1962ರಲ್ಲಿ 300 ಚೀನಿ ಸೈನಿಕರನ್ನು ಕೊಂದ ಹುತಾತ್ಮ ಸೈನಿಕ ಈಗಲೂ ದೇಶರಕ್ಷಣೆಯಲ್ಲಿ!!!!!

ಭಾರತಾಂಬೆಯ ಹಣೆಯ ಕುಂಕುಮವೇ ಆಗಿರುವ ವೀರ ಸೈನಿಕ ಹುತಾತ್ಮ ಆದಮೇಲೂ ದೇಶರಕ್ಷಣೆಯಲ್ಲಿ ತೊಡಗಿದ್ದಾನೆ!!!!!

ಆತ ಈಗಲೂ ಸೇನೆಯ ಅಧಿಕಾರಿ! ಪ್ರತೀದಿನ ಆತನ ಹಾಜರಾತಿಯೂ ಇದೆ! ರಜೆಯೂ ಹಾಕುತ್ತಾನೆ. ಪ್ರತಿದಿನ ಸಮವಸ್ತ್ರ ಸ್ವಚ್ಛ ಮಾಡಲು ಇದೆ! ಪ್ರತಿದಿನ ಶೂ ಪಾಲಿಶ್ ಮಾಡೋಕೆ ಇದೆ! 3 ಹೊತ್ತು ಊಟವು ಮಾಡುತ್ತಾನೆ! ಕುಟುಂಬದವರಿಗೆ ಪತ್ರಬೇರೆ ಬರೆಯುತ್ತಾನೆ!!!!

ಏನದು ವಿಚಿತ್ರ ಅನಿಸುತ್ತಾ ಇದೆಯಾ ಸ್ನೇಹಿತರೇ? ಹುತಾತ್ಮನಾದ ಧೀರ ಸೈನಿಕ ಈಗಲೂ ಬದುಕಿದ್ದನಾ? ಬದುಕಿದ್ರೆ ಸೈನಿಕನಾಗಿ ಗಡಿಯಲ್ಲಿ ದೇಶಕಾಯಲು ಆತ ಶಕ್ತನಾ? ಈ ಎಲ್ಲಾ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಬರುವುದು ಸಹಜ!! ಹಾಗಿದ್ರೆ ನಿಜ ವಿಷಯ ಎನಿರಬಹು?

ಆತ ಸಣ್ಣ ಚಿಗುರುಮೀಸೆಯ ಯುವಕ ಜಸ್ವಂತ್ ಸಿಂಗ್. ಸೈನಿಕನಾಗಬೇಕೆಂಬುದು ಅವನ ಮನದಾಳದ ಆಸೆ. ಉತ್ತರಾಖಂಡಿನ ಪೌಡಿ ಜಿಲ್ಲೆಯ ಗ್ರಾಮ್ ಬಂಡಯೂ ಎಂಬಲ್ಲಿ ತನ್ನ 19ನೇ ವರ್ಷದಲ್ಲಿ ಅಗೋಸ್ಟ್ 19 1960ರಲ್ಲಿ ಸೇನಾನೇಮಕಾತಿಯಲ್ಲಿ ಭಾಗವಹಿಸಿ ಆಯ್ಕೆಯಾದ. 1961ರಲ್ಲಿ ತರಬೇತಿ ಮುಗಿದ ನಂತರ 1962ರಲ್ಲಿ
ಭಾರತ-ಚೀನಾ ಯುದ್ಧದಲ್ಲಿ ಭಾಗವಹಿಸಿದ.


ಘೋರ ಯುದ್ಧ ನಡೆಯುತ್ತಿದ್ದ ಸಂಧರ್ಭ ಅದು. 17 ನವೆಂಬರ್ 1962ರಲ್ಲಿ ಸೇನೆಯ ನಾಲ್ಕನೇ ಬಟಾಲಿಯನನ್ನಿನ ಒಂದು ತುಕಡಿಯನ್ನು ನುರಾನಂಗ ಸೇತುವೆಯ ಸುರಕ್ಷತೆಗಾಗಿ ಕಳುಹಿಸಲಾಯ್ತು. ಅದರಲ್ಲಿ ಜಸ್ವಂತ್ ಸಿಂಗ್ನನ್ನು ನೇಮಕ ಮಾಡಲಾಯ್ತು.

