​ಅದು ಜಗದೊಡೆಯ ಶ್ರೀಕೃಷ್ಣ ಪರಮಾತ್ಮ ತನ್ನ ಕೈಯಾರೆ ಶಂಕುಸ್ಥಾಪನೆ ಮಾಡಿ ನಿರ್ಮಾಣಮಾಡಿದ ಶಿವದೇವಾಲಯ..! 

​ಅದು ಜಗದೊಡೆಯ ಶ್ರೀಕೃಷ್ಣ ಪರಮಾತ್ಮ ತನ್ನ ಕೈಯಾರೆ ಶಂಕುಸ್ಥಾಪನೆ ಮಾಡಿ ನಿರ್ಮಾಣಮಾಡಿದ ಶಿವದೇವಾಲಯ..! 

0

ಹೌದು ಬಂಧುಗಳೇ ಅದು ಎರಡು ಯುಗಪುರುಷರ ಸಮ್ಮಿಲದ ಸಂಕೇತ. ಸ್ವತಃ ಶ್ರೀ ಕೃಷ್ಣನೇ ತನ್ನ ಕೈಯಾರೇ ಶಂಕುಸ್ಥಾಪನೆಮಾಡಿ, ಶಿವಲಿಂಗಕ್ಕೆ ಆಕಾರ ಕೊಟ್ಟು ನಿರ್ಮಿಸಿದ ಐತಿಹಾಸಿಕ ದೇವಸ್ಥಾನ. ಹಿಂದುಗಳ ಈ ಪವಿತ್ರ ಸ್ಥಳವಿರುದು ನಮ್ಮ ಶತ್ರುರಾಷ್ಟ್ರ ಪಾಕಿಸ್ತಾನದಲ್ಲಿ!! ಇದು ಪಾಕಿಸ್ತಾನದ ರಾಜಧಾನಿಯಾದ ಲಾಹೋರಿನಿಂದ ಸರಿಸುಮಾರು 270 ಕಿಲೋಮೀಟರ್ ದೂರದಲ್ಲಿರುವ ಚಕವಾಲ ಎಂಬ ಜಿಲ್ಲೆಯಲ್ಲಿದೆ. ಅದನ್ನು ಕಾಟಾಸ್ರಾಜ್ ಮಂದಿರ ಎಂದು ಕರೆಯಲಾಗುತ್ತದೆ.

ಈ ದೇವಸ್ಥಾನ 6ನೇ ಶತಮಾನಲ್ಲಿ ನಿರ್ಮಾಣವಾದ ದೇವಸ್ಥಾನವಾಗಿದ್ದು ಭಾರತ ವಿಭಜನೆಯವರೆಗೆ ಅಲ್ಲಿ ಹಿಂದುಗಳ ಸಂಖ್ಯೆ ಅಧಿಕವಾಗಿತ್ತು. ಆದರೀಗ ಅದು ಭಕ್ತರಿಲ್ಲದ ದೇವಸ್ಥಾನವಾಗಿದೆ. ಈ ದೇವಸ್ಥಾನಕ್ಕೆ ಸಂಬಂದಿಸಿದಂತೆ ಹಲವಾರು ಪುರಾಣ,ವೇದ, ಅಲ್ಲದೆ ಪವಿತ್ರ ಮಹಾಭಾರತದಲ್ಲಿಯೂ ಉಲ್ಲೇಖಗಳಿವೆ. ಶಿವ ಮತ್ತು ಪಾರ್ವತಿಯ ಮಿಲನದ ಕಥೆಗಳು ಪುರಾಣ ಮತ್ತು ವೇದಗಳಲ್ಲಿ ಸಿಗುತ್ತದೆ. ದೇವಿ ಪಾರ್ವತಿಯು ಶಿವನನ್ನು ಪಡೆಯಲು ಸುದೀರ್ಘವಾದ ತಪ್ಪಸ್ಸನ್ನು ಮಾಡಿದಳು ಆ ಕಾರಣದಿಂದ ಪಾರ್ವತಿಗೆ ಶಿವ ಒಲಿದು ಅವಳನ್ನು ವಿವಾಹವಾದ.

