ರಹೀಮನ ನಾಡಲ್ಲಿ ಮೋದಿ ಹಾರಿಸಲಿದ್ದಾರೆ ಹಿಂದು ಧ್ವಜ..!!ಎಲ್ಲಿ ಗೊತ್ತಾ…??

ರಹೀಮನ ನಾಡಲ್ಲಿ ಮೋದಿ ಹಾರಿಸಲಿದ್ದಾರೆ ಹಿಂದು ಧ್ವಜ..!!ಎಲ್ಲಿ ಗೊತ್ತಾ…??

0

ಮೋದಿ ಜಗತ್ತಿನ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಇವರು ನಂಬರ್ ಸ್ಥಾನದಲ್ಲಿದ್ದಾರೆ. ಅವರ ಸ್ನೇಹ ಸಂಬಂಧ ಎಂತಹದು ಎಂದರೆ ರಹೀಮನ ನಾಡು ಅಂದ್ರೆ ಯುಎಇ ಯಲ್ಲಿ ಮೋದಿ ಮೊದಲ ಹಿಂದೂ ದೇವಸ್ಥಾನವನ್ನು ಉದ್ಘಾಟಿಸಲಿದ್ದಾರೆ.

ಅಬುಧಾಬಿಯಲ್ಲಿ ನಿರ್ಮಾಣಗೊಳ್ಳಲಿರುವ ಮೊದಲ ಹಿಂದೂ ದೇವಸ್ಥಾನವನ್ನು ಫೆಬ್ರವರಿ 9 ರಿಂದ ಪ್ರಾರಂಭವಾಗುವ ಪಶ್ಚಿಮ ಏಷ್ಯಾ ಪ್ರವಾಸದ ಭಾಗವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಭೇಟಿ ನೀಡಿದಾಗ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಯುಎಇ ನ ದುಬಾಯಿ ಯಲ್ಲಿರುವ ಏಕೈಕ ಹಿಂದೂ ದೇವಸ್ಥಾನವು ಇದಾಗಿದೆ.

2.6 ದಶಲಕ್ಷ ಭಾರತೀಯರು ಯುಎಇ ನೆಲೆಸಿದ್ದಾರೆ. ಇದು ಅಲ್ಲಿನ ಜನಸಂಖ್ಯೆಯ ಶೇಕಡ 30 ರಷ್ಟಿದೆ.2015 ರಲ್ಲಿ ಎಮಿರೇಟ್ಸ್ಗೆ ಮೋದಿ ಮೊದಲ ಬಾರಿಗೆ ಭೇಟಿ ನೀಡಿದ್ದ ಸಂಧರ್ಭದಲ್ಲಿ ಅಬುಧಾಬಿಯ ಅಲ್ ವಾಥಬಾದಲ್ಲಿ ಸುಮಾರು 20,000 ಚದರ ಮೀಟರ್ ಭೂಮಿಯನ್ನು ನೀಡಲಾಗಿತ್ತು. ದೇವಾಲಯವನ್ನು ದೇಣಿಗೆ ಸಂಗ್ರಹಿಸಿ ನಿರ್ಮಾಣ ಮಾಡಲಾಗಿದೆ.

ವಿವಿಧ ಸಾಮರಸ್ಯದ ಜನರ ಜೊತೆ ಧಾರ್ಮಿಕ ಸಹಿಷ್ಣುತೆಯಿರುವ ಯುಎಇ ಯು ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಭಾರತೀಯ ಮೂಲದ ಉದ್ಯಮಿ ಹಾಗು ದೇವಸ್ಥಾನ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಬಿ ಆರ್ ಶೆಟ್ಟಿ ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದಾರೆ.

ದೇವಾಲಯದಲ್ಲಿ ಶಿವ, ಕೃಷ್ಣ,ಮತ್ತು ಅಯ್ಯಪ್ಪ ವಿಗ್ರಹಗಳನ್ನು ಪ್ರತಿಷ್ಟಾಪನೆ ಮಾಡಲಾಗುತ್ತದೆ. ಜೊತೆಗೆ ಉಧ್ಯಾನ ವನ ನೀರಿನ ಬಾವಿ ಇರುತ್ತದೆ ಎಂದು ಈ ಮುಂದೆ ಬಿ ಆರ್ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದರು.

ಮೋದಿ ಪೆಬ್ರವರಿ 10 ರಂದು ಸಂಜೆ ಅಬುಧಾಬಿ ತಲುಪಲಿದ್ದಾರೆ ಮರುದಿನ ದುಬೈ ನ ಓಪೇರಾ ದಲ್ಲಿ ಭಾರತೀಯ ರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ .

ಈ ಕಾರ್ಯಕ್ರಮದಲ್ಲಿ ಸಮಾರು 1800 ಭಾರತೀಯರು ಭಾಗವಹಿಸುವ ನಿರೀಕ್ಷೆ ಇದೆ. ವಿಶ್ವ ಸಂಸ್ಥೆಯ ಅರನೇ ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ , ಈ ಬಾರಿಯ ಶೃಂಗಸಭೆಯ ಕೇಂದ್ರ ಬಿಂದುವಾಗಿ ಮೋದಿ ಗುರುತಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ .

ಇದಲ್ಲದೇ ಮೋದಿ ಪಶ್ಚಿಮ ಎಷ್ಯಾದ ಪ್ಯಾಲೆಸ್ಟೈನ್ ಮತ್ತು ಒಮಾನ್ ರಾಷ್ಟ್ರ ಗಳಿಗೆ ಬೇಟಿನಿಡಲಿದ್ದಾರೆ . ಪ್ಯಾಲೆಸ್ಟೈನ್ ಗೆ ಬೇಟಿ ನೀಡುವ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರ ವಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಮೋದಿ ಅವರ ಸ್ನೇಹದ ಫಲವಾಗಿ ಇಂದು ಹಲವು ದೇಶಗಳಲ್ಲಿ ಭಾರತಕ್ಕೆ ಹಾಗೂ ಹಿಂದು ಧರ್ಮ ಹೆಚಿನ ಮಾನ್ಯತೆ ಸಿಗುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.ಇಂತಹ ನಾಯಕನಿಗೆ ದೇವರು ಇನ್ನು ಹೆಚ್ಚು ಶಕ್ತಿ ನೀಡಲಿ ಎಂದು ಆಶಿಸೊಣ.