ವಿಡಿಯೋ:ಅವನು ಸತ್ತಿಲ್ಲ..!! ಎಡಿಟ್ ಮಾಡಿರೊ ವಿಡಿಯೋ ವೈರಲ್ …. ಇಲ್ಲಿದೆ ಒರಿಜಿನಲ್ ವಿಡಿಯೋ ನೋಡಿ…

ಇತ್ತೀಚೆಗೆ ವಿಡಿಯೋವೊಂದು ವಾಟ್ಸಾಪ್ ಮೂಲಕ ಸಾಕಷ್ಟು ಹರಿದಾಡುತ್ತಿದೆ. ಯುವಕನೊಬ್ಬ ಹಳಿ ಪಕ್ಕದಲ್ಲಿ ನಿಂತು ವೇಗವಾಗಿ ಬರುತ್ತಿರುವ ರೈಲಿನ ಜತೆಗೆ ಸೆಲ್ಫಿ ತೆಗೆದುಕೊಳ್ಳುವ ವಿಡಿಯೋ ಅದು. ಕಡೆಗೆ ಆ ಯುವಕನಿಗೆ ರೈಲು ಬಂದು ಗುದ್ದಿದಂತೆ ಅವನ ಮೊಬೈಲ್ ಎಲ್ಲೋ ಹೋಗಿ ಬಿದ್ದಂತೆ ಇದೆ. ಇದರ ಅಸಲಿ ಕಥೆ ಕೇಳಿದರೆ ನೀವು ಶಾಕ್ ಆಗ್ತೀರ.

ಇದು ನಡೆದಿರುವುದು ಹೈದರಾಬಾದ್ ಬೋರಬಂಡ ರೈಲ್ವೇ ಸ್ಟೇಷನ್‌ ಸಮೀಪದಲ್ಲಿ ವೇಗವಾಗಿ ಬರುತ್ತಿರುವ ಎಂಎಂಟಿಎಸ್ ರೈಲಿನ ಸೆಲ್ಫಿ ತೆಗೆದುಕೊಳ್ಳಲು ಹೋಗಿ ತೀವ್ರವಾಗಿ ಗಾಯಗೊಂಡ ಎಂದು ಭಾವಿಸಿರುವುದು ಈ ಯುವಕನನ್ನೇ. ಈತನ ಹೆಸರು ಶಿವ.

ಎಲ್ಲರೂ ಪ್ರೀತಿಯಿಂದ ಸೆಲ್ಫಿ ಶಿವ ಎಂದು ಕರೆಯುತ್ತಾರೆ. ಎಂಎಂಟಿಎಸ್ ಮುಂದೆ ನಿಂತು ಬಲಗೈ ಮೇಲೆತ್ತಿ ಸೆಲ್ಫಿ ತೆಗೆದುಕೊಂಡು ಗಾಯಗೊಂಡ ಯುವಕನ ಉದಾಹರಣೆ ಟ್ರೆಂಡಿಂಗ್ ಆಗಿತ್ತು.

ನೀವೀಗ ನೋಡುತ್ತಿರುವುದು ಆ ಯುವಕನನ್ನೇ. ಈ ಘಟನೆಯಲ್ಲಿ ಅವನಿಗೆ ಅಷ್ಟೇನು ಗಾಯಗಳು ಆಗಿಲ್ಲವೆಂದು, ಆತ ಚೆನ್ನಾಗಿಯೇ ಇದ್ದಾನೆಂದು ಆತನ ಸ್ನೇಹಿತರು ಇತ್ತೀಚೆಗೆ ಬಿಡುಗಡೆ ಮಾಡಿದ ವಿಡಿಯೋ ಇದು.

ವಾರಂಗಲ್ ಮೂಲದ ಶಿವ ಕಳೆದ ಭಾನುವಾರ ಬೋರಬಂಡ ಎಂಎಂಟಿಎಸ್ ಸ್ಟೇಷನ್‌ನಲ್ಲಿ ವೇಗವಾಗಿ ಬರುತ್ತಿರುವ ರೈಲು ಮುಂದೆ ಸೆಲ್ಫಿಗಾಗಿ ಪ್ರಯತ್ನಿಸಿದ. ಆತನನ್ನು ನೋಡಿದ ಎಂಎಂಟಿಎಸ್ ಡ್ರೈವರ್ ತುರ್ತು ಬ್ರೇಕ್ ಹಾಕಿದ್ದ.

ವೇಗ ಕಡಿಮೆಯಾದ ಎಂಎಂಟಿಎಸ್ ರೈಲು ಶಿವ ಬಲಗೈಯನ್ನು ತಾಗಿತು. ಆ ಹೊಡೆತಕ್ಕೆ ಆತ ಹಳಿಗಳ ಪಕ್ಕದಲ್ಲಿ ಬಿದ್ದಿದ್ದ. ಅಲ್ಪಸ್ವಲ್ಪ ಗಾಯಗಳಾಗಿದ್ದವು. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು.

ಅದೇ ದಿನ ಡಿಶ್ಚಾರ್ಜ್ ಸಹ ಆಗಿದ್ದ. ಆ ಬಳಿಕ…ಸರಿಯಾಗಿ ನಾಲ್ಕು ದಿನಗಳ ಬಳಿಕ ಆತನ ಸ್ನೇಹಿತರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ್ದರು. ತಾನು ಮೃತಪಟ್ಟಂತೆ, ತೀವ್ರವಾಗಿ ಗಾಯಗೊಂಡಂತೆ ಸುದ್ದಿ ಬರುತ್ತಿದೆ ಎಂದು, ಹಾಗಾಗಿಯೇ ಈ ವಿಡಿಯೋ ಅಪ್‌ಲೋಡ್ ಮಾಡಿದ್ದೇವೆಂದು ಶಿವ ಹೇಳಿದ್ದಾನೆ.

Post Author: Ravi Yadav