ಆದರೆ ಶಿವನು ಪಾರ್ವತಿಯನ್ನು ವಿವಾಹವಾಗುವ ಮೊದಲೇ ಇನ್ನೊಂದು ಕನ್ಯೆಯನ್ನು ವಿವಾಹವಾಗಿದ್ದನು. ಅವಳೇ ದೇವಿ ಸತಿ. ಆದರೆ ದೇವಿ ಸತಿ ತನ್ನ ತಂದೆಯ ಯಜ್ಞಕುಂಡಕ್ಕೆ ಹಾಕಿ ಪ್ರಾಣಬಿಟ್ಟಿದ್ದಳು. ತನ್ನ ಸತಿ ದೇವಿಯನ್ನು ಕಳಕೊಂಡದಕ್ಕಾಗಿ ಶಿವ ಕಣ್ಣಿರುಹಾಕುತ್ತಾನೆ! ಆ ಕಣ್ಣಿರಿಂದ ರಚನೆಯಾದ ಕೆರೆಯೊಂದು ಈ ದೇವಸ್ಥಾನದ ಪಕ್ಕದಲ್ಲಿದೆ. ಆಮೇಲೆ ಸತಿದೇವಿಯ ಅಂಗದ ಆಧಾರದಲ್ಲಿ ಶಕ್ತಿಪೀಠಗಳು ಭಾರತ ಹಾಗೂ ಪಾಕಿಸ್ತಾನದಲ್ಲಿ ರಚನೆಯಾದವು ಎಂಬ ಪ್ರತೀತಿಯಿದೆ. ಅದರಲ್ಲಿ ಪಾಕಿಸ್ತಾನದಲ್ಲಿ ನಿರ್ಮಾಣವಾದ ಶಕ್ತಿಪೀಠ ಮಾತ ಹಿಂಗಳಜಾದೇವಿ ಮಂದಿರ. ಈ ಪ್ರಖ್ಯಾತ ದೇವಸ್ಥಾನವಲ್ಲದೆ ಪಾಕಿಸ್ತಾನದಲ್ಲಿ ಇನ್ನೊಂದು ದೇವಸ್ಥಾನವಿದೆ ಅದುವೇ ಈ ಕಟಾಸ್ರಾಜ್ ಮಂದಿರ.

ಸಣ್ಣಪುಟ್ಟ ಬೆಟ್ಟಗಳ ಮಧ್ಯದಲ್ಲಿರುವ ಒಂದು ಬೃಹತ್ ಬೆಟ್ಟದ ಮೇಲೆ ನಿರ್ಮಾಣವಾದ ಈ ದೇವಾಲಯ ಅತ್ಯಂತ ಮನೋಹರವಾಗಿದೆ. ವಿಶೇಷವಾಗಿ ಗುಂಬಜಿನ ರಚನೆಗಳನ್ನು ಒಳಗೊಂಡ ಈ ದೇವಾಲಯ ಅದರ ಬಾಗಿಲಿನಲ್ಲೂ ವಿಶೇಷವಾದ ಕೆತ್ತನೆಗಳನ್ನು ಒಳಗೊಂಡಿದೆ. ಗುಂಡಿಗಳನ್ನು ಆಶ್ರಮಗಳನ್ನು ಅದರೊಳಗೆ ಹಲವಾರು ಗರ್ಭಗುಡಿಗಳನ್ನು ಒಳಗೊಂಡಿದೆ. ಹಿಂದೂ ಶಿಲ್ಪಕಲೆಯಲ್ಲಿ ಇದೊಂದು ವಿಶೇಷವಾದ ಪ್ರಕಾರವಾಗಿದ್ದು ಭಾರದಲ್ಲೂ ಕಾಣಸಿಗದ ಹಲವಾರು ರಚನೆಗಳನ್ನು ಇದು ಒಳಗೊಂಡಿದೆ.