ಅರುಣಾಚಲ ಪ್ರದೇಶದ ತವಂಗ್ ಜಿಲ್ಲೆಯ ನುರಾನಂಗ್ ಎಂಬಲ್ಲಿ ಜಸ್ವಂತ್ ಸಿಂಗ್ ದೇಶಕೋಸ್ಕರ ಹೋರಾಡಿದ. ಅದು 1962 ಯುದ್ದದ ಕೊನೆಯ ಸಂಧರ್ಭ ಆಗಿತ್ತು. ಚೀನಿ ಸೈನಿಕರು ಭಾರತೀಯ ಸೈನಿಕರ ಎದುರು ಪ್ರಬಲವಾಗಿದ್ದರು. ಇದರಿಂದ ಹೆದರಿದ ಭಾರತ ನೂರಾನಂಗ್ ಅಲ್ಲಿರುವ 4ನೇ ಬಟಾಲಿಯನ್ ಸೈನಿಕರನ್ನು ವಾಪಸ್ ಕರಿಸಿಕೊಳ್ಳುವ ಆದೇಶ ನೀಡಿತ್ತು. ಪೂರ್ತಿ ಸೈನಿಕರು ಹಿಂದುರಿಗಿದರು. ಆದರೆ ಸೋಲು ಒಪ್ಪಿಕೊಳ್ಳದ ಭಾರತ ಮಾತೆಯ ವೀರ ಪುತ್ರರಾದ ಜಸ್ವಂತ್ ಸಿಂಗ್, ಲಾನ್ಸ್ ನಾಯಕ್ ತ್ರಿಲೋಕ್ ಸಿಂಗ್ ನೇಗಿ, ಗೋಪಾಲ್ ಸಿಂಗ್ ಗುಸಾಯಿ ಎಂಬ ಮೂರು ಸೈನಿಕರು ಹಿಂದಿರುಗಲಿಲ್ಲ.

ಈ ಮೂರು ಜನ ಸೈನಿಕರು ಹಾಗೂ ಸ್ಥಳೀಯ ಇಬ್ಬರು ವೀರ ಹೆಣ್ಣುಮಕ್ಕಳಾದ ಸೆಲಾ ಮತ್ತು ನೂರಾ ಅಲ್ಲಿಯೇ ಇದ್ದು ಹೋರಾಡಿದರು. ಈ ಐದು ಜನಸೇರಿಕೊಂಡು ಯುದ್ಧಕ್ಕೆ ಬೇಕಾದ ಯೋಜನೆಗಳನ್ನು ಮಾಡಿಕೊಂಡರು.

ಇವರು ಬೇರೆಬೇರೆ ಜಾಗದಲ್ಲಿ ಕುಳಿತು ಚೀನಿ ಸೈನಿಕರನ್ನು ಎದುರಿಸಲು ಮುಂದಾದರು. ಚೀನಿಯರು ಸುಮಾರು 600ಜನಕ್ಕೂ ಮಿಕ್ಕಿ ಅಲ್ಲಿದ್ದರು. ಸೆಲಾ ಎಂಬ ಹುಡುಗಿ ಜಸ್ವಂತ್ ಸಿಂಗ್ ಗೆ ಸಾಮಗ್ರಿಗಳನ್ನು ತಲುಪಿಸುತ್ತಿದಳು. ಮೂರು ದಿನದ ನಂತರ ಸೆಲಾನನ್ನು ಚೀನಿ ಸೈನಿಕರು ಹಿಡಿದರು. ಇದಾದ ನಂತರ ನೂರಾ ಜಸ್ವಂತ್ ಗೆ ಸಹಾಯ ಮಾಡುತ್ತಿದಳು. ಕೆಲವೇ ಗಂಟೆಗಳಲ್ಲಿ ಅವಳೂ ಕೂಡ ಜಸ್ವಂತ್ನ ಕಣ್ಣೆದುರೇ ಚೀನಿಯರ ಗ್ರೆನೇಡ್ ದಾಳಿಗೆ ಬಲಿಯಾದಳು.

