿದ್ದಾರೆ.

ಉತ್ತರ ಪ್ರದೇಶದ ಅಜಮ್‌ಗಢ ಜಿಲ್ಲೆ ಮುಬಾರಕ್‌ಪುರದ ಧಕ್ವಾ ಗ್ರಾಮದಲ್ಲಿ ನೆಲೆಸಿದ್ದ ನಿಜಾಮುದ್ದೀನ್ ಸ್ವಸ್ಥಳದಲ್ಲೇ ಇಹಲೋಕ ತ್ಯಜಿಸಿದ್ದಾರೆ. 1901ರಲ್ಲಿ ಜನಿಸಿದ್ದ ನಿಜಾಮುದ್ದೀನ್ ಅವರು ಪತ್ನಿ, ಮೂವರು ಗಂಡು ಮಕ್ಕಳು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

1943 ಮತ್ತು 1945 ಮಧ್ಯೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಿಜಾಮುದ್ದೀನ್ ಅವರು ಸುಭಾಷ್ ಚಂದ್ರ ಬೋಸ್ ಕಾರು ಚಾಲಕರಾಗಿದ್ದರು. ಬೋಸ್‌‌ ಅವರ ಆಪ್ತರಲ್ಲಿ ಒಬ್ಬರಾಗಿ ವಿಶ್ವಾಸ ಪಾತ್ರರಾಗಿದ್ದರು.

ನಿಜಾಮುದ್ದೀನ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಅವರ ಆದರ್ಶ, ಧೈರ್ಯ ಮತ್ತು ದೇಶಭಕ್ತಿ ಸದಾ ಸ್ಮರಣೀಯ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

2015ರಲ್ಲಿ ವಾರಣಾಸಿಯಲ್ಲಿ ನಿಜಾಮುದ್ದೀನ್ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಪಾದಸ್ಪರ್ಶಿಸಿ ನಮಸ್ಕರಿಸಿದ ಫೋಟೋವನ್ನು ಪ್ರಧಾನಿ ಟ್ವಿಟ್ಟರ್‌ ಖಾತೆಯಲ್ಲಿ ಫೋಟೋ ಶೇರ್‌ ಮಾಡಿದ್ದಾರೆ.

Credit:Eenadu India Kannada

http://kannada.eenaduindia.com/News/National/2017/02/07110242/Netaji-Subhash-Chandra-Boses-driver-Nizamuddin-dies.vpf