ಈ ದೇವಸ್ಥಾನದ ಪಕ್ಕದಲ್ಲಿರುವ ಕೆರೆಯಬಗ್ಗೆ ಮಹಾಭಾರತದಲ್ಲಿ ಉಲ್ಲೇಖವಿದೆ. ಜಗದೊಡೆಯ ಶ್ರೀಕೃಷ್ಣ ಪರಮಾತ್ಮ ಸ್ವತಃ ತನ್ನ ಕೈಯಾರೆ ಈ ದೇವಸ್ಥಾನದ ಶಂಕುಸ್ಥಾಪನೆಮಾಡಿ ಅಲ್ಲಿರುವ ಶಿವಲಿಂಗಕ್ಕೆ ಆಕಾರ ಕೊಟ್ಟ ಎಂಬ ಇತಿಹಾಸವಿದೆ. ಅಲ್ಲದೆ ಕೌರವರೊಡನೆ ಜೂಜಾಟದಲ್ಲಿ ಸೋತು ಪಾಂಡವರು 13ವರುಷಗಳ ಕಾಲ ವನವಾಸ ಅನುಭವಿಸಬೇಕಾಯಿತು. ಆ ವನವಾಸದಲ್ಲಿ ಸುಮಾರು 4ವರ್ಷಗಳನ್ನು ಇದೆ ಜಾಗದಲ್ಲಿ ಕಳೆದರು ಎಂಬ ನಂಬಿಕೆಯಿದೆ. ಅಲ್ಲದೆ ಅಲ್ಲಿರುವ ಶಿವಲಿಂಗವನ್ನು ಪಾಂಡವರು ಪೂಜಿಸುತ್ತಿದ್ದರು.

ಈ ಕಟಾಸ್ರಾಜ್ ಮಂದಿರ ಬಳಿ ಪವಿತ್ರವಾದ ಸರೋವರವೊಂದಿದೆ. ಮಹಾಭಾರದಲ್ಲಿ ಯುಧಿಷ್ಠಿರನು ದಣಿದು ಸರೋವರದ ನಿರುಕುಡಿಯಲು ಬಂದಾಗ ಆಶರೀರವಾಗಿ ಪ್ರತ್ಯಕ್ಷನಾದ ಯಕ್ಷನು ನೀರುಕುಡಿಯುವ ಮೊದಲು ನನ್ನ ಪ್ರಶ್ನೆಗೆ ಉತ್ತರಿಸು ಎಂದು “ಯಕ್ಷ ಪ್ರಶ್ನೆ” ಕೇಳಿದ ಸ್ಥಳವೂ ಇದೆ.

ಈ ಕಟಾಸ್ರಾಜಿನ ಪಕ್ಕದಲ್ಲಿರುವ ಅಮರಕುಂಡ ಸರೋವರ ಮತ್ತು ಭಾರತದಲ್ಲಿರುವ ಪುಷ್ಕರ ತೀರ್ಥಗಳ ನಡುವೆ ಐತಿಹಾಸಿಕ ಸಂಬಂಧವಿದೆ. ಶಿವನ ಮಡದಿಯಾದ ಸತಿದೇವಿಯು ಅಗ್ನಿಕುಂಡಕ್ಕೆ ಹಾರಿ ಪ್ರಾಣಬಿಟ್ಟಾಗ ಶಿವನು ಬೇಸರಗೊಂಡು ಕಣ್ಣೀರು ಹಾಕಿದನು. ಆ ಕಣ್ಣೀರು ಒಂದು ಹನಿ ಕಟಾಸ್ರಾಜಿಗೆ ಬಿತ್ತು ಇನ್ನೊಂದು ಹನಿ ಪುಷ್ಕರತೀರ್ಥಕ್ಕೆ ಬಿದ್ದು ಈ ಎರಡು ಸರೋವರಗಳ ರಚನೆಯಾಯಿತು ಎಂಬ ನಂಬಿಕೆಯಿದೆ. ಶಿವನು ಪಾರ್ವತಿಯನ್ನು ವಿವಾಹವಾದ ನಂತ್ರ ಅವರ ಮೊದಲ ವೈವಾಹಿಕ ಜೀವನ ಇದೆ ಕಟಾಸ್ ರಾಜಲ್ಲಿ ನಡೆದಿತ್ತು.