ಇಷ್ಟಾದ್ರೂ ಏಕಾಂಗಿಯಾಗಿ 10000 ಅಡಿ ಎತ್ತರಲ್ಲಿ ಕೊರೆಯುವ ಚಳಿಯಲ್ಲಿ ಲೈಟ್ ಮಿಷನ್ ಗನ್ ಹಿಡಿದು ಜಸ್ವಂತ್ 72ಗಂಟೆಗಳ ಕಾಲ ಹೋರಾಡಿ ಸುಮಾರು 300ಕ್ಕೂ ಮಿಕ್ಕಿ ಚೀನಿ ಸೈನಿಕರನ್ನು ಕೊಂದು ಹಾಕಿದ. ತಾನು ಒಬ್ಬನೇ ಬದುಕಿರುವುದು ಎಂಬ ಗೋಚರವೇ ಜಸ್ವಂತ್ಗೆ ಇರುದಿಲ್ಲ. ಯಾಕಂದ್ರೆ ಆತ ಪೂರ್ತಿಯಾಗಿ ಯುದ್ದದ್ದಲ್ಲಿ ತೊಡಗಿದ್ದ. ಜಸ್ವಂತ್ ಗೆ ಆಹಾರ ಒದಗಿಸುವವನೊಬ್ಬ ಚಿಣಿಯರಿಗೆ ಗುಪ್ತವಾಗಿ ಒಬ್ಬನೇ ಸೈನಿಕ ಬದುಕಿರುವುದು ಎಂದು ಹೇಳಿಬಿಟ್ಟ. ಕೊನೆಗೆ ತನ್ನ ಶಸ್ತ್ರ ಖಾಲಿಯಾದಾಗ ತನಗೆ ತಾನೇ ಶೂಟ್ ಮಾಡಿಕೊಂಡು ತನ್ನ ಜೀವ ತಾಯಿ ಭಾರತೀಯ ಪಾದಕ್ಕೆ ಅರ್ಪಣೆ ಮಾಡಿದ ಧೀರ ಯೋಧ ಜಸ್ವಂತ್ ಸಿಂಗ್.

ಇದನ್ನು ತಿಳಿದ ಚೀನಿ ಕಮಾಂಡರ್ ಕೋಪದಿಂದ ಜಸ್ವಂತ್ ಸಿಂಗಿನ ಹೆಣದ ತಲೆಯನ್ನು ಕಡಿದು ಚೀನಾಕ್ಕೆ ಕೊಂಡುಹೋದ.

ಆದಮೇಲೆ ಅಕ್ಟೋಬರ್ 20 1962ರಲ್ಲಿ ಕದನ ವಿರಾಮ ಘೋಷಣೆಯಾದ ಬಳಿಕ ಜಸ್ವಂತ್ ಸಿಂಗಿನ ವೀರಯೋಶಾಗತೆಯನ್ನು ಕೇಳಿದ ಚೀನಿಯರು. ಅವನ ತಲೆಯನ್ನು ಭಾರತಿಯರಿಗೆ ವಾಪಸ್ ಕಳುಹಿಳಸಿಕೊಟ್ಟರು. ಅಲ್ಲದೆ ಜಸ್ವಂತ್ ಸಿಂಗಿನ ಒಂದು ಮೂರ್ತಿಯನ್ನೂ ಗೌರವದಿಂದ ಕೊಟ್ಟರು.