ಮನುಷ್ಯರು ಈ ಸರೋವರದಲ್ಲಿ ತೀರ್ಥಸ್ನಾನಮಾಡುವುದರಿಂದ ಸಕಲ ರೋಗಗಳಿಂದ ಹಾಗೂ ಪಾಪದಿಂದ ಮುಕ್ತಿ ಹೊಂದುತ್ತಾರೆ. ದೇವತೆಗಳೂ ಇಲ್ಲಿ ಸ್ನಾನ ಮಾಡುತ್ತಿದ್ದರು ಎಂಬ ಇತಿಹಾಸವಿದೆ. 2001ರಲ್ಲಿ ಉಪಪ್ರಧಾನಿ ಅಡ್ವಾಣಿ ಜಿ ಇಲ್ಲಿಗೆ ಭೇಟಿಕೊಟ್ಟಾಗ ಅವರೂ ಕೂಡ ಇಲ್ಲಿ ತೀರ್ಥಸ್ನಾನ ಮಾಡಿದ್ದರು.

ತದನಂತರದಲ್ಲಿ ಈ ಅಮರಕುಂಡವನ್ನು ಪಾಕಿಸ್ತಾನ ಸರ್ಕಾರ ಸಿಮೆಂಟ್ ಕಂಪನಿಯೊಂದಕ್ಕೆ ನೀರುಬಳಸಿಕೊಳ್ಳಲು ಗುತ್ತಿಗೆಗೆ ನೀಡಿತು. ಲಾಲ್ ಕೃಷ್ಣ ಅಡ್ವಾಣಿ ಉಪಪ್ರಧಾನ ಮಂತ್ರಿಯಾಗಿದ್ದಾಗ ಇಲ್ಲಿಗೆ ಭೇಟಿಕೊಟ್ಟು ದೇವಸ್ಥಾನದ ಹಾಗೂ ಕೆರೆಯ ಜೀರ್ಣೋದ್ದಾರ ಮಾಡುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದ್ದರು. ಕೆಲವೇ ವರ್ಷಗಳಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಂಡಿತು ಪಾಕಿಸ್ತಾನ. ಪಾಕಿಸ್ತಾನ ಸರ್ಕಾರದ ರಾಷ್ಟ್ರೀಯ ರಕ್ಷಣಾ ಸಲಹೆಕಾರನಾದ ಅಬ್ದುಲ್ ಬಾಸಿತ್ 2005ರಲ್ಲಿ ಈ ಅಮರಕುಂಡದ ಜಲವನ್ನು ಸ್ನೇಹದ ಸಂಕೇತವಾಗಿ ಅಡ್ವಾನಿಗೆ ಕಳುಹಿಸಿಕೊಟ್ಟಿದ್ದರು. ಇದೊಂದು ಹಿಂದುಗಳ ಅತ್ಯಂತ ಶ್ರದ್ಧೆಯ ಕೇಂದ್ರ ಎಂಬುದರಲ್ಲಿ ಎರಡು ಮಾತಿಲ್ಲ.

ಹಿಂದುಗಳ ಅತ್ಯಂತ ಪವಿತ್ರ ಸ್ಥಳವಾದ ಇದು, ಇಂದುಭಕ್ತರಿಲ್ಲದೆ ಪಾಲುಬಿದ್ದಿರುವುದು ಬೇಸರದ ಸಂಗತಿಯೇ ಸರಿ!
✍ಸಚಿನ್ ಜೈನ್ ಹಳೆಯೂರ್