ಜಸ್ವಂತ್ ಸಿಂಗ್ ಹೋರಾಡಿದ ನೂರಾನಂಗ್ ಭೂಮಿಯಲ್ಲಿ ಅವನ ಮಂದಿರವೊಂದನ್ನು ಕಟ್ಟಲಾಯ್ತು. ಅಲ್ಲಿ ಅವನು ದಿನನಿತ್ಯ ಉಪಯೋಗಿಸುತ್ತಿದ್ದ ಎಲ್ಲಾ ವಸ್ತುಗಳನ್ನು ಹಾಗೂ ಚೀನಿಯರು ಕಡಿದು ಕೊಂಡುಹೋದ ಅವನ ರುಂಡದ ಪ್ರತಿಮೇಯನ್ನು ಇಡಲಾಗಿದೆ. ಈ ಮಂದಿರದ ರಸ್ತೆಯಿಂದ ತೆರಳುವ ಎಲ್ಲಾ ಭಾರತೀಯ ಹಾಗೂ ಚೀನಿ ಸೈನಿಕರು ಬಾಬಾ ಜಸ್ವಂತ್ ಸಿಂಗ್ ಮಂದಿರಕ್ಕೆ ಹೋಗಿ ಆಶೀರ್ವಾದ ಪಡೆದೆ ಹೋಗುತ್ತಾರೆ. ಈ ಮಂದಿರದ ರಕ್ಷಣೆಗೆ 5 ಸೈನಿಕರನ್ನು ನೇಮಕ ಮಾಡಲಾಗಿದೆ.


ಭಾರತೀಯ ಸೈನಿಕರಲ್ಲಿ ಜಸ್ವಂತ್ ಸಿಂಗ್ಗೆ ಮಾತ್ರ ಹೆಸರಿನ ಮೊದಲು ಸ್ವರ್ಗಿಯ ಅಥವಾ ಹುತಾತ್ಮ ಎಂದು ಸೇರಿಸಾಲಾಗುವುದಿಲ್ಲ. ಅವನು ಇನ್ನೂ ಬದುಕಿದ್ದಾನೆ ಎಂಬ ನಂಬಿಕೆ ಇದೆ. ದಿನಾಲೂ ಅವನ ಸಮವಸ್ತ್ರ ಸ್ವಚ್ಛಗೊಳಿಸಾಲಾಗುತ್ತದೆ. ಬೂಟು ಪಾಲಿಶ್ ಮಾಡಲಾಗುತ್ತದೆ. ಮೂರು ಹೊತ್ತು ಊಟ ಕೊಡಲಾಗುತ್ತದೆ.

ಎಲ್ಕದಕ್ಕೂ ಹೆಚ್ಚಾಗಿ ಜಸ್ವಂತ್ಗೆ ಸೇನೆಯಲ್ಲಿ ಪ್ರಮೋಷನ್ ಕೂಡ ಆಗುತ್ತದೆ. ನಾಯಕನಾಗಿ ಸೇರಿದ್ದ ಆತ ನಂತ್ರ ಕ್ಯಾಪ್ಟನ್ ಆಗಿ ಪ್ರಸುತ ಮೇಜರ್ ಜನರಲ್ ಆಗಿರುತ್ತಾನೆ. ಹಾಜರಾತಿ ಪುಸ್ತಕದಲ್ಲೂ ಅವನ ಹಾಜರಾತಿಯನ್ನು ನಮೋದಿಸಲಾಗುತ್ತದೆ.
ಆತನಿಗೂ ರಜೆ ಕೊಡಲಾಗುತ್ತದೆ. ಆತನ ಹೆಸರಿನಲ್ಲಿ ಉತ್ತರಾಖಂಡಿನ ಪುಸ್ಟೇನಿ ಗ್ರಾಮದಲ್ಲಿರುವ ಆತನ ಮನೆಯವರಿಗೆ ಪತ್ರವನ್ನೂ ಬರೆಯಲಾಗುತ್ತದೆ. ಮನೆಯವರೂ ಕೂಡ ಆತನಿಗೆ ಮರು ಪತ್ರ ಬರೆಯುತ್ತಾರೆ.

ಮರಣದ ನಂತರ ಸೇನೆಯ ಪ್ರಮೋನ್ನತ ಗೌರವವಾದ ಪರಮವೀರಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ದೇಶದ ಸೈನಿಕರಿಗೂ ಹಾಗೂ ಚೀನಿ ಸೈನಿಕರಿಗೂ ಈತ ಮಾದರಿ.

ದೇಶದ ಈ ಹೆಮ್ಮೆಯ ಪುತ್ರ ತಾಯಿ ಭಾರತೀಯ ಮಡಿಲಲ್ಲಿ ಅಮರವಾಗಿ ಮಲಗಿರಲಿ.

✍ ಸಚಿನ್ ಜೈನ್ ಹಳೆಯೂರು

Post Author: Ravi Yadav